ವಿಂಗಡಿಸದ

ಶ್ರೀ ರಾಮಾಯಣ ಯಾತ್ರಾ ಆರಂಭ .

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ (IRCTC)ಇಲಾಖೆ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಶ್ರೀ ರಾಮಾಯಣ ಯಾತ್ರಾ ಪ್ರವಾಸ ಸರಣಿಯನ್ನು ಆರಂಭಿಸಿದೆ. ಈ ಯೋಜನೆಯ ಮೊದಲ ನವೆಂಬರ್ 7ರಂದು ಪ್ರಯಾಣ ಆರಂಭಿಸಿದೆ. ಈ ಯೋಜನೆ ಕೋರೋನಾ ಕಾರ್ಮೋಡ ಕವಿದ ಪ್ರವಾಸೋದ್ಯಮ ಇಲಾಖೆಗೆ ಹೊಸತೊಂದು ಭರವಸೆ ಮೂಡಿಸಿದೆ.

ನವ್ಯಶ್ರೀ ಶೆಟ್ಟಿ

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಐಆರ್‌ಸಿಟಿಸಿ ಶ್ರೀ ರಾಮಾಯಣ ಯಾತ್ರಾ ಆರಂಭಿಸಿದೆ. ಪ್ರವಾಸೋದ್ಯಮವನ್ನು ಹಂತ ಹಂತವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಈ ಯೋಜನೆಯಲ್ಲಿ ಮೊದಲ ಪ್ರವಾಸ ನವೆಂಬರ್ 7ರಿಂದ ಆರಂಭವಾಗಿದೆ.

ನವೆಂಬರ್ 7 ರಂದು ದೆಹಲಿ ಸಫರ್‌ಜಂಗ್ ರೈಲು ನಿಲ್ದಾಣದಿಂದ ಪ್ರಯಾಣ ಆರಂಭವಾಗಿದೆ. ಒಟ್ಟು 17 ದಿನಗಳಲ್ಲಿ ಈ ಪ್ರಯಾಣ ಪೂರ್ಣಗೊಳ್ಳಲಿದೆ. ಪ್ರಯಾಣದ ಮೊದಲ ನಿಲ್ದಾಣ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಾಗಿದೆ.

Shri Ramayan Yatra

ಅತ್ಯಾಧುನಿಕ ಸೌಕರ್ಯ

ನಿನ್ನೆಯಿಂದ ಆರಂಭವಾದ ಶ್ರೀ ರಾಮಾಯಣ ಯಾತ್ರಾದ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ಪ್ರವಾಸಿ ರೈಲಿನಲ್ಲಿ ಡೈನಿಂಗ್ ರೆಸ್ಟೋರೆಂಟ್‌ಗಳು, ಆಧುನಿಕ ಕಿಚನ್ , ಮಿನಿ ಲೈಬ್ರರಿ, ಆಧುನಿಕ ಶೌಚಾಲಯಗಳು ಸೇರಿದಂತೆ ಸಖತ್ ಹೈಟೆಕ್ ಆಗಿದೆ. ಇದರ ಜೊತೆಗೆ ಸೆಕ್ಯುರಿಟಿ ಗಾರ್ಡ್‌, ಎಲೆಕ್ಟ್ರಾನಿಕ್ ಲಾಕರ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳು ಸಹ ಇರಲಿದೆ.

ನೀವು ಇದನ್ನು ಇಷ್ಟ ಪಡಬಹುದು: ನವೆಂಬರ್‌ನಿಂದ ಆರಂಭವಾಗಲಿದೆ ರೈಲ್ವೆ ಇಲಾಖೆಯ ಶ್ರೀ ರಾಮಾಯಣ ಯಾತ್ರಾ’; ಇಲ್ಲಿದೆ ಸಂಪೂರ್ಣ ಮಾಹಿತಿ

IRCTC

ಕೇಂದ್ರ ಸರಕಾರದ ಈ ವಿಶೇಷ ರೈಲ್ವೆ ಪ್ಯಾಕೇಜ್ ವಿವಿಧ ಹಂತದ ರೈಲ್ವೆ ಪ್ರವಾಸ ಯೋಜನೆ ಹೊಂದಿದೆ. ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್ ನಲ್ಲಿ ವಿವಿಧ ಪ್ಯಾಕೇಜ್ ಗಳಿದ್ದು, ನವೆಂಬರ್ 7ರಂದು ಹೊರಟ 12 ರಾತ್ರಿಗಳು / 13 ದಿನಗಳ ಅವಧಿಯ ಶ್ರೀ ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್ ಮಧುರೈ ನಿಂದ ನವೆಂಬರ್ 16 ರಂದು ಹೊರಡಲಿದೆ.

