ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಕರಾವಳಿ ಜನರ ನಂಬಿಕೆ ನಾಗಮಂಡಲದ ಬಗ್ಗೆ ನಿಮಗೆ ಗೊತ್ತಾ..?

ದೈವದೂರು ಕರಾವಳಿ (Coastal Karnataka or Canara)ವಿಭಿನ್ನ ಆಚರಣೆಗಳ ನೆಲೆವೀಡು. ಇಲ್ಲಿನ ಸಂಪ್ರದಾಯ ,ಬೇರೆ ಭಾಗದ ಆಚರಣೆಗಳಿಗಿಂತ ತೀರಾ ಭಿನ್ನ. ದೈವ, ದೇವರು, ನಾಗಾರಾಧನೆ ಅವಿಭಜಿತ ದಕ್ಷಿಣ ಕನ್ನಡ(South Canara)ಜಿಲ್ಲೆಯ ಜನರ ಸಂಸ್ಕೃತಿಯ ದ್ಯೋತಕ. ಅಂತಹದರಲ್ಲಿ ಪವಿತ್ರ ನಾಗ ಮಂಡಲ ಕೂಡ ಒಂದು.

ಕರಾವಳಿಯ ನಾಗಮಂಡಲ(Nagamandala )ಆಚರಣೆ ಇಲ್ಲಿನ ಜನರ ನಂಬಿಕೆಯ ಪ್ರತೀಕ. ನಾಗ ದೇವರ ಪ್ರೀತ್ಯರ್ಥ ನಡೆಯುವ ಈ ನಾಗಾರಾಧನೆ ಒಂದು ಅದ್ದೂರಿ ಆಚರಣೆ.

ನಾಗಮಂಡಲಕ್ಕೆ ಶತಮಾನಗಳ ಇತಿಹಾಸವಿದೆ. 13ನೇ ಶತಮಾನಕ್ಕೆ ಅನ್ವಯಿಸುವ ನಾಗಮಂಡಲದ ಶಿಲ್ಪವೊಂದು ನಂದಳಿಕೆಯಲ್ಲಿ(Nandalike )ದೊರೆತಿದೆ. ಕ್ರಿ.ಶ 1402 ರ ಬಾರಕೂರಿನ (Barkur)ಶಾಸನದಲ್ಲಿ “ಮಂಡಲ ಭಂಡಾರಿ” ಎಂಬ ಪದ ಬಳಕೆಯಾಗಿ

ನಾಗಮಂಡಲದ ಚಿತ್ರಕ್ಕೂ, ನಾಗಪಾತ್ರಿಯಲ್ಲಿ ಆವಾಹನೆಗೊಳ್ಳುವ “ಯಕ್ಷಿಗೂ” ಮಾಂತ್ರಿಕ-ತಾಂತ್ರಿಕ ಸಂಬಂಧವಿರಬೇಕು. ಈ ವಿಧಿಯಲ್ಲಿ ಬರೆವ ಚಿತ್ರ (ಮಂಡಲ) ದಲ್ಲಿ ನಾಗಯಕ್ಷಿ, ಬ್ರಹ್ಮಯಕ್ಷಿ, ತ್ರಿಶೂಲ, ಗಣಪತಿ, ನಾಗ ಎನ್ನುತ್ತಾರೆ. ಪಾತ್ರಿಯ ಮೈದುಂಬುವುದು ನಾಗಯಕ್ಷಿಯೇ ಹೊರತು ನಾಗನಲ್ಲವೆಂದು ಹೇಳುತ್ತಾರೆ. ತ್ರಿಕೋನವನ್ನು ಮೇಲು ಕೆಳಗೆ ಮಾಡಿ ಜೋಡಿಸಿದಾಗ ತಾಂತ್ರಿಕ ರೂಪ ಪಡೆದುಕೊಳ್ಳುತ್ತದೆ. ತಾಂತ್ರಿಕರು ಇದನ್ನು “ಶ್ರೀ ಚಕ್ರ” ಎಂದು ಕರೆದದ್ದು.

