Moreಕಾಡಿನ ಕತೆಗಳುವಿಂಗಡಿಸದ

ರಿಲಯನ್ಸ್ ಕಂಪನಿಯಿಂದ ವಂತಾರಾ ಯೋಜನೆ ಪ್ರಕಟ; ವಿಶ್ವದ ಅತಿದೊಡ್ಡ ಪ್ರಾಣಿ ಸಂರಕ್ಷಣಾ ಕೇಂದ್ರದ ಸ್ಥಾಪನೆ

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್‌ ಸಹಯೋಗದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ತೆರೆಯುವ ತಮ್ಮ ಕನಸನ್ನು ನಿರ್ದೇಶಕರಾದ ಅನಂತ ಅಂಬಾನಿ (Anant Ambani) ಯವರು ಫೆ.26 ರಂದು ಘೋಷಿಸಿದರು.

ಪ್ರಾಣಿಗಳ ಸಂರಕ್ಷಣೆಗಾಗಿ ರೂಪಿಸಲಾಗುತ್ತಿರುವ ಈ ಯೋಜನೆಗೆ “ವಂತಾರಾ ಯೋಜನೆ” (Vantara Project) ಎಂಬ ಹೆಸರು ನೀಡಲಾಗಿದೆ. ವಂತಾರಾ ಎಂದರೆ ಕಾಡಿನ ನಕ್ಷತ್ರ ಎಂಬ ಅರ್ಥ ನೀಡುತ್ತದೆ.

ಈ ಯೋಜನೆಯ ಮೂಲಕ ವಿಶ್ವದಾದ್ಯಂತ ಇರುವ ಪ್ರಾಣಿಗಳ ರಕ್ಷಣೆ, ಪೋಷಣೆ ಮತ್ತು ಗಾಯಗೊಳಗಾದ ಪ್ರಾಣಿಗಳಿಗೆ ಪುನರ್ವಸತಿಯನ್ನು ಒದಗಿಸುವುದು, ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.

ಈ ಯೋಜನೆಯನ್ನು ಭಾರತ ಮಾತ್ರವಲ್ಲದೇ, ವಿದೇಶಗಳಲ್ಲೂ ತೆರೆಯಲು ಆಯೋಜಿಸಲಾಗಿದೆ. ಗುಜರಾತಿನಲ್ಲಿರುವ ರಿಲಯನ್ಸ್ ಕಂಪನಿಯ (Reliance Company) ಜಾಮ್ ನಗರ ರಿಫೈನರ್ ಕಾಂಪೆಕ್ಸ್ ಹಸಿರು ಬೆಲ್ಟ್ ನಲ್ಲಿ 3000 ಎಕರೆ ಪ್ರದೇಶವನ್ನು ಈ ಯೋಜನೆಯಡಿಯಲ್ಲಿ ಕಾಡಿನಂತಹ ಪರಿಸರವಾಗಿ ಪರಿವರ್ತಿಸಲಾಗುತ್ತಿದೆ.

ಗುಜರಾತಿನ (Gujarat) ಜಾಮ್ ನಗರದಲ್ಲಿ (Jamnagar) ತೆರೆಯಲಾದ ಈ ಕೇಂದ್ರವು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್‌ ಮಂಡಳಿಗಳ ನಿರ್ದೇಶಕರಾದ ಅನಂತ್ ಅಂಬಾನಿ ಅವರ ಪರಿಕಲ್ಪನೆಯಲ್ಲಿ ರೂಪಿಸಲಾಗುತ್ತಿದೆ. ಇದು ಅವರ ಕನಸಿನ ಯೋಜನೆ ಸಹ ಹೌದು.

ವಂತಾರಾ ಯೋಜನೆಯು ಅತ್ಯಾಧುನಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆ, ಸಂಶೋಧನೆ ಹಾಗೂ ಶೈಕ್ಷಣಿಕ ಕೇಂದ್ರಗಳು ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಕೇಂದ್ರವನ್ನು ರೂಪಿಸುವ ಗುರಿ ಹೊಂದಿದೆ.

ಯೋಜನೆಯ ಅಡಿಯಲ್ಲಿ, ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು, ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯಗಳು, ಮತ್ತು IUCN, WWF, ನಂತಹ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದುವ ಆಯೋಜನೆಯಲ್ಲಿದೆ ಎಂದು ಕಂಪನಿ ತಿಳಿಸಿದೆ.

ವಂತಾರಾ ಕಳೆದ ವರ್ಷಗಳಿಂದ 200 ಕ್ಕೂ ಹೆಚ್ಚು ಆನೆಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಇತರೆ ಪ್ರಾಣಿಗಳನ್ನು ಅಸುರಕ್ಷಿತ ಸ್ಥಳಗಳಿಂದ ರಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ವಂತಾರಾ ಕಾರ್ಯಕ್ರಮವು ಮೆಕ್ಸಿಕೋ, ವೆನೆಜುವೆಲಾ, ಸೇರಿದಂತೆ ಇತರ ದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.

ಇತ್ತೀಚಿಗೆ ಮಧ್ಯ ಅಮೆರಿಕಾದ ಮೃಗಾಲಯದಿಂದ ಹಲವು ದೊಡ್ಡ ಪ್ರಾಣಿಗಳನ್ನು ಜಾಮ್ ನಗರಕ್ಕೆ ತರಲಾಗಿದೆ.

ಈ ಎಲ್ಲಾ ಪ್ರಾಣಿ ಸಂರಕ್ಷಣಾ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದ ಕಾನೂನು ಮತ್ತು ನಿಯಮಗಳ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

ವಂತಾರಾವು 150 ಕ್ಕೂ ಅಧಿಕ ಮೃಗಾಲಯಗಳಲ್ಲಿ ತರಬೇತಿ, ಪ್ರಾಣಿಗಳ ಆರೈಕೆಗಾಗಿ ಮೂಲಸೌಕರ್ಯಗಳನ್ನು ಸುಧಾರಿಸಲು ಮೃಗಾಲಯ ಪ್ರಾಧಿಕಾರ, ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಈ ಯೋಜನೆಯಲ್ಲಿ ಭಾರತ ಮತ್ತು ಇತರ ದೇಶದ ನುರಿತ ಪ್ರಾಣಿತಜ್ಞರು ಮತ್ತು ವೈದ್ಯಕೀಯ ತಜ್ಞರೂ ಸಹ ಕೈಜೋಡಿಸಿದ್ದಾರೆ.

ವಂತಾರಾವು ಆಧುನಿಕ, ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರತೆಯ ಶ್ರೇಷ್ಠತೆಯೊಂದಿಗೆ ಸಹಾನುಭೂತಿಯ ಪ್ರಾಚೀನ ನೈತಿಕ ಮೌಲ್ಯದ ಸಂಯೋಜನೆಯಾಗಿದೆ ಎಂದು ಅನಂತ್ ಅಂಬಾನಿ ಅವರು ತಮ್ಮ ಹೆಮ್ಮೆಯ ಯೋಜನೆಯ ಕುರಿತು ಹೇಳಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button