ತುಂಬಿದ ಮನೆದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದ

ಉಡುಪಿ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಉಡುಪಿ(Udupi) ಕಡಲೂರು. 100 ಕಿಲೋಮೀಟರ್ ಉದ್ದದ ಕರಾವಳಿ. ಸಹ್ಯಾದ್ರಿಯ ಹಸಿರು ಪರ್ವತ ಶ್ರೇಣಿಗಳಿಂದಾಗಿ ನೈಸರ್ಗಿಕ ಸೌಂದರ್ಯದಂತಹ ಅನೇಕ ವಿಷಯಗಳಿಗೆ ಪ್ರಸಿದ್ಧವಾದ ಜಿಲ್ಲೆ. ಪ್ರಸಿದ್ಧ ಪ್ರವಾಸೋದ್ಯಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ತಾಣ. ಈ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು ಇಲ್ಲಿವೆ. ಕೃಷ್ಣಮಠ(Krishnamata),ಮಲ್ಪೆ ಬೀಚ್(Malpe Beach)ಸೇರಿದಂತೆ ನಿಮ್ ಬಕೆಟ್ ಲಿಸ್ಟ್ ನಲ್ಲಿರುವ ಪಟ್ಟಿಯಲ್ಲಿ ಈ ಜಾಗಗಳನ್ನು ಸೇರಿಸಿಕೊಳ್ಳಿ.

ಬಾಹುಬಲಿ (Bahubali)

ಕಾರ್ಕಳ(Karkala) ಉಡುಪಿಯಿಂದ ಸುಮಾರು 37 ಕಿಮೀ ದೂರದಲ್ಲಿರುವ ತಾಲೂಕು. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಜಾಗ ಜೈನರ (Jain)ಪ್ರಮುಖ ತೀರ್ಥ ಕ್ಷೇತ್ರ, ಪ್ರವಾಸಿ ತಾಣಗಳನ್ನು ಹೊಂದಿರುವ ತಾಲೂಕು. ಜಿಲ್ಲೆಯ ಪ್ರಮುಖ ಜೈನ ಕೇಂದ್ರ. ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಗೊಮ್ಮಟೇಶ್ವರ(Gommateshwara,) ಕೂಡ ಒಂದು.ಇಲ್ಲಿ ಬಾಹುಬಲಿ ಮೂರ್ತಿ ನೋಡಲು ಪ್ರತಿನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಬಾಹುಬಲಿ ಮೂರ್ತಿ ಕರ್ನಾಟಕದ ಎರಡನೇ ಅತಿ ಎತ್ತರದ ಮೂರ್ತಿ.

Must visit places in Udupi Karnataka

ಇದು 42 ಅಡಿ ಎತ್ತರದ ಏಕಶಿಲಾ ಮೂರ್ತಿ. ಇಲ್ಲಿ ಪ್ರವಾಸಿಗರು ಸುಮಾರು 200 ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿ ದರ್ಶನ ಮಾಡಬೇಕು.ಇಲ್ಲಿ ಕಾಣುವ ಬಾಹುಬಲಿ ತಪಸ್ಸಿಗೆ ನಿಂತಂತೆ ಇದೆ. ಜೋಲು ಕಿವಿ, ಗಿಣಿ ಮೂಗಿನ ಬಾಹುಬಲಿ . ಇಲ್ಲಿನ ಗೊಮ್ಮಟ ಮೂರ್ತಿ ಸುಮಾರು 500 ವರ್ಷಕ್ಕೆ ಜಾಸ್ತಿ ಹಳೆಯದು. ಇಲ್ಲಿ ಪ್ರತಿ 12 ವರ್ಷಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಶಿಲ್ಪಿ ಬೀರ ಕಲ್ಕುಡ(Beera Kalkuda)ಕಾರ್ಕಳದ ಬಾಹುಬಲಿ ಮೂರ್ತಿಯನ್ನು ಕೆತ್ತಿದ್ದ ಎನ್ನಲಾಗುತ್ತದೆ.

ಬಾಹುಬಲಿ ಪ್ರತಿಮೆ ನಿರ್ಮಾಣಗೊಂಡ ವರ್ಷದಿಂದ ಆಂದರೆ 1432 ರಿಂದಲೂ ಇಲ್ಲಿ ಹನ್ನೆರೆಡು ವರ್ಷಕೊಮ್ಮೆ ಅದ್ದೂರಿಯಾಗಿ ಮಹಾಮಸ್ತಾಭಿಷೇಕ ನಡೆಯುತ್ತದೆ.ಉಡುಪಿ ಜಿಲ್ಲೆಯ ಕಾರ್ಕಳದ ಕೊನೆಯ ಬಸ್ ನಿಲ್ದಾಣದಿಂದ ಗೊಮ್ಮಟ ಮೂರ್ತಿ ಇರುವ ಪ್ರದೇಶಕ್ಕೆ ಸುಮಾರು 2-3 ಕಿಮೀ. .

