ವಿಂಗಡಿಸದಸಂಸ್ಕೃತಿ, ಪರಂಪರೆ

ಯುಎಇಯಲ್ಲಿ ಹಿಂದೂ ದೇಗುಲ; ಮಂದಿರ ಉದ್ಘಾಟಿಸಲಿದ್ದಾರೆ ಮೋದಿ

ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರ(Ram Mandir) ಲೋಕಾರ್ಪಣೆಗೊಂಡ ಬೆನ್ನಲ್ಲೇ ಅರಬ್ಬರ ನಾಡು ಯುಎಐಯಲ್ಲಿಯೂ(U.A.E) ಭವ್ಯ ಹಿಂದೂ ದೇವಾಲಯವೊಂದು( Hindu Temple) ಉದ್ಘಾಟನೆಗೆ ಸಿದ್ಧವಾಗಿದೆ.

ಇದನ್ನು ಹಿಂದೂ – ಮುಸ್ಲಿಂ ಭಾವೈಕ್ಯತೆ ಸಂಕೇತ ಅಂತಲೇ ವಿದೇಶಿಗರು ಬಣ್ಣಿಸುತ್ತಿದ್ದಾರೆ. ಮಾತ್ರವಲ್ಲದೇ, ಭಾರತ(India) ಮತ್ತು ದುಬೈಗೂ( Dubai) ಬೆಸುಗೆಯಂತಿರುವ ಈ ಮಂದಿರಕ್ಕೂ ನಮ್ಮ ದೇಶಕ್ಕೂ ನಂಟಿದೆ.

Hindu Temple

ವಿದೇಶದಲ್ಲಿ ನಿರ್ಮಿಸಲಾಗಿರುವ ಏಷ್ಯಾದ ಅತಿದೊಡ್ಡ ದೇಗುಲ ಎನ್ನುವ ಹೆಗ್ಗಳಿಕೆ ಈ ದೇಗುಲಕ್ಕೆ ದೊರೆತಿದೆ. ಅಲ್ಲದೇ ದುಬೈನಲ್ಲಿ ನಿರ್ಮಾಣ ಆಗ್ತಿರುವ ಮೊಟ್ಟ ಮೊದಲ ದೇಗುಲವಿದು.

ಅಬುಧಾಬಿ(Abudabi) ಮತ್ತು ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದಲ್ಲಿ ಈ ದೇಗುಲವಿದೆ. ದುಬೈಯಿಂದ 50 ನಿಮಿಷ, ಅಬುಧಾಬಿಯಿಂದ 35 ನಿಮಿಷವಷ್ಟೇ ಈ ದೇವಾಲಯ ದೂರ.

ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ ಅಂದ್ರೆ ಬಾಪ್ಸ್(BAPS) ಈ ಮಂದಿರವನ್ನು ನಿರ್ಮಿಸಿದ್ದು, ಇದು ಯುಎಇ ಮೊದಲ ಹಿಂದೂ ದೇವಾಲಯ ಎನಿಸಿದೆ.

ಪ್ರಧಾನಿ ನರೇಂದ್ರ ಮೋದಿ(Narendra Modi) 2024ರ ಫೆಬ್ರವರಿ 14 ವಸಂತ ಪಂಚಮಿಯ ದಿನದಂದು ಈ ದೇವಾಲಯ ಉದ್ಘಾಟಿಸಲಿದ್ದಾರೆ.

UAE

ಬೋಚಸನ್ಯಾಸಿ ಅಕ್ಷರ ಪುರುಷೋತ್ತಮ್‌ ಸ್ವಾಮಿನಾರಾಯಣ ಸಂಸ್ಥಾ ಬಾಪ್ಸ್, ಅಂತಲೇ ಗುರುತಿಸಿಕೊಂಡಿರುವ ಇದು ವಿಶ್ವದಾದ್ಯಂತ ಪಸರಿಸಿರುವ ಆಧ್ಯಾತ್ಮಿಕ ಸಂಸ್ಥೆ.

