ವಿಂಗಡಿಸದಸಂಸ್ಕೃತಿ, ಪರಂಪರೆ

ಆದಿ ಶಂಕರರು ಸ್ಥಾಪಿಸಿದ ಈ ಶಕ್ತಿಪೀಠ ಕಂದಮ್ಮಗಳ ಅಕ್ಷರಾಭ್ಯಾಸಕ್ಕೆ ಪ್ರಸಿದ್ಧಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು (Kollur Mookambika Temple)ಕರ್ನಾಟಕದ( Karnataka)ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯ. ಈ ದೇವಾಲಯವು ಕಲೆ ಮತ್ತು ಜ್ಞಾನಕ್ಕೆ ಸಮರ್ಪಿಸಲಾಗಿದೆ. ಮೂಕಾಂಬಿಕಾ ದೇವಿಯನ್ನು ಮಾತು ಮತ್ತು ಅಕ್ಷರಗಳ ದೇವತೆ ಎಂದು ಪರಿಗಣಿಸಲಾಗುತ್ತದೆ. ದೇವಿಯ ವಿಗ್ರಹವನ್ನು “ಪಂಚಲೋಹಾ” ಬಳಸಿ ತಯಾರಿಸಲಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಉಡುಪಿಯಿಂದ(Udupi) ಸುಮಾರು 75ಕಿಮೀ ದೂರದಲ್ಲಿ ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿದೆ. ಉಡುಪಿಯಿಂದ ಕುಂದಾಪುರ (Kundapura)ಮಾರ್ಗವಾಗಿ ಕೊಲ್ಲೂರನ್ನು ತಲುಪಬಹುದು. ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದು ಕೂಡ ಒಂದು. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ದೇವಸ್ಥಾನ. ಶಂಕರಾಚಾರ್ಯರು(Shankaracharya )ಸ್ಥಾಪಿಸಿದ ಶಕ್ತಿ ಪೀಠಗಳಲ್ಲಿ ಒಂದು.

Kollur Mookambika Temple

ಕೊಲ್ಲೂರಿಗೆ ಪ್ರತಿ ನಿತ್ಯ ರಾಜ್ಯದ ಭಕ್ತರು ಮಾತ್ರವಲ್ಲದೆ ಕೇರಳ(Kerala), ತಮಿಳುನಾಡು(Tamilnadu )(Andhra Pradesh), ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಮೂಕಾಂಬಿಕಾ ದೇವಿಯು ಆದಿ ಶಕ್ತಿಯ ಅವತಾರವಾಗಿದ್ದು, ಆಕೆಗೆ 3 ಕಣ್ಣುಗಳು, ನಾಲ್ಕು ಕೈಗಳು ಇವೆ. ಶಿವ ಹಾಗೂ ಶಕ್ತಿಯ ಸಂಯೋಜನೆಯ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಮೂಕಾಂಬಿಕೆ ಕಂಡು ಬರುತ್ತಾಳೆ. ಆದಿಶಕ್ತಿಯನ್ನು ಉದ್ಭವ ಲಿಂಗವಾಗಿ ಪೂಜಿಸುವ ಅತಿ ಅಪರೂಪದ ದೇವಾಲಯವಿದು.ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಗೆ ಹಲವು ಶತಮಾನಗಳ ಇತಿಹಾಸವಿದೆ.

Kollur Mookambika Temple

ನೀವು ಇದನ್ನು ಇಷ್ಟ ಪಡಬಹುದು: ಭಟ್ ಎನ್ ಭಟ್ ಹೆಸರಿನಲ್ಲಿ ದಕ್ಷಿಣ ಕನ್ನಡದ ಆಹಾರವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ಸುದರ್ಶನ ಭಟ್

ಇತಿಹಾಸದ ಪ್ರಕಾರ ಇಲ್ಲಿ ಕೋಲ ಮಹರ್ಷಿ ತಪಸ್ಸಿನಲ್ಲಿ ತೊಡಗಿದ್ದರು. ಅವರಿಗೆ ಕೌಮ್ಹಾಸುರ ರಾಕ್ಷಸನ ಉಪಟಳ ಹೆಚ್ಚಾಗಿತ್ತು. ಈ ರಾಕ್ಷಸ ಕೂಡಾ ಶಿವನನ್ನು ಮೆಚ್ಚಿಸಲು ತಪಸ್ಸು ಮಾಡಲು ಕುಳಿತ. ಆದರೆ ಅವನು ಕೇಳಲು ಹೊರಟ ವರಗಳು ದುರುದ್ದೇಶಪೂರಿತವಾಗಿದ್ದವು. ಇದನ್ನು ತಿಳಿದ ಪಾರ್ವತಿಯು ಶಿವ ಪ್ರತ್ಯಕ್ಷನಾದಾಗ ಕೌಮ್ಹಾಸುರನಿಗೆ ಬಾಯಿ ಬಾರದಂತೆ ಮೂಗನನ್ನಾಗಿ ಮಾಡಿದಳು. ಶಿವ ಎದುರೇ ಇದ್ದರೂ ವರ ಕೇಳಲು ಕೌಮ್ಹಾಸುರನಿಗೆ ಸಾಧ್ಯವಾಗಲಿಲ್ಲ.

ಅಂದಿನಿಂದ ಅವನ ಹೆಸರು ಮೂಕಾಸುರ ಎಂದಾಯಿತು. ನಂತರ ಶುಕ್ಲಾಚಾರ್ಯರ ಆಶೀರ್ವಾದದಿಂದ ಅವನಿಗೆ ಮಾತು ಮರಳಿದರೂ ಋಷಿಮುನಿಗಳನ್ನು ಕೊಲ್ಲಲು ತೊಡಗುತ್ತಾನೆ. ಆತನ ಪಾಪ ಕಾರ್ಯ ಮಿತಿ ಮೀರಿದಾಗ ತಾಯಿ ಪಾರ್ವತಿಯು ಶಕ್ತಿ ರೂಪವನ್ನು ತಾಳಿ ಮೂಕಾಸುರನ ವಧೆ ಮಾಡುತ್ತಾಳೆ. ತಾಯಿಯ ಈ ಅವತಾರಕ್ಕೇ ಮೂಕಾಂಬಿಕೆ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.

Kollur Mookambika Temple

ಕೊಲ್ಲೂರು ಹಲವು ಕಾರಣಗಳಿಗೆ ಕರಾವಳಿಯ ಶಕ್ತಿ ದೇವತೆಯಾಗಿ ನೆಲೆ ನಿಂತಿದ್ದಾಳೆ. ಇಲ್ಲಿಗೆ ಚಿಕ್ಕ ಮಕ್ಕಳನ್ನು ಅಕ್ಷರಾಭ್ಯಾಸಕ್ಕಾಗಿ ಪೋಷಕರು ಕರೆ ತರುತ್ತಾರೆ. ಈ ಕಾರಣಕ್ಕಾಗಿ ಆಕೆಯನ್ನು ಅಕ್ಷರ ದೇವತೆ ಎನ್ನುತ್ತಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಕೆಲವು ಆಚರಣೆಗಳು ಅಥವಾ ಅಲಂಕಾರಗಳನ್ನು ಮಾಡುವ ಸಮಯದ ಹೊರತಾಗಿ ದಿನವಿಡೀ ದರ್ಶನಕ್ಕೆ ಅವಕಾಶವಿದೆ. ಇಲ್ಲಿ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ. ಸಾವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button