ಭಾರತದ ಪ್ರಸಿದ್ಧ ಅರಮನೆಗಳಿವು
ಭಾರತದ ಭವ್ಯ ಪರಂಪರೆಯನ್ನು ಸಾರುವ ಇತಿಹಾಸ ರಾಜಮನೆತನಗಳು (Historical Royal Families) ಅದ್ಭುತ ಹಾಗೂ ಐಶಾರಾಮಿ ಅರಮನೆಗಳನ್ನು (Palace) ನೋಡುವುದೇ ಚೆಂದ.ಇಂದು ಆ ಅರಮನೆಗಳು ವಸ್ತುಸಂಗ್ರಹಾಲಯಗಳೋ, ಇಲ್ಲವೇ ಸರ್ಕಾರದ ಸುಪರ್ದಿಯಲ್ಲಿದ್ದರೂ ಮುಂದಿನ ಪೀಳಿಗೆಗೆ ಇತಿಹಾಸದ ಪಾಠವನ್ನೇ ಮಾಡುವಂತಿವೆ.
ಉಮೈದ್ ಭವನ ಅರಮನೆ, ಜೋಧಪುರ (Ummaid Bhavana Palace, Jodhpur)
ರಾಜಸ್ಥಾನದ(Rajasthan )ಜೋದಪುರದಲ್ಲಿರುವ 26 ಎಕರೆ ಪ್ರದೇಶದಲ್ಲಿ ಹರಡಿರುವ ಐಷಾರಾಮಿ ಉಮೈದ್ ಭವನ ಅರಮನೆ 1929ರಲ್ಲಿ ಮಹಾರಾಜ ಉಮೈದ್ ಸಿಂಗ್ನಿಂದ ನಿರ್ಮಿಸಲ್ಪಟ್ಟಿದೆ. ಇದರ ನಿರ್ಮಾಣವು ಪೂರ್ಣಗೊಳ್ಳಲು ಸುಮಾರು 15 ವರ್ಷಗಳೇ ಬೇಕಾಗಿದ್ದು, 1943 ರಲ್ಲಿ ಭವನವು ಪೂರ್ಣಗೊಂಡಿತು. ಸುಮಾರು 347 ಕೊಠಡಿಗಳನ್ನು ಹೊಂದಿರುವ ಈ ಐಷಾರಾಮಿ ನಿವಾಸ ವಿಶ್ವದ ಅತಿದೊಡ್ಡ ಖಾಸಗಿ ನಿವಾಸ.
ಪ್ರಸ್ತುತ, ಭಾರತದಲ್ಲಿ ಅರಮನೆಯ ಹೋಟೆಲ್ ಆಗಿ ಸೇವೆ ಸಲ್ಲಿಸುತ್ತಿರುವ ನಿವಾಸದ ಭಾಗವನ್ನು ತಾಜ್ ಹೋಟೆಲ್ಗಳು ನಿರ್ವಹಿಸುತ್ತವೆ. ಅರಮನೆಯು ಆಕರ್ಷಕ ಗ್ಯಾಲರಿಗಳನ್ನು ಮತ್ತು ಆಕರ್ಷಕವಾದ ವಾಹನಗಳ ಸಂಗ್ರಹವನ್ನು ಹೊಂದಿದೆ.
ಅಂಬಾ ವಿಲಾಸ ಅರಮನೆ, ಮೈಸೂರು(Amba Vilas Palace, Mysore)
ಮೈಸೂರಿನಲ್ಲಿರುವ ಅಂಬಾ ವಿಲಾಸ ಅರಮನೆಯು ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು. ಇಲ್ಲಿ , ಹಿಂದೂ,(Hindu)ಮುಸ್ಲಿಂ (Muslim)ಮತ್ತು ಗೋಥಿಕ್ (Gothic)ಶೈಲಿಯ ವಾಸ್ತುವನ್ನು ಪ್ರಮುಖವಾಗಿ ಬಳಸಲಾಗಿದೆ. ತಾಜ್ಮಹಲ್(Taj Mahal) ನಂತರ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಐತಿಹಾಸಿಕ ಸ್ಮಾರಕವಿದು. ಈ ತಾಣವು ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
ನೀವು ಇದನ್ನೂ ಇಷ್ಟ ಪಡಬಹುದು:ನೈಸರ್ಗಿಕ ಪರಂಪರೆ ತಾಣಗಳಲ್ಲಿ ಒಂದಾದ ಕೊಡಚಾದ್ರಿ
ಹವಾ ಮಹಲ್, ಜೈಪುರ (Hawa Mahal, Jaipur)
ಗುಲಾಬಿ ನಗರ(Pink City) ಜೈಪುರದಲ್ಲಿ, ಹವಾ ಮಹಲ್ ಪ್ರಮುಖ ಆಕರ್ಷಣೆ. ಯಾವುದೇ ಅಡಿಪಾಯವಿಲ್ಲದೆ ವರ್ಷಗಳಿಂದ ನಿಂತಿರುವ ವಿಶ್ವದ ಏಕೈಕ ಕಟ್ಟಡ ಇದಾಗಿದೆ. ಈ ಅರಮನೆಯು ಹಿಂದೂ ರಜಪೂತ (Rajaputa)ವಾಸ್ತುಶಿಲ್ಪ ಮತ್ತು ಇಸ್ಲಾಮಿಕ್ ಮೊಘಲ್(Islamik Moghal) ವಾಸ್ತುಶೈಲಿಯಲ್ಲಿದೆ., 1799 ರಲ್ಲಿ ಜೈಪುರದ ಕಚ್ವಾಹಾ ದೊರೆ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ನಿರ್ಮಿಸಿದರು. ಅವರು ಶ್ರೀ ಕೃಷ್ಣನ ಮಹಾನ್ ಭಕ್ತರಾಗಿದ್ದರು. ಈ ಕಾರಣಕ್ಕಾಗಿಯೇ ಅವರು ಈ ಅರಮನೆಗೆ ಶ್ರೀ ಕೃಷ್ಣನ ಕಿರೀಟದ ರೂಪವನ್ನು ನೀಡಿದರು.
