ಊಟಿ, ಕೊಡಕೈನಾಲ್ ಹೋಗಲು ಇ- ಪಾಸ್ ಕಡ್ಡಾಯ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ (Tamil Nadu)ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಕೈನಾಲ್(Kodaikanal )ಮತ್ತು ಊಟಿ (Ooty)ಗಿರಿಧಾಮಕ್ಕೆ(Hills)ತೆರಳಲು ಇ-ಪಾಸ್ (E-Pass)ಕಡ್ಡಾಯಗೊಳಿಸಬೇಕೆಂದು ಮದ್ರಾಸ್ ಹೈಕೋರ್ಟ್(Madras High Court)ಸೋಮವಾರ ಮಹತ್ವದ ಆದೇಶ ನೀಡಿದೆ.
ಈ ಆದೇಶ ಮೇ(May) 7ರಿಂದ ಜೂನ್ (June) 30ರ ಅವಧಿಗೆ ಸೀಮಿತವಾಗಿರಲಿದೆ. ಪಾಸ್ ಕುರಿತು ನಿಯಮಾವಳಿ ರೂಪಿಸಿ ತಮಿಳುನಾಡು ಸರ್ಕಾರವು ರಾಷ್ಟ್ರಮಟ್ಟದ ಸುದ್ದಿಮಾಧ್ಯಮಗಳಲ್ಲಿ ಬೃಹತ್ ಜಾಹೀರಾತು(Advertisement)ನೀಡುವ ಮೂಲಕ ಪ್ರಚುರಪಡಿಸಬೇಕೆಂದೂ ಹೈಕೋರ್ಟ್ ನಿರ್ದೇಶಿಸಿದೆ.
ಇ ಪಾಸ್ ಇಲ್ಲದ ವಾಹನಗಳಿಗೆ (Vehicle)ಗಿರಿಧಾಮಗಳಿಗೆ ಭೇಟಿಗೆ ಅವಕಾಶ ನೀಡಬಾರದು ಎನ್ನುವ ಆದೇಶ ಹೊರಡಿಸಿದೆ.
ಆದರೆ ಪಾಸ್‌ಗಳ ವಿತರಣೆಗೆ ಯಾವುದೇ ನಿಯಂತ್ರಣ ಇರದು(Conditions). ಇ ಪಾಸ್ ನಿಯಮ ಸ್ಥಳೀಯರಿಗೆ(Locals) ಅನ್ವಯಿಸದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಹಾಲಿ ಊಟಿಗೆ ನಿತ್ಯ 1000- 1300 ವಾಹನಗಳು ಆಗಮಿಸುತ್ತವೆ. ಆದರೆ ಬಿಸಿಲಿನ ತಾಪ(Heatwave)ಹೆಚ್ಚಾಗುವ ಮತ್ತು ಹೆಚ್ಚಿನ ಪ್ರವಾಸಿಗರು ಆಗಮಿಸುವ ಮೇ ಮೊದಲ ವಾರದಿಂದ ಜೂನ್ ಅಂತ್ಯದ ವೇಳೆಗೆ ನಿತ್ಯ 20000ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಇಷ್ಟು ವಾಹನಗಳ ಹೊರೆ ತಡೆಯುವ ಸಾಮರ್ಥ್ಯ ಗಿರಿಧಾಮಗಳ ರಸ್ತೆಗಳಿಗೆ ಇಲ್ಲ. ಇದರಿಂದ ಸ್ಥಳೀಯರ ಸಂಚಾರಕ್ಕೆ, ಕಾಡುಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಐಐಎಂ(IIM) ಮತ್ತು ಮದ್ರಾಸ್‌ನ(Madras) ಐಐಟಿ(IIT) ಜಂಟಿ ಅಧ್ಯಯನ ತಂಡ ಇತ್ತೀಚೆಗೆ ಮಾಹಿತಿ ನೀಡಿತ್ತು.
ಹೀಗಾಗಿ ಅವುಗಳ ಅಧ್ಯಯನಕ್ಕೆ ಪೂರಕವಾಗಿ ಇನ್ನಷ್ಟು ಅಗತ್ಯ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಇ ಪಾಸ್ ವ್ಯವಸ್ಥೆ ಜಾರಿಗೆ ಹೈಕೋರ್ಟ್ ಆದೇಶಿಸಿದೆ.
ನೀವು ಇದನ್ನು ಇಷ್ಟ ಪಡಬಹುದು: ನೈಸರ್ಗಿಕ ಪರಂಪರೆ ತಾಣಗಳಲ್ಲಿ ಒಂದಾದ ಕೊಡಚಾದ್ರಿ
ತಮ್ಮ ಪ್ರಯಾಣದ ಮೊದಲು ಇ-ಪಾಸ್‌ಗಳನ್ನು ಪಡೆಯಬೇಕು, ನಿರ್ದಿಷ್ಟ ತಿಂಗಳುಗಳಲ್ಲಿ ಪ್ರವಾಸಿಗರ(Tourist) ಒಳಹರಿವಿನಿಂದ ಉಂಟಾಗುವ ಸ್ಥಳೀಯ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.ಪೀಕ್ ಸೀಸನ್‌ಗಳಲ್ಲಿ ವಾಹನಗಳ ಗಣನೀಯ ಹೆಚ್ಚಳವನ್ನು ನಿಭಾಯಿಸಲು ಗಿರಿಧಾಮ ರಸ್ತೆಗಳ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವನ್ಯಜೀವಿಗಳ ಚಲನೆ ಮತ್ತು ಪರಿಸರ ಸಮತೋಲನದ ಮೇಲೆ ಈ ದಟ್ಟಣೆಯ ಸಂಭಾವ್ಯ ಪ್ರತಿಕೂಲ ಪರಿಣಾಮಗಳನ್ನು ಎತ್ತಿ ತೋರಿಸಿದೆ.
