ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ನವೆಂಬರ್‌ನಿಂದ ಆರಂಭವಾಗಲಿದೆ ರೈಲ್ವೆ ಇಲಾಖೆಯ ಶ್ರೀ ರಾಮಾಯಣ ಯಾತ್ರಾ’; ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. Indian Railway cateering and transport corporation (IRCTC) ಇಲಾಖೆಯು ಶ್ರೀ ರಾಮಾಯಣ ಯಾತ್ರಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ,ಈ ಯೋಜನೆ ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ಒಟ್ಟು ೧೭ ದಿನಗಳ ಪ್ಯಾಕೇಜ್ ಮೂಲಕ ನೀವು ಹಲವು ತಾಣಗಳನ್ನು ನೋಡಬಹುದು,

ನವ್ಯಶ್ರೀ ಶೆಟ್ಟಿ

Indian Railway cateering and transport corporation(IRCTC) ಇಲಾಖೆಯು ಪ್ರಯಾಣಿಕರನ್ನು ಉತ್ತೇಜಿಸುವ ಸಲುವಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಆ ಪಟ್ಟಿಗೆ ಶ್ರೀ ರಾಮಾಯಣ ಯಾತ್ರಾ(shri Ramayana Yatra) ಕೂಡ ಸೇರ್ಪಡೆಯಾಗಿದೆ. ನವೆಂಬರ್ ೭ರಿಂದ ಆರಂಭವಾಗುವ ಈ ಯೋಜನೆ ಒಟ್ಟು ೧೭ದಿನಗಳ ಪ್ಯಾಕೇಜ್ .ನಮ್ಮ ದೇಶದ ಹಲವು ತಾಣಗಳನ್ನು ಪರಿಚಯಿಸುವ ಸದುದ್ದೇಶದಿಂದ ಈ ಯೋಜನೆ ರೂಪುಗೊಂಡಿದ್ದು.

IRCTC

೧೭ ದಿನಗಳ ಪ್ರವಾಸ

ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ ವಿಶೇಷ ಟೂರ್ ಪ್ಯಾಕೇಜ್ . ನವೆಂಬರ್ ೭ರಿಂದ ‘ ಶ್ರೀ ರಾಮಾಯಣ ಯಾತ್ರ’ ಪ್ರಾರಂಭವಾಗಲಿದೆ. ಒಟ್ಟು ೧೭ ದಿನಗಳ ಈ ಪ್ರಯಾಣ ೭,೫೦೦ ಕಿ.ಮೀ ಗಳಷ್ಟು ವಿಸ್ತಾರ ವ್ಯಾಪ್ತಿ ಹೊಂದಿದೆ.

ರಾಮನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪ್ರವಾಸ

ಈ ಪ್ಯಾಕೇಜ್ ಹೆಸರಿಗೆ ತಕ್ಕಂತೆ ಶ್ರೀ ರಾಮನಿಗೆ ಸಂಬಂಧಿಸಿದ ಸ್ಥಳಗಳನ್ನು ನೋಡುವುದು ಪ್ಯಾಕೇಜ್‌ನ ಒಂದು ಭಾಗ. ರಾಮನ ಜನ್ಮ ಭೂಮಿ ಅಯೋಧ್ಯೆ(Ayodhya) ಹನುಮಾನ್ ದೇವಾಲಯ(Hanuman Temple), ನಂದಿ ಗ್ರಾಮದ(Nandigrama) ಭಾರತ್ ಮಂದಿರ(Bharath mandir) , ಸೀತೆಯ ಜನ್ಮಭೂಮಿ ಬಿಹಾರದ ಸೀತಾಮರಾಹಿ(Sitamarhai) , ರಾಮ ಸೀತಾ ದೇವಸ್ಥಾನ (Rama sita Temple)ಜನಕಪುರ(Janakpura) ,ವಾರಣಾಸಿ(Varanasi) ,ಪ್ರಯಾಗ(Prayag),ಶ್ರಿಂಗವೇರಪುರ(Shirngaverpura) ,ಚಿತ್ರಕೂಟ(Chitrakoot) ,ನಾಸಿಕ್(Nasik) ,ಹಂಪಿ(Hampi) ರಾಮೇಶ್ವರಂ(Rameshwaram) ಗಳನ್ನು ಈ ಪ್ಯಾಕೇಜ್ ಪಯಣದಲ್ಲಿ ನೋಡಬಹುದು. ಅಯೋಧ್ಯೆಯಿಂದ ಆರಂಭವಾಗುವ ಪಯಣ ೧೭ನೇ ದಿನದ ಕೊನೆಯಲ್ಲಿ ದೆಹಲಿ(Delhi) ಬಂದು ತಲುಪಲಿದೆ.

