ವಿಂಗಡಿಸದ

ಮೌಂಟ್ ಎವರೆಸ್ಟ್‌ ಮುಂದೆ ಸ್ಕೈಡೈವಿಂಗ್ ಮೂಲಕ ದಾಖಲೆ ಸೃಷ್ಟಿಸಿದ ಸ್ಕೈಡೈವರ್ “ಶೀತಲ್ ಮಹಾಜನ್”

ಭಾರತದ ಖ್ಯಾತ ಸ್ಕೈಡೈವರ್ ಶೀತಲ್ ಮಹಾಜನ್ ಅವರು ನವೆಂಬರ್ 13 ರಂದು ಮೌಂಟ್ ಎವರೆಸ್ಟ್‌ನ ಮುಂದೆ 21,500 ಅಡಿ ಎತ್ತರದಲ್ಲಿ ಸ್ಕೈಡೈವ್ ಮಾಡಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉಜ್ವಲಾ ವಿ.ಯು.

41 ವರ್ಷದ ಮಹಾಜನ್, ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರು ಮತ್ತು ಹಲವಾರು ಸ್ಕೈಡೈವಿಂಗ್ ದಾಖಲೆಗಳನ್ನು ಹೊಂದಿರುವವರು.

2004 ರಲ್ಲಿ ಉತ್ತರ ಧ್ರುವ ಮತ್ತು 2006 ರಲ್ಲಿ ದಕ್ಷಿಣ ಧ್ರುವ ಮತ್ತು 2018 ರಲ್ಲಿ ಎಲ್ಲಾ 7 ಖಂಡಗಳ ಮೇಲೆ ಸ್ಕೈಡೈವಿಂಗ್ ಪೂರ್ಣಗೊಳಿಸಿದ ಶೀತಲ್ ಮಹಾಜನ್ ಈಗ ರಿಲಯನ್ಸ್ ಫೌಂಡೇಶನ್‌ನ ಬೆಂಬಲದೊಂದಿಗೆ ಅತ್ಯಂತ ಎತ್ತರ ಪರ್ವತ ಎವರೆಸ್ಟ್ ಮುಂದೆ ಸ್ಕೈಡೈವಿಂಗ್ ಮಾಡುವ ಮೂಲಕ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಘೋಷಿಸಿದ ‘ಬೇಟಿ ಕಿ ಉಡಾನ್, ದೇಶ್ ಕಾ ಸ್ವಾಭಿಮಾನ್’ ಎಂಬ ವಾಕ್ಯದಿಂದ ಸ್ಫೂರ್ತಿ ಪಡೆದು, ವೈಯಕ್ತಿಕ ಕಾರಣದಿಂದಲ್ಲ, ಬದಲಾಗಿ ಜಗತ್ತಿನಲ್ಲಿ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುವ ಮಹತ್ತರ ಆಶಯದಿಂದ ಮಹಾಜನ್ ಅವರು ಈ ಸಾಧನೆಯನ್ನು ಮಾಡಿದ್ದಾರೆ.

ಅವರು 2007 ರಿಂದಲೇ ಈ ಕನಸನ್ನು ಕಂಡಿದ್ದವರು, ಈಗ ರಿಲಯನ್ಸ್ ಫೌಂಡೇಶನ್ ಸಹಾಯದಿಂದ, ಈ ಕನಸನ್ನು ನನಸು ಮಾಡಿದ್ದಾರೆ. ಎವರೆಸ್ಟ್ ಸ್ಕೈಡೈವ್‌ಗೆ ವಿಶೇಷವಾದ ಪ್ಯಾರಾಚೂಟ್ ಉಪಕರಣಗಳ ಅಗತ್ಯವಿತ್ತು, ಈ ಅದ್ಭುತ ಎತ್ತರದ ಸಾಹಸಕ್ಕಾಗಿ ಅಮೆರಿಕದಲ್ಲಿ ಅವುಗಳನ್ನು ಪರೀಕ್ಷಿಸಿ ಅನುಮೋದಿಸಿದರು.

“ನಾನು ಮೌಂಟ್ ಎವರೆಸ್ಟ್‌ನ ಮುಂದೆ 21,500 ಅಡಿಗಳಿಂದ ನನ್ನ ಜೀವನದ ಅತ್ಯಂತ ಎತ್ತರದ ಜಿಗಿತವನ್ನು ಪ್ರದರ್ಶಿಸಿದೆ ಮತ್ತು 17,444 ಅಡಿ (5,317 ಮೀ) ಎತ್ತರದ ಕಾಲಾಪತ್ತರ್‌ನಲ್ಲಿ ಇಳಿದೆ. ಇದು ಮಹಿಳೆಯೊಬ್ಬರು ಮಾಡಿದ “ಅತಿ ಎತ್ತರದ ಸ್ಕೈಡೈವಿಂಗ್ ಲ್ಯಾಂಡಿಂಗ್” ಯಾಗಿದೆ. ಇವೆರಡೂ ಸಹ ಈಗ ರಾಷ್ಟ್ರೀಯ ದಾಖಲೆಯ ಪಟ್ಟಿ ಸೇರಿವೆ. ”ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ನವೆಂಬರ 11 ರಂದು ಶೀತಲ್ ಅವರು ನೆಲ ಮಟ್ಟದಿಂದ 17,500 ಅಡಿಗಳಿಂದ 12,500 ಅಡಿಗಳವರೆಗೆ 5000 ಅಡಿಗಳಷ್ಟು ಮೊದಲ ಜಿಗಿತವನ್ನು ಸಯಾಂಗ್‌ಬೋಚೆ ವಿಮಾನ ನಿಲ್ದಾಣಕ್ಕೆ ಮೊದಲ ಜಿಗಿತವನ್ನು ಸಾಧಿಸಿದರು. ವಿಮಾನದಲ್ಲಿ ನ್ಯೂಜಿಲ್ಯಾಂಡ್ ನ ಪ್ರಸಿದ್ಧ ಸ್ಕೈಡೈವರ್ ವೆಂಡೀ ಸ್ಮಿತ್ ಅವರು ಮಾರ್ಗದರ್ಶಕರಾಗಿ ಜೊತೆಯಾಗಿದ್ದರು.

ನಂತರ ನವೆಂಬರ 12 ರಂದು ಸಯಾಂಗ್‌ಬೋಚೆ ವಿಮಾನ ನಿಲ್ದಾಣದಿಂದ 8000 ಅಡಿಗಳಷ್ಟು ಭಾರತದ ಧ್ವಜದೊಂದಿಗೆ ಜಿಗಿತವನ್ನು ಸಾಧಿಸಿದರು. ಇವರೊಂದಿಗೆ ನ್ಯೂಜಿಲ್ಯಾಂಡ್ ನ ಪ್ರಸಿದ್ಧ ಸ್ಕೈಡೈವರ್ ವೆಂಡೀ ಸ್ಮಿತ್ ಮತ್ತು ನಾಡಿಯಾ ಸೊಲೋಯೇವಾ ಕೂಡಾ ಜೊತೆಗಿದ್ದರು. ಅತಿ ಎತ್ತರದ ಫ್ಲ್ಯಾಗ್ ಲ್ಯಾಂಡಿಂಗ್‌ ಮೂಲಕ ಶೀತಲ್ ಮಹಾಜನ್ ಅವರು ರಾಷ್ಟ್ರೀಯ ದಾಖಲೆಯನ್ನು ಸಾಧಿಸಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button