ಚತುರ್ಮುಖ ಬಸದಿ (Chaturmukha Basadi)

ಬಾಹುಬಲಿ ಮೂರ್ತಿ ನೋಡಲು ಹತ್ತುವ ಮೆಟ್ಟಿಲುಗಳ ಮೇಲೆ ನಿಂತುಕೊಂಡು ನೋಡಿದರೆ ಬಸದಿ ತೋರುತ್ತದೆ. ಬಾಹುಬಲಿ ಮೂರ್ತಿಯ ಕೊಂಚ ದೂರದಲ್ಲಿ ಚತುರ್ಮುಖ ಬಸದಿ ಇದೆ. ಅಲ್ಲಿನ ಸುತ್ತಿನ ಕಂಬಗಳು,ಅದರ ಮೇಲಿನ ಚಿತ್ತಾರಗಳು.ಅಂದಿನ ಕಾಲದ ಕಲೆಗಾರರ ಶ್ರೀಮಂತ ಪ್ರತಿಭೆಗಳಿಗೆ ಕೈಗನ್ನಡಿ . ಬಸದಿ ಒಳಗಡೆ ಸುತ್ತಲಿನ 4 ಬದಿಯಲ್ಲಿ ಪ್ರತಿಮೆಗಳಿದೆ. ಅಲ್ಲಿನ ಮುನಿಯೊಬ್ಬರು(Muni)ಈ ಜಾಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಬಸದಿಯ ವಿಶೇಷತೆ ಕುರಿತು ತಿಳಿಸುತ್ತಾರೆ. ಅಲ್ಲಿನ ಕಂಬದಲ್ಲಿ ಇಟ್ಟಿರುವ ಕನ್ನಡಿಯಲ್ಲಿ ನೋಡಿದರೆ ನೀವು ಬಾಹುಬಲಿ ಮೂರ್ತಿಯನ್ನು ನೋಡಬಹುದು. 16ನೆಯ ಶತಮಾನದಲ್ಲಿ ವೀರನರಸಿಂಹ(Veera Narasimha)ಬಂಗರಿಂದ ಈ ಬಸದಿ ನಿರ್ಮಾಣಗೊಂಡಿದೆ.

Must visit places in Udupi Karnataka

ಜೈನರ ಪ್ರಮುಖ ಮೂರು ತೀರ್ಥಂಕರಾದ ಅರ, ಮಲ್ಲಿ, ಮುನಿಸುವ್ರತರ ಆಳೆತ್ತರದ ಮೂರ್ತಿಗಳ ಜೊತೆಗೆ ಇತರ ಜೈನ ಮುನಿಗಳ ಮೂರ್ತಿಗಳಿವೆ.ಈ ಬಸದಿಯ ಗರ್ಭ ಗೃಹ ಪೀಠದಲ್ಲಿ ರಾಜ ಮಲ್ಲಿನಾಥ (Raja Mallinatha)ಮತ್ತು ಮುನಿ ಸುವೃತನಾಥ (Munisuvratnath)ತೀರ್ಥಂಕರ ಒಟ್ಟು 12 ಪ್ರತಿಮೆಗಳನ್ನು ,3 ಮೂರ್ತಿಗಳು ಒಟ್ಟಾಗಿ ನಿಂತ ಭಂಗಿಯಲ್ಲಿ 4 ದಿಕ್ಕುಗಳಿಗೆ ಮುಖ ಮಾಡಿ ಏಕಶಿಲಾ ಮೂರ್ತಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಜೈನ ಬಸದಿಯ ನಿರ್ಮಾಣಕ್ಕೆ ಸುಮಾರು 30 ವರ್ಷಗಳು ಬೇಕಾದವು ಎಂದು ಅಂದಾಜಿಸಲಾಗಿದೆ.

