Moreವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ವಿಶ್ವದ ಮೊದಲ ಭಾರತೀಯ ಪಂಚಾಂಗ ಆಧಾರಿತ “ಗಡಿಯಾರ” ಲೋಕಾರ್ಪಣೆ; ಇದರ ವೈಶಿಷ್ಟ್ಯತೆ ಏನು ಗೊತ್ತಾ?

ಮಧ್ಯಪ್ರದೇಶದ ಉಜ್ಜಯಿನಿಯ (Ujjain) ಜಂತರ್ ಮಂತರ್ ನ 85 ಅಡಿ ಗೋಪುರದ ಮೇಲೆ ಭಾರತೀಯ ಪಂಚಾಂಗ ಆಧಾರಿತ “ವಿಕ್ರಮಾದಿತ್ಯ ವೈದಿಕ ಗಡಿಯಾರ”ವನ್ನು ನಿನ್ನೆ (ಫೆ.29) ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.

ತಜ್ಞರ ಪ್ರಕಾರ, ವಿಶ್ವದ ಪ್ರಮಾಣಿತ ಸಮಯವನ್ನು ನಿರ್ಧರಿಸುವ ಜ್ಞಾನವನ್ನು 300 ವರ್ಷಗಳ ಹಿಂದಿನಿಂದಲೂ ಉಜ್ಜಯಿನಿಯ ಜನರು ಹೊಂದಿದ್ದರು.

ದೀರ್ಘ ಕಾಲದವರೆಗೆ, ಉಜ್ಜಯಿನಿಯನ್ನು “ಸಮಯದ ಲೆಕ್ಕಾಚಾರದ ಕೇಂದ್ರ” ಎಂದು ಕರೆಯಲಾಗುತ್ತಿತ್ತು.

ಈಗ ಭಾರತೀಯ ಪಂಚಾಂಗವನ್ನು ಆಧರಿಸಿದ ವಿಶಿಷ್ಟ ಗಡಿಯಾರವನ್ನು ಉಜ್ಜಯಿನಿಯ ಜಂತರ್ ಮಂತರ್ (Jantar Mantar) ಒಳಗೆ 85 ಅಡಿ ಗೋಪುರದ ಮೇಲೆ ಜೋಡಿಸಲಾಗಿದೆ. ಗಡಿಯಾರವು ಸರ್ಕಾರಿ ಜಿವಾಜಿ ವೀಕ್ಷಣಾಲಯದ ಪಕ್ಕದಲ್ಲಿದೆ.

ವೈದಿಕ ಗಡಿಯಾರದ ವೈಶಿಷ್ಟ್ಯತೆಗಳು:

ಈ ವಿಶಿಷ್ಟ ಗಡಿಯಾರವು ಗ್ರಹಗಳ ಸ್ಥಾನಗಳು, ಮುಹೂರ್ತ, ಜ್ಯೋತಿಷ್ಯ ಲೆಕ್ಕಾಚಾರಗಳ ಮಾಹಿತಿಯನ್ನು ಸಹ ಒದಗಿಸುತ್ತದೆ.

ಇದರ ಜೊತೆಗೆ ಭಾರತೀಯ ಪ್ರಮಾಣಿತ ಸಮಯ (IST) ಮತ್ತು ಗ್ರೀನ್‌ವಿಚ್ ಸರಾಸರಿ ಸಮಯ (GMT) ಅನ್ನು ಸಹ ಸೂಚಿಸುತ್ತದೆ.

ಇದು ಸಂವತ್ಸರ, ಮಾಸ, ಚಂದ್ರನ ಸ್ಥಾನ, ಪರ್ವ, ಶುಭಾಶುಭ ಮುಹೂರ್ತ, ಘಟಿ, ನಕ್ಷತ್ರ, ಸೂರ್ಯಗ್ರಹಣ, ಚಂದ್ರಗ್ರಹಣ, ಇತರ ವಿಷಯಗಳ ಮಾಹಿತಿಯನ್ನು ಸಹ ಇದು ಪ್ರದರ್ಶಿಸುತ್ತದೆ.

ಈ ವೈದಿಕ ಗಡಿಯಾರವು (Vedic Clock) ದಿನದ ಸೂರ್ಯೋದಯವನ್ನು ಆಧರಿಸಿ ಸಮಯದ ಲೆಕ್ಕಾಚಾರವನ್ನು ಪ್ರದರ್ಶಿಸುತ್ತದೆ.

ಭಾರತೀಯ ಸಮಯ ಲೆಕ್ಕಾಚಾರ ಪದ್ಧತಿಯು ವಿಶ್ವದ ಅತ್ಯಂತ ಹಳೆಯ, ಸೂಕ್ಷ್ಮ, ದೋಷ-ಮುಕ್ತ, ಅಧಿಕೃತ ಮತ್ತು ವಿಶ್ವಾಸಾರ್ಹ ವಿಧಾನವಾಗಿದೆ.

ಈ ವಿಧಾನವನ್ನು ಉಜ್ಜಯಿನಿಯಲ್ಲಿ “ವಿಕ್ರಮಾದಿತ್ಯ ವೈದಿಕ ಗಡಿಯಾರ” ದಲ್ಲಿ (Vikramaditya Vedic Clock) ಮರುಸ್ಥಾಪಿಸಲಾಗಿದೆ.

ಪ್ರಪಂಚದಾದ್ಯಂತ ಉಜ್ಜಯಿನಿಯಿಂದ ಸೂಚಿಸಲಾದ ಸಮಯವನ್ನು ಅನುಸರಿಸಲಾಗುತ್ತಿದೆ. ಈ ವೈದಿಕ ಗಡಿಯಾರವು ಭಾರತೀಯ ಸಮಯದ ಲೆಕ್ಕಾಚಾರ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ.

ಉಜ್ಜಯಿನಿಯಲ್ಲಿ ಸ್ಥಾಪಿತವಾದ ಈ ಗಡಿಯಾರವು ಜಗತ್ತಿನ ಮೊದಲ ವೈದಿಕ ಗಡಿಯಾರವಾಗಿದೆ.(World’s first Vedic Clock) ಇದು ಒಂದು ಸೂರ್ಯೋದಯದಿಂದ ಆರಂಭಗೊಂಡು ಇನ್ನೊಂದು ಸೂರ್ಯೋದಯದವರೆಗೆ ಸಮಯವನ್ನು ಪ್ರದರ್ಶಿಸುತ್ತದೆ.

ಎರಡು ಸೂರ್ಯೋದಯಗಳ ನಡುವಿನ ಅವಧಿಯನ್ನು 30 ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಒಂದು ಗಂಟೆಯು 48 ನಿಮಿಷಗಳನ್ನು ಒಳಗೊಂಡಿರುತ್ತದೆ ಎಂದು ವೈದಿಕ ಗಡಿಯಾರವನ್ನು ಅಭಿವೃದ್ಧಿಪಡಿಸಿದ ತಂಡದ ಸದಸ್ಯ ಶಿಶಿರ್ ಗುಪ್ತಾ ತಿಳಿಸಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button