ಅಸ್ಸಾಂನ ಮಜುಲಿಯ “ಮಾಸ್ಕ್ ತಯಾರಿಕೆ ಮತ್ತು ಹಸ್ತಪ್ರತಿ ವರ್ಣಚಿತ್ರ”ಗಳಿಗೆ ಪ್ರತಿಷ್ಠಿತ GI ಟ್ಯಾಗ್
ಅಸ್ಸಾಂನ ಮಜುಲಿ ತನ್ನ ಸಾಂಪ್ರದಾಯಿಕ ಕಲೆಗಳಾದ ಮುಖವಾಡ ತಯಾರಿಕೆ ಮುಖಾ ಕ್ಸಿಲ್ಪೋ (Mukha Xilpo) ಮತ್ತು ಹಸ್ತಪ್ರತಿ ಚಿತ್ರಕಲೆಗಳಿಗೆ (Manuscript Paintings) ಪ್ರತಿಷ್ಠಿತ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ಪಡೆದುಕೊಂಡಿದ್ದು, ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ.
GI (Geographical Indication) ಎನ್ನುವುದು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಅತ್ಯುತ್ತಮ ಗುಣಗಳನ್ನು ಹೊಂದಿರುವ ಉತ್ಪನ್ನಗಳ ಮೇಲೆ ಬಳಸುವ ಸಂಕೇತವಾಗಿದೆ.
GI ಟ್ಯಾಗ್‌ಗಳನ್ನು ಸರಕುಗಳ ಭೌಗೋಳಿಕ ಸೂಚನೆಗಳ (ನೋಂದಣಿ ಮತ್ತು ರಕ್ಷಣೆ) ಕಾಯಿದೆ, 1999 ರ ನಿಯಮಗಳ ಅಡಿಯಲ್ಲಿ ನೀಡಲಾಗುತ್ತದೆ.
ಈ ಟ್ಯಾಗ್ ಅನ್ನು ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಭೌಗೋಳಿಕ ಸೂಚಕ ರಿಜಿಸ್ಟ್ರಿ (Geographical Indication Registry) ನೀಡುತ್ತದೆ.
GI ಟ್ಯಾಗ್ ನಮ್ಮ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಜಾನಪದ ಕಲೆಗೆ ದೊರೆತಿರುವುದು ಹೆಮ್ಮೆಯ ಮತ್ತು ಸಂತಸದ ಕ್ಷಣವಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖಾ ಕ್ಸಿಲ್ಪೋ (Mukha Xilpo) 1500 ರ ದಶಕದಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ಕಲೆಯಾಗಿದೆ.
ಇದು ಪ್ರದೇಶದ ಸಾಂಸ್ಕೃತಿಕ ಪರಂಪರೆಯ ಆಳವಾದ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಅಸ್ಸಾಂನಲ್ಲಿ (Assam) ಈ ಕಲೆಯನ್ನು ಮಧ್ಯಕಾಲೀನ ಅವಧಿಯಲ್ಲಿ ಸಂತ ಶಂಕರದೇವರು ಪರಿಚಯಿಸಿದರು.
ನಂತರ ಇದು ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುವ ಜನಪ್ರಿಯ ರೂಪವಾಯಿತು.
ಈ ಕಲೆಯಲ್ಲಿ ಕೆತ್ತಲಾಗುವ ಮುಖವಾಡಗಳು (Masks) ವಿವಿಧ ಪಾತ್ರಗಳು, ಭಾವನೆಗಳು ಮತ್ತು ವೈಷ್ಣವ ಆದರ್ಶಗಳ ದೃಶ್ಯ ಕಥೆಗಳನ್ನು ಒಳಗೊಂಡಿರುತ್ತದೆ.
ಈ ಮುಖವಾಡಗಳು ಕೇವಲ ಕಲೆಯಲ್ಲ; ಅವು ಮಜುಲಿಯ ಸಾಮಾಜಿಕ-ಧಾರ್ಮಿಕತೆಯನ್ನು ಪ್ರತಿಬಿಂಬಿಸುತ್ತವೆ.
ಇವುಗಳನ್ನು ಸ್ಥಳೀಯ ವಸ್ತುಗಳಿಂದ ತಯಾರಿಸಲಾಗುತ್ತದೆ ಮತ್ತು ಈ ಸಂಪ್ರದಾಯವು ಸತ್ರಗಳು ಮತ್ತು ಸ್ಥಳೀಯ ಹಳ್ಳಿಗಳಲ್ಲಿ ನುರಿತ ಕುಶಲಕರ್ಮಿಗಳು (Artisans) ತಯಾರಿಸುತ್ತಾರೆ.
ಇದರೊಂದಿಗೆ, ಮಜುಲಿಯ (Majuli) ಹಸ್ತಪ್ರತಿ ವರ್ಣಚಿತ್ರಗಳು ಹಿಂದೂ ಮಹಾಕಾವ್ಯಗಳನ್ನು, ವಿಶೇಷವಾಗಿ ಭಗವಾನ್ ಕೃಷ್ಣನ ಭಾಗವತ ಪುರಾಣ ನಿರೂಪಣೆಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಪರಂಪರೆ ಮತ್ತು ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸುತ್ತವೆ.
ಹಸ್ತಪ್ರತಿ ವರ್ಣಚಿತ್ರಗಳ ವೈಶಿಷ್ಟ್ಯತೆ ಎಂದರೆ ಇದು ಗಾರ್ಗಯಾನ್ ಲಿಪಿ (Gargayan script), ಕೈತಾಲ್ (Kaithall) ಮತ್ತು ಬಮುನಿಯಾ (Bamunia) ಸೇರಿದಂತೆ ಬರವಣಿಗೆಯ ಶೈಲಿಯಲ್ಲಿರುತ್ತದೆ.
ಇಂತಹ ಜಾನಪದ ಕಲೆಗಳಿಗೆ GI ಟ್ಯಾಗ್ ದೊರೆತಿದ್ದು, ಈ ಟ್ಯಾಗ್ ಕರಕುಶಲಗಳನ್ನು (Crafts) ರಕ್ಷಿಸುತ್ತದೆ ಮಾತ್ರವಲ್ಲದೆ, ಮಜುಲಿಯ ಕಲಾತ್ಮಕ ಪರಾಕ್ರಮದ ಮೇಲೆ ಜಾಗತಿಕ ಗಮನಸೆಳೆಯಲು ಸಹ ಸಹಾಯ ಮಾಡುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.