18ನೇ ಶತಮಾನ ಕೊನೆಯಲ್ಲಿ ಭಗವಾನ್‌ ಸ್ವಾಮಿನಾರಾಯಣ ಯುಗವಾಗಿದ್ದು, 1907ರಲ್ಲಿ ಶಾಸ್ತ್ರೀಜಿ ಮಹಾರಾಜ್‌ ಬಾಪ್ಸ್ ಸಂಸ್ಥೆ ಸ್ಥಾಪಿಸಿದರು.

ಪ್ರಸ್ತುತ ಪವಿತ್ರ ಮಹಂತ್‌ ಸ್ವಾಮಿ ಮಹಾರಾಜ್‌ ನಾಯಕತ್ವದಲ್ಲಿ ವಿಶ್ವದಾದ್ಯಂತ 1,200 ಮಂದಿರಗಳು, 3,850 ಕೇಂದ್ರಗಳು ಮತ್ತು 55 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದೆ.

Aksharadhama

ಅಬುಧಾಬಿಯಲ್ಲಿರುವ ಬಾಪ್ಸ್ ಹಿಂದೂ ಮಂದಿರ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ದೇಗುಲದಲ್ಲಿ ರೂಪುಗೊಂಡಿರುವ ಶಿಲ್ಪಗಳನ್ನು ಕೆತ್ತಿರುವವರು ನಮ್ಮ ರಾಜಸ್ಥಾನದ ಶಿಲ್ಪಿಗಳು( Rajastan sculptor).

ಹೌದು, ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ಕಳೆದ 5 ವರ್ಷಗಳಿಂದ ದೇಗುಲದ ಮೇಲೆ ಮೂಡಿರುವ ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತಿ ಸೌಂದರ್ಯ ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ.

2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ.

Swami Narayana Temple

ರಾಜಸ್ಥಾನದ ಮಾರ್ಬಲ್ಸ್, ಅಮೃತಶಿಲೆ ಹಾಗೂ ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯ ನಿರ್ಮಿಸಲಾಗಿದೆ.

ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯೂ ರಾಮಾಯಣ, ಶಿವಪುರಾಣ, ಭಾಗವತ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ.

ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಯುಎಇಗೆ ಕಳುಹಿಸಲಾಗಿದೆ. ದೇವಾಲಯದಲ್ಲಿ ಎರಡು ಶಿಖರ, 12 ಗೋಪುರಗಳಿವೆ. ಎಲ್ಲ ಕಲಾಕೃತಿಗಳ ಹಿಂದೆಯೂ ರಾಜಸ್ಥಾನ ಕಲಾವಿದರ ಕುಶಲತೆ ಇದೆ.

Narendra Modi

2015ರಲ್ಲಿ ಕ್ರೌನ್‌ ಪ್ರಿನ್ಸ್‌ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ (Mohammad Bin Zayed), ಮಂದಿರ ನಿರ್ಮಿಸಲು 14 ಎಕರೆ ಭೂಮಿ ಉಡುಗೊರೆ ನೀಡಿದ್ದರು.

ಈ ಘೋಷಣೆ ಮಾಡಿದ ಬಳಿಕ ಪ್ರಿನ್ಸ್‌ ಶೇಖ್‌ ಭಾರತಕ್ಕೆ ಆಗಮಿಸಿ ಇಲ್ಲಿನ ಅಕ್ಷರಧಾಮ ದೇಗುಲ ವೀಕ್ಷಿಸಿದರು. ವ್ಯವಸ್ಥೆ, ಅಚ್ಚುಕಟ್ಟು, ವಿನ್ಯಾಸ, ಪಾರ್ಕಿಂಗ್‌ ವ್ಯವಸ್ಥೆ, ಕಲೆಗೆ ಮಾರು ಹೋದ ಅವರು ಇದೇ ಮಾದರಿಯಲ್ಲೇ ಅಬುಧಾಬಿಯಲ್ಲೂ(Abhu Dhabhi) ದೇಗುಲ ನಿರ್ಮಾಣ ಮಾಡಿ ಎನ್ನುವ ಆಶಯ ವ್ಯಕ್ತಪಡಿಸಿದ್ರು.