ರಾಮಾಯಣ ಸರ್ಕ್ಯೂಟ್ ರೈಲಿನ ಮೊದಲ ನಿರ್ಗಮನ ನವೆಂಬರ್ 7ರಂದು ದಿಲ್ಲಿಯಿಂದ ಆರಂಭವಾಗಲಿದೆ. ಉಳಿದ ನಾಲ್ಕು ರೈಲುಗಳು ಮುಂದಿನ ತಿಂಗಳು ಚಲಿಸಲಿವೆ .

ರೈಲು ನಿಲುಗಡೆಯ ತಾಣಗಳು

ಈ ರೈಲಿನ ಮೊದಲ ನಿಲುಗಡೆ ಅಯೋಧ್ಯೆ ಬಳಿಕ ಹನುಮಾನ್ ದೇವಸ್ಥಾನ ,ನಂದಿಗ್ರಾಮ್‌ನಲ್ಲಿರುವ ಭಾರತ ಮಂದಿರಕ್ಕೆ ಭೇಟಿ ನೀಡಬಹುದು. ಬಿಹಾರದ ಸೀತಾಮರ್ಹಿ , ಜನಕಪುರದ ರಾಮ್-ಜಾಂಕಿ ದೇವಸ್ಥಾನ, ವಾರಣಾಸಿ, ಪ್ರಯಾಗ, ಶೃಂಗೈರ್‌ಪುರ ಮತ್ತು ಚಿತ್ರಕೂಟದಲ್ಲಿನ ದೇವಾಲಯಗಳು ,ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿಯ ದರ್ಶನ, ಕಿಷ್ಕಂಧಾ, ಹಂಪಿ. ರಾಮೇಶ್ವರಂ ಗಳನ್ನು ನೋಡಬಹುದು. ಅಯೋಧ್ಯಾ ಮೂಲಕ ಆರಂಭವಾಗುವ ಯಾತ್ರೆ ರಾಮೇಶ್ವರ ನೋಡುವುದರ ಮೂಲಕ ಅಂತಿಮ ವಾಗಲಿದೆ. 7500ಕಿಮೀ ವ್ಯಾಪ್ತಿಯ ಪ್ರವಾಸವಿದು.

IRCTC Shri Ramayan Yatra 2021

ಸರಕಾರ ಈ ಯೋಜನೆಗೆ ‘ದೇಖೋ ಅಪ್ನಾ ದೇಶ ‘ ಎನ್ನುವ ಉದ್ದೇಶ ಹೊಂದಿದೆ . IRCTC ವಿಶೇಷ ದರವನ್ನು ಈ ಯಾತ್ರೆಗೆ ನಿಗದಿ ಮಾಡಿದೆ. 2AC ಗೆ ಪ್ರತಿ ವ್ಯಕ್ತಿಗೆ ರೂ. 82,950 ಮತ್ತು 1AC ವರ್ಗಕ್ಕೆ ರೂ.1,02,095 ದರ ನಿಗದಿ ಪಡಿಸಲಾಗಿದೆ. ಈ ದರಗಳು AC ಕ್ಲಾಸ್ ರೈಲು ಪ್ರಯಾಣ, AC ಹೋಟೆಲ್‌ಗಳಲ್ಲಿ ವಸತಿ, ಊಟ (VEG ಮಾತ್ರ), AC ವಾಹನಗಳಲ್ಲಿ ವೀಕ್ಷಣೆ, ಪ್ರಯಾಣ ವಿಮೆ ಮತ್ತು IRCTC ಟೂರ್ ಮ್ಯಾನೇಜರ್‌ಗಳ ಸೇವೆ ಇತ್ಯಾದಿಗಳನ್ನು ಈ ದರ ಪಟ್ಟಿ ಒಳಗೊಂಡಿದೆ. ಇದರ ಜೊತೆಗೆ ಪ್ರವಾಸಕ್ಕೆ ಬರುವ ಜನರ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿದೆ IRCTC ಇಲಾಖೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button