ವಂಡರ್ ಬಾಕ್ಸ್ವಿಂಗಡಿಸದ

ಭಾರತೀಯ ರೈಲ್ವೆ ಇಲಾಖೆಯಿಂದ “ಭಾರತ ದರ್ಶನ”

ದೇಶ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೆ ಇಲಾಖೆಯು ಆಗಸ್ಟ್ 29ರಿಂದ ಭಾರತ ದರ್ಶನ ಎನ್ನುವ ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದ್ದು, ಈ ಮೂಲಕ ನೀವು ಭಾರತದ ಹಲವು ತಾಣಗಳನ್ನು ನೋಡಬಹುದಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ನಿಮಗಾಗಿ.

ನವ್ಯಶ್ರೀ ಶೆಟ್ಟಿ

The Indian Railways catering and Transport corporation ಇಲಾಖೆಯು ಭಾರತ ದರ್ಶನ ಎನ್ನುವ ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದೆ. ಈ ಭಾರತ ದರ್ಶನ ಪ್ಯಾಕೇಜ್ ಮೂಲಕ ಬಹುತೇಕ ಎಲ್ಲಾ ಪ್ರವಾಸಿ ತಾಣಗಳನ್ನು ನೀವು ನೋಡಬಹುದು. ರೈಲಿನ ಬುಕ್ಕಿಂಗ್ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯ. ಉತ್ತರ ಭಾರತ, ದಕ್ಷಿಣ ಭಾರತ, ಈಶಾನ್ಯ ಭಾರತದ ಸೇರಿದಂತೆ ಬಹುತೇಕ ಭಾರತದ ತಾಣಗಳನ್ನು ಈ ಪ್ಯಾಕೆಜ್ ಮೂಲಕ ನೀವು ನೋಡಬಹುದು.

ಒಟ್ಟು 11 ದಿನಗಳ ಪ್ಯಾಕೇಜ್

ಭಾರತ ರೈಲ್ವೆ ಇಲಾಖೆ ಘೋಷಣೆ ಮಾಡಿರುವ ಈ ಪ್ಯಾಕೇಜ್ ಒಟ್ಟು 11 ರಾತ್ರಿಗಳು 12 ದಿನಗಳ ಪ್ರಯಾಣವನ್ನು ಒಳಗೊಂಡಿದೆ. ಹೈದರಾಬಾದ್, ಅಹಮದಾಬದ್, ನಿಷ್ಕಲಂಕ್ ದೇವಸ್ಥಾನ, ಅಮೃತಸರ, ಜೈಪುರ, ಏಕತೆಯ ಪ್ರತಿಮೆ,ಸಮುದ್ರ ದೇವಸ್ಥಾನ ಸೇರಿದಂತೆ ಹಲವು ತಾಣಗಳನ್ನು ಒಳಗೊಂಡಿದೆ.

ಈ ಪ್ಯಾಕೇಜ್ ಸೆಪ್ಟೆಂಬರ್ 10ರಂದು ಮುಕ್ತಾಯವಾಗಲಿದೆ. ವಯಸ್ಕರಿಗೆ 11,340ರೂಪಾಯಿ ಶುಲ್ಕ ನಿಗದಿ ಮಾಡಿದೆ ಇಲಾಖೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಹಲವು ಪ್ಯಾಕೇಜ್ ಘೋಷಣೆ ಮಾಡುವ ಆಲೋಚನೆಯಲ್ಲಿ ರೈಲ್ವೆ ಇಲಾಖೆಯಿದೆ. ಮುಂದಿನ ದಿನಗಳಲ್ಲಿ ಜ್ಯೋತಿರ್ಲಿಂಗ ಯಾತ್ರೆ, ಪುಣ್ಯ ತೀರ್ಥ ಯಾತ್ರೆ, ದಕ್ಷಿಣ ಭಾರತ ಯಾತ್ರೆ ಸೇರಿದಂತೆ ಹಲವಾರು ಪ್ಯಾಕೆಜ್ ಗಳನ್ನು ಸರಕಾರ ಆಯೋಜಿಸುವ ಯೋಚನೆಯಲ್ಲಿದೆ.

