ವಿಂಗಡಿಸದಸ್ಮರಣೀಯ ಜಾಗ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಲಿದೆ “ವಿಮಾನ ಮಾದರಿಯ” ಮೆಟ್ರೋ ಸ್ಟೇಷನ್

ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಇತ್ತೀಚಿಗೆ ಯುನೆಸ್ಕೋಯಿಂದ “ಅತಿ ಸುಂದರ ವಿಮಾನ ನಿಲ್ದಾಣ” ಎಂಬ ಪುರಸ್ಕಾರಕ್ಕೆ ಪಾತ್ರವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಇನ್ನೊಂದು ವಿಶಿಷ್ಟ ವಿನ್ಯಾಸಕ್ಕೆ ಸಾಕ್ಷಿಯಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIA)ದ ಟರ್ಮಿನಲ್ 2 ನಲ್ಲಿ ಈ ವಿಮಾನ ಮಾದರಿಯ (Airplane model) ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೆಐಎ ಅರ್ಹ ಕಂಪನಿಗಳಿಂದ ಬಿಡ್ ಸಹ ಆಹ್ವಾನಿಸಿದೆ.

ಅಂದಾಜು 14 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಇದು ನಿರ್ಮಾಣಗೊಳ್ಳಲಿದ್ದು, ಇದರ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಕೆಐಎ (KIA) ಹೊತ್ತುಕೊಂಡಿದೆ. ಈ ಮೆಟ್ರೋ ನಿಲ್ದಾಣ 2026ರ ಜೂನ್‌ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ಪೂರ್ವ ಅರ್ಹತಾ ಟೆಂಡರ್‌ (Tender) 2023ರ ಡಿಸೆಂಬರ್ 16 ರಂದು ಕರೆಯಲಾಗಿತ್ತು. 2024ರ ಜನವರಿ 2ರಂದು ಬಿಡ್‌ ತೆರೆಯಲಾಗುತ್ತದೆ. ಬಿಐಎಎಲ್‌ ಎರಡು ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುತ್ತದೆ. ಮೊದಲ ಹಂತದಲ್ಲಿ ಬಿಡ್‌ (Bid) ಸಲ್ಲಿಸಿದ ಕಂಪನಿಗಳನ್ನು ಮೌಲ್ಯಮಾಪನ ಮಾಡಿ, ನಂತರ ಆಯ್ಕೆಯಾದ ಸಂಸ್ಥೆಗಳಿಂದ ಹಣಕಾಸಿನ ಬಿಡ್‌ಗೆ ಮತ್ತೆ ಅಹ್ವಾನಿಸಲಿದೆ.

ಇಲ್ಲಿ ಆಯ್ಕೆ ಆಗುವವರಿಗೆ ಮೆಟ್ರೋ ನಿಲ್ದಾಣ ನಿರ್ಮಿಸುವ ಅವಕಾಶ ಸಿಗಲಿದೆ.ಮೆಟ್ರೋ ನಿಲ್ದಾಣವು (Metro station) ಭೂಗತ ಮಾರ್ಗ ಸೇರಿದಂತೆ ಮೂರು ಮಹಡಿಯನ್ನು ಹೊಂದಿರಲಿದೆ. ಪಾರ್ಕಿಂಗ್‌ ಸೌಲಭ್ಯ ಕೂಡ ಇಲ್ಲಿ ಇರಲಿದೆ.

ಬಿಎಂಆರ್‌ಸಿಎಲ್‌ ನ (BMRCL) ಮೌಲ್ಯಮಾಪನ ಪ್ರಕಾರ, 2031ರ ವೇಳೆಗೆ ಕೆ.ಆರ್‌.ಪುರದಿಂದ- ಕೆಎಐವರೆಗಿನ ಮೆಟ್ರೋ ಮಾರ್ಗದಲ್ಲಿ 8.35 ಲಕ್ಷ ಮಂದಿ ಪ್ರಯಾಣಿಸಲಿದ್ದಾರೆ. 2041ರ ವೇಳೆಗೆ 11.14 ಲಕ್ಷಕ್ಕೆ ಏರಿಕೆಯಾಗಲಿದೆ.

ನೀಲಿ ಮಾರ್ಗ (purple line) ಮೆಟ್ರೋದಲ್ಲಿ ಹೆಬ್ಬಾಳ ನಿಲ್ದಾಣದ ಮೂಲಕ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ.ನಂತರ ಕೆ.ಆರ್‌. ಪುರ ನಿಲ್ದಾಣ (51,983), ನಾಗವಾರ (50,470) ಮತ್ತು ಕೆಐಎ ಟರ್ಮಿನಲ್‌ ನಿಲ್ದಾಣದ ಮೂಲಕ (48,113) ಪ್ರಯಾಣಿಸಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಸಿಲ್ಕ್ ಬೋರ್ಡ್ ಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ (Namma Metro) ನೀಲಿ ಮಾರ್ಗದ (Blue Line) ಕಾಮಗಾರಿಯನ್ನು ಅಫ್ಕಾನ್ಸ್‌ , ಎಸ್‌ಎನ್‌ಸಿ ಮತ್ತು ಎನ್‌ಸಿಸಿ ಕಂಪನಿಗಳಿಗೆ ವಹಿಸಿದೆ.

ಈ ಮಾರ್ಗದ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. 2026ರ ಜೂನ್‌ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button