Moreದೂರ ತೀರ ಯಾನ

ನಮ್ಮ ರಾಜ್ಯದಲ್ಲಿರುವ ಬ್ಲೂ ಫ್ಲಾಗ್ ಬೀಚ್ ಗಳಿವು

ಬೀಚ್‌ಗೆ ಹೋಗಿ ಎಂಜಾಯ್ ಮಾಡುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಎಲ್ಲರಿಗೂ ಬೀಚ್ ಎಂದರೆ ಬಲು ಇಷ್ಟ. 

ಈ ಬೀಚ್ ಗಳಿಗೂ  ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲಾಗುತ್ತದೆ.. ಏನಿದು ಬ್ಲೂ ಫ್ಲ್ಯಾಗ್?  ನಮ್ಮ ರಾಜ್ಯದ ಬೀಚ್ ಬ್ಲೂ ಫ್ಲ್ಯಾಗ್ ಬೀಚ್‌ಗಳು ಕೂಡ ಇದಕ್ಕೆ ಸೇರಿದೆ.. ಈ ಕುರಿತಾದ ಬರಹ ಇಲ್ಲಿದೆ.

ಬ್ಲೂ ಫ್ಲಾಗ್ ಬೀಚ್ ಬೆಂಗಳೂರಿನಿಂದ ವೀಕೆಂಡ್ ಡೆನ್ಮಾರ್ಕ್`ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್‌’ (Foundation for Environment Education ) ನೀಡುವ ಮಾನ್ಯತೆ ಇದು. ಈ ಅಂತಾರಾಷ್ಟ್ರೀಯ ಮಾನ್ಯತೆ ತನ್ನದೇ ಆದ ಮಹತ್ವವನ್ನೂ ಹೊಂದಿದೆ. 

ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಉತ್ತೇಜಿಸುವ ಮತ್ತು ಈ ಬಗ್ಗೆ ನಡೆದ ಕಾರ್ಯಗಳಿಗೆ ಅನುಗುಣವಾಗಿ ಈ ಮಾನ್ಯತೆ ಸಿಗುತ್ತದೆ.

ಕಡಲತೀರದಲ್ಲಿ ಲಭ್ಯವಿರುವ ಸೌಲಭ್ಯಗಳು, ಸ್ವಚ್ಚತೆ, ಸುರಕ್ಷತೆ, ಸೇವೆಗಳು, ಪ್ರವೇಶ ಮತ್ತು ಪರಿಸರಕ್ಕೆ ಸಂಬಂಧಿಸಿದ 33 ಪ್ರಮುಖ ಮಾನದಂಡಗಳ ಆಧಾರದ ಮೇಲೆ ಪ್ರತಿಷ್ಠಿತ `ಬ್ಲೂ ಫ್ಲಾಗ್’ ಮಾನ್ಯತೆ ನೀಡಲಾಗುತ್ತದೆ.

ಈ ಮಾನ್ಯತೆ ಪಡೆದ ಬೀಚ್‌ಗಳನ್ನು ವಿಶ್ವದ ಅತೀ ಸ್ವಚ್ಛ ಕಡಲತೀರಗಳೆಂದು ಪರಿಗಣಿಸಲಾಗುತ್ತದೆ. ನಮ್ಮ ರಾಜ್ಯದ  ಕಡಲ ತೀರಗಳಿಗೆ ಈ ಮಾನ್ಯತೆ ಸಿಕ್ಕಿವೆ.

ಪಡುಬಿದ್ರೆ (Padubidri)

 ಪಡುಬಿದ್ರಿ ಬೀಚ್(padubidri)ಕರ್ನಾಟಕದ ಉಡುಪಿಯಲ್ಲಿದೆ (udupi) ಪಡುಬಿದ್ರೆಯ ನೀಲಿ ದ್ವಜ ಬೀಚ್(Blue Flag Beach) ಸಾರ್ವಜನಿಕರಿಗೆ ಬೆಳಿಗ್ಗೆ 9:00 ರಿಂದ ಸಂಜೆ 6 ರವರೆಗೆ ಮಾತ್ರ ತೆರೆದಿರುತ್ತದೆ..