ಕಾಯಿನ್ ಮ್ಯೂಸಿಯಂ (Coin Museum)

ವಿವಿಧ ರೀತಿಯ ನಾಣ್ಯ ,ನೋಟುಗಳ ಸಂಗ್ರಹ ಇರುವ ಈ ಮ್ಯೂಸಿಯಂ ಉಡುಪಿಯ ಹೃದಯ ಭಾಗವಾದ ತೆಂಕಪೇಟೆಯಲ್ಲಿದೆ(Tenkapete). ಕಾರ್ಪೊರೇಷನ್ ಬ್ಯಾಂಕ್ (Corporation Bank)ರೂವಾರಿ ಹಾಜಿ ಅಬ್ದುಲ್ಲಾ(Haji Abdullah) ಜೀವಿಸಿದ್ದ ಭವ್ಯ ಮನೆಯಿದು. ಕಾರ್ಪೊರೇಷನ್ ಬ್ಯಾಂಕ್ ನ ಮೊದಲ ಶಾಖೆ ಆರಂಭವಾಗಿದ್ದು ಇಲ್ಲಿಂದ. ಈ ಪಾರಂಪರಿಕ ಕಟ್ಟಡಕ್ಕೆ 120ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಸಾವಿರಕ್ಕೂ ಮಿಗಿಲಾದ ವಿವಿಧ ರೀತಿಯ ನಾಣ್ಯಗಳ ಸಂಗ್ರಹ ಇಲ್ಲಿದೆ. ರಾಜರ ಕಾಲದ ನಾಣ್ಯಗಳನ್ನು ಕೂಡ ನೀವು ಇಲ್ಲಿ ನೋಡಬಹುದು. ಅಂಚೆ ಚೀಟಿಗಳ ಸಂಗ್ರಹ ಕೂಡ ಇಲ್ಲಿದೆ.

Must visit places in Udupi Karnataka

400 ವರ್ಷಗಳ ಹಿಂದಿನ ಕಾಲದ ನಾಣ್ಯಗಳ ಸಂಗ್ರಹವನ್ನು ನೀವು ಇಲ್ಲಿ ನೋಡಬಹುದು. ಪ್ರಾಚೀನ ಕಾಲದ ಮತ್ತು ಮಧ್ಯ ಕಾಲದ ನಾಣ್ಯಗಳ ಪ್ರದರ್ಶನವನ್ನು ಇಲ್ಲಿ ಕಾಣಬಹುದು. ಮೌರ್ಯರು(Maurya), ಕುಶಾನರು(Kushan), ಶಾತವಾಹನರು(Satavahana),ಗುಪ್ತ ರಾಜ ಮನೆತನಗಳಿಗೆ ಸೇರಿದ ನಾಣ್ಯಗಳು ಇಲ್ಲಿದೆ. ಅಕ್ಬರ್(Akbar), ಜಹಾಂಗೀರ್(Jahangir),ಶಹಜಾನ್ (Shahjahan)ಒಕ್ಕೂಟಗಳ ನಾಣ್ಯ ಸಂಗ್ರಹ ಕೂಡ ಇಲ್ಲಿದೆ. ಬ್ರಹತ್ ಅಂಚೆಚೀಟಿಗಳ ಸಂಗ್ರಹಕ್ಕೆ ಕೂಡ ಈ ಮ್ಯೂಸಿಯಂ ಹೆಸರುವಾಸಿ.

ಕೇವಲ ನಾಣ್ಯ,ಅಂಚೆ ಚೀಟಿಗಳ ಸಂಗ್ರಹ ಮಾತ್ರ ಇಲ್ಲಿನ ವಿಶೇಷವಲ್ಲ. ತಂತ್ರಜ್ಞಾನದ ಬಳಕೆಯಿಲ್ಲದ ಆ ಕಾಲದಲ್ಲಿ ನಿರ್ಮಾಣವಾದ ಈ ಪಾರಂಪರಿಕ ಕಟ್ಟಡದ ರಚನೆಯೇ ಒಂದು ವಿಶೇಷ. ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಛಾಯಾಗ್ರಹಣಕ್ಕೆ ಅವಕಾಶವಿಲ್ಲ. ಆದರೆ ಹೆಚ್ಚಿನ ಮಾಹಿತಿಯನ್ನು ಬಯಸುವವರು ಇಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. 

ಈ ಮ್ಯೂಸಿಯಂ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲ. ಬ್ಯಾಂಕ್ ರಜೆ ದಿನ ಹೊರತು ಪಡಿಸಿ ಉಳಿದ ಎಲ್ಲಾ ದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ. ಉಡುಪಿಯ ಸಿಟಿ ಬಸ್ ನಿಲ್ದಾಣದಿಂದ(Udupi City bus Stand) ಕೇವಲ 200 ಮೀ ದೂರದಲ್ಲಿದೆ ಈ ಮ್ಯೂಸಿಯಂ.

