Moreವಿಂಗಡಿಸದ

ಕರ್ನಾಟಕದಲ್ಲಿರುವ ಕಡಿಮೆ ಪ್ರಸಿದ್ಧಿ ಹೊಂದಿರುವ ವನ್ಯಜೀವಿ ಅಭಯಾರಣ್ಯಗಳು:

ಕರ್ನಾಟಕವು ಭೂಮಿಯ ಮೇಲಿನ ಅತ್ಯಂತ ವೈಭವಯುತ ಮತ್ತು ಪ್ರಮುಖ ವನ್ಯಜೀವಿಗಳಿಗೆ ಆಶ್ರಯ ನೀಡಿರುವ ತಾಣಗಳಲ್ಲಿ ಒಂದಾಗಿದೆ ಎಂದು ವೈಲ್ಡ್ ಕರ್ನಾಟಕ (Wild Karnataka) ಸಾಕ್ಷ್ಯಚಿತ್ರ ದಲ್ಲಿ ಡೇವಿಡ್ ಅಟೆನ್ಬರೋ ಹೇಳುತ್ತಾರೆ.

ಕರ್ನಾಟಕದ 20% ರಷ್ಟು ಅರಣ್ಯ ಪ್ರದೇಶವನ್ನು(Forest Area) ಹೊಂದಿದ್ದು, ಅನೇಕ ಜೈವ ವೈವಿಧ್ಯತೆಗೆ ನೆಲೆಯಾಗಿದೆ.

1972ರಲ್ಲಿ ಭಾರತ ದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಹಲವು ವನ್ಯಜೀವಿಗಳು (Wildlife) ಸಂರಕ್ಷಿತಗೊಳ್ಳುತ್ತಿದೆ ಮತ್ತು ಪ್ರಭೇದಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ.

ಇದೇ ದಶಕದಲ್ಲಿಯೇ ಆರಂಭಗೊಂಡ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು (National Park) ಕರ್ನಾಟಕದಲ್ಲಿ ವನ್ಯಜೀವಿಗಳ ಕುರಿತಾಗಿ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು.

ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಂಡ ಕಾರ್ಯನೀತಿಯಲ್ಲಿ ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಆರಂಭಗೊಂಡ ವನ್ಯಜೀವಿ ಧಾಮ “ರಂಗನತಿಟ್ಟು ವನ್ಯಜೀವಿಧಾಮ”(Ranganathittu Wildlife Sanctuary).

ತದನಂತರ ಉಳಿದ ಎಲ್ಲವೂ 70ರ ದಶಕದ ನಂತರ ಆರಂಭಗೊಂಡವು.

1.ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ: (Bramhagiri Wildlife Sanctuary)

ಇದು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದಿಂದ ಪಶ್ಚಿಮ ಘಟ್ಟಗಳ ಉತ್ತರ ಭಾಗಕ್ಕೆ ಒಂಟಿಯಾಗಿ ವ್ಯಾಪಿಸಿರುವಕಾರಿಡಾರ್ ಆಗಿದೆ.

ಇದು ವಿಭಿನ್ನ ಭೂದೃಶ್ಯ ಮತ್ತು ಪ್ರಾಣಿಗಳು ಮತ್ತು ಸಸ್ಯಗಳ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಹುಲಿ, ಆನೆಗಳು, ಚಿರತೆ ಮತ್ತು ಭಾರತೀಯ ಗೌರ್ ಇಲ್ಲಿ ಸಾಮಾನ್ಯವಾಗಿ ಕಂಡುಬರುವ ದೊಡ್ಡ ಸಸ್ತನಿಗಳಾಗಿವೆ.

ಈ ಪ್ರದೇಶವು ಸಿಂಹ ಬಾಲದ ಮಕಾಕ್ ಮತ್ತು ನೀಲಗಿರಿ ಮಾರ್ಟಿನ್‌ಗಳ ನೆಲೆಯಾಗಿದ್ದು,ಅವು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಗಳಾಗಿವೆ.

2. ನುಗು ವನ್ಯಜೀವಿ ಅಭಯಾರಣ್ಯ: (Nugu Wildlife Sanctuary)

ನುಗು ವನ್ಯಜೀವಿ ಅಭಯಾರಣ್ಯವು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿದೆ.

ಇದು 30.32 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದ್ದು, 1974 ರ ಜೂನ್ 17 ರಂದು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿರುವ ಈ ಅಭಯಾರಣ್ಯವು ಆನೆಗಳ ಪ್ರಮುಖ ಆವಾಸಸ್ಥಾನವಾಗಿದೆ.

3. ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ: (Arabithittu Wildlife Sanctuary)

ಮೈಸೂರು ನಗರದಿಂದ 40 ಕಿಮೀ ವ್ಯಾಪ್ತಿಯಲ್ಲಿರುವ ಏಕೈಕ ಅರಣ್ಯ ಪ್ರದೇಶ ಇದಾಗಿದೆ.

1974 ರಲ್ಲಿ “ಅರಬಿತಿಟ್ಟು ಗೇಮ್ ರಿಸರ್ವ್” ಎಂದು ಸೂಚಿಸಿದ್ದ ಈ ಅರಣ್ಯವನ್ನು 1985 ರಂದು ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು.

4. ಕಮ್ಮಸಂದ್ರ ವನ್ಯಜೀವಿ ಅಭಯಾರಣ್ಯ: (Kammasandra Wildlife Sanctuary) ಕಾಮಸಂದ್ರ ವನ್ಯಜೀವಿ ಅಭಯಾರಣ್ಯವು ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳಲ್ಲಿದೆ.

ಇದು 78.62 ಕಿಮೀ ರಷ್ಟು ವ್ಯಾಪಿಸಿದೆ. ಇದು ಸೊರಕಾಯಲಹಳ್ಳಿ ಮೀಸಲು ಅರಣ್ಯ, ಕಾಮಸಂದ್ರ ಮೀಸಲು ಅರಣ್ಯಗಳು ಒಳಗೊಂಡಿದೆ.

ಇದನ್ನು ಕರ್ನಾಟಕ ಸರ್ಕಾರವು 2019ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಿತು.

5. ತಿಮ್ಲಾಪುರ ವನ್ಯಜೀವಿ ಅಭಯಾರಣ್ಯ: (Thimlapura Wildlife sanctuary)

50.86 ಚ.ಕಿ.ಮೀ ವಿಸ್ತೀರ್ಣ ವ್ಯಾಪಿಸಿರುವ “ತಿಮ್ಲಾಪುರ ವನ್ಯಜೀವಿ ಅಭಯಾರಣ್ಯ” ವನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ-1972 (Wild Life (Protection) Act, 1972 ) ಅಡಿಯಲ್ಲಿ ವನ್ಯಜೀವಿ ಅಭಯಾರಣ್ಯ ಎಂದು 2016ರಲ್ಲಿ ಘೋಷಿಸಿತು.

ಇದು ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ನೆಲೆಗೊಂಡಿದೆ.

ಅರಣ್ಯ ಪ್ರದೇಶಗಳು ಸೋಮಾರಿ ಕರಡಿಗಳು, ಚಿರತೆಗಳು, ಕತ್ತೆಕಿರುಬ, ಜಾನುವಾರು, ಕತ್ತೆಕಿರುಬಗಳಿಗೆ ಸೂಕ್ತವಾದ ಆವಾಸಸ್ಥಾನವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button