ಅದಕ್ಕೆ ಬಾಪ್ಸ್ ಸಂಸ್ಥೆ ಹೆಚ್ಚುವರಿಯಾಗಿ ಜಾಗ ಕೇಳಿದಾಗ ಮತ್ತೆ 10 ಎಕರೆ ಸೇರ್ಪಡೆ ಮಾಡಿ ಒಟ್ಟು 24 ಎಕರೆ ಭೂಮಿಯನ್ನು ಅಬುಧಾಬಿ ಆಡಳಿತ ನೀಡಿದೆ..

Rajastana Sculptor

ಬಾಫ್ಸ್‌ ನಿರ್ಮಿತ ಸ್ವಾಮಿನಾರಾಯಣ ಮಂದಿರ 24 ಎಕರೆ ವ್ಯಾಪ್ತಿಯಲ್ಲಿದೆ. 180 ಅಡಿ ಅಗಲ, 262 ಅಡಿ ಉದ್ದ, 108 ಅಡಿ ಎತ್ತರದಲ್ಲಿದೆ.

2 ಗುಮ್ಮಟಗಳು, 7 ಶಿಖರಗಳು, 12 ಸಾಮ್ರಾನ್‌ ಮತ್ತು 410 ಸ್ತಂಭಗಳಿವೆ. 7 ಗೋಪುರಗಳಿದ್ದು, ಮಂದಿರವನ್ನು 40 ಸಾವಿರ ಕ್ಯೂಬಿಕ್‌ ಮೀಟರ್‌ ಅಮೃತಶಿಲೆ, 1,80,000 ಘನ ಮೀಟರ್‌ ಮರಳುಗಲ್ಲು ಮತ್ತು 18 ಲಕ್ಷ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

ಅಕ್ಷರಧಾಮ ಮಾದರಿಯಲ್ಲೇ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇದಕ್ಕೆ ರಾಜಸ್ಥಾನ ಮರಳುಕಲ್ಲು ಮತ್ತು ಯುರೋಪಿಯನ್‌ ಮಾರ್ಬಲ್‌ ಬಳಸಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ದೇಗುಲ ನಿರ್ಮಾಣಕ್ಕೆ ಎಲ್ಲೂ ಉಕ್ಕು, ಕಬ್ಬಿಣ ಬಳಸಿಲ್ಲ. ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾಗಿದೆ.

ಮೂರು ವರ್ಷಗಳಲ್ಲಿ 700ಕ್ಕೂ ಹೆಚ್ಚು ಕಂಟೈನರ್‌ಗಳಲ್ಲಿ 20 ಸಾವಿರ ಟನ್‌ಗಳಿಗಿಂತ ಹೆಚ್ಚು ಕಲ್ಲು ಮತ್ತು ಅಮೃತಶಿಲೆ ಅಬುಧಾಬಿಗೆ ರವಾನಿಸಲಾಗಿದೆ.

ಗಂಗಾ-ಯಮುನಾ ನದಿ(Ganga,Yamuna River) ಪ್ರತಿನಿಧಿಸುವ ಎರಡು ನೀರಿನ ತೊರೆಗಳಿವೆ. ಸರಸ್ವತಿ ನದಿಯನ್ನು ಪ್ರತಿನಿಧಿಸುವ ಬೆಳಕಿನ ಕಿರಣ ಮಂದಿರ ರಚನೆಯ ಅಡಿಯಲ್ಲಿ ಅಳವಡಿಕೆಯಾಗಿದೆ..

BAPS

ರಾಜಸ್ಥಾನ ಮತ್ತು ಗುಜರಾತ್‌ನ(Gujarat) 2 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಕಳೆದ ಮೂರು ವರ್ಷಗಳ ಕಾಲ ಈ ಮಂದಿರ ನಿರ್ಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ನವಿಲುಗಳು, ಆನೆಗಳು, ಕುದುರೆಗಳು, ಒಂಟೆಗಳು, ಚಂದ್ರನ ಹಂತಗಳು ಮತ್ತು ಡೋಲು ಬಾರಿಸುವ ಅಥವಾ ಸಿತಾರ್‌ ನುಡಿಸುವ ಸಂಗೀತಗಾರರ ಸಂಕೀರ್ಣ ವಿನ್ಯಾಸಗಳನ್ನು ಕೆತ್ತಲಾಗಿದೆ.

