ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ಮುಂದೆ ನಿಶಬ್ಧ ವಲಯ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Mangaluru International Airport)ಇನ್ಮುಂದೆ ನಿಶಬ್ಧ ವಲಯ(Silent Zone) ಆಗಿರಲಿದೆ. ಇಲ್ಲಿ ಯಾವುದೇ ಸಂದೇಶಗಳು ಪ್ರಯಾಣಿಕರಿಗೆ ದೊಡ್ಡ ಧ್ವನಿಯಲ್ಲಿ ಪ್ರಸಾರ ಆಗುವುದಿಲ್ಲ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ (Passenger)ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಜಾರಿಗೆ ತಂದಿದೆ.
ಅಂತಹ ಅಧಿಸೂಚನೆಗಳಿಗೆ ಸಾರ್ವಜನಿಕ ವಿಳಾಸ (ಪಿಎ)(Public Adress) ವ್ಯವಸ್ಥೆಯನ್ನು ಬಳಸುವುದನ್ನು ದೂರವಿಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬದಲಾವಣೆಯು ಪ್ರಯಾಣಿಕರಿಗೆ ನಿಶ್ಯಬ್ದ ವಾತಾವರಣವನ್ನು ಬೆಳೆಸುವ ಗುರಿಯನ್ನು ಹೊಂದಿದೆ , ಅವರು ವಿಮಾನನಿಲ್ದಾಣದಲ್ಲಿ (Airport)ತಮ್ಮ ಸಮಯವನ್ನು ಓದುವುದು, ಪ್ರೀತಿಪಾತ್ರರೊಂದಿಗೆ ಸಂವಾದಿಸುವುದು ಅಥವಾ ಕೆಲಸದ ಬದ್ಧತೆಗಳಿಗೆ ಹಾಜರಾಗುವಂತಹ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) ಮೌನವಾಗಿದೆ. ಅಂದ4e ಸಾರ್ವಜನಿಕ ವಿಳಾಸ ವ್ಯವಸ್ಥೆಯಲ್ಲಿ ವಿಮಾನಯಾನ ಸಂಸ್ಥೆಗಳು ಇನ್ನು ಮುಂದೆ ಪ್ರಯಾಣಿಕರಿಗೆ ಪ್ರಕಟಣೆಗಳನ್ನು(Announcement)ನೀಡುವುದಿಲ್ಲ.
ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು (Disturbance)ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ(Flight Information Display System)ಫಲಕಗಳಲ್ಲಿ ಅನಾವರಣಗೊಳ್ಳಲಿದೆ.
ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆನಿಲ್ದಾಣದ ಟರ್ಮಿನಲ್‌ನಲ್ಲಿ(Terminal)’ಮೇ ಐ ಹೆಲ್ಪ್ ಯು’ ಡೆಸ್ಕ್ (May I Help You Desk)ಅನ್ನು ಸ್ಥಾಪಿಸಲಾಗಿದೆ. ಅಲ್ಲಿ ಸಿಬಂದಿ, ಕಾರ್ಯನಿರ್ವಾಹಕರು ಸಹಾಯಕ್ಕೆ ಇರಲಿದ್ದಾರೆ.
ನೀವು ಇದನ್ನು ಇಷ್ಟ ಪಡಬಹುದು:ಹೊಸ ಸ್ಥಳಕ್ಕೆ ಸ್ಥಳಾಂತರ ಆಗಲಿದೆ ದುಬೈ ವಿಮಾನ ನಿಲ್ದಾಣ
ಎಲ್ಲ ಏರ್‌ಲೈನ್ಸ್ ಚೆಕ್ ಇನ್ ಕೌಂಟರ್‌ಗಳು(Airlines Check In Counter), ಬೋರ್ಡಿಂಗ್ ಗೇಟ್‌ಗಳಲ್ಲಿಯೂ(Boarding Gate) ವಿಮಾನದ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿದೆ.
ತಡೆರಹಿತ ಪ್ರಯಾಣದ ಮಾಹಿತಿಗೆ ಸಹಾಯ, ಬೋರ್ಡಿಂಗ್, ಗೇಟ್ ಬದಲಾವಣೆ, ವಿಮಾನದ ಮರು ವೇಳಾಪಟ್ಟಿ ಮುಂತಾದ ವಿಷಯಗಳು ಏರ್‌ಲೈನ್ಸ್ನಿಂದ ಪ್ರಯಾಣಿಕರ ಮೊಬೈಲ್‌ಗೆ(Mobile) ಎಸ್‌ಎಂಎಸ್ ಅಥವಾ ಇ-ಮೇಲ್‌ಗೆ (E mail)ಸಂದೇಶ ಬರಲಿದೆ.ಹೆಚ್ಚಿನ ಮಾಹಿತಿಗೆ ಟರ್ಮಿನಲ್ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ವಿಮಾನಯಾನ ಸಂಸ್ಥೆಗೂ ಕರೆ ಮಾಡಬಹುದಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಈ ಡಿಸ್ಲೇ ಮೂಲಕನೇ ವಿಮಾನ ಹಾರಾಟ, ಆಗಮನ ಸಮಯ ಹಾಗೂ ವಿಳಂಬ ಸ್ಥಿತಿಯ ಮಾಹಿತಿಯನ್ನ ಟಿವಿ ಪರದೆ ಮೂಲಕ ಪಡೆದುಕೊಳ್ಳಬಹುದಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಒಂದಿಷ್ಟು
ಮಂಗಳೂರಿನ ಬಜ್ಪೆ(Bajpe) ವಿಮಾನ ನಿಲ್ದಾಣ 25 ಡಿಸೆಂಬರ್ (December)1951 ರಂದು ಪ್ರಾರಂಭವಾಯಿತು,2014 ರಂತೆ, ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕ ಸಂದಣಿಯಲ್ಲಿ 54℅ ರಷ್ಟು ಬೆಳವಣಿಗೆಯೊಂದಿಗೆ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಬೆಳವಣಿಗೆ ಪ್ರಮಾಣವನ್ನು ಹೊಂದಿದೆ.
ವಿಮಾನ ನಿಲ್ದಾಣ ಪ್ರಾಥಮಿಕ ಸ್ಥಳ ಮಂಗಳೂರು ನಗರವಾದರು, ಈ ವಿಮಾನ ನಿಲ್ದಾಣ ಮಣಿಪಾಲ(Manipal),ಉಡುಪಿ(Udupi), ಕುಂದಾಪುರ(Kundapura), ಶಿವಮೊಗ್ಗ (Shivamogga)ಮಡಿಕೇರಿ(Madikeri), ಸಕಲೇಶಪುರ(Sakleshpur), ಚಿಕ್ಕಮಗಳೂರು(Chikkamagaluru), ಭಟ್ಕಳ(Bhatkal), ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅನೇಕ ಸ್ಥಳಗಳಿಗೆ ಮತ್ತು ಕಾಸರಗೋಡು,(Kasargod)ಕೇರಳದ(Kerala) ಉತ್ತರ ಭಾಗದ ನಗರಗಳಿಗೆ ಸೇವೆಯನ್ನು ನೀಡುತ್ತದೆ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.