ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಶರಣರ ನಾಡಿನಲ್ಲಿ ನೋಡಬಹುದಾದ ಜಾಗಗಳಿವು

ಕಲಬುರ್ಗಿ ಜಿಲ್ಲೆಯನ್ನು(Kalaburagi )ತೊಗರಿಯ ಕಣಜ ಎಂದು ಕರೆಯುತ್ತಾರೆ. ಇದು ಉತ್ತರಕ್ಕಿರುವ ಜಿಲ್ಲೆ. ಕಲ್ಯಾಣ ಕರ್ನಾಟಕದ(Kalyana Karnataka)ಪ್ರಾಂತ್ಯಕ್ಕೆ ಬರುವ ಊರು. ತೊಗರಿ ಬೆಳೆಗೆ ಈ ಊರು ಅದೆಷ್ಟು ಪ್ರಸಿದ್ದಿಯನ್ನು ಪಡೆದಿರುತ್ತದೆಯೋ ಅಷ್ಟೇ ಬಿಸಿಲಿಗೂ ಕೂಡ ಈ ಊರು ಖ್ಯಾತಿ.. ಇವೆಲ್ಲವೂದರ ಜೊತೆಗೆ ಶರಣರ ನಾಡು ಎಂದು ಕರೆಯಲ್ಪಡುವ ಈ ಜಿಲ್ಲೆಯಲ್ಲಿ ಪೌರಾಣಿಕ,ಪಾರಂಪರಿಕ ತಾಣಗಳು ಕೂಡ ಈ ಜಿಲ್ಲೆಯಲ್ಲಿದೆ

ಕಲಬುರ್ಗಿ ಕೋಟೆ (Kalaburgi Fort)

ಕಲಬುರಗಿಯ ಹೃದಯ ಭಾಗದಲ್ಲಿರುವ ಕೋಟೆಯು ಇಸ್ಲಾಮಿಕ್‌(Islamic )ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ಕೋಟೆಯನ್ನು ಮೂಲತಃ ವಾರಂಗಲ್‌ ಕಾಕತೀಯರ ರಾಜಾ ಗುಲ್‌ಚಂದ್‌ (King Gulchand)ನಿರ್ಮಿಸಿದ. ದೌಲತ್‌ಬಾದಿನ ಮಾಂಡಲಿಕ ಅರಸ ರಾಜಾ ಕಲಿಚಂದ ಈ ಕೋಟೆ ನಿರ್ಮಿಸಿದ ಪ್ರತೀತಿಯೂ ಇದೆ.

Kalaburgi Fort

ಬಹಮನಿ ಸಾಮ್ರಾಜ್ಯದ ದೊರೆ ಅಲಾವುದ್ಧೀನ್‌ ಬಹುಮನ್‌ ಷಾ ಪಶ್ಚಿಮ ಏಷ್ಯಾದ ಮತ್ತು ಯುರೋಪಿಯನ್‌ ವಾಸ್ತುಶಿಲ್ಪದ ಶೈಲಿಯಲ್ಲಿಪುನರ್‌ ರಚಿಸಿದನು. ಆಗಿನ ರಾಜರು ತಮಗೆ ಬೇಕಾದ ವ್ಯಾಪ್ತಿಯಲ್ಲಿ ಕೋಟೆಯನ್ನು ನಿರ್ಮಿಸಿ 20 ಎಕರೆವರೆಗೂ ವಿಸ್ತರಿಸಿದರು.

