ವಂಡರ್ ಬಾಕ್ಸ್ವಿಂಗಡಿಸದ

ಕೇರಳದಲ್ಲಿ ಸಂಚರಿಸಲಿದೆ ದೇಶದ ಮೊದಲ ಸೌರಶಕ್ತಿ ನಿರ್ಮಿತ ಬಸ್

ನೀವು ಯಾವುದೇ ಗಾಡಿಯಲ್ಲಿ ಹೋಗಿ .. ಆದರೆ ನಿಮಗೆ ಬಸ್ (Bus ) ನೀಡುವ ಕುಶಿ ಇದೆ ಅಲಾ ಅದಕ್ಕೆ ಬೆಲೆ ಕಟ್ಟೋದಕೆ ಆಗಲ್ಲ. ಕಾರಣಕ್ಕೆ ನಮ್ಮ ದೇಶದಲ್ಲಿ ಇಂದಿಗೂ ಬಸ್ ಸೇವೆ ಗಳಿಗೆ ಡಿಮ್ಯಾಂಡ್ ಇರುವುದು. ಅತ್ಯಾಧುನಿಕ ಬಸ್ ಗಳು ರಸ್ತೆಗೆ ಇಳಿಯುವುದು.

ದೇಶದ ಮೊದಲ ಸೌರಶಕ್ತಿ ಚಾಲಿತ ಹವಾನಿಯಂತ್ರಿತ ಸ್ಥಳೀಯ ಬಸ್ ಸೇವೆಯನ್ನು(India’s First Solar Powered Air conditioned Local Bus) ಕಣ್ಣೂರಿನಲ್ಲಿ (Kannuru)ಪ್ರಾರಂಭಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಬಿಸಿ ವಾತಾವರಣದ ನಡುವೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ಈ ಬಸ್ ನೀಡುತ್ತದೆ. ಕೇರಳದ ಸಂಗೀತ ಟ್ರಾವೆಲ್ಸ್(Sangeeta Travels )ಕಣ್ಣೂರು-ಕಂಡಿಪರಮ್(Kannur -Kadepram)ಮಾರ್ಗದಲ್ಲಿ ಸೌರ ಶಕ್ತಿ ಚಾಲಿತ ಬಸ್ ಅನ್ನು ನಿರ್ವಹಿಸುತ್ತದೆ, ಕಣ್ಣೂರು ಪಟ್ಟಣ ಮತ್ತು ಜಿಲ್ಲಾ ಆಸ್ಪತ್ರೆಯ(District Hospital) ನಡುವೆ ಪ್ರತಿದಿನ ಐದು ಟ್ರಿಪ್‌ಗಳೊಂದಿಗೆ ಪ್ರಯಾಣಿಸುವವರಿಗೆ ಈ ಬಸ್ ಸೇವೆ ಲಭ್ಯ.

ಸಂಗೀತ ಟ್ರಾವೆಲ್ಸ್‌ನ ಮಾಲೀಕ ಸತೀಶ್ ಚೆಮ್ಮರತಿಲ್ (Satheesh Chemmarathil)ಅವರು ತಮ್ಮ ಬಸ್‌ನಲ್ಲಿ ಸೌರಶಕ್ತಿ ಚಾಲಿತ ಹವಾನಿಯಂತ್ರಣವನ್ನು ಅಳವಡಿಸುವ ಆಲೋಚನೆ ಬಹಳ ಹಿಂದಿನಿಂದಲೂ ಅವರ ಮನಸ್ಸಿನಲ್ಲಿತ್ತು ಎಂದು ಖಾಸಗಿ ಮಾಧ್ಯಮ ಸಂಸ್ಥೆಗಳಿಗೆ ಹೇಳಿದ್ದಾರೆ.

