Moreವಿಂಗಡಿಸದ

ಸೌದಿ ಅರೇಬಿಯಾ ಭಾರತೀಯರಿಗೆ “96 ಗಂಟೆಗಳ ನಿಲುಗಡೆ ವೀಸಾ” ಘೋಷಿಸಿದೆ:

ಸೌದಿ ಅರೇಬಿಯಾವು (Saudi Arabia) ಭಾರತೀಯ ಪ್ರಯಾಣಿಕರಿಗೆ 96 ಗಂಟೆಗಳ ನಿಲುಗಡೆ ವೀಸಾವನ್ನು (Stopover Visa) ಪರಿಚಯಿಸಿದೆ.ಇದು ಭಾರತ ಮತ್ತು ಸೌದಿಯ ನಡುವಿನ ಪ್ರಯಾಣದ ಅವಕಾಶಗಳನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ.

ಉಮ್ರಾ (Umrah) ಭೇಟಿಯನ್ನು ಸುಗಮಗೊಳಿಸುವ ಸೌದಿ ಅರೇಬಿಯಾದ ವಿಷನ್ 2030ರ ಉಪಕ್ರಮದ ಭಾಗವಾಗಿ ಸೌದಿ ಪ್ರವಾಸೋದ್ಯಮ (Saudi Arabia Tourism) ಪ್ರಾಧಿಕಾರದ ಏಷ್ಯಾ ಪೆಸಿಫಿಕ್ ಅಧ್ಯಕ್ಷ ಅಲ್ಹಸನ್ ಅಲ್ದಬ್ಬಾಗ್ (Alhasan Aldabbagh) ಅವರು ಇತ್ತೀಚಿನ ಚರ್ಚೆಯ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.

ಈ ಉಪಕ್ರಮವು ಸೌದಿ ಅರೇಬಿಯಾದ ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಮಾರುಕಟ್ಟೆಯಾದ ಭಾರತದ (India) ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಸೌದಿ ಅರೇಬಿಯಾಕ್ಕೆ ಸುವ್ಯವಸ್ಥಿತ ವೀಸಾ ಪ್ರವೇಶಕ್ಕಾಗಿ ಮುಂಬರುವ ವರ್ಷದಲ್ಲಿ ಮತ್ತಷ್ಟು ವಿಸ್ತರಣೆಯ ಯೋಜನೆಯೊಂದಿಗೆ ಭಾರತದಲ್ಲಿ ಈಗಾಗಲೇ 10 VFS ಕಛೇರಿಗಳನ್ನು ಸ್ಥಾಪಿಸಲಾಗಿದೆ.

ಭಾರತೀಯ ಪ್ರಯಾಣಿಕರು ಈ ವೀಸಾ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉಮ್ರಾವನ್ನು ಮಾಡಬಹುದು ಎಂದು ಸೌದಿ ಅರೇಬಿಯಾದ ಹಜ್ (Hajj) ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರು ನವದೆಹಲಿಯಲ್ಲಿ ಹೇಳಿದರು.

ಈ ಉಪಕ್ರಮದ ಪ್ರಮುಖ ಅಂಶವೆಂದರೆ ಇದು ಸೌದಿ ಏರ್‌ಲೈನ್ಸ್ ಅಥವಾ ಸೌದಿಯ ಕಡಿಮೆ-ವೆಚ್ಚದ ಖಾಸಗಿ ವಿಮಾನಯಾನ ಸಂಸ್ಥೆಯಾದ ಫ್ಲೈನಾಸ್ (Flynas) ಮೂಲಕ ಪ್ರಯಾಣಿಸುವ ವ್ಯಕ್ತಿಗಳಿಗೆ 96-ಗಂಟೆಗಳ ಉಚಿತ ನಿಲುಗಡೆ ವೀಸಾವನ್ನು ನೀಡುತ್ತದೆ.

ಇದರೊಂದಿಗೆ, US, UK, ಅಥವಾ ಷೆಂಗೆನ್ ವೀಸಾವನ್ನು (Schengen visa) ಹೊಂದಿರುವ ಪ್ರಯಾಣಿಕರು ಸೌದಿ ಅರೇಬಿಯಾದ ಇ-ವೀಸಾ (E-Visa) ಅಥವಾ ಆಗಮನದ ವೀಸಾಕ್ಕೆ ಅರ್ಹರಾಗಿರುತ್ತಾರೆ.

ಸೌದಿ ಪ್ರವಾಸೋದ್ಯಮ ಪ್ರಾಧಿಕಾರದಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ ಅಧ್ಯಕ್ಷ ಅಲ್ಹಸನ್ ಅಲ್ದಬ್ಬಾಗ್ ಅವರು SATTE 2024 ಟ್ರಾವೆಲ್ ಈವೆಂಟ್ ನಲ್ಲಿ ಈ ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಲ್ದಬಾಗ್ ಅವರು “ ಭಾರತವು ಸೌದಿಯ ಪ್ರಮುಖ ಮಾರುಕಟ್ಟೆಯಾಗಿದೆ. ಕಳೆದ ವರ್ಷ ಭಾರತದಿಂದ 1.5 ಮಿಲಿಯನ್ ಪ್ರಯಾಣಿಕರು ಭೇಟಿ ನೀಡಿದ್ದಾರೆ.

ಇದು 50% ಪ್ರವಾಸೋದ್ಯಮ ಅಭಿವೃದ್ಧಿಯನ್ನು ಪ್ರಸ್ತುತ ಪಡಿಸುತ್ತದೆ. 2030ರಲ್ಲಿ 7.5 ಮಿಲಿಯನ್ ಭಾರತೀಯ ಪ್ರಯಾಣಿಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.” ಎಂದರು.

ಈ ಉಪಕ್ರಮವು ಸೌದಿ ಅರೇಬಿಯಾ ಮತ್ತು ಭಾರತದ ನಡುವೆ ನಿಕಟ ಸಂಬಂಧಗಳನ್ನು ಬೆಳೆಸುವಲ್ಲಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪ್ರಮುಖ ಕ್ಷಣವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button