ಆಹಾರ ವಿಹಾರವಿಂಗಡಿಸದ

ಬೆಸ್ಟ್‌ ಚೀಸ್‌ ಡೆಸರ್ಟ್‌ ಪೈಕಿ ಭಾರತದ ರಸ್‌ ಮಲಾಯಿಗೆ ದ್ವಿತೀಯ ಸ್ಥಾನ 

ಪ್ರಪಂಚದಾದ್ಯಂತ ನೂರಾರು ರೀತಿಯ ಚೀಸ್ ಸಿಹಿಭಕ್ಷ್ಯಗಳಿವೆ, ವಿವಿಧ ರೀತಿಯ ಚೀಸ್ ಮತ್ತು ಇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಸಿಹಿತಿಂಡಿಗೆ ಇನ್ನಿಲ್ಲದ ಬೇಡಿಕೆಯಿದೆ.

ಇತ್ತೀಚೆಗೆ, ಜನಪ್ರಿಯ ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ತನ್ನ ವಿಶ್ವದ 10 ಅತ್ಯುತ್ತಮ ಚೀಸ್ ಡೆಸರ್ಟ್‍ಗಳ ಪಟ್ಟಿಯನ್ನು ಅನಾವರಣಗೊಳಿಸಿದೆ. ಪೋಲೆಂಡ್‍ನ ಸೆರ್ನಿಕ್ ಮೊದಲ ಸ್ಥಾನ ಪಡೆದರೆ, ಭಾರತದ ರಸ ಮಲೈ ಎರಡನೇ ಸ್ಥಾನ ಪಡೆದುಕೊಂಡಿದೆ.

ಭಾರತೀಯರ ಅಚ್ಚುಮೆಚ್ಚಿನ, ಪಶ್ಚಿಮ ಬಂಗಾಳ ಮೂಲದ ರಸ್‌ ಮಲಾಯಿ ವಿಶ್ವದ ಬೆಸ್ಟ್‌ ಚೀಸ್‌ ಡೆಸರ್ಟ್‌ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳ ಪರಿಚಯಿಸಿದ ಈ ಸಿಹಿ ತಿಂಡಿ ಬಹುತೇಕ ಎಲ್ಲ ಭಾರತೀಯರಿಗೆ ಅಚ್ಚುಮೆಚ್ಚು. ಇದೀಗ ರಸ್‌ ಮಲಾಯಿ ಸ್ವಾದ ಇಡೀ ಪ್ರಪಂಚಕ್ಕೇ ಗೊತ್ತಾಗಿದೆ.

ವಿಶ್ವದ ಬೆಸ್ಟ್‌ ಚೀಸ್‌ ಡೆಸರ್ಟ್‌ (Best cheese desserts in the world)ಗಳ ಪಟ್ಟಿಯಲ್ಲಿ ರಸ್‌ ಮಲಾಯಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಭಾರತದ ಸಿಹಿ ತಿಂಡಿಗೆ ಜಾಗತಿಕ ಮನ್ನಣೆ ಲಭಿಸಿದೆ.

ಪೋಲೆಂಡ್‍ನ ಸೆರ್ನಿಕ್ ಎಂಬುದು ಮೊಸರು ಚೀಸ್‍ನ ಒಂದು ವಿಧವಾದ ಮೊಟ್ಟೆ, ಸಕ್ಕರೆ ಮತ್ತು ಟ್ವಾರೋಗ್‍ನಿಂದ ಮಾಡಿದ ಚೀಸ್ ಆಗಿದೆ.

ಈ ಚೀಸ್ ಅನ್ನು ಸಾಮಾನ್ಯವಾಗಿ ಪುಡಿಮಾಡಿದ ಕೇಕ್ ಪದರದ ಮೇಲೆ ತಯಾರಿಸಲಾಗುತ್ತದೆ ಮತ್ತು ಇದನ್ನು ಬೇಯಿಸಬಹುದಾಗಿದೆ.

ಟೇಸ್ಟ್ ಅಟ್ಲಾಸ್ ಪ್ರಕಾರ, ಸೆರ್ನಿಕ್‍ನ ಅತ್ಯಂತ ಜನಪ್ರಿಯ ಪ್ರಭೇದಗಳಲ್ಲಿ ಒಂದಾದ ಸ್ಪಾಂಜ್ ಕೇಕ್ ಅನ್ನು ಅದರ ಆಧಾರವಾಗಿ ಹೊಂದಿದೆ ಮತ್ತು ಅದರ ಮೇಲೆ ಜೆಲ್ಲಿ ಮತ್ತು ಹಣ್ಣಿನಿಂದ ಮುಚ್ಚಲಾಗುತ್ತದೆ.

