ನಾವು ವಿದೇಶ ಪ್ರಯಾಣವನ್ನು ಆಯೋಜಿಸಿದಾಗ ದೇಶದ ಆಯ್ಕೆಯ ಕುರಿತು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ವಿಮಾನದ ವೆಚ್ಚ, ಹವಾಮಾನ ಬದಲಾವಣೆ, ಸ್ಥಳೀಯ ಸಾರಿಗೆ ವ್ಯವಸ್ಥೆ ಮತ್ತು ಭೇಟಿ ನೀಡುವ ಸ್ಥಳಗಳ ಕುರಿತು ಯೋಜನೆಗಳನ್ನು ಹಾಕಬೇಕಾಗುತ್ತದೆ.ಇದಲ್ಲದಕ್ಕಿಂತ ಮುಖ್ಯವಾಗಿ ಹಣಕಾಸಿನ ಕುರಿತು ಪ್ರಮುಖವಾದ ಯೋಜನೆಯನ್ನು ರೂಪಿಸಬೇಕಾಗುತ್ತದೆ.
ಇದಕ್ಕಾಗಿ ನಿಮಗೆ ಭಾರತೀಯ ರೂಪಾಯಿಗಳಿಗೆ ಹೋಲಿಸಿದರೆ ಪ್ರಬಲವಾಗಿರುವ ಕರೆನ್ಸಿಗಳ ಕುರಿತು ಮಾಹಿತಿ ತಿಳಿದರಲೇಬೇಕು. ಆಗ ನೀವು ಪ್ರಯಾಣದ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ.
ರೂಪಾಯಿಗೆ ಹೋಲಿಸಿದರೆ ಅತ್ಯಂತ ದುಬಾರಿ ಎನಿಸುವ ಇತರ ಆಯ್ದ ದೇಶಗಳ ಕರೆನ್ಸಿಯ ಕುರಿತು ಮಾಹಿತಿ ಇಲ್ಲಿದೆ.
1.ಕುವೈತ್ (ಕುವೈತ್ ದಿನಾರ್) :
ಕುವೈತ್ ನ ಕರೆನ್ಸಿ ಕುವೈತ್ ದಿನಾರ್ (KWD) ಭಾರತೀಯ ರೂಪಾಯಿಗಳಿಗಿಂತ ಅತಿ ದುಬಾರಿಯಾಗಿದೆ. 1 KWD = 269.67 INR ಗೆ ಸಮನಾಗಿರುತ್ತದೆ.
ಇದರಿಂದಾಗಿ ಕುವೈತ್ ನ ಗಮ್ಯಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಅದರ ಸಂಸ್ಕ್ರತಿ, ಪರಂಪರೆಯನ್ನು ಅನ್ವೇಷಿಸುವುದು ತುಸು ದುಬಾರಿಯೇ ಆಗಿರುತ್ತದೆ. ಆದ್ದರಿಂದ ಗಲ್ಫ ರಾಷ್ಟ್ರಗಳಿಗೆ ಭೇಟಿ ನೀಡುವ ಮೊದಲು ಬುದ್ಧಿವಂತಿಕೆಯಿಂದ ಆರ್ಥಿಕ ಯೋಜನೆಗಳನ್ನು ರೂಪಿಸಬೇಕು.
2. ಬಹ್ರೇನ್ (ಬಹ್ರೇನ್ ದಿನಾರ್):
ಬಹ್ರೇನ್ ನ ಕರೆನ್ಸಿ ಬಹ್ರೇನ್ ದಿನಾರ್ ಕೂಡಾ ಭಾರತೀಯ ಪ್ರವಾಸಿಗರಿಗೆ ವಿನಿಮಯ ದರದ ಮೇಲೆ ಸವಾಲನ್ನು ಒಡ್ಡುತ್ತದೆ. 1 BHD = 220.32 INR ಗೆ ಸಮನಾಗಿರುತ್ತದೆ.
