ಕೇದಾರನಾಥ್ ನಲ್ಲಿ ಮರು ನಿರ್ಮಾಣಗೊಂಡ ಆದಿ ಗುರು ಶಂಕರಾಚಾರ್ಯರ ಪ್ರತಿಮೆ
ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಕೇದಾರನಾಥ್ ನಲ್ಲಿ ನಿರ್ಮಾಣಗೊಂಡಿದೆ. ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಶಂಕರಾಚಾರ್ಯರ ಪ್ರತಿಮೆ ಹಿಂದಿನ ಶಿಲ್ಪಿ ಮೈಸೂರಿನವರು ಎನ್ನುವುದು ನಮ್ಮ ಹೆಮ್ಮೆ. 12 ಅಡಿ ಎತ್ತರದಲ್ಲಿ ಉತ್ತರಾಖಂಡ್ ರಾಜ್ಯದ ಕೇದಾರನಾಥ್ ದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ತಲೆಯೆತ್ತಿ ನಿಂತಿದೆ.
ನವ್ಯಶ್ರೀ ಶೆಟ್ಟಿ
ದೀಪಾವಳಿಯ ಉಡುಗೊರೆ ಎನ್ನುವಂತೆ ಆಚಾರ್ಯತ್ರಯರಲ್ಲಿ ಒಬ್ಬರಾದ , ಅದ್ವೈತ ಸಿದ್ದಾಂತದ ಪ್ರತಿಪಾದಕರ ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಉತ್ತರಾಖಂಡ್ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಂಡಿದೆ . ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಈ ಪುತ್ಥಳಿ ಮರು ನಿರ್ಮಾಣವಾಗಿರುವುದು ವಿಶೇಷ.
2013 ರ ಉತ್ತರಾಖಂಡ್ ಜಲಪ್ರವಾಹ ಎಲ್ಲರಿಗೂ ನೆನಪಿರಬಹುದು. ವರುಣ ರಾಯನ ಈ ಮುನಿಸಿಗೆ ಕೇದಾರನಾಥ್ ದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿ ಹೋಗಿತ್ತು. ಕೇಂದ್ರ ಸರಕಾರ ಹಾಗೂ ಉತ್ತರಾಖಂಡ್ ರಾಜ್ಯ ಸರಕಾರ ಆದಿ ಗುರು ಗಳ ಪ್ರತಿಮೆ ಮರು ಸ್ಥಾಪನೆಗೆ ಯೋಜನೆ ಹಾಕಿಕೊಂಡು ಪೂರ್ಣಗೊಳಿಸಿದೆ .
ನೀವು ಇದನ್ನು ಇಷ್ಟ ಪಡುಬಹುದು: ದೆಹಲಿಯಲ್ಲಿದೆ ಉಡುಪಿಯ ಉರುಗಳು.
ಇದೀಗ ಆದಿ ಗುರು ಪ್ರತಿಮೆ ಮರು ನಿರ್ಮಾಣವಾಗಿದೆ. ಉತ್ತರಾಖಂಡ್ ರಾಜ್ಯದ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಶಂಕರಾಚಾರ್ಯ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿತವಾಗಿದೆ.
ಪುತ್ಥಳಿ ಹಿಂದಿನ ಶಿಲ್ಪಿ ಕನ್ನಡಿಗ
ಕೇದಾರನಾಥ್ ನಲ್ಲಿ ನಿರ್ಮಾಣಗೊಂಡಿರುವ ಶಂಕರಾಚಾರ್ಯರ ಪ್ರತಿಮೆ ಹಿಂದಿನ ರೂವಾರಿ, ಶಿಲ್ಪಿ ಕನ್ನಡಿಗ ಅನ್ನುವುದು ನಮ್ಮ ಹೆಮ್ಮೆ. ಕನ್ನಡಿಗ ಮೈಸೂರಿನ ಯೋಗಿರಾಜ್ ಹಾಗೂ ಅವರ ಪುತ್ರ 37 ವರ್ಷದ ಅರುಣ್ ಯೋಗಿರಾಜ್ ಈ ಪುತ್ಥಳಿಯ ಶಿಲ್ಪಿಗಳು. ಅರುಣ್ ಎಂ. ಬಿ. ಎ ಪದವೀಧರರು. ಉತ್ತಮ ಕೆಲಸ ತೊರೆದು ಈ ಕಾಯಕ ಮಾಡುತ್ತಿದ್ದರು. ಇವರ ತಂದೆ ಯೋಗಿರಾಜ್ ಪುತ್ಥಳಿ ನಿರ್ಮಾಣ ಪೂರ್ಣವಾಗುವುದಕ್ಕೆ ಕೆಲವು ದಿನ ಬಾಕಿ ಇರುವಾಗ ನಿಧನ ಹೊಂದಿದ್ದು ,ಅರುಣ್ ನಿರ್ಮಾಣ ಕಾರ್ಯ ಪೂರ್ಣ ಮಾಡಿದ್ದಾರೆ
ಆದಿ ಗುರು ಶಂಕರಾಚಾರ್ಯ ಪ್ರತಿಮೆ ಬರೋಬ್ಬರಿ 9 ತಿಂಗಳ ಶ್ರಮದ ಕಾಯಕ. ಮೈಸೂ ರು , ಚಮೋಲಿ ಏರ್ ಬೇಸ್ ಬಳಿಕ ಕೇದಾರನಾಥ್ ಗೆ ಆದಿ ಗುರು ಪ್ರತಿಮೆ ತಲುಪಿದೆ.