ಎರಡನೇ ಸ್ಥಾನದಲ್ಲಿರುವ ಚೀಸ್ ಡೆಸರ್ಟ್‍ಗೆ ಬಂದರೆ, ಪಶ್ಚಿಮ ಬಂಗಾಳಿ ಮೂಲದ ಜನಪ್ರಿಯ ಭಾರತೀಯ ಸಿಹಿಯಾಗಿರುವ ರಸಮಲೈ ಸ್ಥಾನಪಡೆದುಕೊಂಡಿದೆ.

ಅನುಭವಿ ಟ್ರಾವೆಲ್ ಆನ್‌ಲೈನ್ ಮಾರ್ಗದರ್ಶಿ ಟೇಸ್ಟ್‌ಅಟ್ಲಾಸ್ (TasteAtlas) ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪೋಲೆಂಡ್‌ನ ಸೆರ್ನಿಕ್ (Sernik) ಮೊದಲ ಸ್ಥಾನದಲ್ಲಿದೆ. ರಸ್‌ ಮಲಾಯಿ ಎರಡನೇ ರ‍್ಯಾಂಕ್‌ ಪಡೆದಿದೆ.

ಏನಿದು ರಸ ಮಲಾಯಿ?

ಜನಪ್ರಿಯ ಡೆಸರ್ಟ್‌ ಆಗಿರುವ ರಸ್‌ ಮಲಾಯಿಯನ್ನು ವೈಟ್‌ ಕ್ರೀಮ್‌, ಸಕ್ಕರೆ, ಹಾಲು ಮತ್ತು ಫ್ಲೇವರ್‌ ಹೊಂದಿದ ಪನೀರ್‌ ಚೀಸ್‌ನಿಂದ ತಯಾರಿಸಲಾಗುತ್ತದೆ.

ಜತೆಗೆ ಬಾದಾಮಿ, ಗೋಡಂಬಿ, ಏಲಕ್ಕಿ ಮತ್ತು ಕೇಸರಿಯನ್ನು ಸೇರಿಸಲಾಗುತ್ತದೆ. ಇದರ ಉಗಮ ಪಶ್ಚಿಮ ಬಂಗಾಳ.

ರಸ್‌ ಮಲಾಯಿ ಎರಡು ಹಿಂದಿ ಪದಗಳಿಂದ ಉಂಟಾದ ಹೆಸರು. ರಸ್‌ ಎಂದರೆ ಜ್ಯೂಸ್‌ ಮತ್ತು ಮಲಾಯಿ ಎಂದರೆ ಕ್ರೀಮ್‌.

ಫ್ರಿಡ್ಜ್‌ನಲ್ಲಿಟ್ಟು, ತಂಪಾಗಿರುವಾಗಲೇ ಇದನ್ನು ಸೇವಿಸಲಾಗುತ್ತದೆ. ಹೋಳಿ ಮತ್ತು ದೀಪಾವಳಿ ಸಂದರ್ಭದಲ್ಲಿ ಈ ಸಿಹಿ ತಿಂಡಿಯ ಬಳಕೆ ಅಧಿಕ.

ಟಾಪ್‌ 10 ಪಟ್ಟಿ

  1. ಸೆರ್ನಿಕ್‌ (Sernik)-ಪೋಲೆಂಡ್‌(Poleand?
  2. ರಸ್‌ ಮಲಾಯಿ (Ras malai)-ಭಾರತ (India)
  3. ಸ್ಫಕಿಯನೋಪಿತ (Sfakianopita)-ಗ್ರೀಸ್‌(Grece)
  4. ನ್ಯೂಯಾರ್ಕ್‌ ಶೈಲಿಯ ಚೀಸ್‌ಕೇಕ್‌ (New York-style cheesecake)-ಅಮೆರಿಕ(America)
  5. ಜಪಾನೀಸ್‌ ಚೀಸ್‌ಕೇಕ್‌ (Japanese cheesecake)-ಜಪಾನ್‌(Japan)
  6. ಬಾಸ್ಕ್ಯೂ ಚೀಸ್‌ಕೇಕ್‌ (Basque Cheesecake)-ಸ್ಪೈನ್‌(Spain)
  7. ರಾಕೊಝಿ ಟ್ಯುರೋಸ್‌ (Rákóczi túrós)-ಹಂಗೇರಿ(Hangeri)
  8. ಮೆಲೋಪಿತ (Melopita)-ಗ್ರೀಸ್‌(Greece)
  9. ಕಾಸೆಕುಚೇನ್‌ (Käsekuchen)-ಜರ್ಮನಿ(Germany)
  10. ಮೀಸ್ಸ ರೇಝಿ (Míša řezy)-ಚೆಕ್‌ ಗಣರಾಜ್ಯ(Czech Republic)

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button