ಸಾಮರಸ್ಯದ ಸಂಕೇತ ಕೇರಳದ ಈ ದೇಗುಲ
ಕೇರಳದಲ್ಲಿ(Kerala) ಮುಸ್ಲಿಂ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ.ಇದೀಗ ಇಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಕಥೆಯೊಂದು ಬೆಳಕಿಗೆ ಬಂದಿದೆ. ಮುತುವಲ್ಲೂರು ಶ್ರೀ ದುರ್ಗಾ ಭಗವತಿ ದೇವಸ್ಥಾನವು (Muthuvallur Sri Durga Bhagavathi Temple) ಕೇರಳದ ಮಲಪ್ಪುರಂ(Malappuram) ಜಿಲ್ಲೆಯ ಮುತುವಲ್ಲು ಗ್ರಾಮದಲ್ಲಿದೆ. ಈ ಮಂದಿರ ಸುಮಾರು 400 ವರ್ಷಗಳಷ್ಟು ಹಳೆಯದು. ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಇದೀಗ ನಡೆಯುತ್ತಿದೆ.ವಿಸ್ಮಯಕಾರಿ ಸಂಗತಿ ಎಂದರೆ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಂ ಸಮುದಾಯದವರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಇಬ್ಬರೂ ದುರ್ಗಾ ದೇವಿಗೆ ಸಮರ್ಪಿತವಾದ 400 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಸದ್ಯ ನವೀಕರಿಸುತ್ತಿದ್ದಾರೆ. ಈ ಹಂತದಲ್ಲಿ ಅನ್ಯ ಸಮುದಾಯದ ಮಂದಿಯೂ ಕೂಡ ಜೈ ಜೋಡಿಸುತ್ತಿದ್ದಾರೆ.
ಕೊಂಡೊಟ್ಟಿ(Kondotty )ಬಳಿ ಇರುವ ಮುತುವಲ್ಲೂರು ಶ್ರೀ ದುರ್ಗಾ ಭಗವತಿ ದೇವಸ್ಥಾನವು ಸಾಂಸ್ಕೃತಿಕ ಸಾಮರಸ್ಯದ ಗಮನಾರ್ಹ ಸಾಕಾರವಾಗಿದೆ.ಇದರ ನವೀಕರಣದ ಹಂತವು ಪೂರ್ಣಗೊಂಡಿದೆ. ವಿಗ್ರಹ-ಪ್ರತಿಷ್ಠಾಪನಾ ಸಮಾರಂಭವನ್ನು ಮೇ ತಿಂಗಳಲ್ಲಿ ನಿಗದಿಪಡಿಸಲಾಗಿದೆ.
ಜೀರ್ಣೋದ್ಧಾರ ಯೋಜನೆಯು 2015 ರಲ್ಲಿ ಪ್ರಾರಂಭವಾಯಿತು. ಈ ದೇಗುಲದ ನಿರ್ಮಾಣ ಕಾರ್ಯಕ್ಕೆ ಕೆಲವು ವರ್ಷಗಳಿಂದ ಒಟ್ಟು 38 ಲಕ್ಷ ರೂಪಾಯಿ ವೆಚ್ಚದಲ್ಲಿ ಉದಾರವಾಗಿ ಕೊಡುಗೆ ನೀಡುವ ಮೂಲಕ ಮುಸ್ಲಿಂ ಸಮುದಾಯವು ಮಹತ್ವದ ಪಾತ್ರವನ್ನು ವಹಿಸಿದೆ.
ಅವರು ಆರ್ಥಿಕ ನೆರವು ಮಾತ್ರವಲ್ಲದೆ ದೇವಸ್ಥಾನದ ನಿರ್ಮಾಣ ಸಾಮಗ್ರಿಗಳನ್ನೂ ನೀಡಿದ್ದಾರೆ. ಅಲ್ಲದೆ,ಹೆ ಚ್ಚುವರಿಯಾಗಿ, ಮುಸ್ಲಿಮರು ದೇವಾಲಯದ ಹಬ್ಬಗಳಿಗೆ ನಿಯಮಿತವಾಗಿ ತರಕಾರಿಗಳನ್ನು ಪೂರೈಕೆ ಮಾಡಿ ಸಾಮರಸ್ಯ ಮೆರೆದಿದ್ದಾರೆ.
ಪವಿತ್ರ ರಂಜಾನ್(Ramzan) ತಿಂಗಳಲ್ಲಿ ಎರಡು ಸಮುದಾಯಗಳ ನಡುವಿನ ಸಹಕಾರದ ಈ ಕಾರ್ಯವು ಪರಸ್ಪರರ ಧಾರ್ಮಿಕ ಸ್ಥಳಗಳಿಗೆ ಪರಸ್ಪರ ಗೌರವದ ದೀರ್ಘಕಾಲದ ಸಂಪ್ರದಾಯವನ್ನು ಪ್ರದರ್ಶಿಸಿತು.