ನೀವು ಇದನ್ನು ಇಷ್ಟ ಪಡಬಹುದು:ಕರ್ನಾಟಕ ಕರಾವಳಿಯ 9 ಕಡಲ ತೀರಗಳಿವು. ನೀವು ಒಮ್ಮೆ ಭೇಟಿ ನೀಡಿ.

 ಕರ್ನಾಟಕದ ಕರಾವಳಿ ತೀರದಲ್ಲಿರುವ ಹೆಚ್ಚು ಜನಪ್ರಿಯ ಬೀಚ್ ಗಳಂತೆ ಜನಸಂದಣಿ ಇಲ್ಲದಿದ್ದರೂ ಪಡುಬಿದ್ರಿ ಜಲ ಕ್ರೀಡೆಗಳು ಮತ್ತು ಸಾಹಸಮಯ ಸವಾರಿಗಳಿಗೆ ಹೆಸರುವಾಸಿ ಆಗಿರುವಂತದ್ದು. ಇಲ್ಲಿ ಜನರು ವಿಶ್ರಾಂತಿ ಪಡೆಯಲು ಹಾಗೂ ಕುಟುಂಬಸ್ಥರೊಂದಿಗೆ ಸಮಯಗಳನ್ನು ಕಳೆಯಲು ಬರುತ್ತಾರೆ.

Padubidri

ಪರಿಸರ ಶಿಕ್ಷಣಕ್ಕಾಗಿ ಡೆನ್ಮಾರ್ಕ್ ನ ಫೌಂಡೇಶನ್ ಪ್ರಾಮಾಣಿಕರಣವನ್ನು ನೀಡಿದೆ. ಇದರಿಂದಾಗಿ ಪಡುಬಿದ್ರಿ ಬೀಚ್ ಜಾಗತಿಕ ಭೂಪಟದಲ್ಲಿ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆದುಕೊಂಡಿದೆ .

ಅಂತರಾಷ್ಟ್ರೀಯ ಪ್ರತಿಷ್ಠಾನದ ತಪಾಸಣೆ ಯ ನಂತರ ಪಡುಬಿದ್ರಿ ಬೀಚ್ ಈ ಪರಿಸರ ಲೇಬಲ್ ಅನ್ನು ಪಡೆದುಕೊಂಡಿದೆ. ನೀಲಿ ಧ್ವಜ ಪ್ರಮಾಣೀಕರಣಕ್ಕೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸುವಲ್ಲಿ ಬೀಚ್ ಯಶಸ್ವಿಯಾಗಿದೆ .

ಕಾಸರ್ಕೋಡ್ ಬೀಚ್(Kasarkod Beach)

ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಬೀಚ್‌ಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ ಮತ್ತೊಂದು ಸುಂದರ ಕಡಲತೀರವೂ ಇದೆ. ಉತ್ತರ ಕನ್ನಡದ(Uttara kannada)ಹೊನ್ನಾವರ(Honnavara) ಬಳಿಯ ಕಾಸರ್ಕೋಡ್ ಬೀಚ್ ನಲ್ಲಿದೆ. ಕಾಸರ್ಕೋಡ್ ಬೀಚ್‌ನಲ್ಲಿ 750 ಮೀ. ಉದ್ದದ ಸುರಕ್ಷಿತ ಈಜು ವಲಯವಿದೆ.

ಇದು 2.5 ಕಿ.ಮೀವರೆಗೆ ಹರಡಿಕೊಂಡಿದೆ. . ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಬೀಚ್‌ಗಳಿಗೆ ಬಂದು ತಮ್ಮ ರಜಾಕಾಲದ ಅದ್ಭುತ ಖುಷಿಯನ್ನು ಅನುಭವಿಸುತ್ತಾರೆ. 

ಇದು ಬೆಂಗಳೂರಿನಿಂದ(Bengaluru ) 376 ಕಿ.ಮೀ, ಗೋವಾದಿಂದ(Goa )ಸುಮಾರು 412 ಕಿ.ಮೀ ದೂರದಲ್ಲಿ ಈ ಬೀಚ್ ಇದೆ.

Kasarkod beach

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button