ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ಕರ್ನಾಟಕ ಕರಾವಳಿಯ 9 ಕಡಲ ತೀರಗಳಿವು. ನೀವು ಒಮ್ಮೆ ಭೇಟಿ ನೀಡಿ.

ಕರ್ನಾಟಕದ  ಕರಾವಳಿ ಜಿಲ್ಲೆಗಳು ಎಂದಾಗ ದಕ್ಷಿಣ  ಕನ್ನಡ , ಉಡುಪಿ , ಉತ್ತರ ಕನ್ನಡ ಜಿಲ್ಲೆಗಳು ನಮಗೆ ನೆನಪಾಗುತ್ತದೆ. ಈ ಮೂರು ಜಿಲ್ಲೆಗಳಲ್ಲಿ ದೇವಸ್ಥಾನ, ಕಡಲ ತೀರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಆದರೆ, ಕರಾವಳಿ ಜಿಲ್ಲೆಗಳು ವೀಕೆಂಡ್ ಸಮಯದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದು ಕಡಲ ತೀರಗಳತ್ತ. ಅಂತಹ ಕೆಲವು ಬೀಚ್ ಗಳ ಮಾಹಿತಿ ಇಲ್ಲಿದೆ. ರಜಾ ಸಮಯದಲ್ಲಿ ನೀವು ಒಮ್ಮೆ ಭೇಟಿ ನೀಡಿ.


ನವ್ಯಶ್ರೀ ಶೆಟ್ಟಿ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಕಡಲ ತೀರಗಳಿವು.

ತಣ್ಣೀರುಬಾವಿ

ತಣ್ಣೀರು ಬಾವಿ ಬೀಚ್ ಕಡಲ ನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅತಿ ಹೆಚ್ಚು ಪ್ರಚಾರದಲ್ಲಿರದ ಬೀಚ್ ಅಲ್ಲದಿದ್ದರೂ ಕೂಡ ಈ ಬೀಚ್ ಬಗ್ಗೆ ಗೊತ್ತಿರುವವರನ್ನು ಮತ್ತೆ ಮತ್ತೆ ಆಕರ್ಷಿಸುವ ಬೀಚ್ ಇದು. ಸುತ್ತಲೂ ಸ್ವಚ್ಚವಾಗಿ ಹಸಿರಾಗಿರುವ ವಾತಾವರಣದ ನಡುವಿನ ಈ ಕಡಲ ತೀರದಲ್ಲಿ ನೀವು ಸಣ್ಣ ಪಿಕ್ ನಿಕ್ ಕೂಡ ಕೈಗೊಳ್ಳಬಹುದು. ಅಲ್ಲಿಗೆ ಭೇಟಿ ನೀಡಿದವವರಿಗಷ್ಟೇ ಗೊತ್ತು ಅಲ್ಲಿನ ಪ್ರಾಕೃತಿಕ ಪರಿಸರ ಮತ್ತು ಸಮುದ್ರ ತೀರದ ಆಕರ್ಷಣೆ. ಇಲ್ಲಿ ನೀವು ಸುಂದರ ಸೂರ್ಯಾಸ್ತವನ್ನು ಕಣ್ಣುಂಬಿಕೊಳ್ಳಬಹುದು.

Tannir bavi beach

ಪಣಂಬೂರು ಬೀಚ್

ಪಣಂಬೂರು ಬೀಚ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಭಾರತದ ಅತ್ಯಂತ ಸ್ವಚ್ಚ ಬೀಚ್ ಗಳಲ್ಲಿ ಒಂದು. ಈ ಕಡಲ ತೀರ ಮಂಗಳೂರಿನಿಂದ 9 ಕಿಮೀ ದೂರದಲ್ಲಿದೆ. ಉತ್ತಮವಾದ ಪಾರ್ಕಿಂಗ್ ಸೌಲಭ್ಯ ಕುಟುಂಬದ ಜೊತೆ ಹೋಗಲು ಪ್ರಶಸ್ತ ಬೀಚ್. ಸೂರ್ಯೋದಯ, ಸೂರ್ಯಾಸ್ತ ನೋಡಲು ಉತ್ತಮ ತಾಣ. ಪಣಂಬೂರು ಬೀಚ್ ಹತ್ತಿರದಲ್ಲಿ ನೀವು ಪಿಲಿಕುಳ ನಿಸರ್ಗಧಾಮ, ತಣ್ಣೀರು ಬಾವಿ ಬೀಚ್, ಕದ್ರಿ ಮಂಜುನಾಥ ದೇವಸ್ಥಾನ ಸೇರಿದಂತೆ ಹಲವು ಜಾಗಗಳನ್ನು ನೋಡಬಹುದು.