ಬೌದ್ಧ ವಿಹಾರ(Buddha Vihara)

ಬೌದ್ಧ ವಿಹಾರ ಸಂಕೀರ್ಣವು ಬೌದ್ಧ ಧರ್ಮದ ವಾಸ್ತುಶಿಲ್ಪದಲ್ಲಿ ಕಟ್ಟಲಾಗಿದೆ. ಗೋಪುರ ವಿನ್ಯಾಸವು ತಾಜಮಹಲ್(Taj Mahal)ಮಾದರಿಯಲ್ಲಿದೆ. ಗೋಪುರವು 70 ಅಡಿ ಉದ್ದ ಮತ್ತು 59 ಅಡಿ ವ್ಯಾಸ ಹೊಂದಿದ್ದು, ಒಳಗಡೆ ಕೊನೆಯಲ್ಲಿ 48 ಅಡಿ ಉದ್ದದ ನಾಲ್ಕು ಅಶೋಕ ಸ್ತಂಭಗಳಿವೆ.

Buddha Vihara Kalaburagi

ಆಕರ್ಷಣೆವೆಂದರೆ 6.5 ಅಡಿ ಉದ್ದದ ಕಪ್ಪು ಬಣ್ಣದ ಬೌದ್ಧನ ಮೂರ್ತಿ.ಸುಮಾರು 15,635 ಚದುರ ಅಡಿಯ, 170 ಕಂಬಗಳು ಮತ್ತು 284 ಅಡಿಗಲ್ಲುಗಳನ್ನು ಹೊಂದಿರುವ ಒಂದು ದೊಡ್ಡ ಪ್ರಾರ್ಥನೆ ಹಾಲ್ ಇದೆ. 8.5 ಅಡಿ ಎತ್ತರದ ಚಿನ್ನದಿಂದ ಆವರಿಸಿರುವ ಪಂಚಲೋಹದಿಂದ ನಿರ್ಮಿಸಿದ್ದ ಕುಳಿತಿರುವ ಬೌದ್ಧನ ವಿಗ್ರಹ.

ನೀವು ಇದನ್ನು ಇಷ್ಟ ಪಡಬಹುದು: ಬೀದರ್ ಗೆ ಹೋದರೆ ಈ ಜಾಗಗಳಿಗೆ ಹೋಗಿ ಬನ್ನಿ

ಇದು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ವಿಗ್ರಹವಾಗಿದೆ.ಇದನ್ನು ಥೈಲ್ಯಾಂಡ್ (Thailand) ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.ದಕ್ಷಿಣ ಭಾರತದಲ್ಲಿಯೇ ಬೌದ್ಧ ಧರ್ಮದ ತೀರ್ಥಯಾತ್ರಿಕರಿಗೆ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ.

ಮಲ್ಕೆಡಾ ಕೋಟೆ (Malkhed Fort)

ಮಲ್ಕೆಡಾವನ್ನು ಹಿಂದೆ ಮಾನ್ಯಖೇತ ಎಂದು ಕರೆಯಲಾಗುತ್ತಿತ್ತು, ಇದು ರಾಷ್ಟ್ರಕೂಟ(Rashtrakuta)ರಾಜವಂಶದ ರಾಜಧಾನಿಯಾಗಿತ್ತು, ರಾಷ್ಟ್ರಕೂಟರು 9 ಮತ್ತು 10 ನೇ ಶತಮಾನದಲ್ಲಿ ಡೆಕ್ಕನ್ ಪ್ರದೇಶವನ್ನು ಆಳಿದ್ದರು. ರಾಜ ಅಮೋಘ ವರ್ಷ I ರಾಜಧಾನಿಯನ್ನು ಮಯೂರ ಖಾನಿಯಿಂದ ಮಾನ್ಯಖೇತಕ್ಕೆ ಸ್ಥಳಾಂತರಿಸಿದನು.

