ಹಿಂದೂ ಮಂದಿರದ ನಂತರ ಚರ್ಚ್ ನಿರ್ಮಾಣಕ್ಕೂ ಜಾಗ ಕೊಟ್ಟ ದುಬೈ
ಅಬು ಮುರೇಖಾದಲ್ಲಿ(Abu Mureikha)a ಈಗಾಗಲೇ ಉದ್ಘಾಟನೆಗೊಂಡಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS)ಅಥವಾ ಬಾಪ್ಸ್ ಹಿಂದೂ ದೇಗುಲದ ಪಕ್ಕದಲ್ಲೇ 4.37 ಎಕರೆಯಲ್ಲಿ ಈ ಚರ್ಚ್ (Church)ನಿರ್ಮಾಣಗೊಳ್ಳಲಿದೆ.
ಅಬುಧಾಬಿ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್(Sheikh Mohammed Bin Zayed Al Nahyan) ಈ ಭೂಮಿಯನ್ನು ಚರ್ಚ್ ನಿರ್ಮಿಸುವುದಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಹಿಂದೂ ಮಂದಿರದ ಪಕ್ಕದಲ್ಲಿಯೇ ಚರ್ಚ್
ಬೃಹತ್ ಹಿಂದೂ ದೇವಾಲಯಕ್ಕೆ ಜಾಗ ನೀಡಿದ ಇತಿಹಾಸ ನಿರ್ಮಿಸಿದ ಸೌದಿ(Saudi)ರಾಷ್ಟ್ರ ಅಬುಧಾಬಿ,(Abu Dubai) ಈ ದೇಗುಲದ ಪಕ್ಕದಲ್ಲೇ ಬೃಹತ್ ಚರ್ಚ್ ನಿರ್ಮಾಣಕ್ಕೆ ಜಾಗ ನೀಡಿದೆ.
ಈಗಾಗಲೇ ಚರ್ಚ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮೇ. 5 ರಂದು ಚರ್ಚ್ ಉದ್ಘಾಟನೆಗೊಳ್ಳಲಿದೆ. ಚರ್ಚ್ ಆಫ್ ಸೌತ್ ಇಂಡಿಯಾ ಪಾರಿಷ್(Church of South India Parish )ಹೆಸರಿನಲ್ಲಿ ನಿರ್ಮಾಣವಾಗಿರುವ ಈ ಚರ್ಚ್ ಕೂಡ ಅಬುಧಾಬಿಯ ಇತಿಹಾಸದಲ್ಲೇ ಸ್ಥಾಪನೆಯಾಗಿರುವ ಮೊದಲ ಚರ್ಚ್ ಎನಿಸಲಿದೆ.
ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಪ್ಯಾರಿಷ್, ಭಾನುವಾರ (Sunday)ಅಬುಧಾಬಿಯಲ್ಲಿ ತನ್ನ ಮೊದಲ ಚರ್ಚ್ ಅನ್ನು ಸರಳವಾಗಿ ಉದ್ಘಾಟಿಸಲು ಸಿದ್ಧವಾಗಿದೆ ಎಂದು ಪಾದ್ರಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಅಬುಧಾಬಿಯಲ್ಲಿ, ಈ ಸೇವೆಯನ್ನು ಇಲ್ಲಿಯವರೆಗೆ ನಗರದ ಸೇಂಟ್ ಆಂಡ್ರ್ಯೂ ಚರ್ಚ್‌ನಲ್ಲಿ (St Andrew’s Church) ನಡೆಸಲಾಗಿದೆ.
ಆದರೆ ಇನ್ನುಮುಂದೆ ರಾಜಧಾನಿಯಲ್ಲಿರುವ ಸಿಎಸ್‌ಐ ಅನುಯಾಯಿಗಳು ತಮ್ಮ ಸ್ವಂತ ಚರ್ಚ್ ಕಟ್ಟಡದಲ್ಲಿ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭಾನುವಾರ ನಡೆಯುವ ಸಮಾರಂಭದ ನೇತೃತ್ವವನ್ನು ಸಿಎಸ್‌ಐನ ಮಧ್ಯ ಕೇರಳ(Kerala) ಡಯಾಸಿಸ್‌ನ ಬಿಷಪ್ ರೆ.ಡಾ.ಮಲಾಯಿಲ್ ಸಾಬು ಕೋಶಿ ಚೆರಿಯನ್ ವಹಿಸಲಿದ್ದಾರೆ. ನಂತರ ಕೃತಜ್ಞತಾ ಸಭೆ ನಡೆಯಲಿದೆ.
