ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ವಿಜಯಪುರದಲ್ಲಿ ನೀವು ನೋಡಬಹುದಾದ 5 ತಾಣಗಳು

ವಿಜಯಪುರ ಕರ್ನಾಟಕದ ಐತಿಹಾಸಿಕ ನಗರ. ಗೊಮ್ಮಟ ನಗರಿ ಎಂದು ಕರೆಯುತ್ತಾರೆ. ಈ ಹಿಂದೆ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ನಗರ ಬಳಿಕ ವಿಜಯಪುರ ಎಂದು ನಾಮಕರಣ ವಾಯಿತು. ಇಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುತ್ತಿರುತ್ತದೆ. ಅಂತಹ ಐತಿಹಾಸಿಕ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.

ನವ್ಯಶ್ರೀ ಶೆಟ್ಟಿ

ಕರ್ನಾಟಕದ ಸುಂದರ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ನಗರಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯನ್ನು 200 ವರ್ಷಗಳ ಕಾಲ ಆದಿಲ್ ಶಾಹಿಯ ರಾಜರು ಆಳಿದರು. ಐತಿಹಾಸಿಕವಾಗಿ ಕರ್ನಾಟಕದ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ ಜಿಲ್ಲೆಯಲ್ಲಿ ನೀವು ನೋಡಬಹುದಾದ ಜಾಗಗಳಿವು.

ಇಬ್ರಾಹಿಂ ರೌಝಾ (Ibrahim Roza)

ಇಬ್ರಾಹಿಂ ರೌಜಾ ವಿಜಯಪುರಲ್ಲಿ ನೀವು ಭೇಟಿ ನೀಡಬಹುದಾದ ಜಾಗಗಳಲ್ಲಿ ಒಂದು. ಇದು ಸೊಗಸಾದ ಇಸ್ಲಾಮಿಕ್ ಸ್ಮಾರಕ. ಇಬ್ರಾಹಿಂ ರೌಜಾ ದಕ್ಷಿಣ ಭಾರತದ ಆಗ್ರಾ ಎಂದು ಕರೆಯುತ್ತಾರೆ. ಮೊಘಲ್ ದೊರೆ ಎರಡನೇ ಆದಿಲ್ ಶಾ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ 1627 ರ ವೇಳೆಗೆ ನಿರ್ಮಾಣ ಆಗಿದ್ದು , ಮಲಿಕ್ ಸಂದಾಲ್ ಎನ್ನುವ ವಾಸ್ತುಶಿಲ್ಪಿ ನಿರ್ಮಿಸಿದ್ದನು.

Imran rouza

ಗೋಲ್ ಗುಂಬಜ್ ( Gol Gumbaz)

ವಿಜಯಪುರದ ಇನ್ನೊಂದು ಆಕರ್ಷಣೆಯೇ ಗೋಲ್ ಗುಂಬಜ್. ಇಲ್ಲಿ ಒಂದು ಸಣ್ಣ ಸದ್ದು ಕೂಡ ಏಳು ಬಾರಿ ಪ್ರತಿದ್ವನಿಸುತ್ತದೆ. ಜಗತ್ತಿನ ಎರಡನೇ ಅತಿ ಎತ್ತರದ ಮಾನವ ನಿರ್ಮಿತ ಗುಂಬಜ್ ಇದು. ವಿಜಯಪುರ ಎಂದಾಗ ಗೊಮ್ಮಟ ನಗರಿ ಎಂದು ಕರೆಯುವಷ್ಟು ಗೋಲ್ ಗುಂಬಜ್ ಖ್ಯಾತಿ ಪಡೆದಿದೆ. ಜಗತ್ತಿನ ಏಳು ಅದ್ಭುತಗಳಲ್ಲಿ ಗೋಲ್ ಗುಂಬಜ್ ಕೂಡ ಒಂದು .ಇತಿಹಾಸದ ಪ್ರಕಾರ ಗೋಲ್ ಗುಂಬಜ್ ನಿರ್ಮಿಸಿದ್ದು, ಮೊಹಮ್ಮದ್ ಆದಿಲ್ ಶಾ.

Gol Gumbaz

ವಿಜಯಪುರ ಕೋಟೆ

ವಿಜಯಪುರ ಕೋಟೆ ಭಾರತದ ಬ್ರಹತ್ ಕೋಟೆಗಳಲ್ಲಿ ಒಂದು. ಕ್ರಿ.ಶ1566ರಲ್ಲಿ ಯಸೂಫ್ ಆದಿಲ್ ಶಾ ಈ ಕೋಟೆಯನ್ನು ನಿರ್ಮಿಸಿದ. ಈ ಕೋಟೆಯ ಗೋಡೆ 30ರಿಂದ 60ಅಡಿ ಎತ್ತರವಿದೆ. 10 ಮುಖ್ಯ ದ್ವಾರಗಳಿದ್ದು , 96 ಬುರ್ಜ್ ಗಳಿವೆ. ಇದು ಭಾರತದ ಪ್ರಮುಖ ಸ್ಮಾರಕಗಳಲ್ಲಿ ಒಂದು. ಬಿಜಾಪುರ ಕೋಟೆ (ವಿಜಾಪುರ ಕೋಟೆ) ವಾಸ್ತುಶಿಲ್ಪದ ಒಂದು ಅದ್ಭುತ.

ನೀವು ಇದನ್ನು ಇಷ್ಟ ಪಡಬಹುದು:ಕೃಷ್ಣನೂರಿನ ಸುಂದರ ತಾಣಗಳಿವು. ನೀವೂ ಒಮ್ಮೆ ಭೇಟಿ ನೀಡಿ.

ಬಾರಾ ಕಮಾನಾ(Bara Kaman)

ವಿಜಯಪುರ ಆಕರ್ಷಣೆಗಳಲ್ಲಿ ಬಾರ್ ಕಮಾನ್ ಕೂಡ ಒಂದು .ಇದು ಎರಡನೇ ಅಲಿ ಆದಿಲ್ ಷಾ ರ ಅಪೂರ್ಣ ಸಮಾಧಿ. ಬಾರಾ ಕಮಾನ್ ಕರ್ನಾಟಕದ ಪ್ರಸಿದ್ಧ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಸಮಾಧಿಯು ಹನ್ನೆರಡು ಕಮಾನುಗಳನ್ನು ಹೊಂದಿದ್ದು ರಚನೆಯು ಅಪೂರ್ಣವಾಗಿದೆ..

Bara Kamana

ಗಗನ್ ಮಹಲ್ (Gagan Mahal)

ಗಗನ್ ಮಹಲ್ ವಿಜಯಪುರದ ಇನ್ನೊಂದು ಆಕರ್ಷಣೆ. 1561 ರ ಸುಮಾರಿಗೆ ಒಂದನೇ ಅಲಿ ಆದಿಲ್ ಷಾ ರಾಜನ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು ಗಗನ್ ಮಹಲ್. ಮೇಲ್ಬಾವಣಿಯಿಲ್ಲದಿದ್ದರೂ ಗಗನ್ ಮಹಲ್ ಜನಪ್ರಿಯ ತಾಣವಾಗಿದೆ. ಈ ಅರಮನೆಯ ಮುಖ್ಯ ವೈಶಿಷ್ಟ್ಯವೆಂದರೆ ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪ.

Gagan Mahal

ಇಷ್ಟು ಮಾತ್ರವಲ್ಲದೆ ಗೊಮ್ಮಟ ನಗರಿ ವಿಜಯಪುರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು ,ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button