Moreವಿಂಗಡಿಸದ

ಒಂದೇ ರೈಲು ಟಿಕೆಟ್‌ನಲ್ಲಿ ನೀವು ಎಂಟು ಸ್ಥಳಗಳಿಗೆ 56 ದಿನ ಪ್ರಯಾಣಿಸಬಹುದು; ಹೇಗೆ ಗೊತ್ತಾ?

IRCTC ಭಾರತೀಯ ಪ್ರಯಾಣಿಕರಿಗೆ ಕಳೆದ ವರ್ಷವಷ್ಟೇ ವಿಶಿಷ್ಟ ಸೌಲಭ್ಯವನ್ನು ಘೋಷಿಸಿದೆ. ಆದರೆ ಈ ಸೌಲಭ್ಯದ ಕುರಿತು ತಿಳಿದಿರುವವರು ಕೆಲವೇ ಮಂದಿ.

ಭಾರತದಲ್ಲಿ ಪ್ರತಿ ನಿತ್ಯ ವಿವಿಧ ಸ್ಥಳಗಳಿಗೆ ಪ್ರಯಾಣಿಸುವವರು ಹಲವು ಮಂದಿ. ಅವರಲ್ಲಿ ತುಂಬಾ ಜನ ರೈಲನ್ನೇ ತಮ್ಮ ಸಾರಿಗೆಯಾಗಿ ಬಳಸುತ್ತಾರೆ. ಏಕೆಂದರೆ ಇದು ಅಗ್ಗವಾದ ಸಾರಿಗೆ ಎಂದು.

ಈ ರೈಲು ಇಲಾಖೆಯೂ (Indian Railways) ಜನರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುತ್ತಲೇ ಇರುತ್ತದೆ. ಅಂತಹದ್ದೇ ಒಂದು ಸೌಲಭ್ಯ “ವೃತ್ತಾಕಾರದ ಪ್ರಯಾಣ ಟಿಕೆಟ್” (Circular Journey Tickets).

ಇದು ಒಂದು ವಿಶಿಷ್ಟ ರೈಲು ಟಿಕೆಟ್ (Special Train Ticket) ಆಗಿದ್ದು, ಇದನ್ನು ಬಳಸಿ ನೀವು ಭಾರತದ ಎಂಟು ಸ್ಥಳಗಳನ್ನು ಸಂಚರಿಸಬಹುದು.

ಒಮ್ಮೆ ಈ ಟಿಕೆಟ್ ಖರೀದಿಸಿದರೆ ಮತ್ತೆ ಮತ್ತೆ ಬೇರೆ ಬೇರೆ ಸ್ಥಳಗಳಿಗೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ.

ಈ ಟಿಕೆಟ್ ನ ನಿಯಮಗಳು ಮತ್ತು ಸೌಲಭ್ಯಗಳ ಮಾಹಿತಿ ಇಲ್ಲಿದೆ.

● ಈ ಟಿಕೆಟ್ ಉಪಯೋಗಿಸಿ ನೀವು ಭಾರತದ ಎಂಟು ಸ್ಥಳಗಳಿಗೆ ಸಂಚರಿಸಬಹುದು. ಟಿಕೆಟ್ 56 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

● ಈ ಒಂದು ಟಿಕೆಟ್‌ ನೀವು ಬಳಸಿ ಪ್ರಯಾಣಿಸುವಾಗ, ಪ್ರಯಾಣವನ್ನು ಪ್ರಾರಂಭಿಸಿದ ಅದೇ ನಿಲ್ದಾಣದಲ್ಲಿ ನಿಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಬೇಕು. ಅಂದರೆ ಪ್ರಯಾಣದ ಆರಂಭ ಮತ್ತು ಅಂತ್ಯದ ನಿಲ್ದಾಣ ಮಾತ್ರ ಒಂದೇ ಆಗಿರಬೇಕು.

●ಈ ಟಿಕೆಟ್‌ಗಳು ‘ಟೆಲಿಸ್ಕೋಪಿಕ್ ದರಗಳ’ ಪ್ರಯೋಜನವನ್ನು ನೀಡುತ್ತವೆ. ಇದು ಸಾಮಾನ್ಯ ಟಿಕೆಟ್ ಗಿಂತ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಇದನ್ನು ಎಲ್ಲಾ ತರಹದ ಪ್ರಯಾಣಕ್ಕಾಗಿ ಖರೀದಿಸಬಹುದು.

● ಈ ಸೌಲಭ್ಯವು ಒಂಟಿಯಾಗಿ ಅಥವಾ ಗುಂಪುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಕ್ತವಾಗಿದೆ. ವಿಶೇಷವಾಗಿ ತೀರ್ಥಯಾತ್ರೆ ಅಥವಾ ವಿವಿಧ ಸ್ಥಳಗಳಿಗೆ ಪ್ರವಾಸ ಯೋಜಿಸಿರುವ ಪ್ರಯಾಣಿಕರಿಗೆ ಸೂಕ್ತವಾಗಿದೆ.

ನೀವು ಈ ಟಿಕೆಟ್ ಅನ್ನು ನೇರವಾಗಿ IRCTC ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಈ ಟಿಕೆಟ್ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿಯನ್ನು ಒದಗಿಸುತ್ತದೆ. ಪುರುಷ ಹಿರಿಯ ನಾಗರಿಕರಿಗೆ 40% ಮತ್ತು ಮಹಿಳಾ ಹಿರಿಯ ನಾಗರಿಕರಿಗೆ 50% ರಿಯಾಯಿತಿ ಸೌಲಭ್ಯವಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button