ಕಾರು ಟೂರುದೂರ ತೀರ ಯಾನವಿಂಗಡಿಸದ

ಮಲೆನಾಡ ಹೆಬ್ಬಾಗಿಲಿನಲ್ಲಿ ಕಣ್ಮನ ಸೆಳೆಯುವ ತಾಣಗಳಿವು

ಶಿವಮೊಗ್ಗ(Shivamogga)ನೈಸರ್ಗಿಕ ಸೊಬಗಿನ ತಾಣ. ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಜಿಲ್ಲೆ . ಪಶ್ಚಿಮ ಘಟ್ಟಗಳ ಸಾಲು(Western Ghats), ಸುಂದರ ಕಾಡು, ಸಮೃದ್ಧ ಸಸ್ಯವರ್ಗ, ಜಲಪಾತಗಳು .

ಬರ್ಕಣ ಜಲಪಾತ (Barkana Falls)

ಆಗುಂಬೆ(Agumbe) ಬಳಿಯ ಒಂದು ಸುಂದರವಾದ ಜಲಪಾತ, ಮುಂಗಾರು ನಂತರದ ಭೇಟಿಗೆ ಅತ್ಯುತ್ತಮ ಸಮಯ ಮತ್ತು ಸಾಕಷ್ಟು ಚಾರಣ ಪ್ರಿಯರಿಗೆ (Trekking)ಸಾಹಸಮಾಡಲು ಆವಕಾಶವಿದೆ.

Must visit places in Shivamogga


ಕುಂಚಿಕಲ್ ಜಲಪಾತ (Kunchikal Falls)

ಶಿವಮೊಗ್ಗದಿಂದ 100 ಕಿ.ಮೀ ದೂರದಲ್ಲಿರುವ ಮಾಸ್ತಿಕಟ್ಟೆ (Mastikatte) ಬಳಿ 353 ಮೀಟರ್ ಎತ್ತರದ ಜಲಪಾತವಾಗಿದೆ . ಕುಂಚಿಕಲ್ ಜಲಪಾತವು ವರಾಹಿ (Varahi)ನದಿಯಿಂದ ರೂಪುಗೊಂಡಿದೆ ಮತ್ತು ಇದು ದಟ್ಟವಾದ ಕಾಡಿನೊಳಗೆ ಇದೆ.

Must visit places in Shivamogga


ಅಚಕನ್ಯಾ ಜಲಪಾತ (Achakanya Falls)

ಹೊಸನಗರಕ್ಕೆ(Hosanagar) ಹೋಗುವ ದಾರಿಯಲ್ಲಿ ತೀರ್ಥಹಳ್ಳಿಯಿಂದ 10 ಕಿ.ಮೀ ದೂರದಲ್ಲಿ ಅಚಕನ್ಯಾ ಜಲಪಾತವು ಪ್ರವಾಸಿಗರನ್ನು ಕರೆಯುತ್ತದೆ. ಶರಾವತಿ ನದಿಯು ಈ ಜಲಪಾತದಲ್ಲಿ ಅದ್ಭುತವಾಗಿ ಧುಮುಕುತ್ತದೆ.

Must visit places in Shivamogga

ಕವಲೇದುರ್ಗ ಕೋಟೆ(Kavaledurga Fort)

ಚಾರಣ ಪ್ರಿಯರ ನೆಚ್ಚಿನ ತಾಣಗಳಲ್ಲಿ ಕವಲೇದುರ್ಗ ಕೂಡಾ ಒಂದು. ಇದು ಶಿವಮೊಗ್ಗದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಕಾಡಿನ ನಡುವಣ ಬೆಟ್ಟದ ತುದಿಯಲ್ಲಿರುವ ಕೋಟೆ ಇದು. ಚಾರಣದ ಮೂಲಕ ಈ ಕೋಟೆಯ ತುದಿಯನ್ನು ತಲುಪಬೇಕು. ಇಲ್ಲಿ ಸಾಕಷ್ಟು ದೇವಸ್ಥಾನಗಳೂ(Temples) ಇವೆ.