ಈಗಾಗಲೇ ಮೈಸೂರು ಕೋರ್ಟ್ ಎದುರಿಗಿನ ಬಸವಣ್ಣ ಮೂರ್ತಿ, ಜಯ ಚಾಮರಾಜೆಂದ್ರ ಅವರ ಪುತ್ಥಳಿ ಈ ಕುಟುಂಬದ ಕಲಾ ನೈಪುಣ್ಯದಿಂದ ನಿರ್ಮಾಣ ಆಗಿತ್ತು.ಆದಿ ಗುರು ಶಂಕರಾಚಾರ್ಯ ಪ್ರತಿಮೆ ಬರೋಬ್ಬರಿ 9 ತಿಂಗಳ ಶ್ರಮದ ಕಾಯಕ. ಮೈಸೂರಿನ ಚಮೋಲಿ ಏರ್ ಬೇಸ್ ಬಳಿಕ ಕೇದಾರನಾಥ್ ಗೆ ಆದಿ ಗುರು ಪ್ರತಿಮೆ ತಲುಪಿದೆ.
12 ಅಡಿ ಎತ್ತರದ ಪುತ್ಥಳಿ
ಮರು ನಿರ್ಮಾಣಗೊಂಡಿರುವ ಪುತ್ಥಳಿ ಬರೋಬ್ಬರಿ 12 ಅಡಿ ಎತ್ತರವಿದೆ. ಆದಿ ಗುರು ಕುಳಿತುಕೊಂಡ ಭಂಗಿಯಲ್ಲಿ ಪ್ರತಿಮೆಯಿದೆ . 35 ಟನ್ ತೂಕದ ಪುತ್ಥಳಿ ಕಠಿಣ ಹವಾಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಬಳಸಲಾಗಿರುವ 120ಟನ್ ಕೃಷ್ಣಶಿಲೆಗಳನ್ನು ಹೆಗ್ಗಡದೇವನಕೋಟೆಯಿಂದ ತಂದು ಬಳಸಿಕೊಳ್ಳಲಾಗಿದೆ . ಪುತ್ಥಳಿ ಹೊಳಪು ಬರಲು ತೆಂಗಿನ ಕಾಯಿಯ ನೀರಿನಿಂದ ಪಾಲಿಶ್ ಮಾಡಲಾಗಿದೆ .
ವರುಣನ ಮುನಿಸಿಗೆ ಕೊಚ್ಚಿ ಹೋಗಿದ್ದ ಆದಿ ಗುರು ಗಳ ಪ್ರತಿಮೆ ಮರು ನಿರ್ಮಾಣ ಆಗಿರುವುದು ಖುಷಿಯ ಸಂಗತಿ. ಇದರ ಹಿಂದಿನ ಶಿಲ್ಪಿ ಕನ್ನಡಿಗ ಅನ್ನುವುದು ಇನ್ನೊಂದು ಖುಷಿ. ಕೇರಳದಲ್ಲಿ ಹುಟ್ಟಿ ಜಗತ್ತಿಗೆ ಅದ್ವೈತ ಸಿದ್ದಾಂತ ಪ್ರತಿಪಾದಿಸಿದವರು ಆದಿ ಗುರುಗಳು. ಕರ್ನಾಟಕದಲ್ಲಿ ಕೂಡ ತಮ್ಮ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿ ಹೋಗಿರುವ ಶಂಕರಾಚಾರ್ಯ ಪ್ರತಿಮೆಯ ಹಿಂದೆ ಕನ್ನಡಿಗರ ಕಾರ್ಯವಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.