ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಹಾಲಿವುಡ್ ಸಿನಿಮಾದಲ್ಲಿರುವ ಸ್ಥಳಗಳನ್ನು ಹೋಲುವ ಭಾರತದ 9 ತಾಣಗಳಿವು.

ಹಾಲಿವುಡ್ ಸಿನಿಮಾಗಳನ್ನು ನೋಡುತ್ತಿರುವಾಗ ನಮಗೆ ಅಲ್ಲಿನ ಕೆಲವು ಜಾಗಗಳನ್ನು ನೋಡಿದಾಗ ಅಚ್ಚರಿ ಎಂದೆನಿಸುತ್ತದೆ. ಕೆಲವೊಮ್ಮೆ ನಾವು ಅಲ್ಲಿಗೆ ಹೋಗಬೇಕು ಎಂದೆನಿಸುತ್ತದೆ. ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ದೃಶ್ಯಗಳನ್ನು ಹೋಲುವ ಪರ್ಯಾಯ ಜಾಗಗಳಿದೆ. ನೀವು ಅಲ್ಲಿಗೆ ಭೇಟಿ ನೀಡಬಹುದು.

ನವ್ಯಶ್ರೀ ಶೆಟ್ಟಿ

ಹಾಲಿವುಡ್ ಸಿನಿಮಾದಲ್ಲಿರುವ ಸ್ಥಳಗಳಂತೆ ಕಾಣುವ ಭಾರತದ 9 ತಾಣಗಳ ಮಾಹಿತಿ ನಿಮಗಾಗಿ.

ಮಿಡ್ ನೈಟ್ ಇನ್ ಪ್ಯಾರಿಸ್ , ಉತ್ತರ ಕೊಲ್ಕತ್ತಾ

ಪ್ಯಾರಿಸ್ ನ ವಿಲಕ್ಷಣವಾದ ಬೀದಿಗಳು , ಇಳಿ ಸಂಜೆ ಯ ದೃಶ್ಯಗಳನ್ನು ವುಡಿ ಅಲೆನ್(woody Allen) ತನ್ನದೇ ಆದ ಕಲ್ಪನೆಯಲ್ಲಿ ಮಿಡ್ ನೈಟ್ ಇನ್ ಪ್ಯಾರಿಸ್ ನಲ್ಲಿ ಚಿತ್ರಿಸಿದ್ದಾನೆ. ಈ ಸಿನಿಮಾದ ಪ್ಯಾರಿಸ್ ಬೀದಿಗಳನ್ನು ಹೋಲುವಂತ ಜಾಗ ಕೊಲ್ಕತ್ತಾದ ಸೇಫಿಯಾ ಬೀದಿಗಳು ಕಾಣುತ್ತದೆ. ಬಹುಶಃ ನಾಯಕ ಓವನ ವಿಲ್ಸನ್ ಈ ಜಾಗದಲ್ಲಿ ತಿರುಗಾಡಿದ್ದಾರೆ ಸುಮಧುರ ಸಂಗೀತದ ಜೊತೆಯಾಗಿ ಇಲ್ಲಿನ ಬೀದಿಗಳಲ್ಲಿ ಇಳಿ ಸಂಜೆ ತಿರುಗುತ್ತಿದ್ದರು.

kolkatta

ಬಾರ್ಸಿಲೋನಾದಿಂದ ಮರೀನಾ ಡ್ರೈವ್ ತನಕ

ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಸಿನಿಮಾದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ಸಮುದ್ರ ತೀರದಲ್ಲಿ ಕುಳಿತಿರುವ ದೃಶ್ಯವನ್ನು ನೋಡಿರಬಹುದು. ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಸಿನಿಮಾದಲ್ಲಿನ ಕಡಲ ತೀರದ ದೃಶ್ಯಗಳು ಭಾರತದ ಮರೀನಾ ಡ್ರೈವ್ ನೆನಪಿಸುತ್ತದೆ.