ದಶಕಗಳ ಹಿಂದೆ ಊನವಾಗಿದ್ದ ದುರ್ಗಾದೇವಿಯ ಮೂರ್ತಿಯನ್ನು ಬದಲಿಸಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ಕೆ ಎಲ್ಲ ಧರ್ಮೀಯರು ನೆರವಾಗಬೇಕು ಎಂದು ದೇವಸ್ಥಾನ ಸಮಿತಿಯವರು ಮಾಡಿಕೊಂಡ ಮನವಿಗೆ ಮುಸ್ಲಿಮರು ಕೈಜೋಡಿಸಿದ್ದು, ಈ ದೇವಾಲಯದ ಕರಪತ್ರವೇ ಕೋಮು ಸಾಮರಸ್ಯದ ಸಂಕೇತ ಎನಿಸಿದೆ.ದಶಕಗಳ ಹಿಂದೆ ಊನವಾಗಿದ್ದ ದುರ್ಗಾದೇವಿಯ ಮೂರ್ತಿಯನ್ನು ಬದಲಿಸಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ಕೆ ಎಲ್ಲ ಧರ್ಮೀಯರು ನೆರವಾಗಬೇಕು ಎಂದು ದೇವಸ್ಥಾನ ಸಮಿತಿಯವರು ಮಾಡಿಕೊಂಡ ಮನವಿಗೆ ಮುಸ್ಲಿಮರು ಕೈಜೋಡಿಸಿದ್ದು, ಈ ದೇವಾಲಯದ ಕರಪತ್ರವೇ ಕೋಮು ಸಾಮರಸ್ಯದ ಸಂಕೇತ ಎನಿಸಿದೆ.
ನೀವು ಇದನ್ನೂ ಇಷ್ಟ ಪಡಬಹುದು:ಬೇಸಿಗೆಯಲ್ಲಿ ನಿಮ್ಮ ಕಣ್ಮನ ಸೆಳೆಯುವ ದಕ್ಷಿಣ ಭಾರತದ ಅತ್ಯಂತ ಪ್ರಶಾಂತ ಸ್ಥಳಗಳು
ಮೇ(May) 7-9ರವರೆಗೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಗುಲದ ತಂತ್ರಿ, ತೆಕ್ಕಿನಿಯೆದತ್ತು ತರಣನೆಲ್ಲೂರು ಪದ್ಮನಾಭನ್ ಉಣ್ಣಿ ನಂಬೂದರಿಪಾಡ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಖ್ಯಸ್ಥ ಪಾಣಕ್ಕಾಡ್ ಸಾದಿಕ್ಕಲಿ ಶಿಹಾಬ್ ತಂಗಲ್ ಅವರನ್ನು ಒಳಗೊಂಡ ದೇಗುಲದ ಕರಪತ್ರದ ಪರಿಚಯವು ಕೋಮು ಸೌಹಾರ್ದತೆ ಚಾಲ್ತಿಯಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಮಸೀದಿ ಕಟ್ಟಲು ದೇವಸ್ಥಾನದ ಭೂಮಿ :
ಈ ಹಿಂದೆ ದೇವಸ್ಥಾನವು ಮಸೀದಿ ನಿರ್ಮಿಸಲು ಭೂಮಿಯನ್ನು ನೀಡಿತ್ತು.ಸ್ಥಳೀಯ ನಿವಾಸಿಗಳ ಪ್ರಕಾರ,ಮೊದಲು ಕೊಂಡೊಟ್ಟಿ ಜನರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತಿರುರಂಗಡಿಗೆ ಹೋಗಬೇಕಾಗಿತ್ತು.
ಈ ಸ್ಥಳವು ದೂರದಲ್ಲಿರುವ ಕಾರಣ, ಅನೇಕ ಬಾರಿ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ.ಹೀಗಾಗಿ ಶುಕ್ರವಾರದ ಪ್ರಾರ್ಥನೆಯನ್ನು ಮಾಡಲು ಸಾಧ್ಯವಾಗಲಿಲ್ಲ.ಆಗ ಗ್ರಾಮದ ಜನರು ಗ್ರಾಮದಲ್ಲಿಯೇ ಮಸೀದಿ ನಿರ್ಮಿಸಬೇಕು ಎಂದು ನಿರ್ಧರಿಸಿದರು.ನಂತರ ಇದಕ್ಕಾಗಿ ದೇವಸ್ಥಾನವನ್ನು ಸಂಪರ್ಕಿಸಲಾಯಿತು. ಆ ಸಂದರ್ಭದಲ್ಲಿ ದೇವಸ್ಥಾನವು ಮಸೀದಿಯನ್ನು ನಿರ್ಮಿಸಲು ಸ್ವಯಂಪ್ರೇರಿತವಾಗಿ ಭೂಮಿಯನ್ನು ನೀಡಿತ್ತು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.