Panambur beach

ಸೋಮೇಶ್ವರ ಬೀಚ್

ಉಳ್ಳಾಲದ ಸೋಮೇಶ್ವರ ಬೀಚ್ ಕರಾವಳಿಯ ಪ್ರಸಿದ್ಧ ಬೀಚ್ ಗಳಲ್ಲಿ ಒಂದು. ಮಂಗಳೂರಿನಿಂದ ಸುಮಾರು 5ಕಿಮೀ ದೂರದಲ್ಲಿದೆ. ಕಲ್ಲು ಬಂಡೆಗಳನ್ನು ಅವರಿಸಿರುವ ಈ ಬೀಚ್ ಗಳನ್ನೂ ನೀವು ಹಲವು ಬಾರಿ ಸಿನಿಮಾಗಳಲ್ಲಿ ನೋಡಿರಬಹುದು. ಇಲ್ಲಿ ಸಮುದ್ರ ತೀರದ ಮರಳಿನ ದಂಡೆಯ ಮೇಲೆ ನಡೆದು ಹೋಗುವುದು ಕೂಡ ಒಂದು ನವಿರಾದ ಅನುಭವ.

Someshwara beach

ಪಡುಬಿದ್ರಿ ಬೀಚ್.


ಕರ್ನಾಟಕದಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಬೀಚ್ ಪಡುಬಿದ್ರಿ ಬೀಚ್. ಈ ಬೀಚ್ ಇರುವುದು ಉಡುಪಿ ಜಿಲ್ಲೆಯಲ್ಲಿ. ಇಲ್ಲಿನ ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ವಾತಾವರಣದಿಂದ ಪಡುಬಿದ್ರಿ ಬೀಚ್ ದೇಶ – ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪಡುಬಿದ್ರಿ ಬೀಚ್ ಬರುವ ಪ್ರವಾಸಿಗರಿಗೆ ಈ ಬೀಚ್ ವಿದೇಶಗಳ ಕಡಲ ತೀರದಲ್ಲಿ ಇದ್ದೇವೆ ಅನ್ನುವ ಅನುಭವ ನೀಡುತ್ತದೆ. 

Padubidri

ಪಡುಕೆರೆ ಬೀಚ್ .

ಸದ್ದಿಲ್ಲದೆ ಇತ್ತೀಚಿನ ದಿನಗಳಲ್ಲಿ ಕರಾವಳಿಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಬೀಚ್ ಪಡುಕೆರೆ. ಛಾಯಾಗ್ರಾಹಕರಿಗೆ ನೆಚ್ಚಿನ ಜಾಗವಿದು. ಉಡುಪಿಯಿಂದ ಸುಮಾರು 7-8 ಕಿಮೀ ದೂರದಲ್ಲಿದೆ ಪಡುಕೆರೆ ಬೀಚ್. ಕಡಲ ತೀರದಲ್ಲಿ ಸೂರ್ಯಾಸ್ತ ನೋಡಲು ಬಯಸುವ ಕಡಲ ಪ್ರೇಮಿಗಳಿಗೆ ಈ ಜಾಗ ಉತ್ತಮ ಆಯ್ಕೆ

Padukere beach

ಕಾಪು ಬೀಚ್

ಕಾಪು ಕರಾವಳಿಯ ಮೆರುಗು, ಚೆಂದದ ಊರು. ಕಾಪುವಿನಲ್ಲಿ ಅನೇಕ ಪ್ರಸಿದ್ಧ ತಾಣಗಳಿವೆ. ಅವುಗಳಲ್ಲಿ ಕಾಪು ಬೀಚ್ ಕೂಡ ಒಂದು. ಇದು ಕರಾವಳಿ ಕರ್ನಾಟಕದ ಬೀಚ್ ಗ್ರಾಮ ಎಂದು ಕೂಡ ಹೇಳುತ್ತಾರೆ. ಕಾಪುವಿನ ಉದ್ದದ ಮರಳಿನ ಕಡಲತೀರಗಳು ಅರೇಬಿಯನ್ ಸಮುದ್ರದ ವಿಹಂಗಮ ನೋಟವನ್ನು ನೀಡುತ್ತವೆ. ಕಾಪು ಬೀಚ್ ಸುತ್ತಲು ಹಸಿರಿನ ವಾತಾವರಣವೇ ಸುತ್ತುವರೆದಿದೆ. ಈ ಬೀಚ್ ಹತ್ತಿರದಲ್ಲಿ ನೀವು ಶತಮಾನಗಳ ಹಿಂದಿನ / 30 ಅಡಿ ಎತ್ತರದ ದ್ವೀಪ ಸ್ಥಂಭ ನೋಡಬಹುದು.

