Moreದೂರ ತೀರ ಯಾನವಿಂಗಡಿಸದ

ಮುರ್ಡೇಶ್ವರ ಕಡಲತೀರದಲ್ಲಿ ಶೀಘ್ರದಲ್ಲೇ ಬಂದರು ವ್ಯವಸ್ಥೆ:

ಮುರ್ಡೇಶ್ವರ ಕಡಲತೀರದಲ್ಲಿ (Murudeshwar Beach) ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿರುವಂತೆ, ಜಲಕ್ರೀಡೆಗಳ ಸಾಹಸಕ್ಕಾಗಿ ಬಳಸುವ ದೋಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ನೂರಾರು ವರ್ಷಗಳಿಂದ ಮೀನುಗಾರರಿಗೆ (Fishermen) ನೆಲೆಯಾಗಿರುವ ಮುರ್ಡೇಶ್ವರ ಕಡಲತೀರದಲ್ಲಿ ಈಗ ಮೀನುಗಾರರ ಮತ್ತು ಪ್ರವಾಸೋದ್ಯಮದ (Tourism) ದೋಣಿಗಳನ್ನು (Boats) ಇರಿಸಲು ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿದೆ.

ಈ ಕಾರಣದಿಂದ ದೇವಾಲಯದ (Murudeshwar Temple) ಬಳಿಯ ಕಡಲ ತೀರದಲ್ಲಿ ಬಂದರು ನಿರ್ಮಿಸುವಂತೆ ಮೀನುಗಾರರು ಸರ್ಕಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಈಗ ರಾಜ್ಯ ಸರ್ಕಾರ (State Government) ಇದಕ್ಕೆ ಒಪ್ಪಿಗೆ ನೀಡಿದೆ.

ಧಾರ್ಮಿಕ ಮತ್ತು ಜಲಸಾಹಸ ಕ್ರೀಡೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರದಲ್ಲಿ ಶಿವನ ದೇವಸ್ಥಾನದ ಪ್ರವೇಶ ದ್ವಾರದ ಪಕ್ಕದಲ್ಲಿ ಎಡ ಭಾಗದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣವಾಗಲಿದೆ.

ಈ ಹೊರ ಬಂದರುವಿನ ನಿರ್ಮಾಣ ಕಾರ್ಯದ ತಾಂತ್ರಿಕ ಪ್ರಕ್ರಿಯೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ (Karnataka Budget 2024) ಇದಕ್ಕೆ ಅನುಮೋದನೆಯನ್ನು ಸಹ ನೀಡಲಾಗಿದೆ.

ಒಂದೂವರೆ ಸಾವಿರ ದೋಣಿ, ಬೋಟುಗಳನ್ನು ನಿಲ್ಲಿಸುವಷ್ಟು ಸಾಮರ್ಥ್ಯದ ದೊಡ್ಡ ಬಂದರು (Port) ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಇದಕ್ಕೆ ಸಂಬಂಧಿಸಿದಂತೆ ಮೀನುಗಾರಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಉನ್ನತ ಸಭೆ ಸಹ ನಡೆಸಲಾಗಿದೆ.

ಮುರ್ಡೇಶ್ವರದಲ್ಲಿ ಈಗಾಗಲೇ 400 ಮೋಟರೀಕೃತ ದೋಣಿಗಳು ಹಾಗೂ 800 ಕ್ಕೂ ಹೆಚ್ಚು ನಾಡದೋಣಿಗಳು ಇವೆ. ಇವುಗಳು ಸೇರಿದಂತೆ ಯಾಂತ್ರೀಕೃತ ಬೋಟುಗಳು ತಂಗಲು ಅವಕಾಶ ಇರುವ ಬಂದರು ನಿರ್ಮಾಣವಾಗಲಿದೆ.

ಈ ಬಂದರಿನಲ್ಲಿ ಜಲತಡೆಗೋಡೆ (Break Water) ಕೂಡ ನಿರ್ಮಿಸಬೇಕಿದೆ. ಇದೆಲ್ಲದಕ್ಕೂ ಕ್ರಿಯಾಯೋಜನೆ ಆಗಬೇಕಿದೆ ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಬಬಿನ ಬೋಪಣ್ಣ ತಿಳಿಸಿದ್ದಾರೆ.

ಮುರ್ಡೇಶ್ವರ ಪ್ರವಾಸಿ ತಾಣವಾಗಿರುವುದರಿಂದ ರಜಾ ದಿನಗಳಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಬೆಳವಣಿಗೆ ಆಗುತ್ತಿರುವಂತೆ ಮೀನುಗಾರರಿಗೆ ಸ್ಥಳದ ಕೊರತೆ ಉಂಟಾಗುತ್ತಿದೆ.

ಮುರುಡೇಶ್ವರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಮುಖ್ಯ ರಸ್ತೆ ಇದೆ. ಅಲ್ಲಿ ಪ್ರವಾಸಿಗರ ವಾಹನವೇ ಹೆಚ್ಚಿರುತ್ತವೆ.

ಹಾಗಾಗಿ ಬಂದರಿಗೆ ಪ್ರತ್ಯೇಕ ರಸ್ತೆಯ ಅವಶ್ಯಕತೆ ಇದೆ ಮುರುಡೇಶ್ವರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಹರಿಕಂತ್ರ ತಿಳಿಸಿದರು.

ಬಂದರು ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದ್ದು. ಎಷ್ಟು ಉದ್ದ, ಯಾವ ವಿನ್ಯಾಸದಲ್ಲಿ ಇರಲಿದೆ ಎಂಬುದರ ಕುರಿತು ಕ್ರಿಯಾ ಯೋಜನೆಯ ಅಗತ್ಯವಿದೆ.

ಒಟ್ಟಿನಲ್ಲಿ ಸ್ಥಳೀಯ ಮೀನುಗಾರರ ಬೇಡಿಕೆಗಳಿಗೆ ಅನುಗುಣವಾಗಿ ಪ್ರವಾಸೋದ್ಯಮಕ್ಕೂ ತೊಂದರೆಯಾಗದಂತೆ ಮುರ್ಡೇಶ್ವರದ ಕಡಲತೀರದ ಬಳಿ ಬಂದರು ನಿರ್ಮಾಣವಾಗಬೇಕಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button