ಈ ಹೆಚ್ಚಿನ ವಿನಿಮಯ ದರವು ಭಾರತೀಯ ಪ್ರವಾಸಿಗರಿಗೆ ದುಬಾರಿ ಎನಿಸುವ ಕಾರಣ ನಿಮ್ಮ ಖರ್ಚು ವೆಚ್ಚವನ್ನು ನಿಯಂತ್ರಣದಲ್ಲಿಡಲು ನಿರ್ದಿಷ್ಟವಾದ ಹಣಕಾಸಿನ ಯೋಜನೆ ಅತ್ಯಗತ್ಯ.
3. ಒಮಾನ್ (ಒಮಾನಿ ರಿಯಾಲ್):
ಒಮಾನ್ ಕರೆನ್ಸಿಯೂ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. 1 OMR = 215.72 INR ಗೆ ಸಮನಾಗಿರುತ್ತದೆ.
ಈ ವಿನಿಮಯ ದರವು ಈ ದೇಶಕ್ಕೆ ಭೇಟಿ ನೀಡುವಾಗ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಲಿದೆ. ಆದ್ದರಿಂದ ಎಚ್ಚರಿಕೆಯಿಂದ ಹಣಕಾಸು ಯೋಜನೆಯನ್ನು ರೂಪಿಸಿ.
4. ಜೋರ್ಡಾನ್ (ಜೋರ್ಡಾನಿಯನ್ ದಿನಾರ್):
ವಿನಿಮಯ ದರವು 1 JOD = 117.12 INR ಸಮನಾಗಿರುತ್ತದೆ. ಈ ವಿನಿಮಯ ದರವು ಇಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ತುಲನಾತ್ಮಕವಾಗಿ ದುಬಾರಿ ಎನಿಸಲಿದೆ.
5. ಯುನೈಟೆಡ್ ಕಿಂಗ್‌ಡಮ್ (ಬ್ರಿಟಿಷ್ ಪೌಂಡ್)
ಬ್ರಿಟನ್ ಪ್ರವಾಸಕ್ಕೆ ತೆರಳುವ ಮುನ್ನ ವಿನಿಮಯ ದರದ ಕುರಿತು ನಿಗಾ ವಹಿಸುವುದು ಉತ್ತಮ. ಈಗ 1 GBP = 104.76 INR ಗೆ ಸಮನಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿ.
6. ಸ್ವಿಟ್ಜರ್ಲೆಂಡ್ (ಸ್ವಿಸ್ ಫ್ರಾಂಕ್):
ವಿದೇಶ ಪ್ರವಾಸವನ್ನು ರೂಪಿಸುವ ಪ್ರಯಾಣಿಕರು ಸ್ವಿಟ್ಜರ್ಲೆಂಡ್ ಒಮ್ಮೆ ನೋಡಬೇಕೆಂದು ಬಯಸುವುದು ಸಹಜ.
ಆದರೆ ಅದಕ್ಕಿಂತ ಮೊದಲು ನಮ್ಮ ದೇಶದ ಕರೆನ್ಸಿಗಿಂತ ಸ್ವಿಟ್ಜರ್ಲೆಂಡ್ ಕರೆನ್ಸಿ ಎಷ್ಟು ಪ್ರಬಲ ಎಂದು ತಿಳಿದರಲೇಬೇಕು. 1 CHF = 94.85 INR ಗೆ ಸಮನಾಗಿದೆ ಎಂಬ ಮಾಹಿತಿ ತಿಳಿದರಲಿ.
ಯುರೋ ವಲಯ 1 EUR = 89.49 INR ಮತ್ತು ಯುನೈಟೆಡ್ ಸ್ಟೇಟ್ಸ್ 1 USD = 83.04 INR ಗೆ ಸಮನಾಗಿದ್ದು, ಈ ದೇಶಗಳಿಗೆ ಭೇಟಿ ನೀಡುವಾಗ ಸಹ ಸರಿಯಾದ ಹಣಕಾಸಿನ ಯೋಜನೆಯನ್ನು ರೂಪಿಸಿರಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.