Must visit places in Shivamogga

ನಗರ ಕೋಟೆ (Nagara Fort)

ಇದು ಶಿವಮೊಗ್ಗದ ಐತಿಹಾಸಿಕ ಕೋಟೆಗಳಲ್ಲಿ ಒಂದು. ಹೊಸನಗರ ಬಳಿ ಈ ಕೋಟೆ ಇದೆ. ಶಿವಪ್ಪ ನಾಯಕರಿಂದ(Shivappa Nayaka)ನಿರ್ಮಿಸಲ್ಪಟ್ಟ ಕೋಟೆ ಇದು. ಹೀಗಾಗಿ, ಇದನ್ನು ಶಿವಪ್ಪ ನಾಯಕನ ಕೋಟೆ ಅಥವಾ ಬಿದನೂರು ಕೋಟೆ(Bidanur Fort) ಎಂದೂ ಜನ ಕರೆಯುತ್ತಾರೆ. ಇಲ್ಲಿಂದ ಕೊಡಚಾದ್ರಿಯ(Kodachadri) ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸಾಕಷ್ಟು ಪ್ರವಾಸಿಗರು ಈ ಕೋಟೆಯ ವೀಕ್ಷಣೆಗೆಂದು ಬರುತ್ತಾರೆ

Must visit places in Shivamogga


ಗಾಜನೂರು ಅಣೆಕಟ್ಟು(Gajanur Dam)

ತುಂಗಾ ನದಿಗೆ (Tunga River)ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಗಾಜನೂರು ಅಣೆಕಟ್ಟು ಅತ್ಯುತ್ತಮ ಪಿಕ್ನಿಕ್ ಸ್ಥಳವಾಗಿದೆ. ಸುತ್ತಲೂ ಹಚ್ಚ ಹಸಿರಿನ ಗದ್ದೆಗಳು, ತೋಟಗಳು, ಕಾಡು ಇಲ್ಲಿ ಎಲ್ಲರನ್ನೂ ಸೆಳೆಯುವಂತಿದೆ. ಗಾಜನೂರಿನಿಂದ ಸುಮಾರು 1 ಕಿಮೀ ದೂರದಲ್ಲಿದೆ.

Must visit places in Shivamogga

ನೀವು ಇದನ್ನು ಇಷ್ಟ ಪಡಬಹುದು:ಚಂದದ ಊರು ಉತ್ತರ ಕನ್ನಡದಲ್ಲಿ ನೀವು ನೋಡಿ ಪರವಶರಾಗಬಹುದಾದ 8 ದೇಗುಲಗಳು: ಭಾಗ 1

ಸಕ್ಕರೆ ಬೈಲು ಆನೆ ಶಿಬಿರ (Sakrebyle Elephant Camp)

ಇಲ್ಲಿ ಆನೆಗಳ ಬದುಕನ್ನು ಬಲು ಹತ್ತಿರದಿಂದ ನೋಡಬಹುದು. ಮಂಡಗದ್ದೆ ಪಕ್ಷಿಧಾಮ(Mandagadde Bird Sanctuary) 9ಕೂಡಾ ಸುಮಾರು 15 ಕಿ.ಮೀ ದೂರದಲ್ಲಿದೆ. ಆನೆಗಳ ಬದುಕನ್ನು ಹತ್ತಿರದಿಂದ ನೋಡಬಹುದು. ಜತೆಗೆ, ಇಲ್ಲಿ ಪ್ರವಾಸಿಗರಿಗೆ ಆನೆಗಳಿಗೆ ಸ್ನಾನ ಮಾಡಿಸುವ ಅವಕಾಶ ಕೂಡಾ ಇದೆ. ಜತೆಗೆ, ಇಲ್ಲಿ ಟ್ರೆಕ್ಕಿಂಗ್, ಪಕ್ಷಿ ವೀಕ್ಷಣೆ, ಬೋಟಿಂಗ್‌ ಖುಷಿಯನ್ನೂ ಅನುಭವಿಸಬಹುದು.

Must visit places in Shivamogga

ಇಕ್ಕೇರಿ(Ikkeri)

ಇಕ್ಕೇರಿ ಒಂದು ಪ್ರಮುಖ ನಗರ ಮತ್ತು ಕೆಳದಿ (Keladi)ನಾಯಕರ ಎರಡನೇ ರಾಜಧಾನಿ. ಅದರ ಹಿಂದಿನ ವೈಭವವು ಅಘೋರೇಶ್ವರ ದೇವಾಲಯದ(Aghoreshwara) ಅದ್ಭುತ ವಾಸ್ತುಶಿಲ್ಪದಲ್ಲಿ ಪ್ರತಿಫಲಿಸುತ್ತದೆ. ಹೊಯ್ಸಳ(Hoysala) ಮತ್ತು ವಿಜಯನಗರ (Vijayanagara)ವಾಸ್ತುಶಿಲ್ಪದ ಎರಡೂ ಮಿಶ್ರಣಗಳಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಇಂಡೋ-ಸಾರಸೆನಿಕ್ ಅಂಶಗಳ ಮಿಶ್ರಣವನ್ನು ಪ್ರದರ್ಶಿಸುತ್ತದೆ.

