ತುಂಬಿದ ಮನೆದೂರ ತೀರ ಯಾನವಿಂಗಡಿಸದ

ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ಮಹಿಮೆ ಬಲ್ಲೀರಾ?

ಸಿಗಂದೂರು ಚೌಡೇಶ್ವರಿ ಎನ್ನುವ (Sigandur chowdeshwari)ಹೆಸರು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಲಕ್ಷಾಂತರ ಭಕ್ತಾಧಿಗಳು ಅಮ್ಮನ ದರ್ಶನಕ್ಕೆ ಎಂದು ಬರುತ್ತಾರೆ.

ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಭಾರತದ ಕರ್ನಾಟಕ(Karnataka ) ರಾಜ್ಯದ ಶಿವಮೊಗ್ಗದ (Shivamogga)ಸಿಗಂದೂರು( Sigandur)ಕಳಸವಳ್ಳಿಯಲ್ಲಿದೆ(Kalasavalli).

300 ವರ್ಷಗಳ ಹಿಂದೆ ಪವಿತ್ರ ಶರಾವತಿ ನದಿಯ( River Sharavati)ದಡದಲ್ಲಿ ದೇವಿಯ ವಿಗ್ರಹ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಚೌಡಮ್ಮ ದೇವಿಯು ದೇವತೆಯಾಗಿ ಉಲ್ಲೇಖಿಸಲ್ಪಡುವ ಅಲೌಕಿಕ ಜೀವಿಯಾಗಿದ್ದು, ಕಳ್ಳತನಕ್ಕಾಗಿ ಕಳ್ಳರನ್ನು ಶಿಕ್ಷಿಸುತ್ತಾಳೆ ಮತ್ತು ಕಳ್ಳತನದಿಂದ ವಸ್ತುಗಳನ್ನು ಕಳೆದುಕೊಳ್ಳದಂತೆ ತನ್ನ ಭಕ್ತರನ್ನು ರಕ್ಷಿಸುತ್ತಾಳೆ.

Sigandur Chowdeshwari

ಸುತ್ತಲೂ ಹಚ್ಚಹಸಿರು ಮತ್ತು ಲಿಂಗನಮಕ್ಕಿ( Linganamakki dam )ಅಣೆಕಟ್ಟಿನಿಂದ ಸುತ್ತುವರೆದಿರುವ ಸಿಗಂದೂರು ಗ್ರಾಮವು ಪವಿತ್ರ ಶರಾವತಿ ನದಿಯಿಂದ ಸುತ್ತುವರೆದಿದೆ.

ಗ್ರಾಮದಲ್ಲಿದ್ದ ಶೇಷಪ್ಪ ನಾಯಕರು( Sheshappa Nayaka)ದೇವಿಯು ಭೂಮಿಗೆ ಬರಲು ಮತ್ತು ಸಾವಿರಾರು ಭಕ್ತಾದಿಗಳನ್ನು ಆಶೀರ್ವದಿಸಲು ಕಾರಣರಾದವರು ಎಂದು ನಂಬಲಾಗಿದೆ. ಒಂದಿನ ಶೇಷಪ್ಪನು ಭೇಟೆಗೆಂದು ಕಾಡಿಗೆ ಒಬ್ಬಂಟಿಯಾಗಿ ಹೋಗಿದ್ದನು.ಕಾಡಿನ ದಾರಿಯಲ್ಲಿ ಮುಂದೆ ಸಾಗುತ್ತಿದ್ದಂತೆ ಅವನು ತಾನು ನಡೆದು ಬಂದ ಮಾರ್ಗವನ್ನು ಮರೆತುಬಿಟ್ಟನು.

ಸೂರ್ಯಾಸ್ತಮಾನದಲ್ಲಿ(Sunset )ಕತ್ತಲಾಗುತ್ತಿದ್ದಂತೆ ಭಯಭೀತನಾದ ಅವನು ಇದ್ದಕ್ಕಿದ್ದಂತೆ ಪ್ರಖರವಾದ ಬೆಳಕನ್ನು ನೋಡಿ ಗಾಬರಿಯಾದನು ಆಗ ಶ್ರೀ ಶೇಷಪ್ಪನು “ಕಾಪಾಡು ಚೌಡಮ್ಮ” ಎಂದು ಚೌಡಮ್ಮ ತಾಯಿಯನ್ನು ಕೂಗಿದನು ಮತ್ತು ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದನು.

ಸ್ವಲ್ಪ ಸಮಯದ ನಂತರ ಅವನು ಎಚ್ಚರಗೊಂಡು ಮಸುಕಾದ ಕಣ್ಣುಗಳಿಂದ(Eye) ಕೆಲವು ಹೊಳೆಯುವ ಕಲ್ಲುಗಳನ್ನು ನೋಡಿದನು ಮತ್ತು ಮಧುರವಾದ ತಾಯಿಯಂತಹ ಧ್ವನಿಯೊಂದು ಪ್ರತಿಧ್ವನಿಸಿತು “ಚಿಂತಿಸಬೇಡ ಮಗು.