marina drive

Hobbiton ಹುಲ್ಲುಗಾವಲು, ಮುನ್ನಾರ್

Hobbiton ಸಿನಿಮಾದಲ್ಲಿನ ಹುಲ್ಲುಗಾವಲು, ರಿಚ್ ಲೊಕೇಶನ್ ನಿಮಗೆ ಫ್ಯಾಂಟಸಿ ,ಅದು ಕಲ್ಪನೆಯ ಜಾಗಗಳು ಎನ್ನುವ ಭಾವನೆ ಮೂಡಿಸಿರಬಹುದು. ಆದರೆ ಅದು ನೈಜ ತಾಣ. ಹಾಲಿವುಡ್ ಸಿನಿಮಾದ ಈ ದೃಶ್ಯವನ್ನು ಹೋಲುವ ಜಾಗವೊಂದು ಭಾರತದಲ್ಲಿದೆ . ಕೇರಳ ರಾಜ್ಯದ ಮುನ್ನಾರ್ ಪ್ರದೇಶದ ರೋಲಿಂಗ್ ಹುಲ್ಲುಗಾವಲು ನಿಮಗೆ ಹಾಲಿವುಡ್ hobbiton ದೃಶ್ಯಗಳನ್ನು ನೆನಪಿಸುತ್ತದೆ.

ಕೊಡೈಕೆನಾಲ್

ಹಾಲಿವುಡ್ ಸಿನಿಮಾದ ಫ್ಯಾಂಟಸಿ ಜಗತ್ತಿನ ಕೆಲವು ದೃಶ್ಯಗಳನ್ನು ನೆನಪಿಸುವ ತಾಣ ಭಾರತ ಕೊಡೈಕೆನಾಲ್. The Fellowship of the Rings ನಲ್ಲಿ ಆರ್ಗೋನಾಥ್ ಪ್ರತಿಮೆಗಳು ಕೇವಲ ಕಲ್ಪನೆಯಾಗಿತ್ತು. ಆದರೆ ಕೊಡೈಕೆನಾಲ್ ನಲ್ಲಿರುವ ಪಿಲ್ಲರ್ ರಾಕ್ಸ್ ಕಲ್ಪನೆಯನ್ನು ವಾಸ್ತವವಾಗಿಸಿದೆ.

kodaikenal

Hogsmeade ನಿಂದ ಕಲ್ಕಾ ಶಿಮ್ಲಾ ತನಕ

ಹ್ಯಾರಿ ಪಾಟರ್ ಮ್ಯಾಜಿಕ್ ಹೋಗ್ವಾರ್ಟ್ ಎಕ್ಸ್ ಪ್ರೆಸ್ ದೃಶ್ಯಗಳನ್ನು ನೀವು ನೋಡಿರಬಹುದು. ಭಾರತದ ಕಲ್ಕಾ ಶಿಮ್ಲಾ ಎಕ್ಸ್ ಪ್ರೆಸ್ ರೈಲು ನಿಮಗೆ ಹ್ಯಾರಿ ಪಾಟರ್ ಸಿನಿಮಾದ ದೃಶ್ಯಗಳನ್ನು ನೆನಪಿಸುತ್ತದೆ. ಧರಂಪುರ ಮತ್ತು ಸೋಲನ್ ಮೂಲಕ ಹಾದು ಹೋಗುವ ಈ ರೈಲು ಮಾರ್ಗ ನಿಮಗೆ ಅಸಂಖ್ಯಾತ ಸುರಂಗ ಮಾರ್ಗಗಳನ್ನು ಪರಿಚಯಿಸುತ್ತದೆ .

ನೀವು ಇದನ್ನು ಇಷ್ಟ ಪಡುಬಹುದು: ಭಾರತದ 5 ಪ್ರಸಿದ್ಧ ತಾಣಗಳಿಗೆ ಪರ್ಯಾಯವಾಗಿ ನೀವು ಈ ಜಾಗಗಳನ್ನು ನೋಡಬಹುದು