Must visit places in Shivamogga

ಈ ದೇವಾಲಯವು ಮೂಲತಃ 32-ಹಸ್ತಗಳ ಅಘೋರೇಶ್ವರನನ್ನು ಹೊಂದಿದ್ದು, ಅದನ್ನು ‘ಲಿಂಗ’ ಎಂದು ಬದಲಾಯಿಸಲಾಗಿದೆ, ಆದರೆ ಕಂಚಿನಲ್ಲಿ ದೇವರ ‘ಉತ್ಸವ ಮೂರ್ತಿ’ ಇನ್ನೂ ಅಸ್ತಿತ್ವದಲ್ಲಿದೆ. ನಂದಿ ಮತ್ತು ಪಾರ್ವತಿ ದೇಗುಲವಿರುವ ವಿಶಾಲವಾದ ಪರಾಂಗಣ ಕೂಡ ದೇವಾಲಯದ ಸಂಕೀರ್ಣದ ಭಾಗವಾಗಿದೆ

ಅಂಬುತೀರ್ಥ (Amba Theertha)

ಶಿವಮೊಗ್ಗದ ತೀರ್ಥಹಳ್ಳಿಯ(Thirthahalli) ಬಳಿಯಿರುವ ಅಂಬುತೀರ್ಥ ಗ್ರಾಮ. ದಂತಕಥೆಯ ಪ್ರಕಾರ, ರಾಮಾಯಣ (Ramayana)ಸಮಯದಲ್ಲಿ ರಾಮನು(Rama) ತನ್ನ ಹೆಂಡತಿ ಸೀತಾ (Sita)ಬಾಯಾರಿದಾಗ ನೀರನ್ನು ಹೊರತೆಗೆಯಲು ನೆಲಕ್ಕೆ ತನ್ನ ಬಾಣದಿಂದ ಹೊಡೆದನೆಂದು ನಂಬಲಾಗಿದೆ. ಶರಾವತಿ ನ(Sharavati)ದಿ ಈ ಹಂತದಿಂದ ಹುಟ್ಟಿಕೊಂಡಿದೆ. ಅಂಬುತೀರ್ಥದಲ್ಲಿ ಶಿವ ದೇವಾಲಯವಿದೆ.

Must visit places in Shivamogga

ಕುಪ್ಪಳ್ಳಿ(Kuppalli)

ಕುಪ್ಪಳ್ಳಿ ಇದು ಇಪ್ಪತ್ತನೇ ಶತಮಾನದ ಕವಿ ಕುವೆಂಪು(Kuvempu) ಅವರ ಜನ್ಮಸ್ಥಳ. 1967 ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ ಕುವೆಂಪು ಅನೇಕ ಶೇಷ್ಠ ಸಾಹಿತ್ಯಗಳನ್ನು ರಚಿಸಿದ್ದಾರೆ. ಕುಪ್ಪಳ್ಳಿಯು ಕುವೆಂಪು ಅವರ ಮನೆಯಾಗಿದ್ದು, ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ ಮತ್ತು ಅವರ ಜೀವನ ಮತ್ತು ಕೆಲಸಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಒಳಗೊಂಡಿದೆ.

Must visit places in Shivamogga

ಜೋಗ (Jog Falls)

ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿನ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತ ಇದಾಗಿದ್ದು ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿನಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲವು. ಶರಾವತಿ ನದಿ ಜೋಗದಲ್ಲಿ ರಾಜ(Raja), ರೋರರ್(Roarar), ರಾಕೆಟ್(Rocket)ಮತ್ತು ರಾಣಿ(Rani) ಎಂಬ ನಾಲ್ಕು ಪ್ರಮುಖ ಜಲಪಾತಗಳನ್ನು ಸೃಷ್ಟಿಸುತ್ತದೆ.

Must visit places in Shivamogga

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button