ಇ ಪಾಸ್ ಪಡೆಯುವುದು ಹೇಗೆ?:
ಶೀಘ್ರದಲ್ಲಿ ತಮಿಳುನಾಡು ಸರ್ಕಾರವು ಈ ಕುರಿತು ಮಾರ್ಗಸೂಚಿ ರೂಪಿಸಬೇಕು. ಅದನ್ನು ಜಿಲ್ಲಾಡಳಿತದ ಮೂಲಕ ಜಾರಿಗೊಳಿಸಬೇಕು. ಬಳಿಕ ಪಾಸ್ ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಊಟಿ, ಕೊಡೈಕೆನಾಲ್ ಬಗ್ಗೆ
ಕೊಡೈಕೆನಾಲ್: ಮುಂಗಾರು ಚುರುಕಾಗಿರುವ ಈ ಸಮಯದಲ್ಲಿ ಕೆಲ ತಂಪಾದ ಪ್ರದೇಶಗಳಿಗೆ ಪ್ರಯಾಣಿಸಬೇಕು ಅಂದರೆ ಕೊಡೈಕೆನಾಲ್ ಬೆಸ್ಟ್ ಪ್ಲೇಸ್. ಬೆಟ್ಟಗಳ ರಾಜಕುಮಾರಿ(The princess of hills)ಎಂದು ಕರೆಯಲ್ಪಡುವ ಕೊಡೈಕೆನಾಲ್ ಬಗ್ಗೆ ನಾವು ಹೆಚ್ಚು ಹೇಳಬೇಕಾಗಿಲ್ಲ.
ರುದ್ರರಮಣೀಯವಾದ ಪರ್ವತ ಚಾರಣದಿಂದ ಹಿಡಿದು ಕೊಡೈಕೆನಾಲ್ ಸರೋವರದ ದೋಣಿ ವಿಹಾರದವರೆಗೆ ಅದ್ಬುತವಾಗಿದೆ. ಪರ್ವತವನ್ನು ಚುಂಬಿಸುವ ಮೋಡಗಳನ್ನು ಕಾಣುತ್ತ ಅದ್ಬುತ ಕ್ಷಣಗಳನ್ನು ಆನಂದಿಸಬಹುದು.
ಇವುಗಳಲ್ಲದೆ ಬೇರ್ ಶೋಲಾ ಫಾಲ್ಸ್(Bear Shola Falls), ಪಿಲ್ಲರ್ ರಾಕ್ಸ್,(Pillar Rocks) ಬ್ರ್ಯಾಂಟ್ ಪಾರ್ಕ್(Brant Park), ಕೋಕರ್ಸ್ ವಾಕ್(Coakers Walk) ಇತರ ಪ್ರವಾಸಿ ಆಕರ್ಷಣೆಗಳಾಗಿವೆ
ಊಟಿ
ಕ್ವೀನ್ ಆಫ್ ಹಿಲ್ಸ್(Queen Of Hills) ಎಂದೂ ಕರೆಯಲ್ಪಡುವ ಊಟಿ ಕೊಡೈಕೆನಾಲ್ ನಂತೆಯೇ ಪ್ರಸಿದ್ಧ ಸ್ಥಳವಾಗಿದೆ.
ಊಟಿಯು ನೀಲಗಿರಿ ಮೌಂಟೇನ್ ರೈಲ್ವೇ(Nilgiri Mountain Railway), ತೊಟ್ಟಪೆಟ್ಟಾ ಶಿಖರ(Thottapetta hills), ಬೊಟಾನಿಕಲ್ ಗಾರ್ಡನ್(Botanical Garden), ರೋಸ್ ಗಾರ್ಡನ್(Rose Garden), ಡಾಲ್ಫಿನ್ ನೋಸ್(Dolphin Nose), ಬೋಟಿಂಗ್(Boating)ಮುಂತಾದ ಪ್ರವಾಸಿ ಆಕರ್ಷಣೆಗಳಿಂದ ತುಂಬಿರುವ ಪ್ರದೇಶವಾಗಿದೆ. ಕೊಡೈಕೆನಾಲ್‌ನಂತೆ ಇಲ್ಲಿಯೂ ಎತ್ತರದ ಪರ್ವತ ಶಿಖರಗಳು ಮತ್ತು ಪ್ರಾಚೀನ ಮರಗಳಿವೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.