ತುಂಬಿದ ಮನೆದೂರ ತೀರ ಯಾನವಿಂಗಡಿಸದ

ಹೊಸ ಸ್ಥಳಕ್ಕೆ ಸ್ಥಳಾಂತರ ಆಗಲಿದೆ ದುಬೈ ವಿಮಾನ ನಿಲ್ದಾಣ

ಕೊರೋನಾ(Corona Virus)ವೈರಸ್ ಹಾವಳಿಯ ಬಳಿಕ ಕಳೆಗುಂದಿದ ದುಬೈನ ಅಂತಾರಾಷ್ಟ್ರೀಯ ವಿಮಾನಯಾನ(Dubai International Airport)ಉದ್ಯಮಕ್ಕೆ ಪುನಶ್ಚೇತನ ನೀಡುವ ತನ್ನ ಯೋಜನೆಯ ಭಾಗವಾಗಿ ಯುಎಇ(UAE) ಬೃಹತ್ ವಿಮಾನನಿಲ್ದಾಣವನ್ನು ನಿರ್ಮಿಸಲಿದೆ.

ನೂತನ ವಿಮಾನನಿಲ್ದಾಣವು ವಿಮಾನಗಳ ಸಂಚಾರವನ್ನು ನಿಯಂತ್ರಿಸುವ ಅತ್ಯಾಧುನಿಕ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿವೆ. ಅರೇಬಿಯದ (Arabia)ಪಾರಂಪರಿಕ ಬೆಡೊಯಿನ್(Bedouin)ಜನರ ಶಿಬಿರಗಳನ್ನು ನೆನಪಿಸುವ ಬಿಳಿ ಬಣ್ಣದ ಟರ್ಮಿನಲ್,(Terminal) ಐದು ಪರ್ಯಾಯ ರನ್‌ವೇಗಳು(Runway) ಹಾಗೂ 400 ಏರ್‌ಕ್ರಾಫ್ಟ್ ಗೇಟ್‌ಗಳನ್ನು(Aircraft Gate)ಹೊಂದಿರುವುದಾಗಿ ಪ್ರಕಟಣೆ ತಿಳಿಸಿದೆ.

New Terminal at Dubai International Airport
X: HH Sheikh Mohammed

ಜಗತ್ತಿನ ಅತ್ಯಂತ ಸಂಚಾರ ದಟ್ಟಣೆಯ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾಗದಲ್ಲಿರುವ ಮರುಭೂಮಿ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದು ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್(Sheikh Mohammed Bin Rashid Al maktoum)ರವಿವಾರ ಪ್ರಕಟಿಸಿದ್ದಾರೆ.

ಡಿಎಕ್ಸ್‌ಬಿ(DXB) ಎಂದೇ ಜನಪ್ರಿಯವಾದ ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ದುಬೈ ವರ್ಲ್ಡ್ ಸೆಂಟ್ರಲ್(Dubai World Central) ಪ್ರದೇಶದಲ್ಲಿರುವ ಅಲ್‌ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಹಮ್ಮಿಕೊಳ್ಳಲಾಗಿತ್ತು. ಆದರೆ 2009ರ ಆರ್ಥಿಕ(Financial Crisis)ಬಿಕ್ಕಟ್ಟಿನ ಬಳಿಕ ಆ ಯೋಜನೆ ನೆನೆಗುದಿಯಲ್ಲಿತ್ತು

ಇದೀಗ ಆ ಯೋಜನೆಗೆ ಮತ್ತೆ ಜೀವ ಬಂದಿದೆ.‘‘ ಮುಂದಿನ ತಲೆಮಾರಿಗಾಗಿ ನಾವು ಹೊಸ ಯೋಜನೆಯೊಂದನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳಿಗಾಗಿ ಹಾಗೂ ತರುವಾಯ ಅವರ ಮಕ್ಕಳಿಗಾಗಿ ನಿರಂತರ ಹಾಗೂ ಸ್ಥಿರವಾದ ಅಭಿವೃದ್ಧಿಯನ್ನು ಖಾತರಿಪಡಿಸುತ್ತಿದ್ದೇವೆ’’ ಎಂದು ಶೇಖ್ ಮೊಹಮ್ಮದ್ ಅವರು ಆನ್‌ಲೈನ್ (Online)ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