The Indian Railways catering and Transport corporation

ಬೋರ್ಡಿಂಗ್ ಹಾಗೂ ಡಿ ಬೋರ್ಡಿಂಗ್ ಪಾಯಿಂಟ್

ಇದು ಭಾರತದ ಎಲ್ಲ ತಾಣಗಳನ್ನು ನೋಡಬಹುದಾದ ಅತ್ಯಂತ ಒಳ್ಳೆಯ ಪ್ಯಾಕೆಜ್. ಮಧುರೈ, ಸೇಲಂ, ಜೋಲ್ಲಾರ್ ಪೆಟ್ಟೈ, ಕಟಪಾಡಿ, ದಿಂಡಿಗಲ್, ಈರೋಡ್, ಕರೂರ್, ಚೆನ್ನೈ, ನೆಲ್ಲೂರು, ವಿಜಯವಾಡ ರೈಲಿನ ಬೋರ್ಡಿಂಗ್ ಪಾಯಿಂಟ್.

ನೀವು ಇದನ್ನು ಇಷ್ಟ ಪಡುಬಹುದು: ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದ ಜಮ್ಮು ಕಾಶ್ಮೀರದ ಐತಿಹಾಸಿಕ ರೈಲ್ವೆ ನಿಲ್ದಾಣ

ವಿಜಯವಾಡ, ನೆಲ್ಲೂರು, ಪೆರಂಬೂರು, ಕಟಪಾಡಿ, ಜೊಲ್ಲಾರ್ ಪೆಟ್ಟೈ,ಸೇಲಂ, ಈರೋಡ್, ಕರೂರ್, ದಿಂಡಿಗಲ್ ಮತ್ತು ಮಧುರೈ ಡಿ ಬೋರ್ಡಿಂಗ್ ಪಾಯಿಂಟ್ ಗಳು.

ಭಾರತ ದರ್ಶನ ಪ್ಯಾಕೆಜ್ ಅಡಿಯಲ್ಲಿ ಬರುವ ಎಲ್ಲಾ ಪ್ರವಾಸಿಗರು ನಾನ್ ಎಸಿ ಸ್ಲೀಪರ್ ಗಳಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣ ವಿಮೆ ಮತ್ತು ಸುರಕ್ಷತಾ ಕಿಟ್ ಗಳನ್ನು ಇಲಾಖೆ ವತಿಯಿಂದ ಒದಗಿಸಲಾಗುತ್ತದೆ. ಧರ್ಮ ಶಾಲಾ ಮತ್ತು ಸಭಾಂಗಣಗಳನ್ನು ಹಂಚಿಕೆಯ ಆಧಾರದ ಮೇಲೆ ರಾತ್ರಿ ತಂಗಲು ಹಾಗೂ ವಿರಾಮಕ್ಕೆ ಒದಗಿಸಲಾಗಿದೆ.
ಇದರ ಜೊತೆಗೆ ಊಟ,ನೀರಿನ ವ್ಯವಸ್ಥೆ ಕೂಡ ಮಾಡಲಾಗುತ್ತದೆ .

Indian Railway

ವೈಯುಕ್ತಿಕ ಆರೈಕೆ ಸೇವೆಗಳನ್ನು ಪ್ಯಾಕೇಜ್ ನಿಂದ ಹೊರಗಿಡಲಾಗಿದೆ. ಸ್ಥಳೀಯ ಸಾರಿಗೆ ಮತ್ತು ಪ್ರವಾಸಿ ಸ್ಥಳಗಳ ಪ್ರವೇಶ ಶುಲ್ಕವನ್ನು ಗ್ರಾಹಕರು ಭರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ರಿಯಾಯಿತಿ ದರದಲ್ಲಿ ಈ ಸೇವೆಗಳನ್ನು ಪಡೆಯಬಹುದು.

ಕೊರೋನಾ‍‍‍ ಕಾಲದ ನಡುವೆ ‘ಭಾರತ ದರ್ಶನ’ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಕೋವಿಡ್-19 ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ 48ಗಂಟೆಗಳ ಮುನ್ನ RT-PCR ಕೋವಿಡ್ ನೆಗೆಟಿವ್ ವರದಿಯ ರಿಪೋರ್ಟ್ ಹೊಂದುವುದು ಕಡ್ಡಾಯ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button