India's First  Solar Powered Air conditioned Local Bus

“ಶಕ್ತಿಯ ಬಳಕೆಯನ್ನು ಶೇಕಡಾ 70 ರಷ್ಟು ಕಡಿಮೆ ಮಾಡಲು BLDC ತಂತ್ರಜ್ಞಾನವನ್ನು ಬಳಸುವ ಮೇಕ್ ಇನ್ ಇಂಡಿಯಾ ಸ್ಟಾರ್ಟ್ಅಪ್ AC ಕಂಪನಿಯ ಡೀಲರ್ ಆಗಿ, ನಾನು ಇದನ್ನು ನನ್ನ ಬಸ್‌ನಲ್ಲಿ ಅಳವಡಿಸಲು ಬಯಸುತ್ತೇನೆ. ಜನವರಿ 2024 ರಿಂದ, ನಮ್ಮ ಹೊಸದಾಗಿ ಪ್ರಾರಂಭಿಸಲಾದ ಬಸ್‌ಗಳಲ್ಲಿ ಒಂದು ಏರ್ ಕಂಡಿಷನರ್ ಅನ್ನು ಚಾವಣಿಯ ಮೇಲೆ ಮೂರು ಸೌರ ಫಲಕಗಳನ್ನು ಅಳವಡಿಸಲಾಗಿದೆ, ”ಎಂದು ಸತೀಶ್ ಹೇಳಿದ್ದಾರೆ.

ನೀವು ಇದನ್ನು ಇಷ್ಟ ಪಡಬಹುದು:ಬೇಸಿಗೆಯಲ್ಲಿ ನಿಮ್ಮ ಕಣ್ಮನ ಸೆಳೆಯುವ ದಕ್ಷಿಣ ಭಾರತದ ಅತ್ಯಂತ ಪ್ರಶಾಂತ ಸ್ಥಳಗಳು

ಸತೀಶ್ ಅವರು ಬಸ್‌ಗೆ ಮಾರ್ಪಾಡು ಮಾಡಲು ಕಣ್ಣೂರು ಆರ್‌ಟಿಒದಿಂದ(RTO) ವಿಶೇಷ ಅನುಮತಿ ಪಡೆಡಿದ್ದಾರೆ. ಹವಾನಿಯಂತ್ರಣ ಉಪಕರಣಗಳನ್ನು ಅಳವಡಿಸಲು ಇಲಾಖೆ ಅನುವು ಮಾಡಿಕೊಟ್ಟಿದೆ. “ಎಸಿ ಸೌರಶಕ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಎಂಜಿನ್‌ಗೆ ಯಾವುದೇ ಸಂಪರ್ಕವಿಲ್ಲ, ಹೆಚ್ಚುವರಿ ಇಂಧನ ಬಳಕೆ ಅಥವಾ ಮಾಲಿನ್ಯವನ್ನು ನಿವಾರಿಸುತ್ತದೆ. ಇದಲ್ಲದೆ, ನಾವು ಈ ಸೇವೆಗಾಗಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ, ”ಎಂದು ಈ ಯೋಜನೆ ರೂವಾರಿ ಹೇಳಿದ್ದಾರೆ.

ಸ್ಥಳೀಯ ಬಸ್‌ನಲ್ಲಿ ಇದೇ ಮೊದಲ ಬಾರಿಗೆ ತಂತ್ರಜ್ಞಾನ ಬಳಸಲಾಗಿದ್ದರಿಂದ ಕೆಲವು ತಪ್ಪುಗಳು ಆರಂಭದಲ್ಲಿ ಕಂಡು ಬಂದಿದ್ದು ,ಅದನ್ನು ಸರಿ ಪಡಿಸಲಾಗಿದೆ. ಸದ್ಯ ಸೌರ ಶಕ್ತಿ ಚಾಲಿತ ಬಸ್ ತಂತ್ರಜ್ಞಾನವು ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಪ್ರಯಾಣಿಕರಿಂದ(Passenger )ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದು ಸ್ಥಳೀಯ ಸೇವೆಯಾಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಜನ ಸಾಮಾನ್ಯರು ಆಗಿರಲಿದ್ದಾರೆ.

ಬಸ್‌ನಲ್ಲಿ ಸೋಲಾರ್ ಸಿಸ್ಟಮ್ (Solar System)ಮತ್ತು ಹವಾನಿಯಂತ್ರಣಕ್ಕಾಗಿ ಆರಂಭಿಕ 5 ಲಕ್ಷ ಹಣವನ್ನು ಖರ್ಚು ಮಾಡಿದ್ದರು. ಜೊತೆಗೆ ಸತೀಶ್ ಈ ಹಿಂದೆ ತಮ್ಮ ಬಸ್ ಗಳಲ್ಲಿ ಜಿಪಿಎಸ್ (GPS) ಆಧಾರಿತ ಬಸ್ ಸ್ಟಾಪ್ ಘೋಷಣೆ ವ್ಯವಸ್ಥೆಯನ್ನು ಅಳವಡಿಸಿದ್ದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button