ನೀವು ಇದನ್ನು ಇಷ್ಟ ಪಡಬಹುದು:ಯುಎಇಯಲ್ಲಿ ಹಿಂದೂ ದೇಗುಲ; ಮಂದಿರ ಉದ್ಘಾಟಿಸಲಿದ್ದಾರೆ ಮೋದಿ
ಈಗ ನಿರ್ಮಾಣ ಗೊಂಡಿರುವ ಹೊಸ ಚರ್ಚ್ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಮಣ್ಣಿನ ಸ್ವರದ ಮತ್ತು ಅಷ್ಟಭುಜಾಕೃತಿಯ ಚರ್ಚ್ ಕಟ್ಟಡವು ದೇವತೆಗಳ ರೆಕ್ಕೆಗಳನ್ನು (Wings of Angels) ಹೋಲುವ ಮುಂಭಾಗದ ಎತ್ತರವನ್ನು ಹೊಂದಿದೆ, ಇದು ಮನುಕುಲದ ರಕ್ಷಣೆ ಮತ್ತು ದೇವರ ಸೃಷ್ಟಿಯನ್ನು ಸಂಕೇತಿಸುತ್ತದೆ ಎಂದು ಚರ್ಚ್ ಹೇಳಿದೆ
ಈ ಚರ್ಚ್ ತನ್ನ ಪ್ರಕಟಣೆಯಲ್ಲಿ ಏಪ್ರಿಲ್ 19, 1979 ರಂದು ತನ್ನ ಮೊದಲ ಸೇವೆಯಿಂದ ಇಲ್ಲಿಯವರೆಗೂ ಯುಎಇ(UAE) ನಾಯಕತ್ವವು ನೀಡಿದ ನಿರಂತರ ಬೆಂಬಲವನ್ನು ಶ್ಲಾಘಿಸಿದ್ದು, ಸುಮಾರು 4 ಮಿಲಿಯನ್ ಸದಸ್ಯತ್ವವನ್ನು ಹೊಂದಿರುವ ಇಎಸ್‌ಐ, ಭಾರತದ ಎರಡನೇ ಅತಿದೊಡ್ಡ ಕ್ರಿಶ್ಚಿಯನ್ ಚರ್ಚ್ ಆಗಿದೆ.
ನಾವು ದೇವರ ಷರತ್ತುಗಳಿಲ್ಲದ ಮತ್ತು ತ್ಯಾಗದ ಪ್ರೀತಿಯನ್ನು ಹಂಚಿಕೊಳ್ಳಲು ಇಲ್ಲಿದ್ದೇವೆ, ಮತ್ತು ಈ ಪೂಜಾ ಸ್ಥಳವು ಸಮುದಾಯಕ್ಕೆ ಎಲ್ಲಾ ಸಮಯದಲ್ಲೂ ನಮ್ಮ ಸೇವೆಗಳನ್ನು ನೀಡುತ್ತದೆ ಎಂದು ನಾವು ಈ ಮೂಲಕ ಭರವಸೆ ನೀಡುತ್ತೇವೆ ಎಂದು ಪ್ಯಾರಿಷ್ ಚರ್ಚ್‌ನ ಧರ್ಮಗುರು ರೆ. ಲಾಲ್ಜಿ ಎಂ. ಫಿಲಿಪ್ (M Philip) ಹೇಳಿದರು.
ಭಾನುವಾರದ ಮೇ5 ರ ಸಮಾರಂಭದಲ್ಲಿ ಚರ್ಚ್ ನೀಡಿದ ವೈಯಕ್ತಿಕ ಹಾಜರಾತಿಯ ಆಹ್ವಾನಿತರು ಮತ್ತು ಪ್ರವೇಶ ಪಾಸ್ ಪಡೆದವರಿಗೆ ಮಾತ್ರ ಇರುತ್ತದೆ.
ಧರ್ಮದ ಹಿತೈಷಿಗಳು ಮತ್ತು ಅನುಯಾಯಿಗಳು ಈ ಚರ್ಚ್ (Church) ಸಮರ್ಪಣೆ ಸಮಾರಂಭದಲ್ಲಿ ಸೇರಲು ಆನ್‌ಲೈನ್ ನೇರ ಪ್ರಸಾರ ಲಭ್ಯವಿದ್ದು, ಎಲ್ಲಾ ಭಕ್ತರಿಗೆ ನಿಯಮಿತ ಸೇವೆಯು ಮೇ 5 ರಂದು ಪ್ರಾರಂಭವಾಗುತ್ತದೆ.
BAPS ಮಂದಿರ ಬಗ್ಗೆ
ವಿದೇಶದಲ್ಲಿ ನಿರ್ಮಿಸಲಾಗಿರುವ ಏಷ್ಯಾದ ಅತಿದೊಡ್ಡ ದೇಗುಲ ಎನ್ನುವ ಹೆಗ್ಗಳಿಕೆ ಈ ದೇಗುಲಕ್ಕೆ ದೊರೆತಿದೆ. ಅಲ್ಲದೇ ದುಬೈನಲ್ಲಿ ನಿರ್ಮಾಣ ಆಗ್ತಿರುವ ಮೊಟ್ಟ ಮೊದಲ ದೇಗುಲವಿದು.ಅಬುಧಾಬಿ(Abu Dhabi) ಮತ್ತು ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದಲ್ಲಿ ಈ ದೇಗುಲವಿದೆ.
ದುಬೈಯಿಂದ 50 ನಿಮಿಷ, ಅಬುಧಾಬಿಯಿಂದ 35 ನಿಮಿಷವಷ್ಟೇ ಈ ದೇವಾಲಯ ದೂರ.ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ ಅಂದ್ರೆ ಬಾಪ್ಸ್(BAPS) ಈ ಮಂದಿರವನ್ನು ನಿರ್ಮಿಸಿದ್ದು, ಇದು ಯುಎಇ ಮೊದಲ ಹಿಂದೂ ದೇವಾಲಯ ಎನಿಸಿದೆ.
ಪ್ರಧಾನಿ ನರೇಂದ್ರ ಮೋದಿ(Narendra Modi) 2024ರ ಫೆಬ್ರವರಿ 14 ವಸಂತ ಪಂಚಮಿಯ ದಿನದಂದು ಈ ದೇವಾಲಯ ಉದ್ಘಾಟಿಸಿದ್ದರು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.