Moreವಿಂಗಡಿಸದವಿಸ್ಮಯ ವಿಶ್ವ

ಭೀಕರ ಕಾಡ್ಗಿಚ್ಚಿಗೆ ಸುಟ್ಟು ಭಸ್ಮವಾಗುತ್ತಿರುವ “ಚಿಲಿ”ಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಮಧ್ಯ ಚಿಲಿಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ಹಬ್ಬಿರುವ ಕಾಡ್ಗಿಚ್ಚು (Wildfires) ದಿನೇ ದಿನೇ ವ್ಯಾಪಿಸುತ್ತಲೇ ಇದೆ. ಇದರಿಂದ ಈವರೆಗೆ 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮವಾಗಿವೆ.

ಚಿಲಿ (Chile) ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶದಲ್ಲಿ ಸುಮಾರು 92 ಕಡೆ ಕಾಡ್ಗಿಚ್ಚು ವ್ಯಾಪಿಸಿದೆ ಎಂದು ಸಚಿವ ಕೆರೊಲಿನಾ ತಿಳಿಸಿದ್ದಾರೆ.

ಪ್ರಸ್ತುತ 122 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದ್ದು, 200 ಮಂದಿ ಕಾಣೆಯಾಗಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತ ಚಿಲಿ ಅಧ್ಯಕ್ಷ ಗೇಬ್ರಿಯಲ್‌ ಬೋರಿಕ್‌ (President Gabriel Boric) ತುರ್ತು ಪರಿಸ್ಥಿತಿಯನ್ನು (state of emergency) ಘೋಷಿಸಿದ್ದಾರೆ.

ಭಾನುವಾರದ ವೇಳೆಗೆ, ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸುಮಾರು 26,000 ಹೆಕ್ಟೇರ್ (64,000 ಎಕರೆ) ಸುಟ್ಟುಹೋಗಿದೆ ಎಂದು ಎಎಫ್‌ಪಿ ರಾಷ್ಟ್ರೀಯ ವಿಪತ್ತು ಸೇವೆ ವರದಿ ಮಾಡಿದೆ.

1931 ರಲ್ಲಿ ಸ್ಥಾಪಿಸಲಾದ ವಿನಾ ಡೆಲ್ ಮಾರ್ ನಲ್ಲಿರುವ ಪ್ರಸಿದ್ಧ ಉದ್ಯಾನದಲ್ಲಿ ಭಾನುವಾರದಂದು ಮೊದಲ ಬಾರಿ ಕಾಣಿಸಿಕೊಂಡ ಈ ಕಾಡ್ಗಿಚ್ಚು ಆಸುಪಾಸಿನ ಪ್ರದೇಶಗಳನ್ನು ಇನ್ನೂ ಹಬ್ಬುತ್ತಲೇ ಇದೆ.

ಅತಿಯಾದ ತಾಪಮಾನದಿಂದ ಈ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ .ಗಾಳಿ ಮತ್ತು ಕಡಿಮೆ ಆರ್ದ್ರತೆಯ ಪರಿಣಾಮ ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು ಎಂದು ಬೋರಿಕ್ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗಳು ಹೆಲಿಕಾಪ್ಟರ್‌ ಮತ್ತು ಟ್ರಕ್‌ಗಳ ಮೂಲಕ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಪರಿಸ್ಥಿತಿ ಗಂಭೀರವಾಗಿದ್ದು, ಇದು ಕಳೆದ ಒಂದು ದಶಕದಲ್ಲಿ ಚಿಲಿಯಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ಎಂದು ಹೇಳಲಾಗಿದೆ.

ರಕ್ಷಣಾ ಕಾರ್ಯಕರ್ತರಿಗೆ ಸಹಕರಿಸುವಂತೆ ಬೋರಿಕ್ ಅವರು ಚಿಲಿಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸ್ಥಳಾಂತರಗೊಳ್ಳಬೇಕೆಂದು ಕೇಳಿದರೆ ಹಿಂಜರಿಯಬೇಡಿ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವಾಲಯ ಹೆಚ್ಚುವರಿಯಾಗಿ ಮಿಲಿಟರಿ ಸಿಬ್ಬಂದಿಯನ್ನು ಕಳುಹುಸುತ್ತಿದೆ. ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಚಿಲಿಯ ಅಧ್ಯಕ್ಷ ಹೇಳಿದ್ದಾರೆ.

ಬೆಂಕಿಗೆ ಆಹುತಿಯಾದವರ ಗೌರವಾರ್ಥವಾಗಿ ಫೆ. 5 ಮತ್ತು ಫೆ, 6 ಅನ್ನು “ರಾಷ್ಟ್ರೀಯ ಶೋಕಾಚರಣೆಯ ದಿನ” ಘೋಷಿಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button