ಮಿನಿ ಇಂಡಿಯಾ ಅಂತಲೇ ಜನಪ್ರಿಯ ಈ ದೇಶಗಳು
ಭಾರತದಿಂದ ಕೋಟ್ಯಂತರ ಜನ ಬೇರೆ ಬೇರೆ ದೇಶಗಳಲ್ಲಿ ಹಲವು ಕಾರಣಗಳಲ್ಲಿ ನೆಲೆಸಿದ್ದಾರೆ. ಈ ಕಾರಣಕ್ಕಾಗಿಯೇ ಜಗತ್ತಿನ ಕೆಲವೊಂದು ದೇಶಗಳು ಮಿನಿ ಇಂಡಿಯಾ ಅಂತಲೇ ಖ್ಯಾತಿಯನ್ನು ಪಡೆದುಕೊಂಡಿದೆ.
ಮಾರಿಷಸ್ (Mauritius):
ಮಾರಿಷಸ್ ನಲ್ಲಿ ಸುಮಾರು 70% ಭಾರತೀಯರೇ ನೆಲೆಸಿದ್ದಾರೆ . ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯು ಹೆಚ್ಚು ಖ್ಯಾತಿಯನ್ನು ಪಡೆದಿದೆ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ತುಂಬಿ ಹೋಗಿದ್ದು ,ನಮ್ಮ ದೇಶದ ಆಹಾರ ಪದ್ಧತಿ ಮತ್ತು ವಿಸ್ತಾರ ಸಂಸ್ಕೃತಿಯನ್ನು ನೀವಿಲ್ಲಿ ಆಸ್ವಾದಿಸಬಹುದು.
ಮಾರಿಷಸ್‌ನಲ್ಲಿ ವಾಸ ಯೋಗ್ಯ ಸೌಲಭ್ಯಗಳು ಕೈಗೆಟುಕುವ ದರದಲ್ಲಿದ್ದು ಈ ದೇಶಕ್ಕೆ ಹೆಚ್ಚು ಭಾರತೀಯರು ಆಗಮಿಸಲು ಒಂದು ಕಾರಣವಾಗಿದೆ.
ಬ್ರಿಟನ್(Britain)
ಭಾರತದೊಂದಿಗೆ ಬ್ರಿಟನ್ ಕೂಡ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ. ಇಲ್ಲಿ ಭಾರತೀಯ ಸಂಸ್ಕೃತಿ ಎದ್ದು ಕಾಣುತ್ತದೆ. ಅಲ್ಲದೆ . ಇದರಿಂದ ಇದು ಕೂಡ ಮಿನಿ ಭಾರತ ಎಂಬ ಭಾವನೆಯನ್ನು ಇಲ್ಲಿನವರಿಗೆ ಉಂಟುಮಾಡುತ್ತದೆ.
ಸೌದಿ ಅರೇಬಿಯಾ(Saudi Arabia)
ಸೌದಿ ಅರೇಬಿಯಾದಲ್ಲಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಭಾರತೀಯರು ವಾಸಿಸುತ್ತಿದ್ದಾರೆ. ರಾಷ್ಟ್ರದ ಜನಸಂಖ್ಯೆಯ 10% ದಿಂದ 13% ದಷ್ಟನ್ನು ಒಳಗೊಂಡಿದೆ. ಇಲ್ಲಿಗೆ ಆಗಮಿಸುವ ಸಾಕಷ್ಟು ಭಾರತೀಯ ವಲಸೆಗಾರರು ಕೂಡ ಈ ದೇಶವನ್ನೇ ತಮ್ಮ ನೆಲೆಯೂರುವ ಸ್ಥಳವಾಗಿಸಿಕೊಂಡಿದ್ದಾರೆ.
ಕೆನಡಾ(Canada)
ಪ್ರಯಾಣ ಹಾಗೂ ಜೀವನ ನಿರ್ವಹಣೆಗಾಗಿ ಅತ್ಯತ್ತಮ ದೇಶಗಳಲ್ಲಿ ಒಂದೆನಿಸಿರುವ ಕೆನಡಾ, ಉತ್ತಮ ಉದ್ಯೋಗವಕಾಶ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳಿಂದ ಅತ್ಯುತ್ತಮ ಆಯ್ಕೆ ಎಂದೆನ್ನಿಸಿದೆ. ಹೆಚ್ಚು ಭಾರತೀಯರು ಇಲ್ಲಿ ವಾಸಿಸುತ್ತಿದ್ದು ಜೀವನ ನಿರ್ವಹಣೆಯನ್ನು ಸುಲಭ ಹಾಗೂ ಸೌಕರ್ಯಯುತವಾಗಿಸಿದೆ.
ಒಮನ್(Oman)
ತನ್ನ ಜನಸಂಖ್ಯೆಯ 20% ಭಾರತೀಯರನ್ನೇ ಹೊಂದಿರುವ ಈ ರಾಷ್ಟ್ರ, ವಲಸಿಗ ಜನಸಂಖ್ಯೆಯನ್ನು ಹೊಂದಿದೆ. ಭಾರತೀಯರೇ ಈ ದೇಶದಲ್ಲಿ ಹೆಚ್ಚು ವಾಸಿಸುತ್ತಿದ್ದಾರೆ.
ಸಿಂಗಾಪುರ್(Singapore)
ಲಿಟಲ್ ಇಂಡಿಯಾ ಎಂಬ ಹೆಸರಿನೊಂದಿಗೆ ಖ್ಯಾತಿ ಗಳಿಸಿರುವ ಸಿಂಗಾಪುರ್ ದಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಭಾರತೀಯರು ವಾಸಿಸಿದ್ದಾರೆ.. 2023 ರ ಸಮಯದಲ್ಲಿ, ಸಿಂಗಾಪುರದಲ್ಲಿ ಭಾರತೀಯ ಜನಸಂಖ್ಯೆಯು 7 ಲಕ್ಷಕ್ಕೆ ಏರಿಕೆಯಾಗಿದೆ.
ಅಮೇರಿಕಾ(America)
ಯುಎಸ್‌ಎ ಎರಡನೇ ಅತಿ ದೊಡ್ಡ ಭಾರತೀಯ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಮೆರಿಕದಲ್ಲಿ ಭಾರತೀಯರ ಜನಸಂಖ್ಯೆ 27 ಮಿಲಿಯನ್ ಮೀರಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.