Coastal Karnataka Nagamandala

ನೀವು ಇದನ್ನು ಓದಬಹುದು : 15 ಸಾವಿರವಿದ್ದರೆ ಸಾಕು ಈ ದೇಶಗಳಿಗೆ ವಿಮಾನದಲ್ಲಿ ಹೋಗಬಹುದು

ಇದು ಹೆಣ್ಣು-ಗಂಡಿನ ಮಿಲನದ ಸಂಕೇತ. ಇದಕ್ಕೆ ನಾಗಮಂಡಲದ ಸಂದರ್ಭದಲ್ಲಿ ಗಣೇಶ ಎಂದು ಕರೆಯುತ್ತಾರೆ. ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಂತಿಯ ಚಿತ್ರವನ್ನು “ಬ್ರಹ್ಮಯಕ್ಷ” ಎಂದು ಕರೆಯುತ್ತಾರೆ. ಈ ಬ್ರಹ್ಮವೈದಿಕ ಚತುರ್ಮುಖ ಬ್ರಹ್ಮನಲ್ಲ. ತುಳುವ ರು(Tuluva)ಹೇಳುವ ಬೆರ್ಮೆರ್ – ಇದನ್ನು ಸಂತಾನದ ಅಧಿದೇವತೆ ಎಂದು ಹೇಳುತ್ತಾರೆ. ನಾಗನ ಹೆಡೆಯನ್ನು ಹೋಲುವ ಆಕೃತಿಯನ್ನು ಹಳದಿ ಬಿಳಿ ಬಣ್ಣದಲ್ಲಿ ರೇಖಿಸಲಾಗುವುದು. ಅದನ್ನು ಯಕ್ಷಿ ಎನ್ನುತ್ತಾರೆ.

ಈ ಆಚರಣೆಯಲ್ಲಿ ಯಕ್ಷ ಸಂಕೇತವನ್ನು ಆರ್ಯ-ದ್ರಾವಿಡರ ನಡುವಣ ಆತ್ಮೀಯತೆಯ ಬೆಸುಗೆ ಏರ್ಪಟ್ಟ ಸಂಕೇತವಾಗಿರುತ್ತದೆ. ನಾಗರಹಾವಿನ ಚಿತ್ರವನ್ನು ನಾಗಯಕ್ಷ ಎನ್ನುತ್ತಾರೆ. ಇದನ್ನು “ಪುರುಷ” ಸೂಚಕವಾಗಿಯೂ ತ್ರಿಶೂಲ “ಶೈವ” ಸೂಚಕವಾಗಿ ಗುರುತಿಸುತ್ತಾರೆ.

Coastal Karnataka Nagamandala

ಆವೇಶಭರಿತ ನಾಗಪಾತ್ರಿ (Nagapatri)ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ . ಅದ್ದೂರಿ ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ.

ನಾಗಮಂಡಲದ ಪ್ರಮುಖ ಮುಖ್ಯಾಂಶಗಳು

ನಾಗಬನಗಳು(Nagabana): ನಾಗ ಮಂಡಲ ಆಚರಣೆಯು (Nagamandala) ನಾಗಬನ ಅಥವಾ ಹಾವಿನ ಹುತ್ತದ ಬಳಿ ನಡೆಯುವ ಆಚರಣೆ.

ಆಚರಣೆ: ನಾಗ ಮಂಡಲ ಗಂಡು ಮತ್ತು ಹೆಣ್ಣು ಹಾವಿನ ಮಿಲನವನ್ನು ಆಚರಿಸುತ್ತದೆ. ಆಚರಣೆಗಳನ್ನು ಇಬ್ಬರು ಪುರೋಹಿತರು ನಡೆಸುತ್ತಾರೆ, ಒಬ್ಬರು ಗಂಡು ಹಾವಿನ ಪಾತ್ರ ನಿರ್ವಹಿಸಿದರೆ ಇನ್ನೊಬ್ಬರು ಹೆಣ್ಣು ಹಾವಿನ ಪಾತ್ರ ವಹಿಸುತ್ತಾರೆ. ನೃತ್ಯ, ಹಾವಿನಂತ ಚಲನೆ ಮತ್ತು ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಕೆಲವು ಆಚರಣೆಗಳು ಮುಂಜಾನೆ ತನಕ ಮುಂದುವರಿಯುತ್ತವೆ.

ಅಲಂಕಾರಗಳು: ನಾಗಬನ ಸುತ್ತಮುತ್ತಲಿನ ಪ್ರದೇಶಗಳನ್ನು ನೈಸರ್ಗಿಕ ಬಣ್ಣಗಳು ಮತ್ತು ವಿನ್ಯಾಸಗಳಿಂದ ವ್ಯಾಪಕವಾಗಿ ಅಲಂಕರಿಸಲಾಗುತ್ತದೆ. ತೆಂಗಿನ ಗರಿಗಳಿಂದ ಮಾಡಿದ ‘ಚಪ್ಪರ’ ಹಾಕಲಾಗುತ್ತದೆ.

Coastal Karnataka Nagamandala

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button