ಆಹಾರ ವಿಹಾರವಿಂಗಡಿಸದ

ಮಳೆಗಾಲದಲ್ಲಿ ತಯಾರಾಗುವ ಹಲಸಿನ ಹಣ್ಣಿನ ವಿಶೇಷ ಖಾದ್ಯಗಳು.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹಲವು ಖಾದ್ಯಗಳು ಪ್ರಸಿದ್ದ. ಅವುಗಳಲ್ಲಿ ಹಲಸಿನ ಹಣ್ಣಿನಿಂದ ಮಾಡುವ ತರಾವರಿ ಖಾದ್ಯಗಳು ಕೂಡ ಜನಪ್ರಿಯ. ಹಲಸಿನ ಗಟ್ಟಿ ,ಮುಳ್ಕ , ಹಪ್ಪಳ , ಹಲ್ವ ಹೀಗೆ ಹಲಸಿನ ಹಣ್ಣಿನಿಂದ ತಯಾರಾಗುವ ಖಾದ್ಯಗಳು ಹಲವಾರು. ಆಹಾರ ಪ್ರಿಯರಿಗಾಗಿ ಹಲಸಿನ ಹಣ್ಣಿನಿಂದ ತಯಾರಿಸುವ ಖಾದ್ಯಗಳ ಕುರಿತಾದ ಲೇಖನ .

ನವ್ಯಶ್ರೀ ಶೆಟ್ಟಿ

(ಮಾಹಿತಿ ಕೃಪೆ: ಪತ್ರಿಕೋದ್ಯಮ ವಿಭಾಗ, ಎಂಜಿಎಂ ಕಾಲೇಜು ಉಡುಪಿ)

ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗುವ ಹಲಸಿನ ಹಣ್ಣಿನ ಸೀಸನ್ ಕೆಲವೇ ತಿಂಗಳುಗಳಿಗೆ ಮಾತ್ರವೇ ಸೀಮಿತ. ಈ ಸಮಾಯದಲ್ಲಿ ಬಹುತೇಕರ ಮನೆಯಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ತರಾವರಿ ತಿಂಡಿಗಳು ತಯಾರಾಗುತ್ತದೆ. ನಮ್ಮ ಈ ಲೇಖನದಲ್ಲಿ ಹಲಸಿನ ಹಣ್ಣಿನಿಂದ ಮಾಡುವ ವಿಶೇಷ ಖಾದ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.

jackfruit

ಹಲಸಿನ ಹಣ್ಣಿನ ಗಟ್ಟಿ

ತುಳುನಾಡಿನಲ್ಲಿ ಹಲಸಿನ ಹಣ್ಣಿಗೆ ಪೆಲಕಾಯಿ ಎಂದು ಕರೆಯುತ್ತಾರೆ. ತುಳುವಿನಲ್ಲಿ ಹಲಸಿನ ಗಟ್ಟಿ ಎಂದರೆ ಬೇರೆಕಡೆ ಹಲಸಿನ ಹಣ್ಣಿನ ಕಡಬು ಎಂದು ಕರೆಯುತ್ತಾರೆ. ಸ್ವಲ್ಪ ಕಾಲ ನೆನೆಸಿಟ್ಟ ಅಕ್ಕಿ, ಕೊಬ್ಬರಿ ತುರಿ ,ಬೀಜ ತೆಗೆದ ಹಲಸಿನ ಹಣ್ಣಿನ ಸೊಳೆ ,ಉಪ್ಪು ಹಾಗೆ ಬೇಕಿದ್ದಲ್ಲಿ ಬೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ಕೆಲವರು ಇಡ್ಲಿ ಮಾಡುವುದು ಮಾತ್ರವಲ್ಲ ಹಲಸಿನ ಹಣ್ಣಿನ ಗಟ್ಟಿ ಮಾಡುತ್ತಾರೆ. ಆದರೆ ನಿಜವಾಗಿಯೂ ಇದಕ್ಕೆ ಸಾಗುವಾನಿ ಎಲೆ ಬಳಸಿ ಮಾಡಿದರೆ ರುಚಿ ಜಾಸ್ತಿ. ರುಬ್ಬಿಕೊಂಡ ಮಿಶ್ರಣವನ್ನು ಚೆನ್ನಾಗಿ ತೊಳೆದ ಸಾಗುವಾನಿ ಎಲೆಯ ಮೇಲಿಟ್ಟು ಮಡಚಿ ನಂತರ ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಬಳಿಕ ಗಟ್ಟಿಯನ್ನು ಬೇರ್ಪಡಿಸಬೇಕು.

jackfruit gatti

ನೀವು ಗಟ್ಟಿಯನ್ನು ಎಣ್ಣೆ,ತುಪ್ಪ ಸವರಿ ಹಾಗೆ ಸವಿಯಬಹುದು. ಇಲ್ಲವೆಂದರೆ ಯಾವುದೇ ಸಾಂಬಾರ್ ಸವಿದರೂ ರುಚಿಯಾಗಿರುತ್ತದೆ. ಚಿಕನ್ ಸಾಂಬಾರ್ ಜೊತೆಗೆ ಉತ್ತಮ ಕಾಂಬಿನೇಷನ್.

