ದೂರ ತೀರ ಯಾನವಿಂಗಡಿಸದ

ಲಿಟಲ್ ಕಾಶ್ಮೀರ ಎಂದೇ ಪ್ರಸಿದ್ಧವಾದ ಪಿತೋರಗಢ

ಜನಸಂದಣಿ ಕಡಿಮೆ ಇರುವ ಪ್ರದೇಶಗಳಿಗೆ ಪ್ರವಾಸ ಹೋಗಲು ಬಯಸುತ್ತಿದ್ದರೆ ಪಿಥೋರಗಢವು(Pithoragarh)ಒಂದು ರೀತಿಯ ಕನಸಿನ ತಾಣವಾಗಿದೆ. ಸಾಮಾನ್ಯ ಟ್ರೇಕ್ಕಿಂಗ್ ಗಿಂತ ಹಿಮ ತುಂಬಿರುವ ಪರ್ವತಗಳಲ್ಲಿ ಟ್ರೇಕ್ಕಿಂಗ್(Trekking)ಮಾಡಲು ಇಷ್ಟ ಪಡುವವರು ಹಲವರು .ಅಂತವರಿಗೆ ಭಾರತದ ಉತ್ತರಾಖಂಡ (Uttarakhand)ರಾಜ್ಯದ ಪಿಥೋರಗಢವು ಉತ್ತಮ ಸ್ಥಳವಾಗಿದೆ.

ಇದು ಕುಮಾನ್( Kuman) ವಿಭಾಗದಲ್ಲಿ ಅತಿ ದೊಡ್ಡ ಬೆಟ್ಟದ ಪಟ್ಟಣವಾಗಿದೆ .ಸಂಪ್ರದಾಯದ ಪ್ರಕಾರ ಕುಮಾನ್‌ ಚಾಂದ್ ರಾಜರ ( King Chand)ಆಳ್ವಿಕೆಯಲ್ಲಿ , ಪೃಥ್ವಿ ಗೊಸೈನ್ ಎಂದೂ ಕರೆಯಲ್ಪಡುವ ಒಬ್ಬ ಪೀರು ಇಲ್ಲಿ ಕೋಟೆಯನ್ನು ನಿರ್ಮಿಸಿದನು ಮತ್ತು ಅದಕ್ಕೆ ಪೃಥ್ವಿಗಢ ಎಂದು ಹೆಸರಿಸಿದನು .ನಂತರ ಪಿಥೋರಗಢ ಎಂದು ಬದಲಾಗಿದೆ.ಪ್ರಕೃತಿ-ಪ್ರೇಮಿಗಳ( Nature lover)ಸ್ವರ್ಗವಾದ ಪಿಥೋರಗಢ ಸಮುದ್ರ ಮಟ್ಟದಿಂದ 1,645 ಮೀ ಎತ್ತರದಲ್ಲಿದೆ.

ಪಿಥೋರಗಡ್ ತನ್ನ ವಿಶಿಷ್ಟವಾದ ಸಂಸ್ಕೃತಿಗೆ (Culture)ಹೆಚ್ಚಿನ ಮಹತ್ವವನ್ನು ನೀಡಿದೆ. ಕಂದಲಿ( Kandali fest ಸ್ಟ್ರೋಬಿಲಾಂಥೆಸ್ ವಾಲಿಚಿ ಎಂಬ ಹೂವು ಹನ್ನೆರಡು(12 year)ವರ್ಷಗಳಿಗೊಮ್ಮೆ ಅರಳುತ್ತದೆ ಮತ್ತು ಜನರು ಆಗಸ್ಟ್(August)ಮತ್ತು ಅಕ್ಟೋಬರ್( October)ನಡುವೆ ಕಂದಲಿ ಹಬ್ಬವನ್ನು ಆಚರಿಸುತ್ತಾರೆ.

ಹಬ್ಬದಂದು ಬಾರ್ಲಿ ಮತ್ತು ಹುರುಳಿ ಹಿಟ್ಟಿನ ಮಿಶ್ರಣದಿಂದ ಮಾಡಿದ ಶಿವಲಿಂಗದ ಪೂಜೆಯೊಂದಿಗೆ ಹಬ್ಬವು ಪ್ರಾರಂಭವಾಗುತ್ತದೆ . ಈ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಸ್ಥಳೀಯ ಮದ್ಯವನ್ನು ಸೇವಿಸಲಾಗುತ್ತದೆ. ಹಿಲ್‌ಜಾತ್ರಾ(Hilljatra Festival)ಪಶುಪಾಲಕರ ಮತ್ತು ಕೃಷಿಕರ ಹಬ್ಬವಾಗಿದ್ದು, ಇದನ್ನು ಪಿಥೋರಗಢ್ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಇದು ಒಂದು ರೀತಿಯ ಪ್ರಸಿದ್ಧ ಹಬ್ಬವಾಗಿದೆ.

