ರಾಜಸ್ಥಾನದಲ್ಲಿ ಉದ್ಘಾಟನೆಗೆ ಸಿದ್ಧವಾಗುತ್ತಿದೆ ವಿಶ್ವದ ಮೊದಲ ಓಂ ಆಕೃತಿಯ ದೇಗುಲ
ಓಂ ಆಕೃತಿಯ(Om Shape)ಮೊದಲ ದೇವಾಲಯ ನಮ್ಮ ದೇಶದಲ್ಲಿ ಲೋಕಾರ್ಪಣೆಗೊಳ್ಳಲ್ಲಿದೆ. ರಾಜಸ್ಥಾನದ ಪಲಿ ಜಿಲ್ಲೆಯಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ವಿಶ್ವದ ಮೊತ್ತ ಮೊದಲ ಓಂ ಆಕೃತಿ ಎನ್ನುವ ಹೆಗ್ಗಳಿಕೆಗೆ ಈ ದೇವಸ್ಥಾನ ಪಾತ್ರವಾಗಲಿದೆ.
1995ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನಡೆದಿದ್ದು, ಕಳೆದ 25 ವರ್ಷಗಳಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಓಂ ಆಶ್ರಮ ಜದನ್ ಪಾಲಿಯನ್ನು ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ(North India) ವಾಸ್ತು ಶಿಲ್ಪ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ.
ಓಂನ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿದೆ.ರಾಜಸ್ಥಾನದ(Rajasthan) ಪಾಲಿಯಲ್ಲಿ(Pali) ನಿರ್ಮಾಣವಾಗುತ್ತಿರುವ ‘ಓಂ’ ಆಕಾರದ ದೇವಾಲಯ ಇದಾಗಿದೆ.
ಈ ಓಂ ಆಕಾರದ ದೇವಾಲಯವು (OM Shaped Temple) ತುಂಬಾ ಸುಂದರವಾಗಿದೆ. ಅಲ್ಲದೆ, ಓಂ ಆಕಾರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದೇವಾಲಯ ಇದು.
250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು 10-19 ಫೆಬ್ರವರಿ 2024 ರ ನಡುವೆ ನಡೆಯಲಿದೆ.
ಈ ಶಿವನ ದೇವಾಲಯದಲ್ಲಿ 1008 ವಿವಿಧ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಓಂ ಆಕಾರದ ಈ ದೇವಾಲಯದ ಆವರಣದಲ್ಲಿ ಒಟ್ಟು 108 ಕೊಠಡಿಗಳಿವೆ.
ಇದರ ಗೋಪುರವು 135 ಅಡಿ ಎತ್ತರವಾಗಿದ್ದು, ದೇವಾಲಯದ ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿಯಿದೆ. ಮೇಲ್ಭಾಗದಲ್ಲಿ ಮಹಾದೇವನ ಶಿವಲಿಂಗವನ್ನು ಸ್ಥಾಪಿಸಲಾಗಿದೆ.
ಮೇಲ್ಭಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ.ದೇವಾಲಯದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಇದು ದೇಶದ ಅತ್ಯಂತ ದೊಡ್ಡ ಶಿವನ ದೇವಾಲಯವಾಗಲಿದೆ ಎಂದು ಹೇಳಲಾಗಿದೆ.
ಪಾಲಿಯ ಜದನ್ ಗ್ರಾಮದಲ್ಲಿ(Jadan Village) ಇರುವ ಈ ಓಂ ಆಕಾರದ ಶಿವ ದೇವಾಲಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಸಂಪೂರ್ಣ ವಿಭಾಗವನ್ನು ನೆಲದಡಿಯಲ್ಲಿ ನಿರ್ಮಿಸಲಾಗಿದೆ.
ಆದರೆ ಮೂರು ವಿಭಾಗಗಳು ನೆಲದ ಮೇಲಿವೆ. ಮಧ್ಯದಲ್ಲಿ ಸ್ವಾಮಿ ಮಾಧವಾನಂದರ ಸಮಾಧಿ ಇದೆ. ನೆಲಮಾಳಿಗೆಯಲ್ಲಿ ಸಮಾಧಿಯ ಸುತ್ತಲೂ ಏಳು ಋಷಿಗಳ ಪ್ರತಿಮೆಗಳಿವೆ.
ಶಿವಲಿಂಗದ(Shivalinga) ಮೇಲೆ ಬ್ರಹ್ಮಾಂಡದ ಆಕಾರವನ್ನು ಮಾಡಲಾಗಿದೆ.ಜದನ್ ಆಶ್ರಮವು ಪಾಲಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 62 ರಲ್ಲಿ ರಸ್ತೆಬದಿಯಲ್ಲಿದೆ.
ಇದರ ಹತ್ತಿರದ ವಿಮಾನ ನಿಲ್ದಾಣವೆಂದರೆ ಜೋಧ್‌ಪುರ (Jodhpur), ಇದು ಸುಮಾರು 71 ಕಿಲೋಮೀಟರ್ ದೂರದಲ್ಲಿದೆ.
ಜದನ್ ಆಶ್ರಮವನ್ನು ರೈಲಿನ ಮೂಲಕವೂ ತಲುಪಬಹುದು. ದೆಹಲಿ(Delhi)ಮತ್ತು ಅಹಮದಾಬಾದ್(Ahmedabad) ನಡುವೆ ಚಲಿಸುವ ರೈಲಿನಲ್ಲಿ ನೀವು ಮಾರ್ವಾರ್ ಜಂಕ್ಷನ್ ವರೆಗೆ ಪ್ರಯಾಣಿಸಬೇಕಾಗುತ್ತದೆ.
ಮಾರ್ವಾರ್ ಜಂಕ್ಷನ್‌ನಿಂದ 23 ಕಿಲೋಮೀಟರ್ ದೂರದಲ್ಲಿದೆ. ಪಾಲಿ-ಸೋಜತ್ ಮಾರ್ಗದಲ್ಲಿ ಚಲಿಸುವ ಬಸ್‌ಗಳ ಮೂಲಕವೂ ಜದನ್ ಆಶ್ರಮವನ್ನು ತಲುಪಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.