ರಾಜ್ಯಾದ್ಯಂತ ಓಲಾ, ಉಬರ್ ಸೇರಿದಂತೆ ಇತರ ಎಲ್ಲಾ ಮಾದರಿ ಟ್ಯಾಕ್ಸಿ ಸೇವೆಗಳಿಗೆ ಏಕರೂಪದ ಪ್ರಯಾಣ ದರ ನಿಗದಿಗೊಳಿಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಪೀಕ್ ಅವರ್ (Peak Hour) ಗಳಲ್ಲಿ ಬೇಕಾಬಿಟ್ಟಿ ದರ ಏರಿಸಿ ಸಾರ್ವಜನಿಕರ ಬಳಿ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದ ಟ್ಯಾಕ್ಸಿ ಆ್ಯಪ್ ಆಧಾರಿತ (Taxi App Based) ಅಗ್ರಿಗೇಟರ್‌ಗಳಾದ ಓಲಾ(Ola), ಊಬರ್ (Uber), ಇನ್ನಿತರ ಸಿಟಿ ಟ್ಯಾಕ್ಸಿಗಳಿಗೆ (City Taxi) ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾರಿಗೆ ಇಲಾಖೆಯು ಶನಿವಾರ (ಫೆ.3) ದಂದು ಆದೇಶದ ಪ್ರಕಾರ, ಎಲ್ಲಾ ಸಿಟಿ ಟ್ಯಾಕ್ಸಿಗಳ ಪ್ರಯಾಣ ದರವು ಏಕರೂಪದ್ದಾಗಿದ್ದು, ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಯಾಗಿವೆ.
ವಾಹನಗಳ ಮೌಲ್ಯಕ್ಕನುಗುಣವಾಗಿ ಪ್ರತೀ 1 ಕಿ.ಮೀ ಗೆ ತಲಾ 24 ರೂ ದರವನ್ನು ನಿಗದಿ ಮಾಡಲಾಗಿದೆ. ಈ ಏಕರೂಪ ದರವನ್ನು ಓಲಾ, ಉಬರ್ ಇತರ ಟ್ಯಾಕ್ಸಿ ಕಂಪನಿಗಳು ಈ ನಿರ್ಧಾರವನ್ನು ಸ್ವಾಗತಿಸಿವೆ.
ವಾಹನಗಳ ಮಾದರಿಗನುಗುಣವಾಗಿ ಬೆಲೆ ನಿರ್ಧಾರ; ಯಾವುದಕ್ಕೆ ಎಷ್ಟು ಬೆಲೆ?
●10 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ವೆಚ್ಚದ ವಾಹನಗಳು: ಕನಿಷ್ಠ ದರ 4 ಕಿ.ಮೀ.ವರೆಗೆ 100 ರೂ. ನಂತರದ ಪ್ರತಿ ಕಿ.ಮೀಗೆ 24 ರೂ.
●10-15 ಲಕ್ಷ ರೂ. ಮೌಲ್ಯದ ವಾಹನಗಳು: ಕನಿಷ್ಠ ದರ 4 ಕಿ.ಮೀ.ವರೆಗೆ 115 ರೂ. ನಂತರದ ಪ್ರತಿ ಕಿ.ಮೀ.ಗೆ 28 ರೂ.
● 15 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ವಾಹನ: ಕನಿಷ್ಠ ದರ 4 ಕಿ.ಮೀ.ವರೆಗೆ 130 ರೂ. : ನಂತರದ ಪ್ರತಿ ಕಿ.ಮೀ.ಗೆ 32 ರೂ.
ಏಕರೂಪ ದರದ ಜೊತೆಗೆ ಕೆಲವು ನಿಯಮಗಳೂ ಅನ್ವಯ:
●ಲಗೇಜ್ ದರ 120 ಕೆ.ಜಿ ವರೆಗೆ ವಿನಾಯಿತಿ. ಅದಕ್ಕಿಂತ ಹೆಚ್ಚಿದ್ದರೆ ಪ್ರತಿ 30 ಕೆಜಿಗೆ 7 ರೂ. ನಿಗದಿ ಮಾಡಲಾಗಿದೆ.
● ಕಾಯುವಿಕೆ ದರ ಮೊದಲು 5 ನಿಮಿಷ ಉಚಿತ. ನಂತರ ಪ್ರತಿ ನಿಮಿಷಕ್ಕೆ 1 ರೂ. ನಿಗದಿ.
●ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಮಾಡುವ ಟ್ಯಾಕ್ಸಿಗಳಿಗೆ ಪ್ರಯಾಣಿಕರಿಂದ 10% ಹೆಚ್ಚುವರಿ ದರ ಪಡೆಯಲು ಅನುಮತಿ ನೀಡಲಾಗಿದೆ.
●ಜಿಎಸ್‌ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯಲು ಅನುಮತಿಸಲಾಗಿದೆ.
ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.