Hilljatra Festival

ನೀವು ಇದನ್ನೂ ಇಷ್ಟ ಪಡಬಹುದು:ಹಿಮಾಲಯದ ಮಡಿಲಿನ “ಗ್ಯಾಂಗಟಾಕ್”

ಇನ್ನು ಇಲ್ಲಿನ ಆಕರ್ಷಣೆಯ ಸ್ಥಳಗಳೆಂದರೆ (Famous Place)ನಕುಲೇಶ್ವರ ದೇವಾಲಯ(Nakuleshwar Dham) ದಂತಕಥೆಯ ಪ್ರಕಾರ, ಈ ದೇವಾಲಯವನ್ನು ಪಾಂಡವ ಸಹೋದರರಾದ ನಕುಲ್(Nakul) ಮತ್ತು ಸಹದೇವ್(Sahadev) ನಿರ್ಮಿಸಿದರು. ಇದು ಪಿಥೋರಗಢದಿಂದ ಸುಮಾರು 10 ಕಿಮೀ ದೂರದಲ್ಲಿರುವ ಅಥ್ಗಾಂವ್ ಶಿಲ್ಲಿಂಗ್ (Shilling)ಪ್ರದೇಶದಲ್ಲಿದೆ.

ಚಂದಕ್ (Chandak)ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿರುವ ಬೆಟ್ಟವಾಗಿದ್ದು, ಹಿಂದೂ ದೇವತೆ ಮನುವಿಗೆ ಸಮರ್ಪಿತವಾದ ಪೂಜ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ತಾಲ್ ಕೇದಾರ್ (Tal Kedar)ಭಗವಾನ್ ಶಿವನಿಗೆ ಸಮರ್ಪಿತವಾದ ಪೂಜ್ಯ ದೇವಾಲಯಕ್ಕೆ ಹೆಸರುವಾಸಿಯಾದ ತಾಲ್ ಕೇದಾರ್ ಪ್ರಾಚೀನ ಹಿಂದೂ ಧಾರ್ಮಿಕ ಗ್ರಂಥವಾದ ಸ್ಕಂದ ಪುರಾಣದಲ್ಲಿ ಉಲ್ಲೇಖವನ್ನು ಕಂಡುಕೊಳ್ಳುತ್ತದೆ. ತಾಲ್ ಕೇದಾರ್ ಸಮುದ್ರ ಮಟ್ಟದಿಂದ 880 ಮೀಟರ್ ಎತ್ತರದಲ್ಲಿದೆ ಮತ್ತು ಸುತ್ತಮುತ್ತಲಿನ ಕಣಿವೆಗಳ ವಿಸ್ಮಯಕಾರಿ ದೃಶ್ಯಗಳನ್ನು ನೀಡುತ್ತದೆ.

Tal Kedar Temple

ಪಿಥೋರಗಢ ಕೋಟೆ (Pithoragarh fort) ಲಂಡನ್ ಕೋಟೆ ಎಂದು ಕರೆಯಲ್ಪಡುವ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದ ಮೇಲಿರುವ ಈ ಕೋಟೆಯು ಪಿಥೋರಗಢದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು ಆರಂಭದಲ್ಲಿ ಚಾಂದ್ ರಾಜವಂಶದಿಂದ ನಿರ್ಮಿಸಲಾಯಿತು ಮತ್ತು ನಂತರ 18 ನೇ ಶತಮಾನದಲ್ಲಿ ಗೂರ್ಖಾಗಳು ಪುನಃಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಈ ಕೋಟೆಯು ಸುತ್ತಮುತ್ತಲಿನ ಕಣಿವೆಗಳನ್ನು ನೋಡಬಹುದು.

ಅಲ್ಮೋರಾ(Almora) ಕುಮನ್ ನ ಸಂಸ್ಕೃತಿಕ ಹೃದಯವಾಗಿರುವ ಅಲ್ಮೋರಾ ಪ್ರಶಾಂತ ಸ್ಥಳವಾಗಿದೆ, ಇದು ಕುಮಾನ್ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಇದು ತನ್ನ ಸಾಂಸ್ಕೃತಿಕ ಪರಂಪರೆ, ಪಾಕಪದ್ಧತಿಗಳು, ಪ್ರಮುಖ ಶಿವ ದೇವಾಲಯಗಳು, ಕರಕುಶಲ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ದೂರದಿಂದ ಇದು ಕುದುರೆ ತಡಿ ಆಕಾರದ ಗುಡ್ಡದಂತೆ ಕಾಣುತ್ತದೆ.

ನೈನಿತಾಲ್(Nainital)ಹಿಮಾಲಯದ ರಮಣೀಯ ದೃಶ್ಯಗಳನ್ನು ನೀಡುವ ನೈನಿತಾಲ್ ಸರೋವರ ಉತ್ತರ ಖಂಡದಲ್ಲಿದೆ.ಲಿಟಲ್ ಕಾಶ್ಮೀರದ ಎಂದೇ ಕರೆಯುವ ಪಿಥೋರಗಢ ಪ್ರಕೃತಿಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.ಈ ಗುಡ್ಡಗಾಡು ಪಟ್ಟಣವು ಹಿಮಾಲಯದ ಹವಾಮಾನದ ಶಾಂತವಾದ ರಮಣೀಯ ಸೌಂದರ್ಯದ ಅಪ್ಪುಗೆಯನ್ನು ಎತ್ತಿಹಿಡಿಯುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button