Malkhed Fort

ಮಲ್ಕೆಡಾ ಕೋಟೆಯ ಪ್ರಮುಖ ಆಕರ್ಷಣೆಗಳಲ್ಲಿ ದಪ್ಪವಾದ ಹೊರಗಿನ ಗೋಡೆಗಳು (20 ಅಡಿ ಎತ್ತರ, ಶಹಾಬಾದ್ ಕಲ್ಲುಗಳು ಎಂದು ಕರೆಯಲ್ಪಡುವ ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾದವು), ಮರದ ಬಾಗಿಲುಗಳ ಅವಶೇಷಗಳನ್ನು ಹೊಂದಿದ ಮುಖ್ಯ ದ್ವಾರ, ಕಿರಿದಾದ ಮೆಟ್ಟಿಲುಗಳ ಮೂಲಕ ತಲುಪಬೇಕಾದ ಕಾವಲು ಗೋಪುರಗಳು, ಹಳೆಯ ಹನುಮಾನ್ ದೇವಾಲಯ ಮತ್ತು ಮಲ್ಕೆಡಾ ಕೋಟೆಯೊಳಗಿನ ಎತ್ತರದ ಸ್ಥಳಗಳಿಂದ ಕಾಗಿನಿ ನದಿಯ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ.

ಶರಣಬಸವೇಶ್ವರ ದೇವಸ್ಥಾನ (Sharanabasaveshwara Temple)

ಶರಣಬಸವೇಶ್ವರ ದೇವಸ್ಥಾನ ನಗರದ ಮಧ್ಯ, ಬ್ರಹ್ಮಪುರ ಬಡಾವಣೆಯ ಪ್ರದೇಶದಲ್ಲಿದೆ. ಮೂಲತಃ ಜೇವರ್ಗಿ ತಾಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ಬಸವಣ್ಣನವರ ಶರಣ ತತ್ವಗಳ ಸಂದೇಶಗಳ ಪ್ರಚಾರ ಮಾಡುತ್ತ ಕಲ್ಯಾಣಕ್ಕೆ ಹೋಗುವಾಗ, ಕಲಬುರಗಿಯಲ್ಲಿಯೇ ಉಳಿಯುವಂತೆ ಮಾಡಿದವರು ಇವರ ಶಿಷ್ಯ ದೊಡ್ಡಪ್ಪ ಶರಣರು. ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು

Sharanabasaveshwara Temple

ಭಕ್ತರ ಆರಾಧನಾ ತಾಣವಾಗಿದೆ. ಹೋಳಿ ಹುಣ್ಣಮೆ 5 ದಿನಗಳ ನಂತರ ತಿಂಗಳವರೆಗೆ ಜಾತ್ರೆ ನಡೆಯುವುದು ವಿಶೇಷ. ಇಲ್ಲಿನ ಹಿಂದು ಮುಸ್ಲಿಂರು ಈ ಎರಡೂ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಸಾಮರಸ್ಯ ಮೆರೆಯುತ್ತಾರೆ.

ಸನ್ನತಿ (Sannati)

1986ರಲ್ಲಿ ಹಲವಾರು ಪ್ರಾಚೀನ ಲಿಪಿಗಳ ಉತ್ಕ್ಷೇತನದೊಂದಿಗೆ ಸನ್ನತಿ ಬೆಳಕಿಗೆ ಬಂದಿತು. ಕೆಲವು ಶಾಸನಗಳು, ಬರಹಗಳು 2000 ವರ್ಷ ಹಿಂದಿನವು. ಸನ್ನತಿ ಜಿಲ್ಲೆಯ ಚಿತಾಪುರ(Chittapura) ತಾಲ್ಲೂಕಿನ ಭೀಮಾ ನದಿಯ ದಡದಲ್ಲಿದೆ. ಸನ್ನತಿ ಚಂದ್ರಲ ಪರಮೇಶ್ವರಿ ದೇವಸ್ಥಾನಕ್ಕೂ ಹೆಸರುವಾಸಿಯಾಗಿದೆ. ಅಶೋಕ ಚಕ್ರವರ್ತಿಯೊಂದಿಗಿನ ಸಂಪರ್ಕವು ಸನ್ನತಿಯನ್ನು ಪ್ರಮುಖ ಬೌದ್ಧ ಧರ್ಮ ತಾಣವನ್ನಾಗಿ ರೂಪಿಸಿತ್ತು.

Sannati

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button