ಅರ್ಬಿ ಫಾಲ್ಸ್(Arbi Falls)

ಮಳೆಗಾಲ (Rainy Season)ಬಂತೆಂದರೆ, ಸಾಮಾನ್ಯ ನೀರಿನ ಹರಿವಿಗೂ ಕೂಡ ಮೈದುಂಬಿ ಹರಿಯುವ ಜಲಪಾತದ ರೂಪ ಬರುತ್ತದೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ (Manipal)ಇಂತಹ ಸಣ್ಣಪುಟ್ಟ ಕಿರು ಜಲಪಾತಗಳು ಅನೇಕ ಇವೆ. ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. 

Must visit places in Udupi Karnataka

ನೀವು ಇದನ್ನು ಇಷ್ಟ ಪಡಬಹುದು:ಲಿಟಲ್ ಕಾಶ್ಮೀರ ಎಂದೇ ಪ್ರಸಿದ್ಧವಾದ ಪಿತೋರಗಢ

ಅರ್ಬಿ ಜಲಪಾತ ಇರುವುದು ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು(Badagabettu)ಗ್ರಾಮದ ಅರ್ಬಿ ಕೋಡಿ ಎಂಬಲ್ಲಿ ಮಣಿಪಾಲದಿಂದ ಅಲೆವೂರು (Alevoour)ಮಾರ್ಗವಾಗಿ 3 ಕಿಮೀ ಸಾಗಿದರೆ ದಶರಥ ಎಂಬ ಊರು ಸಿಗುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ(Vaishno Durga Temple) ಮಾರ್ಗವಾಗಿ ಒಂದು ಕಿಲೋ ಮೀಟರ್ ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಅರ್ಬಿ ಜಲಪಾತ ನಮ್ಮನ್ನು ಕೈಬೀಸಿ ಕರೆಯುತ್ತದೆ. 

ಮಣಿಪಾಲ ಮಹಾನಗರದಲ್ಲಿ ಜನಸಂಚಾರದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಕಳೆಯುವುದಕ್ಕೆ ಈ ಜಲಪಾತ ಯೋಗ್ಯ ಸ್ಥಳ. 

ಕತ್ತಲೆ ಬಸದಿ(Kattale Basadi)

ಪ್ರವೇಶದ್ವಾರದಲ್ಲಿ 2೦ ಅಡಿ ಏಕಶಿಲೆಯ ಕಲ್ಲಿನ ಕಂಬವನ್ನು ನಿರ್ಮಿಸಲಾಗಿದೆ. ದೇವಾಲಯಗಳು ಕೆತ್ತನೆಗಳು ಮತ್ತು ಅಲಂಕಾರಗಳೊಂದಿಗೆ ಸೊಗಸಾಗಿ ವಿನ್ಯಾಸಗೊಳಿಸಲ್ಪಟ್ಟಿವೆ ಆದರೆ ಈಗ ಅವಶೇಷಗಳಾಗಿವೆ. ಇಪ್ಪತ್ನಾಲ್ಕು ಜೈನ ತೀರ್ಥಂಕರರ ವಿಗ್ರಹಗಳ ಅಸ್ತಿತ್ವಕ್ಕೆ ಕಲ್ಲಿನಲ್ಲಿರುವ ಇಪ್ಪತ್ನಾಲ್ಕು ದಂತಗಳು ಮಾತ್ರ ಸಾಕ್ಷಿಯಾಗಿದೆ.

ದೊಡ್ಡ ಪ್ರಾಂಗಣದಲ್ಲಿ ಮೂರು ಮುಖ್ಯ ರಚನೆಗಳಿವೆ ಪ್ರವೇಶದ್ವಾರದಲ್ಲಿ ವಿಜಯಸ್ತಂಭವಿದೆ. ಪುರಾತತ್ತ್ವ ಶಾಸ್ತ್ರಜ್ಞರು ಇದನ್ನು 8 ಮತ್ತು 12ನೇ ಶತಮಾನದ ನಡುವೆ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ ಅಳುಪ(Alupa) ದೊರೆಗಳು ನಿರ್ಮಿಸಿದ ಜೈನ ಬಸದಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಹೆಚ್ಚಿನ ದಕ್ಷಿಣ ಭಾರತದ ದೇವಾಲಯಗಳಿಗಿಂತ ಭಿನ್ನವಾಗಿದೆ ಮತ್ತು ಗೋಪುರವನ್ನು ಹೊಂದಿಲ್ಲ. ಗರ್ಭಗುಡಿಯು ಕಲ್ಲಿನ ಗೋಡೆಗಳಿಂದ ಸುತ್ತುವರಿದಿದೆ ಇದನ್ನು ಪ್ರಾಂಗಣ ಎಂದು ಕರೆಯಲಾಗುತ್ತದೆ. ಅದರ ಮೇಲೆ ಇಳಿಜಾರಾದ ಕಲ್ಲಿನ ಕಂಬಗಳಿವೆ. ಮೂಲ ಮಹಾವೀರ ವಿಗ್ರಹವನ್ನು ನಾಶಪಡಿಸಲಾಯಿತು ಆದರೆ ನಂತರದ ಸೇರ್ಪಡೆಯಾದ ಪ್ರಾಣಿಗಳ ಆಕೃತಿಗಳೊಂದಿಗೆ ಕಲ್ಲಿನ ಮಾತ್ರೆಗಳಿಂದ ಬದಲಾಯಿಸಲಾಗಿದೆ.