Must visit places in Shivamogga

ನಾನು ಜಗತ್ತನ್ನು ಆಶೀರ್ವದಿಸಲು ಇಲ್ಲಿಯೇ ಇರುತ್ತೇನೆ, ನನಗಾಗಿ ಇಲ್ಲಿ ದೇವಾಲಯವನ್ನು ನಿರ್ಮಿಸಿ ನನ್ನನ್ನು ಚೌಡಮ್ಮ( Chowdamma) ಎಂದು ಪೂಜಿಸಬೇಕು.ಈ ಸ್ಥಳದಲ್ಲಿ ನನ್ನನ್ನು ಪ್ರಾರ್ಥಿಸಲು ಬರುವ ಎಲ್ಲಾ ಭಕ್ತರನ್ನು ನಾನು ಆಶೀರ್ವದಿಸುತ್ತೇನೆ”. ಎಂಬ ಧ್ವನಿ ಕೇಳಿತು.

ಶೇಷಪ್ಪನು (Sheshappa)ಇದೆ ನೆನಪಿನಲ್ಲಿ ಮನೆಗೆ ಹೋಗಿ ಮಲಗಿ ಮಾರನೇ ದಿನ ಅದೇ ಜಾಗಕ್ಕೆ ಬಂದು ನೋಡಿದಾಗ ಅಲ್ಲಿ ಆದಿ ಶಕ್ತಿಯು ಹೊಳೆಯುವ ಕಲ್ಲಿನ ರೂಪದಲ್ಲಿ ಇರುವುದನ್ನು ನೋಡಿ ಅವನು ಆಶ್ಚರ್ಯಚಕಿತನಾದನು.

ಅಂದಿನಿಂದ ಶೇಷಪ್ಪನು ಆದಿ ಶಕ್ತಿಗೆ(Adi Shakti)ದೈನಂದಿನ ಪೂಜೆಯನ್ನು ಪ್ರಾರಂಭಿಸಿದರು ಮತ್ತು ನಂತರ ಅವರು ಎಲ್ಲಾ ನಿಯಮಿತ ಕೆಲಸಗಳನ್ನು ಮಾಡುತ್ತಾ ಬಂದನು.

ಶೇಷಾಪ್ಪನವರು ಬ್ರಾಹ್ಮಣ(Brahmin) ಪೂಜಾರಿಗಾಗಿ ಪದೇ ಪದೇ ಒತ್ತಾಯಿಸಿದ ನಂತರ ಎಲ್ಲರೂ ಇಲ್ಲಿ ಬ್ರಾಹ್ಮಣರ ಪೂಜೆಗೆ ಸಮ್ಮತಿಯನ್ನು ನೀಡಿದರು.

Sigandur Chowdeshwari

ನೀವು ಇದನ್ನೂ ಇಷ್ಟ ಪಡಬಹುದು : ಹಲಸಿಯಲ್ಲಿ ನೋಡಬಹುದಾದ ತಾಣಗಳು

ಅವರೆಲ್ಲರೂ ಸೇರಿ ಒಂದು ದೇವಾಲಯವನ್ನು ನಿರ್ಮಿಸಿ ಪ್ರತಿನಿತ್ಯ ಪೂಜೆಯನ್ನು(Pooja) ನೆರವೇರಿಸಿಕೊಂಡು ಬಂದರು. ಇದರಿಂದ ಶ್ರೀ ದೇವಿ ಚೌಡೇಶ್ವರಿ ಅವರ ಎಲ್ಲಾ ದುಃಖ ಮತ್ತು ವಿವಾದಗಳನ್ನು ಪರಿಹರಿಸಿ ಆ ಊರಿನಲ್ಲಿ ಸಂತೋಷ, ಸೌಭಾಗ್ಯ ಮನೆಮಾಡುವಂತೆ ಮಾಡಿದಳು.

ವರದಹಳ್ಳಿ ಭಗವಾನ್ ಶ್ರೀ ಶ್ರೀಧರಸ್ವಾಮಿಗಳು( Varadahalli Shreedhara Swami)ಒಮ್ಮೆ ಸಿಗಂದೂರಿಗೆ ಭೇಟಿ ನೀಡಿದ್ದರು. ಪರಮ ಪೂಜ್ಯ ಶ್ರೀ ಶ್ರೀಧರಸ್ವಾಮಿಗಳು ದೇವಿಯನ್ನು ತನ್ನ ಸೌಮ್ಯಸ್ವರೂಪದಿಂದ ಭಕ್ತರಿಗೆ ಅನುಗ್ರಹಿಸುವಂತೆ ಪ್ರಾರ್ಥಿಸಿದರು.

ದೇವಾಲಯದ ಬಲಭಾಗದಲ್ಲಿ ಭೂತದ ಕಟ್ಟೆ . ಎಡಭಾಗದಲ್ಲಿ ಶ್ರೀ ಶನೇಶ್ವರ ಮತ್ತು ಶ್ರೀ ರಕ್ತೇಶ್ವರಿ (Rakteshwari)ದೇವಸ್ಥಾನ ಕಂಡುಬರುತ್ತದೆ.

ಆಷಾಢ ಮಾಸದಲ್ಲಿ ವಿಶೇಷ ಪೂಜೆ ಮತ್ತು ಪೂಜೆ ನಡೆಯುತ್ತದೆ. ಈ ಪೂಜೆಗೆ ಸೇರಲು ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ.ಮಳೆಗಾಲವಿರಲಿ, ಚಳಿಗಾಲವಿರಲಿ ಅಥವಾ ಬೇಸಿಗೆ ಕಾಲವಿರಲಿ ಈ ಸ್ಥಳಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಸ್ಥಳದಲ್ಲಿ ಎಂದಿಗೂ ಭಕ್ತರ ಭೇಟಿಗೆ ಕೊರತೆಯಿರುವುದಿಲ್ಲ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button