ವಿಂಗಡಿಸದ

“ಅತಿಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ನಗರ” ಬೆಂಗಳೂರಿಗೆ ಮೊದಲ ಸ್ಥಾನ

“ಬೆಂಗಳೂರು” ಏಷ್ಯಾದಲ್ಲಿನ ಚೀನಾ ಹಾಗೂ ಜಪಾನ್‌ ದೇಶಗಳ ನಗರಗಳನ್ನು ಹಿಂದಿಕ್ಕಿ, ಅತಿಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಇಲ್ಲಿ ವಾಹನ ಸವಾರರು 10 ಕಿ.ಮೀ. ಸಂಚಾರಕ್ಕೆ ಬರೋಬ್ಬರಿ 28 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಮೂಲಕ ಟ್ರಾಫಿಕ್‌ ಜಾಮ್ ಸಿಟಿಗಳಲ್ಲಿ ಇಡೀ ಏಷ್ಯಾ ಖಂಡಕ್ಕೆ ಬೆಂಗಳೂರೇ ಮೊದಲ ಸ್ಥಾನದಲ್ಲಿದೆ ಎಂದು ಲಂಡನ್ ಮೂಲದ ‘ಟಾಮ್ ಟಾಮ್’ (Tom Tom traffic index) ಸಂಸ್ಥೆಯು 2023ನೇ ಸಾಲಿನ ವರದಿಯಲ್ಲಿ ಬಿಡುಗಡೆ ಮಾಡಿದೆ.

ಬೆಂಗಳೂರು ಏಷ್ಯಾ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ವಿಶ್ವದ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಸುಧಾರಿಸಿದೆ.

ಇನ್ನು ಕಳೆದ 2022ಕ್ಕೆ ಹೋಲಿಕೆ ಮಾಡಿದರೆ ಟ್ರಾಫಿಕ್‌ ಜಾಮ್‌ನಲ್ಲಿ ಕೇವಲ ಶೇ.1 ಪರ್ಸೆಂಟ್ ಮಾತ್ರ ಟ್ರಾಫಿಕ್ ಜಾಮ್ ಉಂಟಾಗುವ ಪ್ರಮಾಣ ಆಗಿದ್ದು,ಈ ಪ್ರಮಾಣದಿಂದ ವಾಹನ ಸವಾರರಿಗೆ ಅಂತಹ ಬದಲಾವಣೆಯೇನೂ ಕಂಡುಬಂದಿಲ್ಲ.

ಬೆಂಗಳೂರಿನ ಕೇಂದ್ರ ವಾಣಿಜ್ಯ ಪ್ರದೇಶ (CBD) ವಿಭಾಗದಲ್ಲಿ ಅತಿ ಹೆಚ್ಚು ದಟ್ಟಣೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪುಣೆ, ನವದೆಹಲಿ, ಮುಂಬೈ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

“ಟಾಮ್ ಟಾಮ್” ಸಂಸ್ಥೆಯ ಪ್ರತಿನಿಧಿಗಳು 55 ದೇಶಗಳ 387 ನಗರಗಳ ಅಧ್ಯಯನ ನಡೆಸಿ, ವರದಿಯನ್ನು ಬಿಡುಗಡೆ ಮಾಡಿದೆ.

ಈ ಪೈಕಿ ಇಂಗ್ಲೆಂಡಿನ ಲಂಡನ್, ಐರ್ಲೆಂಡಿನ ಡಬ್ಲಿನ್ ಹಾಗೂ ಕೆನಡಾದ ಟೊರ‍ಂಟೊ, ಇಟಲಿಯ ಮಿಲನ್ ಹಾಗೂ ಪೆರು ದೇಶದ ಲಿಮಾ ನಗರಗಳು ಕ್ರಮವಾಗಿ ಪ್ರಥಮ, ದ್ವಿತೀಯ, ಮೂರನೇ, ನಾಲ್ಕನೇ ಹಾಗೂ ಐದನೇ ಸ್ಥಾನಗಳನ್ನು ಗಳಿಸಿವೆ.

ಬೆಂಗಳೂರು ಆರನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಸ್ವಲ್ಪ ಪ್ರಮಾಣದಲ್ಲಿ ಟ್ರಾಫಿಕ್ ಕಡಿಮೆ ಆಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಕೈಗೊಂಡ ಕೆಲವು ಸುಧಾರಣೆಗಳೇ ಇದಕ್ಕೆ ಕಾರಣ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button