Must visit places in Udupi Karnataka

ಕತ್ತಲೆ ಬಸದಿಯು ನಾಗಕಾಳಿ(Nagakaali), ಶಿವ,(Shiva) ವಿಷ್ಣು(Vishnu) ಮತ್ತು ಜೈನ (Jain)ದೇವತೆಗಳೊಂದಿಗೆ ಪ್ರತ್ಯೇಕ ದೇವಾಲಯಗಳೊಂದಿಗೆ ನವರಂಗವನ್ನು ಒಳಗೊಂಡಿದೆ. ರಾಜಕೀಯವಾಗಿ ಮತ್ತು ಧರ್ಮದ ದೃಷ್ಟಿಯಿಂದ ನಗರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವಿಧ ಆಡಳಿತಗಾರರೊಂದಿಗೆ ಬದಲಾಗುತ್ತಿರುವ ಸಾಮ್ರಾಜ್ಯಗಳ ಅಸ್ತಿತ್ವವನ್ನು ಇದು ಸಾಬೀತುಪಡಿಸುತ್ತದೆ.

ಡಿವೈನ್ ಪಾರ್ಕ್ ,ಸಾಲಿಗ್ರಾಮ(Divine Park,Saligrama)

ಡಿವೈನ್ ಪಾರ್ಕ್ ಇರುವುದು ಉಡುಪಿಯಿಂದ ಸುಮಾರು 21ಕಿಮೀ ದೂರದಲ್ಲಿರುವ ಸಾಲಿಗ್ರಾಮದಲ್ಲಿ. ಇದು ಸ್ವಾಮಿ ವಿವೇಕಾನಂದರ (Swami Vivekananda)ಶ್ರದ್ದಾ ಕೇಂದ್ರ. ಇಲ್ಲಿ ಯೋಗ(Yoga) ,ಧ್ಯಾನ(Meditation)ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತದೆ. ಡಿವೈನ್ ಪಾರ್ಕ್ ವತಿಯಿಂದ ವಿವೇಕ ಸಂಪದ ಪತ್ರಿಕೆಯನ್ನು ಹೊರತರಲಾಗುತ್ತದೆ. 

  ಅಂಗಸಂಸ್ಥೆಯಾಗಿ ಕೋಟದ (Kota)ಮೂಡುಗಿಳಿಯಾರಿನಲ್ಲಿ(Mudugiliyaru)ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವಿದೆ. ಇದು ಪ್ರಕೃತಿ , ಆಹಾರ , ಯೋಗ ,ಧಾರ್ಮಿಕತೆಯ ಸಂಬಂಧಿಸಿದ ಕೇಂದ್ರ. ಇಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದೆ. 35 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಮೂರ್ತಿ ಇಲ್ಲಿದೆ. 

Must visit places in Udupi Karnataka

ಆಧ್ಯಾತ್ಮಿಕ ಕೇಂದ್ರದ ಹಿಂದಿನ ಶಕ್ತಿ ಡಾ.. .ಚಂದ್ರಶೇಖರ್ ಉಡುಪ(Chandrashekar Udupa) ದೇಶ ವಿದೇಶಗಳಲ್ಲಿ ಡಾ. ಜೀ ಅಂತೆಲ್ಲ ಖ್ಯಾತಿ ಪಡೆದವರು. ಸುಮಾರು 37 ವರ್ಷಗಳಿಂದ ಯಶಸ್ವಿಯಾಗಿ ಈ ಕೇಂದ್ರವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬೆಳಿಗ್ಗೆ 8.30 ಯಿಂದ ಸಂಜೆ 5.30 ತನಕ ,ವಾರದ ಏಳು ದಿನವೂ ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ. ಸಾಮಾನ್ಯವಾಗಿ ಮೊದಲ ಮತ್ತು ಕೊನೆಯ ಶನಿವಾರ ಡಾ. ಜೀ ಅವರಿಂದ ವಿಶೇಷ ಆಧ್ಯಾತ್ಮಿಕ ಸಂದೇಶ ಕಾರ್ಯಕ್ರಮ ನಡೆಯುತ್ತದೆ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button