ಬೆಣ್ಣೆ ನಗರಿಯಲ್ಲಿ ನೋಡಬಹುದಾದ ತಾಣಗಳಿವು
ದಾವಣಗೆರೆ (Davangere) ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ಇದು ರಾಜ್ಯದ ಏಳನೇ ದೊಡ್ಡ ನಗರ. ದಾವಣಗೆರೆ ಜವಳಿ (Textile)ಉದ್ಯಮಕ್ಕೆ ಜನಪ್ರಿಯ. ರಾಜ್ಯದ ಮ್ಯಾಂಚೆಸ್ಟರ್ ಎಂದು ಈ ಜಿಲ್ಲೆ ಕರೆಯುತ್ತಾರೆ. (Manchester City).ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದ್ದು ಬೆಣ್ಣೆ ನಗರಿ (Benne Nagari)ಎಂದು ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳ ಮಾಹಿತಿ ಇಲ್ಲಿದೆ.
ದಾವಣಗೆರೆ ಗ್ಲಾಸ್ ಹೌಸ್ (Davangere Glass House)
ದಾವಣಗೆರೆಯಲ್ಲಿನ ಗ್ಲಾಸ್ ಹೌಸ್ ಏಷ್ಯಾ(Asia )ಖಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಾತ್ರವಲ್ಲ, ಭಾರತದ (India)ಎರಡನೇ ಅತಿ ದೊಡ್ಡ ಗಾಜಿನ ಮನೆ(Glass House) ಎಂಬ ಖ್ಯಾತಿಯನ್ನೂ ಪಡೆದಿದೆ. ದಾವಣಗೆರೆಯಲ್ಲಿ ಮೈದೆಳೆದಿರುವ ಗಾಜಿನ ಮನೆ ಇರುವುದು ದಾವಣಗೆರೆ – ಹರಿಹರ (Harihara)ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway).
ಇಲ್ಲಿಗೆ ಬಂದರೆ ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ. ವಿದೇಶಿ ಗಿಡಗಳು, ಗಾಜಿನ ಮನೆ ಆಕಾರವನ್ನು ನೋಡಿ ಸಂತೋಷಪಡಬಹುದು. ದಾವಣಗೆರೆಯಿಂದ ಕೇವಲ ಏಳೆಂಟು ಕಿಲೋ ಮೀಟರ್ ದೂರ ಕ್ರಮಿಸಿದರೆ ಈ ಗಾಜಿನ ಮನೆ ಸಿಗುತ್ತದೆ.
ಬಾತಿ ಗುಡ್ಡ(Bhati Hills)
ದಾವಣಗೆರೆಯಲ್ಲಿ ನೀವು ಫೋಟೋಶೂಟ್ (Photoshoot)ಮಾಡಿಸಿಕೊಳ್ಳಲು ಬಾತಿ ಗುಡ್ಡ ಹೇಳಿ ಮಾಡಿಸಿದ ಜಾಗ. ಇಲ್ಲಿಗೆ ಹೆಚ್ಚಾಗಿ ಪ್ರಕೃತಿ ಪ್ರಿಯರು ಹಾಗು ಸಾಹಸ ಪ್ರಿಯರು ಭೇಟಿ ನೀಡುತ್ತಾರೆ. ವಿಶಾಲವಾದ ಪ್ರದೇಶದಲ್ಲಿ ಎತ್ತರದ ಮರಗಳಿಂದ (Tree ) ಸುತ್ತುವರೆದಿರುವ ಬೆಟ್ಟದಲ್ಲಿ ಬೇರೆ ಬೇರೆ ಜಾತಿಯ ಪ ಕ್ಷಿಗಳು(Birds) ಕಂಡುಬರುತ್ತವೆ.
ದೊಡ್ಡಬಸಪ್ಪ ದೇವಾಲಯ(Doddabasappa Temple)
ಕರ್ನಾಟಕದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಈ ದೊಡ್ಡಬಸಪ್ಪ ದೇವಾಲಯವು ಒಂದು. ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿರುವ ಈ ಆಲಯವು 12 ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ದೇವತೆಗಳ ಶಿಲ್ಪಗಳು ದೇವಾಲಯದ ಹೊರಭಾಗವನ್ನು ಆವರಿಸಿವೆ. ದೊಡ್ಡ ಬಸಪ್ಪ ಆಲಯದಲ್ಲಿ ಮಹಾಶಿವನು(Mahashiva) ಲಿಂಗ ರೂಪದಲ್ಲಿ ವಿರಾಜಮಾನನಾಗಿ ನೆಲೆಸಿದ್ದಾನೆ.
ನೀವು ಇದನ್ನು ಇಷ್ಟ ಪಡಬಹುದು:ಮಲೆನಾಡ ಹೆಬ್ಬಾಗಿಲಿನಲ್ಲಿ ಕಣ್ಮನ ಸೆಳೆಯುವ ತಾಣಗಳಿವು
ಶೈವರಿಗೆ ಹಾಗು ಇತಿಹಾಸ ಆಸಕ್ತರಿಗೆ ಈ ದೇವಾಲಯ ಅತ್ಯುತ್ತಮ ಸ್ಥಳವು ಹೌದು. ದಾವಣಗೆರೆಯ ಈ ಐತಿಹಾಸಿಕ ಆಲಯವು ಶಿವರಾತ್ರಿಯ (Shivaratri)ಸಮಯದಲ್ಲಿ ಸಾವಿರಾರು ಭಕ್ತರನ್ನು ಸ್ವಾಗತಿಸುತ್ತದೆ.