ರಾಮಾಯಣ, ಶಿವಪುರಾಣ, ಭಾಗವತ, ಮಹಾಭಾರತದ ಕೆತ್ತನೆಗಳು ಮತ್ತು ಜಗನ್ನಾಥಜಿ, ಸ್ವಾಮಿನಾರಾಯಣ, ಪದ್ಮಾವತಿ-ವೆಂಕಟೇಶ್ವರ ಮತ್ತು ಅಯ್ಯಪ್ಪನಿಗೆ ಸಂಬಂಧಿಸಿದ ಚರಿತ್ರೆ, ಪುರಾಣ ಕಥೆಗಳ ಕೆತ್ತನೆ ಇದೆ.

ಈ ಸ್ವಾಮಿ ನಾರಾಯಣ ಮಂದಿರದಲ್ಲಿಏಕಕಾಲಕ್ಕೆ 8 ಸಾವಿರದಿಂದ 10 ಸಾವಿರ ಜನರು ದರ್ಶನ ಪಡೆಯಬಹುದು.ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದೇಶಾದ್ಯಂತ 8 ಸಾವಿರ ಮಂದಿಗೆ ಮಾತ್ರ ಅಧಿಕೃತವಾಗಿ ಆಹ್ವಾನಿಸಿ, ಪ್ರವೇಶಾವಕಾಶ ನೀಡಲಾಗಿತ್ತು.

ಇದೇ ಮಾದರಿಯಲ್ಲಿ ಅಬುಧಾಬಿಯ ಸ್ವಾಮಿನಾರಾಯಣ ಮಂದಿರದಲ್ಲಿಯೂ ಉದ್ಘಾಟನೆಗೆ ನಿರ್ದಿಷ್ಟ ಮಂದಿಗೆ ಮಾತ್ರ ಆಹ್ವಾನವನ್ನು ನೀಡಲಾಗಿದೆ.

ಪ್ರಧಾನಿ ಮೋದಿ ಸೇರಿದಂತೆ ನಾನಾ ಗಣ್ಯರು ಭಾಗವಹಿಸುತ್ತಿದ್ದು, ಭದ್ರತೆ ದೃಷ್ಟಿಯಿಂದ ಆಹ್ವಾನಿತರ ಸಂಖ್ಯೆಯನ್ನು 1,500ಕ್ಕೆ ಸೀಮಿತಗೊಳಿಸಲಾಗಿದೆ.

ಫೆ.14ರಂದು ನಡೆಯುವ ಬಾಫ್ಸ್‌ ಮಂದಿರದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಯುಎಇ 7 ಎಮಿರೇಟ್ಸ್‌ ಅಂದರೆ ಅಬುಧಾಬಿ, ದುಬೈ, ಶಾರ್ಜಾ, ಅಜ್ಮನ್‌, ಉಮ್‌ಆಲ್‌ ಕ್ವೈನ್‌, ರಸ್‌ ಆಲ್‌ ಕೈಮಾ, ಫುರ್ಜಾರಿಯಾಗಳ ಅನಿವಾಸಿ ಭಾರತೀಯರು ಪಾಲ್ಗೊಳ್ಳಲಿದ್ದಾರೆ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಅತ್ಯಪೂರ್ವ ರಾಮ ಮಂದಿರಕ್ಕೆ ದೇಶಾದ್ಯಂತ ಭಕ್ತಾದಿಗಳು ಇಟ್ಟಿಗೆ ಕೊಡುಗೆ ನೀಡುವ ಮೂಲಕ ದೇವರ ಸೇವೆ ಮಾಡಿದರು.

ಇದೇ ಮಾದರಿಯಲ್ಲಿ ಅಬುಧಾಬಿಯ ನಾಗರಿಕರು ಮತ್ತು ಅಬುಧಾಬಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು, ವಿದೇಶಿಗರು ಇಟ್ಟಿಗೆ ಕೊಡುಗೆಯಾಗಿ ನೀಡಿದ್ದಾರೆ. ಒಂದು ಇಟ್ಟಿಗೆಗೆ 100 ದಿರಮ್‌ನಂತೆ ಸಾವಿರಾರು ಇಟ್ಟಿಗೆಗಳನ್ನು ದಾನರೂಪದಲ್ಲಿ ನೀಡಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button