ದೂರ ತೀರ ಯಾನವಿಂಗಡಿಸದ

ಜುಲೈನಿಂದ ಪ್ರತಿದಿನ ದಕ್ಷಿಣ ಕನ್ನಡದಿಂದ ಅಬುಧಾಬಿಗೆ ನೇರ ವಿಮಾನ ಸೇವೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Mangalore International Airport)ಇನ್ನು ಮುಂದೆ, ಪ್ರತಿ ದಿನವೂ ಕೊಲ್ಲಿ ರಾಷ್ಟ್ರಗಳಿಗೆ ವಿಮಾನದ ಸೇವೆ ಸಿಗಲಿದೆ.

ದಕ್ಷಿಣ ಕನ್ನಡದಿಂದ (Dakshina Kannada)ಕೊಲ್ಲಿ (Kolli)ರಾಷ್ಟ್ರಗಳಿಗೆ ಓಡಾಡುವವರ ಸಂಖ್ಯೆ ಜಾಸ್ತಿ.ಇದನ್ನ ಮನಗಂಡ ಏರ್ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಹೊಸ ಕೊಡುಗೆಯನ್ನು ನೀಡಿದೆ.

Air India Express

ಜುಲೈ 22 ರಿಂದ ಪ್ರತಿದಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್( United Arab )ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಗೆ( Abu Dhabi) ವಿಮಾನದ ಪ್ರಯಾಣ ಸಿಗಲಿದೆ.

ಪ್ರಸ್ತುತದ ದಿನಗಳಲ್ಲಿ ಮಂಗಳವಾರ( Tuesday), ಗುರುವಾರ(Thursday), ಶನಿವಾರ(Saturday)ಮತ್ತು ಭಾನುವಾರದಂದು(Sunday)ಮಾತ್ರ ಮಂಗಳೂರಿ ನಿಂದ ಅಬುಧಾಬಿಗೆ ಪ್ರಯಾಣ ಮಾಡಬಹುದಾಗಿದೆ.

ಅಬುಧಾಬಿಯು(Abu Dhabi) ಮಧ್ಯ ಪಶ್ಚಿಮ ಕರಾವಳಿಯ ಪರ್ಷಿಯನ್ (Persian Gulf ) ಕೊಲ್ಲಿಯ ದ್ವೀಪದಲ್ಲಿದೆ. ಅಬುಧಾಬಿಯು ಎಮಿರೇಟ್‌ನ ರಾಜಧಾನಿಯಾಗಿದೆ.

ಸ್ಥಳೀಯ ಮತ್ತು ಫೆಡರಲ್ ಸರ್ಕಾರಿ ಕಚೇರಿಗಳನ್ನು ಹೊಂದಿದೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ (United Arab Emirates) ಮತ್ತು ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸುಪ್ರೀಂ ಕೌನ್ಸಿಲ್‌ನ(Supreme Council) ನೆಲೆಯಾಗಿದೆ.

ಅಬುಧಾಬಿಯು (Abu Dhabi) ಬೃಹತ್ ತೈಲ ಮತ್ತು ಅನಿಲ ನಿಕ್ಷೇಪಗಳು (Gas reserves) ಮತ್ತು ಉತ್ಪಾದನೆ ಮತ್ತು ತುಲನಾತ್ಮಕವಾಗಿ ಹೆಚ್ಚಿನ ಸರಾಸರಿ ಆದಾಯದೊಂದಿಗೆ ಸೇರಿಕೊಂಡು ಅಭಿವೃದ್ಧಿ ಹೊಂದಿದ ಮಹಾನಗರವಾಗಿ ಪರಿವರ್ತನೆಯಾಗಿದೆ

Mangalore International Airport

ಮುಂದಿನ ತಿಂಗಳಿನಿಂದ ಎರಡು ದೇಶಗಳಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಇದೆ.

ನೀವು ಇದನ್ನು ಓದಬಹುದು: 1177 ರೂಪಾಯಿಗೆ ವಿಮಾನ ಪ್ರಯಾಣ ಮಾಡ್ಬಹುದು!

ಎರಡೂ ನಗರಗಳ ನಡುವೆ ಸದ್ಯದ ಮಟ್ಟಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಸೇವೆ ಇದ್ದು, ಸದ್ಯ ಬೆಂಗಳೂರು( Bangalore)ಹಾಗೂ ಮಂಗಳೂರು( Mangalore International Airport).

ಮಧ್ಯೆ ಸಂಚರಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮುಂದೆ ಸಂಪೂರ್ಣ ಅಂತಾರಾಷ್ಟ್ರೀಯ ವಿಮಾನವಾಗಿ ಬದಲಾಗಲಿದೆ. ಇನ್ನು ಅಬುಧಾಬಿಗೆ ದಿನಾಲೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ನನಲ್ಲಿ ಪ್ರಯಾಣಿಸಬಹುದು.

Mangalore International Airport

ಇನ್ನು ಮುಂದೆ , ವಾರಕ್ಕೆ ಎರಡು ವಿಮಾನ ದೋಹಾ ಮತ್ತು ಬಹ್ರೇನ್‌ಗೆ ಮತ್ತು ವಾರಕ್ಕೊಮ್ಮೆ ಏರ್ ಇಂಡಿಯಾದ ಒಂದು ವಿಮಾನ ಕುವೈತ್ ಮತ್ತು ಜೆಡ್ಡಾಕ್ಕೆ ಸಂಚಾರ ನಡೆಸುತ್ತಿದ್ದು,ಜುಲೈ 8 ರಿಂದ.

ಈ ವಲಯದಲ್ಲಿ ದೈನಂದಿನ ವಿಮಾನಗಳ ಸಂಚಾರ 5 ಇದ್ದದ್ದು ಆರಕ್ಕೆ ಏರಿರುವುದು ಪ್ರಯಾಣಿಕರಿಗೆ ಖುಷಿಯ ಸಂಗತಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button