ಇರಾನ್, ಇಸ್ರೇಲ್ ಪ್ರಯಾಣ ಮುಂದೂಡಿ ಭಾರತೀಯರಿಗೆ ವಿದೇಶಾಂಗ ಇಲಾಖೆ ಸಲಹೆ
ಜಗತ್ತು ಮತ್ತೊಮ್ಮೆ ಯುದ್ಧದ ಭೀತಿ ಎದುರಿಸುತ್ತಿದೆ. ರಷ್ಯಾ(Russia) ಉಕ್ರೇನ್(Ukraine) ಸಮರದ ಬಳಿಕ ಕಳೆದ ವರ್ಷ ಇಸ್ರೇಲ್ (Israel)ಮತ್ತು ಹಮಾಸ್ (Hamas) ಕದನಕ್ಕೆ ದೇಶದ ಶಾಂತಿ ಕದಡಿತ್ತು. ಇದೀಗ ಮತ್ತೊಂದು ಯುದ್ಧದ (War) ಭೀತಿ ಎದುರಾಗಿದೆ. ಎರಡು ದೇಶಗಳ ನಡುವಿನ ವೈರತ್ವ ಜಗತ್ತಿನ ಇತರ ದೇಶಗಳಲ್ಲಿ ಭೀತಿ ಹುಟ್ಟಿಸಿದೆ.
ಸಿರಿಯಾದ(Syria)ಡಮಾಸ್ಕಸ್ನಲ್ಲಿರುವ(Damascus) ತನ್ನ ರಾಯಭಾರ ಕಚೇರಿಯ ಮೇಲೆ ನಡೆದ ಭೀಕರ ದಾಳಿಗೆ(Attack) ಇಸ್ರೇಲ್(Israel) ಕಾರಣ ಎಂದು ಆರೋಪಿಸಿದ ಇರಾನ್(Iran) 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇರಾನ್ ಸರ್ವೋಚ್ಚ ನಾಯಕ ಇಂತಹ ದಾಳಿಗೆ ಸಂಬಂಧಿಸಿದ ರಾಜಕೀಯ ಅಪಾಯಗಳನ್ನು ಎದುರಿಸುತ್ತಿದ್ದರೂ, ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿ ಹೇಳಿದೆ.
ಸಿರಿಯಾದಲ್ಲಿ ಇರಾನ್‌ನ ಕೌನ್ಸುಲೇಟ್ ಸೇರಿದಂತೆ 6 ಅಧಿಕಾರಿಗಳ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಇಸ್ರೇಸ್ ಕೈವಾಡವಿದೆ ಎಂದು ಇರಾನ್ ಹೇಳಿದೆ. ಇದಕ್ಕೆ ಪ್ರತೀಕಾರವಾಗಿ ನಡೆಸುವುದಾಗಿಯೂ ಹೇಳಿದೆ.
ಇದು ಜಗತ್ತಿನ ಆತಂಕಕ್ಕೆ ಕೂಡ ಕಾರಣವಾಗಿದೆ. ಈ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆ(India’s Ministry of External Affairs)ಕೂಡ ನಾಗರಿಕರಿಗೆ ಕೆಲವು ಮುನ್ಸೂಚನೆ ನೀಡಿದೆ.
ನೀವು ಇದನ್ನು ಇಷ್ಟ ಪಡಬಹುದು: ಭಟ್ ಎನ್ ಭಟ್ ಹೆಸರಿನಲ್ಲಿ ದಕ್ಷಿಣ ಕನ್ನಡದ ಆಹಾರವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ಸುದರ್ಶನ ಭಟ್
ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಭಾರತೀಯ ವಿದೇಶಾಂಗ ಇಲಾಖೆ ತುರ್ತು ಮಾರ್ಗಸೂಚಿ ಪ್ರಕಟಿಸಿದೆ. ಸದ್ಯ ಇರಾನ್ ಹಾಗೂ ಇಸ್ರೇಲ್ ಪ್ರಯಾಣ ಮುಂದೂಡಿ ಅಥವಾ ರದ್ದು ಮಾಡಿ ಎಂದು ಭಾರತೀಯರಿಗೆ ಮನವಿ ಮಾಡಿದೆ.
ಇರಾನ್ ಹಾಗೂ ಇಸ್ರೇಲ್ ದೇಶಕ್ಕೆ ಪ್ರಯಾಣ ಮಾಡುವುದನ್ನು ಮುಂದೂಡಿ ಅಥವಾ ರದ್ದು ಮಾಡಿ. ವಿದೇಶಾಂಗ ಇಲಾಖೆಯ ಮುಂದಿನ ಸೂಚನೆವರೆಗೆ ಪ್ರಯಾಣ ಬೇಡ ಎಂದು ಮನವಿ ಮಾಡಿದೆ. ಇಸ್ರೇಲ್ ಹಾಗೂ ಇರಾನ್‌ನಲ್ಲಿರುವ ಭಾರತೀಯ ನಾಗರೀಕರು(Indian Citizen )ಅಲ್ಲಿನ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಕೋರಿದೆ. ಮುನ್ನಚ್ಚೆರಿಕಾ ಕ್ರಮವಾಗಿ ರಾಯಭಾರ ಕಚೇರಿಯೊಂದಿಗೆ(Indian Embassies ) ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಇರಾನ್ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯರು ಅನಗತ್ಯ ತಿರುಗಾಟಗಳನ್ನು ರದ್ದು ಮಾಡಿ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ರಾಯಭಾರ ಕಚೇರಿ ಜೊತೆ ಮಾತನಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಿದೆ. ಪರಿಸ್ಥಿತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತೀಯ ಸುರಕ್ಷತೆ ನಮ್ಮ ಆದ್ಯತೆ. ಎಲ್ಲರ ಸುರಕ್ಷತೆ ಕುರಿತು ಇಲಾಖೆ, ಇಸ್ರೇಲ್ ಹಾಗೂ ಇರಾನ್ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದಿದೆ.
ಇರಾನ್, ಇಸ್ರೇಲ್ನಲ್ಲಿನ ಸದ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.