ನೀವು ಇದನ್ನು ಇಷ್ಟ ಪಡುಬಹುದು : ಭಾರತೀಯ ರೈಲ್ವೆ ಇಲಾಖೆಯಿಂದ “ಭಾರತ ದರ್ಶನ”

IRCTC launches  special tour package

ಅತ್ಯಾಕರ್ಷಕ ಸೌಕರ್ಯ ಹೊಂದಿರುವ ರೈಲು

ಶ್ರೀ ರಾಮಯಾಣ ಯತ್ರಾಗೆ ಬಳಕೆಯಾಗಲಿರುವ ರೈಲು ಅತ್ಯಾಕರ್ಷಕ ಸೌಲಭ್ಯ ಹೊಂದಿದೆ. AC coach, ಆಧುನಿಕ ಸೌಲಭ್ಯ ಹೊಂದಿರುವ ಕಿಚನ್ , ಸೆನ್ಸರ್ ಆಧಾರಿತ ವಾಶ್ ರೂಮ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಿವೆ. ಸುರಕ್ಷತೆಯ ದ್ರಷ್ಟಿಯಿಂದ ಪ್ರತಿ ವಿಭಾಗಕ್ಕೂ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಲಾಗಿದೆ ಪ್ರತಿ ಕೊಚ್ ಗೂ ಸಿಸಿಟಿವಿ ಅಳವಡಿಸಲಾಗಿದೆ.

17-Day Sri Ramayan Yatra

೨ ಡೋಸ್ ಲಸಿಕೆ ಪಡೆದ , ೧೮ ವರ್ಷ ಮೇಲ್ಪಟ್ಟವರು ಪ್ರಯೋಜನ ಪಡೆದುಕೊಳ್ಳಬಹುದು. ಮಾಸ್ಕ್, ಗ್ಲೌಸ್ ,ಸ್ಯಾನಿಟೈಜರ್ ಸೇರಿದಂತೆ ಸುರಕ್ಷತಾ ಕಿಟ್‌ಗಳನ್ನು ಇಲಾಖೆ ನೀಡಲಿದೆ. ‘ದೇಕೋ ಅಪ್ನಾ ದೇಶ್'(Dekho Apna Desh) ವಾಕ್ಯದಡಿಯಲ್ಲಿ ಕಾರ್ಯರೂಪಕ್ಕೆ ಬರಲಿರುವ ಈ ಯೋಜನೆ ,ಪ್ರತಿಯೊಬ್ಬರಿಗೆ ೮೨,೯೫೦ ರೂಪಾಯಿ. ಈ ದರ ರೈಲು ,ಹೋಟೆಲ್,ಬೇರೆ ಸ್ಥಳಗಳನ್ನು ತಲುಪುವ ವಾಹನದ ಸೇರಿದಂತೆ ಎಲ್ಲ ವೆಚ್ಚಗಳನ್ನು ಒಳಗೊಂಡಿದೆ. ನೀವೂ ಕೂಡ ಶ್ರಿ ರಾಮಾಯಣ ಯಾತ್ರ ಯೋಜನೆ ಹಾಕಿಕೊಂಡಿದ್ದಲ್ಲಿ, ನಿಯಮಗಳನ್ನು ಪಾಲಿಸಿ. ರಾಮನಿಗೆ ಸಂಬಂಧಿಸಿದ ಸ್ಥಳಗಳನ್ನು ಕಣ್ತುಂಬಿಕೊಳ್ಳಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button