ಜೈ ವಿಲಾಸ್ ಮಹಲ್, ಗ್ವಾಲಿಯರ್ (Jai Vilas Mahal, Gwaliyar)
ಇದು ಭಾರತದ ಗ್ವಾಲಿಯರ್ನಲ್ಲಿರುವ ಹತ್ತೊಂಬತ್ತನೇ ಶತಮಾನದ ಅರಮನೆಯಾಗಿದೆ . ಇದನ್ನು 1874 ರಲ್ಲಿ ಬ್ರಿಟಿಷ್ ರಾಜ್ನಲ್ಲಿ ಗ್ವಾಲಿಯರ್ ಮಹಾರಾಜ ಜಯಜಿರಾವ್ ಸಿಂಧಿಯಾ ನಿರ್ಮಿಸಿದರು . ಅರಮನೆಯ ಪ್ರಮುಖ ಭಾಗವು ಈಗ “ಜಿವಾಜಿರಾವ್ ಸಿಂಧಿಯಾ ಮ್ಯೂಸಿಯಂ” ಆಗಿದ್ದು, ಇದನ್ನು 1964 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು, ಅದರ ಒಂದು ಭಾಗವು ಇನ್ನೂ ಅವರ ಕೆಲವು ವಂಶಸ್ಥರ ನಿವಾಸವಾಗಿದೆ.
ಲಕ್ಷ್ಮಿ ವಿಲಾಸ್ ಅರಮನೆ, ವಡೋದರಾ(Lakshmi Vilas Palace , Vadodara)
1890ರಲ್ಲಿ ನಿರ್ಮಿಸಲಾದ ಲಕ್ಷ್ಮಿ ವಿಲಾಸ್ ಅರಮನೆಯು ಇಂಗ್ಲೆಂಡ್ನಲ್ಲಿರುವ ಬಕಿಂಗ್ಹ್ಯಾಮ್ ಅರಮನೆಯ ನಾಲ್ಕು ಪಟ್ಟು ದೊಡ್ಡದಾಗಿದೆ. ಅದ್ಭುತವಾದ ಮರಾಠ ಮತ್ತು ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದೊಂದಿಗೆ, ಸೊಗಸಾದ ಒಳಾಂಗಣ ಮತ್ತು ಸುಂದರವಾದ ವಿನ್ಯಾಸಗಳನ್ನು ಹೊಂದಿದೆ.500 ಎಕರೆ ಪ್ರದೇಶದಲ್ಲಿ ಹರಡಿರುವ ಕಾಂಪೌಂಡ್ ಹೊಂದಿರುವ ಈ ಅರಮನೆಯು ಮೋತಿ ಬಾಗ್ ಅರಮನೆ ಮತ್ತು ಮಹಾರಾಜ ಫತೇ ಸಿಂಗ್ ಮ್ಯೂಸಿಯಂ ಕಟ್ಟಡಗಳನ್ನು ಇದು ಒಳಗೊಂಡಿದ್ದು, ಬರೋಡಾದ ಗಾಯಕ್ವಾಡ್ ರಾಜಮನೆತನದ ಭವ್ಯ ಮಹಲ್ ಇದು. 1890 ರಲ್ಲಿ ಮೇಜರ್ ಚಾರ್ಲ್ಸ್ ಮಾಂಟ್ ಮಹಾರಾಜ ಮೂರನೇ ಸಯ್ಯಾಜಿರಾವ್ ಗಾಯಕ್ವಾಡ್ ಅವರಿಗಾಗಿ ಈ ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ಅರಮನೆಯನ್ನು ವಿನ್ಯಾಸಗೊಳಿಸಿದರು. ಈಗ ಈ ಅರಮನೆಯು ವಸ್ತುಸಂಗ್ರಹಾಲಯವಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.