shimla

ಮನಾಲಿಯಿಂದ ಲೇಹ್ ತನಕ ಮೋಟಾರ್ ಸೈಕಲ್ ಡೈರಿ

ಹಾಲಿವುಡ್ ಸಿನಿಮಾ The Motorcycle Diaries ಸಿನಿಮಾದಲ್ಲಿ ಅರ್ನೆಸ್ಟೋ ಮತ್ತು ಆಲ್ಬರ್ಟೊ ಬ್ರೆಜಿಲ್ ನಿಂದ ಪೆರುವಿನ ತನಕ ಪಯಣ ಮಾಡಿದ್ದರು. ಅವರಿಬ್ಬರ ಪಯಣ ಅಲ್ಲಿನ ರೋಚಕ ಕಥೆಗಳು ಅದೆಷ್ಟೋ ಮನಸ್ಸುಗಳನ್ನು ನಾಟಿತ್ತು. ಆದೇ ರೀತಿಯ ಪಯಣವನ್ನು ನಿಮಗೆ ನೆನಪಿಸುತ್ತದೆ ಲೇಹ್ ಪಯಣ. ಎತ್ತರದ ಪರ್ವತದ ನಡುವೆ ಹಾದು ಹೋಗುವ ಈ ಹಾದಿ ಬೈಕರ್ ಗಳಿಗೆ ಸ್ವರ್ಗ.

motorcycle dairy

ನಾರ್ನಿಯಾದಿಂದ ನೈನಿತಾಲ್ ತನಕ

ನಾರ್ನಿಯಾ ಹಾಲಿವುಡ್ ಸಿನೆಮಾಗಳ ಕಲ್ಪನಾ ಸಿನಿಮಾ. ಬಿಳಿ ಮಾಟಗಾತಿ, ವಾರಾಂತ್ಯದ ವಿಹಾರ, ನೂರು ವರ್ಷ ಹಿಮಾಲಯದ ಮಡಿಲಿನಲ್ಲಿ ಕಾಯುವ ಮಾಟಗಾತಿ ಒಂದು ರೀತಿಯ ಫ್ಯಾಂಟಸಿ ಪ್ರಪಂಚದ ಸಿನಿಮಾ. ಅಲ್ಲಿನ ಚೆಂದದ ಜಾಗ , ಹಿಮಪಾತ ಗಳನ್ನು ನಿಮಗೆ ನೆನಪಿಸುತ್ತದೆ ಭಾರತದ ನೈನಿತಾಲ್.

nanital

ವರ್ಕಲಾ ಪಾಪನಸಂ ಬೀಚ್

ಮೇರಿಲ್ ಸ್ಟ್ರೀಪ್ ಮತ್ತು ಅಮಂಡಾ ಸೆಪ್ರೈಡ್ ಕಾಂಬಿನೇಷನ್ ಹಾಲಿವುಡ್ ಸಿನಿಮಾ ಮಮ್ಮ ಮಿಯಾ. ಈ ಸಿನಿಮಾದಲ್ಲಿ ದೃಶ್ಯಗಳಿಗೆ ಪರ್ಯಾಯದಂತಿದೆ ಕೇರಳದ ವರ್ಕಲಾ ಪಪಾನಸಂ ಬೀಚ್ ನ ಕಡಲ ತೀರಗಳು.

varkala

ಮೊರ್ಜಿಂ ಬೀಚ್ (Morjim beach)

ಜಗತ್ತಿನ ದುರಂತ ಸಿನಿ ಕಥೆಗಳಲ್ಲಿ ಕ್ರಿಸ್ಟೋಫರ್ ಮೆಕ್ ಕಾಂಡ್ಲೆಸ್ ಅಲಸ್ಕಾ ಪ್ರಯಾಣ ಕೂಡ ಒಂದು. ಪ್ರಯಾಣಿಕರ ಪ್ರಪಂಚದ ಬಗ್ಗೆ ಹೊಸ ನೋಟ ಬಿತ್ತರಿಸಿತ್ತು ಆ ಸಿನಿಮಾ.

morjim beach

ಆ ಸಿನಿಮಾದಲ್ಲಿ ದುರಂತ ತಪ್ಪಿಸಬಹುದಾದ, ಆದರೆ ಅದೇ ತಾಣದ ಸೌಂದರ್ಯವನ್ನು ಬಿಂಬಿಸುವ ಜಾಗ ಭಾರತದಲ್ಲಿದೆ. ಹಾಲಿವುಡ್ ಸಿನಿಮಾದ ದೃಶ್ಯವನ್ನು ಬಿಂಬಿಸುವ ತಾಣ ಗೋವಾ ರಾಜ್ಯದ ಮೊರ್ಜಿಂ ಬೀಚ್.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button