ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಚಾರ್ ಧಾಮ್ ಯಾತ್ರೆಗೆ ಅಗಸ್ಟ್ 18ರ ತನಕ ನಿಷೇಧ ಹೇರಿದ ನೈನಿತಾಲ್ ಕೋರ್ಟ್.

ಉತ್ತರಾಖಂಡ್ ರಾಜ್ಯದಲ್ಲಿ ಸೋಂಕು ನಿರೀಕ್ಷೆಯ ಮಟ್ಟಿಗೆ ಕಮ್ಮಿಯಾಗದ ಕಾರಣ ಅಲ್ಲಿನ ನೈನಿತಾಲ್ ಕೋರ್ಟ್ ಅಗಸ್ಟ್ 18ರ ತನಕ ಚಾರ್ ಧಾಮ್ ಯಾತ್ರೆಯನ್ನು ನಿಷೇಧಿಸಿದೆ.

  • ನವ್ಯಶ್ರೀ ಶೆಟ್ಟಿ

ಭಾರತದ ಇತಿಹಾಸದಲ್ಲಿ ದೇವಾಲಯಗಳು ಎಂದೂ ಕೂಡ ಮುಚ್ಚಿರಲಿಲ್ಲ. ಆದರೆ ಕೊರೋನಾ ಕಾರಣದಿಂದಾಗಿ ಭಾರತದಲ್ಲಿ ದೇವಾಲಯಗಳು ಹಲವು ದಿನಗಳ ಕಾಲ ಬಂದ್ ಆಗಿದ್ದವು.

ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ದೇವಾಲಯಗಳು ಓಪನ್ ಆಗಿದ್ದವು. ಆದರೆ ಎಲ್ಲ ದೇವಾಲಯಗಳು ಕೊರೋನಾ ಮಾರ್ಗ ಸೂಚಿ ಪಾಲಿಸಿ ಭಕ್ತರಿಗೆ ಅನುಮತಿ ನೀಡಿವೆ. ಆದರೆ ಹಲವು ದೇವಾಲಯಗಳು ಕೊರೋನಾ ಭೀತಿ ಎದುರಿಸುತ್ತಿದೆ. ಈ ಭೀತಿ ಪವಿತ್ರ ಚಾರ್ ಧಾಮ್ ಯಾತ್ರೆಗೆ ಕೂಡ ಎದುರಾಗಿದೆ.

Chardham Yatra Uttarakhand Gangotri Yamunotri Kedarnath Badrinath

ಆಗಸ್ಟ್ 18ರ ತನಕ ನಿಷೇಧ ಹೇರಿದ ಕೋರ್ಟ್

ಪವಿತ್ರ ಚಾರ್ ಧಾಮ್ ಯಾತ್ರೆಗೆ ಕೂಡ ಕೊರೋನಾ ಕಾರ್ಮೋಡ ಕವಿದಿದೆ. ನೈನಿತಾಲ್ ಕೋರ್ಟ್ ಆಗಸ್ಟ್ 18 ರ ತನಕ ಉತ್ತರಾಖಂಡದ ಪ್ರಸಿದ್ದ ಚಾರ್ ಧಾಮ್ ಯಾತ್ರೆಗೆ ನಿಷೇಧ ಹೇರಿದೆ. ಕಳೆದ ಮೇ ತಿಂಗಳ 14 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಬೇಕಿತ್ತು, ಆದರೆ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿತ್ತು.

ಚಾರ್ ಧಾಮ್ ಯಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಜನ ಆಗಮಿಸುತ್ತಾರೆ. ಕೇದಾರನಾಥ ದೇವಾಲಯವನ್ನೂ ಒಳಗೊಂಡಿರುವ ಚಾರ್ ಧಾಮ್ ಯಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಒಂದು ವೇಳೆ ಅಲ್ಲಿನ ಸರ್ಕಾರ ಚಾರ್ ಧಾಮ್ ಯಾತ್ರೆಗೆ ಅನುಮತಿ ನೀಡಿದರೆ ಕೊರೋನಾ ದೊಡ್ಡ ಮಟ್ಟಿಗೆ ಜನರಿಗೆ ಹರಡಬಹುದು . ಈ ಕಾರಣದಿಂದಾಗಿಯೇ ಅಲ್ಲಿನ ಕೋರ್ಟ್ ಅಗಸ್ಟ್ 18 ರ ತನಕ ಚಾರ್ ಧಾಮ್ ಯಾತ್ರೆಯನ್ನು ನಿಷೇಧಿಸಿದೆ.

Chardham Yatra Uttarakhand Gangotri Yamunotri Kedarnath Badrinath

ಪವಿತ್ರ ಯಾತ್ರೆ ಚಾರ್ ಧಾಮ್

ಚಾರ್ ಧಾಮ್ ಎನ್ನುವುದು ಬಹುತೇಕ ಹಿಂದೂ ಭಕ್ತರ ಕನಸು. ಹಲವು ಭಕ್ತರು ಬದುಕಿನ ಅಂತ್ಯದೊಳಗೆ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆ ಮಾಡಬೇಕು ಎನ್ನುವ ಕನಸು ಕಂಡಿರುತ್ತಾರೆ. ಚಾರ್ ಧಾಮ್ ಯಾತ್ರೆ ಮಾಡಬೇಕಾದರೆ ಕ್ಲಿಷ್ಟಕರ ಹಾದಿಯನ್ನು ಸವೆಸಬೇಕಾಗಿರುತ್ತದೆ. ಜನರಿಗೆ ಭಕ್ತಿ ನಂಬಿಕೆಯ ಪ್ರತಿರೂಪ ಚಾರ್ ಧಾಮ್ ಯಾತ್ರೆ.

