ಕುಂದಾನಗರಿಯಲ್ಲಿ ಕಣ್ಮನ ಸೆಳೆಯುವ ತಾಣಗಳು
ಗಡಿಜಿಲ್ಲೆ ಬೆಳಗಾವಿ(Belagavi) ತನ್ನದೇ ಆದ ಮಹತ್ವವನ್ನು ಹೊಂದಿದೆ. ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತಿ ಗಳಿಸಿದೆ. ಬೆಳಗಾವಿಯಲ್ಲಿ ಹೆಮ್ಮೆಯ ಸುವರ್ಣ ವಿಧಾನ ಸೌಧವಿದೆ(Suvarna Soudha). ಕುಂದಾನಗರಿ ಅಂತಲೇ ಈ ಜಿಲ್ಲೆ ಜನ ಜನಿತ. ಪ್ರವಾಸೋದ್ಯಮದ ವಿಷಯದಲ್ಲೂ ಬೆಳಗಾವಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಬೆಳಗಾವಿ ಪ್ರಾಕೃತಿಕವಾಗಿ, ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಗಮನ ಸೆಳೆದಿದೆ.
ಬೆಳಗಾವಿ ಕೋಟೆ (Belagavi Fort)
ಈ ಕೋಟೆಯನ್ನು 12 ನೇ ದಶಕದಲ್ಲಿ ಕಟ್ಟಲಾಗಿದ್ದು, ಹಂತ ಹಂತವಾಗಿ ಆಳ್ವಿಕೆದಾರರು ಅಭಿವೃದ್ಧಿ ಪಡಿಸಿದರು. ಈ ಕೋಟೆಯು ಮಸೀದಿ(Masjid) ಹಾಗೂ ಮಂದಿರ (Temple )ರೀತಿಯಲ್ಲಿ ಕಟ್ಟಿರುವಂತಹ ವಿಶಿಷ್ಟ ಕೋಟೆಯಾಗಿದೆ. ಈ ಕೋಟೆಯ ಮುಖ್ಯ ದ್ವಾರದಲ್ಲಿ ಗಣೇಶ ದೇವಸ್ಥಾನ (Ganesh Temple)ಹಾಗೂ ದುರ್ಗಾ ದೇವಸ್ಥಾನ(Durga Temple)ಇದ್ದು, ಸಫಾ ಮಸೀದಿ ( Safa Masjid). ಇಂಡೋ-ಸಾರ್ಸೆನಿಕ್ ಹಾಗೂ ಡೆಕ್ಕನ್ ಶೈಲಿಯಲ್ಲಿನ ಆರ್ಚ್ ಪಾಯಿಂಟ್, ಮಿನಾರ್ಸ್ ಗಳನ್ನು ಇಲ್ಲಿ ಕಾಣಬಹುದಾಗಿದೆ.
ಗೋಕಾಕ್ ಫಾಲ್ಸ್ (Gokak Falls)
ಗೋಕಾಕ್ ಜಲಪಾತ. ಘಟಪ್ರಭಾ(Ghataprabha )ನದಿಯಿಂದ ಸೃಷ್ಟಿಯಾಗಿದೆ. ಗೋಕಾಕ್ ಪಟ್ಟಣದಿಂದ ಈ ಜಲಪಾತಕ್ಕೆ ಸುಮಾರು ಆರೂವರೆ ಕಿಲೋಮೀಟರ್ ದೂರ. ಗೋಕಾಕ್ ಜಲಪಾತ ಕರ್ನಾಟಕದ ನಯಾಗರ(Niagara). ಮನಮೋಹಕ ದೃಶ್ಯವನ್ನು ನೋಡುವ ಸಲುವಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಈ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರು ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ದುರ್ಗಾ ದೇವಿ, ಷಣ್ಮುಖ ಮತ್ತು ಮಹಾಲಿಂಗೇಶ್ವರ ದೇವಾಲಯಗಳನ್ನೂ ನೋಡಬಹುದು. ಇಲ್ಲಿ ಚಾರಣಕ್ಕೂ ಸಾಕಷ್ಟು ಅವಕಾಶವಿದೆ. ಜಲಪಾತದಿಂದ ಸುಮಾರು 8 ಕಿ.ಮೀ ದೂರದಲ್ಲಿ ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ನಡೆಸಬಹುದು.