ನೀವು ಇದನ್ನು ಇಷ್ಟ ಪಡಬಹುದು: ಉಡುಪಿಯಲ್ಲಿ ನೀವು ಅಡ್ಡಾಡಬೇಕಾದ 4 ಕಡಲ ತೀರಗಳು

Kapu beach

ಮಜಲಿ ಬೀಚ್

ಉತ್ತರ ಕನ್ನಡ ಜಿಲ್ಲೆ ದೇವಸ್ಥಾನಗಳು ಹಾಗೂ ಹಲವು ಪ್ರವಾಸಿ ತಾಣಗಳಿಗೆ ಹೆಸರುವಾಸಿ. ಇವುಗಳ ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬೀಚ್ ಗಳು ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಅಂತಹ ಬೀಚ್ ಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಮಜಲಿ ಬೀಚ್ ಕೂಡ ಒಂದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಈ ಬೀಚ್ ಕಾರವಾರದಿಂದ ಸುಮಾರು 12ಕಿಮೀ ದೂರದಲ್ಲಿದೆ.ಈ ಪ್ರಶಾಂತಮಯ ಕಡಲ ತೀರ ಇಲ್ಲಿನ ಆಕರ್ಷಣೆ. ಈ ಬೀಚ್ ಸ್ವಲ್ಪ ದೂರದಲ್ಲಿ ಹಲವು ಜನಪ್ರಿಯ ದೇವಾಲಯಗಳು, ದ್ವೀಪ ಸಮೂಹಗಳು ಕರಾವಳಿಯ ಸಮುದ್ರ ಖಾದ್ಯಗಳ ರುಚಿ ಕೂಡ ನೀವು ಸವಿಯಬಹುದು.

Majali beach

ಟ್ಯಾಗೋರ್ ಕಡಲ ತೀರ

ಟ್ಯಾಗೋರ್ ಕಡಲ ತೀರಬಹುಶಃ ಈ ಹೆಸರನ್ನು ಕೇಳದವರ ಸಂಖ್ಯೆ ಅತಿ ವಿರಳ, ಕರ್ನಾಟಕ ಕರಾವಳಿ ತೀರದ ಒಂದು ಹೆಮ್ಮೆ ಟ್ಯಾಗೋರ್ ಕಡಲ ತೀರ, ಕರ್ನಾಟಕದ ಮಟ್ಟಿಗೆ ಕೊಂಕೊಣ ಕರಾವಳಿಯ ರಾಣಿ ಎಂದೆ ಗುರುತಿಸಲ್ಪಡುವ ಕಾರವಾರದಲ್ಲಿದೆ ಈ ಕಡಲ ತೀರ, ಪ್ರಶಾಂತಮಯ ಹಾಗೂ ಸುಂದರವಾದ ಕಡಲ ತೀರಗಳಿಗೆ ಪ್ರಸಿದ್ಧಿ ಟ್ಯಾಗೋರ್ ಕಡಲ ತೀರ, ಸೂರ್ಯಾಸ್ತದ ಸಂಜೆಗೆ ಈ ಕಡಲ ತೀರ ಒಂದು ಉತ್ತಮ ಆಯ್ಕೆ. ಇದು ಕರ್ನಾಟಕದ ಅದ್ಭುತ ಕಡಲ ತೀರಗಳಲ್ಲಿ ಒಂದು. ಕಾರವಾರದಿಂದ ಸುಮಾರು 4 ಕಿಮೀ ದೂರದಲ್ಲಿದೆ.

Tagore beach

ಓಂ ಬೀಚ್

 ಓಂ ಬೀಚ್  ಎಂದು ಕರೆಯಲ್ಪಡುವ ಈ ಬೀಚ್ ಇರುವುದು ಉತ್ತರಕನ್ನಡ ಜಿಲ್ಲೆಯ ಚೆಂದದ ಊರು ಗೋಕರ್ಣದಲ್ಲಿ.  ಗೋಕರ್ಣ ನಗರದಿಂದ 6 ಕಿಮೀ ದೂರದಲ್ಲಿದೆ ಓಂ ಬೀಚ್.  ಇಲ್ಲಿಗೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಈ ಬೀಚ್ ಸೂರ್ಯಾಸ್ತ ವೀಕ್ಷಣೆಗೆ ಹೆಸರುವಾಸಿ.  ಇಲ್ಲಿ ಜಲ ಕ್ರೀಡೆಗಳು ಕೂಡ ಪ್ರಸಿದ್ದಿ ಪಡೆದುಕೊಂಡಿದೆ.  ಓಂ ಆಕಾರದಲ್ಲಿ ಈ ಬೀಚ್ ನಿಮಗೆ ಗೋಚರಿಸುತ್ತದೆ. 

Om beach

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button