ಉಚ್ಚಂಗಿದುರ್ಗ (Uchchangi Durga)
ದಾವಣಗೆರೆಯಲ್ಲಿರುವ ಉಚ್ಚಂಗೆಮ್ಮ (Uchangemma)ದೇವಸ್ಥಾನದಿಂದ ಉಚ್ಚಂಗಿಗೆ ಉಚ್ಚಂಗಿದುರ್ಗ ಎಂದು ಹೆಸರು ಬಂದಿದೆ ಹಾಗೂ ಕರ್ನಾಟಕದ ಹಳೆಯ ಕೋಟೆಗಳಲ್ಲಿ (Fort)ಉಚ್ಚಂಗಿದುರ್ಗ ಕೋಟೆಯು ಸಹ ಒಂದು. ಉಚ್ಚಂಗಿದುರ್ಗವು ಪ್ರವಾಸಿಗಳಿಗೆ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ, ಹಳೆಯ ಕೋಟೆ ಹಾಳಾಗಿದೆ ಆದರೆ ಹಲವಾರು ಗೇಟ್ವೇಗಳು, ವಾಚ್ ಟವರ್ಗಳು ಮತ್ತು ಬುರುಜುಗಳು ಇನ್ನೂ ಹಾಗೇ ಇವೆ.
ಉಚ್ಚಂಗಿದುರ್ಗ ಕೋಟೆಯನ್ನು ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ಕದಂಬರು(Kadamba), ಚಾಲುಕ್ಯರು(Chalukya), ಹೈದರ್ ಅಲಿ(Haider Ali) ಮತ್ತು ನಾಯಕರು ಸೇರಿದಂತೆ ಹಲವಾರು ರಾಜ್ಯಗಳ ಆಳ್ವಿಕೆಯಲ್ಲಿತ್ತು.
ಉಚ್ಚಂಗಿದುರ್ಗವು ಚಿತ್ರದುರ್ಗದ(Chitradurga )ನಾಯಕರ ಅಡಿಯಲ್ಲಿ, ವಿಶೇಷವಾಗಿ ತಿಮ್ಮಪ್ಪ ನಾಯಕನ ಅಡಿಯಲ್ಲಿ ಸಮೃದ್ಧಿಯನ್ನು ಹೊಂದಿದೆ ಎಂದು ನಂಬಲಾಗಿದೆ.
ಸಂತೇಬೆನ್ನೂರು ಪುಷ್ಕರಿಣಿ (Santhebennur Pushkarini)
ದಾವಣಗೆರೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸಂತೇಬೆನ್ನೂರು ಪುಷ್ಕರಿಣಿ ಕೂಡ ಒಂದು. ಪುಷ್ಕರಿಣಿಯನ್ನು ಸ್ಥಳೀಯರು ಅವರ ಭಾಷೆಯಲ್ಲಿ ಹೊಂಡ ಎಂದು ಕರೆಯುತ್ತಾರೆ. ಈ ಐತಿಹಾಸಿಕ ಸ್ಥಳವು ತನ್ನ ವಾಸ್ತುಶಿಲ್ಪದ ಭವ್ಯತೆಗೆ ಜನಪ್ರಿಯವಾಗಿದೆ. ಇದರ ಚರಿತ್ರೆಯನ್ನು ಹುಡುಕುತ್ತ ಹೋದರೆ ಇದನ್ನು 16ನೇ ಶತಮಾನದಲ್ಲಿ ಕೆಂಗಲ್ ಹನುಮಂತಪ್ಪ(Kengal Humantappa) ಎಂಬ ಸ್ಥಳೀಯ ಪಾಳೇಗಾರರು ರಾಮದೇವರ (Rama)ದೇವಾಲಯ ಮತ್ತು ಈ ಪುಷ್ಕಕರಿಣಿಯನ್ನು ಇಲ್ಲಿ ಸ್ಥಾಪಿಸಿದ್ದಾರೆ ಎಂದು ನಂಬಲಾಗಿದೆ.
ಆರಂಭದಲ್ಲಿ, ಕಾರ್ಡಿನಲ್ ಪಾಯಿಂಟ್ಗಳಲ್ಲಿ(Cardinal Point)ಎಂಟು ಗೋಪುರಗಳು ಇದ್ದವು (ಎಂಟು ದಿಕ್ಕುಗಳನ್ನು ಪ್ರತಿನಿಧಿಸುತ್ತದೆ). ಆದಾಗ್ಯೂ, ಈ ಎಂಟರಲ್ಲಿ, ಕೇವಲ ಆರು ಮಾತ್ರ ಈಗ ಹಾಗೇ ಉಳಿದಿವೆ. ಪುಷ್ಕರಿಣಿಯ ಮಧ್ಯಭಾಗದಲ್ಲಿರುವ ಮಂಟಪವು ಸಮ್ಮಿತೀಯ ಕಂಬದ ಗೋಪುರವಾಗಿದ್ದು, ಇಂಡೋ-ಅರೇಬಿಕ್ (Indo -Arebic) ಶೈಲಿಯ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.