New Terminal at Dubai International Airport
X: HH Sheikh Mohammed

ಭವಿಷ್ಯದಲ್ಲಿ ದುಬೈ ನೂತನ ಜಾಗತಿಕ ಕೇಂಂದ್ರವಾಗಿ ಮೂಡಿಬರಲಿದೆ.ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಎಕ್ಸ್‌ಬಿ)ದ ಮೂಲಕ 2019ರಲ್ಲಿ 8.63 ಕೋಟಿ ಮಂದಿ ಪ್ರಯಾಣಿಸಿದ್ದು, ಕೋವಿಡ್ ಹಾವಳಿಗೆ ಮುನ್ನ ಅತ್ಯಂತ ಜನಸಂಚಾರ ನಿಬಿಡ ವಿಮಾನ ನಿಲ್ದಾಣವೆನಿಸಿತ್ತು. ಕೊರೋನಾ ಸಾಂಕ್ರಾಮಿಕದ ಹಾವಳಿಯ ಈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯುಂಟಾಗಿದೆ. 2022ರಲ್ಲಿ 6.60 ಕೋಟಿ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದರು. ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ಬಿನ್ ರಶೀದ್ ಅಲ್ ಮಕೌಮ್ ಅವರು “ವಿಶ್ವದ ವಿಮಾನ ನಿಲ್ದಾಣ, ಬಂದರು, ನಗರ ಕೇಂದ್ರ ಮತ್ತು ಹೊಸ ಜಾಗತಿಕ ಕೇಂದ್ರ” ಆಗಲಿದೆ ದುಬೈ ಎಂದು ಹೇಳಿದ್ದಾರೆ.ಅಂದಾಜು 35 ಬಿಲಿಯನ್ ಅಮೆರಿಕ ಡಾಲರ್ ರೂ 2.9 ಲಕ್ಷ ಕೋಟಿ ಮೌಲ್ಯದ ಹೊಸ ವಿಮಾನ ನಿಲ್ದಾಣ ಯೋಜನೆಯನ್ನು ಘೋಷಿಸಿದರು.

ನೀವು ಇದನ್ನು ಇಷ್ಟ ಪಡಬಹುದು:ದುಬೈ ಬಳಿಕ ಭಾರತದ ಪಾಸ್ಪೋರ್ಟ್ ಅತಿ ಅಗ್ಗ

ಹೊಸ ವಿಮಾನ ನಿಲ್ದಾಣವನ್ನು ಅಲ್ ಮಕೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು(Al Makoum International Airport) 26 ಕೋಟಿ ಪ್ರಯಾಣಿಕರು ಮತ್ತು 400 ಏರ್‌ಕ್ರಾಫ್ಟ್ ಗೇಟ್‌ಗಳಿಗೆ ಆತಿಥ್ಯ ಕಲ್ಪಿಸುವ ಸಾಮರ್ಥ್ಯವನ್ನು ಇದು ಹೊಂದಲಿದೆ

ವಿಮಾನ ನಿಲ್ದಾಣವು ವರ್ಷಕ್ಕೆ 26 ಕೋಟಿ ಪ್ರಯಾಣಿಕರಿಗೆ ಆತಿಥ್ಯ ಕಲ್ಪಿಸಬಹುದಾದ ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದೆ.ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಸ್ತುತ ಎಲ್ಲಾ ಕಾರ್ಯಾಚರಣೆಗಳನ್ನು ಮುಂಬರುವ ವರ್ಷಗಳಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು. ಹೊಸ ನಿಲ್ದಾಣವು ಪ್ರಸ್ತುತ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ಹೆಚ್ಚು ಇರಲಿದೆ. . ದುಬೈನ ವಾಯುಯಾನ ಕ್ಷೇತ್ರವು ಮೊದಲ ಬಾರಿಗೆ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ನೋಡಲಿದೆ.

ದುಬೈ ಸೌತ್‌ ಪ್ರದೇಶದಲ್ಲಿ(South )ವಿಮಾನ ನಿಲ್ದಾಣದ ಸುತ್ತಲೂ ಇಡೀ ನಗರವನ್ನು ನಿರ್ಮಿಸಲಾಗುವುದು. ಏಕೆಂದರೆ ಮಹತ್ವಾಕಾಂಕ್ಷೆಯ ಯೋಜನೆಯು 10 ಲಕ್ಷ ಜನರಿಗೆ ವಸತಿ ಬೇಡಿಕೆಗೆ ಕಾರಣವಾಗಬಹುದು.ಈ ವಿಮಾನ ನಿಲ್ದಾಣವು ಲಾಜಿಸ್ಟಿಕ್ಸ್(Logistics )ಮತ್ತು ವಾಯು ಸಾರಿಗೆ ವಲಯದಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸಲಿದೆ. ಹೊಸ ಟರ್ಮಿನಲ್‌ಗೆ (Terminal)128 ಶತಕೋಟಿ AED (34.85 ಶತಕೋಟಿ ಅಮೆರಿಕ ಡಾಲರ್ ಅಥವಾ ರೂ. 2 ಲಕ್ಷ ಕೋಟಿ) ವ್ಯಯವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button