ನೀವು ಇದನ್ನು ಇಷ್ಟ ಪಡಬಹುದು:ಪ್ರವಾಸಿಗರಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ

Chardham Yatra Uttarakhand Gangotri Yamunotri Kedarnath Badrinath

ಚಾರ್ ಧಾಮ್ ಯಾತ್ರೆ ಹೆಸರೇ ಸೂಚಿಸುವಂತೆ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳ ಸಂಗಮ. ಉತ್ತರಾಖಂಡ್ ರಾಜ್ಯದ ಯಮುನೋತ್ರಿಯಿಂದ ಆರಂಭಗೊಂಡು ಗಂಗೋತ್ರಿ, ಕೇದಾರನಾಥ , ಬದ್ರಿನಾಥ್ ಗಳಲ್ಲಿ ಯಾತ್ರೆ ಕೈಗೊಳ್ಳಲಾಗುತ್ತದೆ. ನಾಲ್ಕು ಪವಿತ್ರ ಸ್ಥಳಗಳಿಗೆ ಹೋಗುವ ಸಂದರ್ಭದಲ್ಲಿ ಕೆಲವು ಪುಣ್ಯ ನದಿಗಳು ಕೂಡ ಸಿಗುತ್ತದೆ.

ಯಾತ್ರಿಕರು ಕೇದಾರನಾಥ ,ಬದರಿನಾಥ್ ತಲುಪುವ ಮುನ್ನ ಪವಿತ್ರ ಗಂಗಾ ನದಿ ಹಾಗೂ ಯಮುನಾ ನದಿಯ ತೀರ್ಥವನ್ನು ತೆಗೆದುಕೊಂಡು ಹೋಗಿ ಅಭಿಷೇಕಕ್ಕೆ ನೀಡುವುದು ಸಂಪ್ರದಾಯ.

ಚಾರ್ ಧಾಮ್ ಯಾತ್ರೆ ಆರಂಭವಾಗುವ ಸಮಯ.

ಪ್ರತಿ ವರ್ಷ ಅಗಸ್ಟ್ ತಿಂಗಳಿನಲ್ಲಿ ಉತ್ತರಾಖಂಡ್ ಚಾರ್ ಧಾಮ್ ಯಾತ್ರೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ವೈರಸ್ ಕಾರಣದಿಂದ ಆರಂಭವಾಗಿಲ್ಲ. ಸಾಮಾನ್ಯವಾಗಿ ಮೇ ತಿಂಗಳಿಂದ ಆರಂಭವಾಗುವ ಚಾರ್ ಧಾಮ್ ಯಾತ್ರೆಗೆ ಅಕ್ಟೋಬರ್ ತಿಂಗಳಿನ ತನಕ ಅನುಮತಿಯಿತ್ತು.

ನೀವು ಆನ್ಲೈನ್ ಮೂಲಕ ನೋಂದಾವಣಿ ಮಾಡಿಸಿಕೊಳ್ಳಬಹುದು. ಹಲವು ಪ್ಯಾಕೇಜ್ ಟೂರ್ ಗಳು ಕೂಡ ಲಭ್ಯವಿರುತ್ತದೆ. ಹೃಷಿಕೇಶ ,ಹರಿದ್ವಾರ , ಕೋಟಾದ್ವಾರ್ ಹಾಗೂ ಡೆಹ್ರಾಡೂನ್ ಮಾರ್ಗವಾಗಿ ಸಾಕಷ್ಟು ರೈಲು ಸಂಪರ್ಕ ಕೂಡ ಇದೆ.

Chardham Yatra Uttarakhand Gangotri Yamunotri Kedarnath Badrinath

ಈ ಬಾರಿ ಚಾರ್ ಧಾಮ್ ಯಾತ್ರೆ ಹೋಗಬೇಕು ಎನ್ನುವ ಕನಸು ಕಂಡವರಿಗೆ ಕೊಂಚ ನಿರಾಸೆ ಕಾದಿದೆ. ಕೋರ್ಟ್ ಅಗಸ್ಟ್ 18ರ ತನಕ ನಿಷೇಧ ಹೇರಿದೆ. ವೈರಸ್ ಕಾರಣದಿಂದ ಯಾವಾಗ ಆರಂಭ ಆಗುತ್ತದೆ ಎನ್ನುವ ಖಚಿತತೆ ಕೂಡ ಇಲ್ಲ. ಯಾವುದಕ್ಕೂ ನೀವು ಕಾಲ ಕಾಲಕ್ಕೆ ಸಂಬಂಧಪಟ್ಟ ಇಲಾಖೆ ಅಥವಾ ಉತ್ತರಾಖಂಡ್ ಸರಕಾರ ನೀಡುವ ಮಾಹಿತಿಗಳನ್ನು ಗಮನಿಸುತ್ತೀರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button