ನೀವು ಇದನ್ನೂ ಓದಬಹುದು:ಸ್ಥಳೀಯ ವಿಶೇಷತೆಗಳಿಂದ ಈ ಜಿಲ್ಲೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ
ಸವದತ್ತಿ ರೇಣುಕಾ ಯಲ್ಲಮ್ಮ (Shree Renuka Yallamma Devi Temple)
ಸವದತ್ತಿಯಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳ . ಬೆಳಗಾವಿಗೆ ಪ್ರವಾಸಕ್ಕೆ ಬಂದ ಸಾಕಷ್ಟು ಮಂದಿ ಈ ಸುಂದರ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಸವದತ್ತಿ ಪಟ್ಟಣದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಈ ಯಾತ್ರಾ ಸ್ಥಳವಿದೆ. ಬೆಟ್ಟವನ್ನು `ಯಲ್ಲಮ್ಮ ಗುಡ್ಡ'(Yallamma Gudda) ಎಂದೂ ಕರೆಯಲಾಗುತ್ತದೆ. ಬೆಳಗಾವಿಯಿಂದ ಇಲ್ಲಿಗೆ ಇರುವ ದೂರ ಸುಮಾರು 70 ಕಿಮೀ. ಚಾಲುಕ್ಯ(Chalukya) ಮತ್ತು ರಾಷ್ಟ್ರಕೂಟರ ಶೈಲಿಯಲ್ಲಿ(Rashtrakuta )ನಿರ್ಮಾಣವಾಗಿರುವ ದೇವಸ್ಥಾನ ಇದು. ಇಲ್ಲೇ ಸಮೀಪದಲ್ಲಿ ಗಣಪತಿ, ಪರಶುರಾಮ ಮತ್ತು ಕಾಲಭೈರವ ದೇವರ ದೇವಸ್ಥಾನವನ್ನೂ ನೋಡಬಹುದು. ಕರ್ನಾಟಕದಿಂದ ಹೊರತಾಗಿ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶ ಸೇರಿದಂತೆ ಸಾಕಷ್ಟು ಕಡೆಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.
ಘಟಪ್ರಭಾ ಪಕ್ಷಿಧಾಮ (Ghataprabha Bird Sanctuary )
ಕೊಲ್ಲಾಪುರ(Kolhapur)-ನರಗುಂದ (Nargund)ರಸ್ತೆಯ ಸಮೀಪದಲ್ಲಿರುವ ಘಟಪ್ರಭಾ ಪಕ್ಷಿಧಾಮ ಪಕ್ಷಿ ಪ್ರಿಯರನ್ನು ಸೆಳೆಯುವಂತಹ ಸುಂದರ ಸ್ಥಳ. ಈ ಪಕ್ಷಿಧಾಮ ಘಟಪ್ರಭಾ ನದಿಯಿಂದ ಆವೃತವಾಗಿದೆ . 22ಕ್ಕೂ ಹೆಚ್ಚು ದ್ವೀಪಗಳು ಹೊಂದಿವೆ. ಇಲ್ಲಿ ಸಾಕಷ್ಟು ಸಂಖ್ಯೆಯ ಪಕ್ಷಿಗಳು ಬಂದು ನೆಲೆಸುತ್ತವೆ. ವಿದೇಶಿ ಹಾಗೂ ಸ್ಥಳೀಯ ಹಕ್ಕಿಗಳನ್ನೂ ಇಲ್ಲಿ ನೋಡಬಹುದು. ಬೆಳಗಾವಿಯಿಂದ ಸುಮಾರು 70 ಕಿಲೋಮೀಟರ್ ಮತ್ತು ಗೋಕಾಕ್‌ನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿ ಈ ಪಕ್ಷಿಧಾಮವನ್ನು ನೋಡಬಹುದು. ನವೆಂಬರ್‌ನಿಂದ ಮಾರ್ಚ್ ನಡುವಣ ಅವಧಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ,ಈ ಸಂದರ್ಭದಲ್ಲಿ ಹೆಚ್ಚಿನ ವಲಸೆ ಪಕ್ಷಿ ಪ್ರಭೇದಗಳು ಅಲ್ಲಿ ಗೂಡುಕಟ್ಟುತ್ತವೆ.
ಇವೆಲ್ಲದರ ಜೊತೆಗೆ ಬೆಳಗಾವಿ ಹೋದಾಗ ಕುಂದಾ ಸವಿಯಲು ಮತ್ತು ಸುವರ್ಣ ಸೌಧಕ್ಕೆ ಭೇಟಿ ನೀಡುವುದನ್ನು ಮಾತ್ರ ಮರೆಯದಿರಿ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.