ಹಲಸಿನ ಹಣ್ಣಿನ ಹಪ್ಪಳ

ಬೀಜ ತೆಗೆದ ಹಲಸಿನ ಹಣ್ಣಿನ ಸೊಳೆಗಳನ್ನು ಚೆನ್ನಾಗಿ ತಿಳಿದು ಹೆಚ್ಚಿಕೊಳ್ಳಬೇಕು. ಬಳಿಕ ಹೆಚ್ಚಿಕೊಂಡ. ಸೊಳೆ ಗಳನ್ನು, ಇಡ್ಲಿ ಪಾತ್ರೆಯಲ್ಲಿ ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಹಲಸಿನ ಹಣ್ಣನ್ನು ಉಪ್ಪು ,ಖಾರ , ಹುಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಉಪ್ಪು, ಖಾರ, ಹುಳಿ,ಖಾರ, ನಿಮ್ಮ ಅಗತ್ಯಕೆ ಬೇಕಾಗುವಷ್ಟು ಸೇರಿಸಿಕೊಳ್ಳಿ. ನುಣ್ಣಗೆ ರುಬ್ಬಿಕೊಂಡು ಮಿಶ್ರಣವನ್ನು ಚಿಕ್ಕದಾದ ಉಂಡೆಯಾಗಿ ಮಾಡಿಕೊಳ್ಳಬೇಕು. ನಂತರ ಎರಡು ಪಾಲಿಥೀನ್ ಶೀಟ್ ಗಳಿಗೆ ಎಣ್ಣೆ ಸವರಿ. ಒಂದರ ಮೇಲೆ ಹಲಸಿನ ಹಣ್ಣಿನ ಮಿಶ್ರಣದಿಂದ ತಯಾರಿಸಿದ ಉಂಡೆಯನ್ನು ಇಟ್ಟು ಬಳಿಕ ಅದರ ಮೇಲೆ ಇನ್ನೊಂದು ಶೀಟ್ ಇಡಿ. ಮರದ ಮನೆಯಿಟ್ಟು ಬಳಿಕ ನಿಧಾನವಾಗಿ ಒತ್ತಿ ಕೊಳ್ಳಬೇಕು.

 Jackfruit papad

ನೀವು ಇದನ್ನು ಇಷ್ಟ ಪಡುಬಹುದು: ತುಳುವರ ಮನೆ ಮನದ ತಿಂಡಿ ಈ ತೆಳ್ಳವ್ (ನೀರು ದೋಸೆ)

ಚಪ್ಪಾತಿಯಂತೆ ಮಿಶ್ರಣ ಹರಡಿ ಕೊಳ್ಳುತ್ತದೆ. ಬಳಿಕ ಅದನ್ನು ಪ್ಲಾಸ್ಟಿಕ್ ಮೇಲೆ ಅಥವಾ ಸ್ವಚ್ಚವಾದ ಜಾಗದಲ್ಲಿ 3-4 ಗಂಟೆ ಒಣಗಿಸಿ ತಿರುವಿ ಹಾಕಬೇಕು. ಹೀಗೆ ಎರಡರಿಂದ ಮೂರುದಿನ ಹಪ್ಪಳವನ್ನು ಒಣಗಿಸಿ ಡಬ್ಬದಲ್ಲಿ ಹಾಕಿಯಿಟ್ಟರೆ ಹಲವು ಸಮಯದ ತನಕ ತಿನ್ನಬಹುದು.

ಹಲಸಿನ ಹಣ್ಣಿನ ಮುಳ್ಕ

ಹಲಸಿನ ಹಣ್ಣಿನ ಮುಳ್ಕ ಮಾಡಲು ಚೆನ್ನಾಗಿ ತೊಳೆದ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಕೊಳ್ಳಬೇಕು. ಬಳಿಕ ಅಕ್ಕಿ , ಬೀಜ ತೆಗೆದ ಹಲಸಿನ ಹಣ್ಣಿನ ಸೊಳೆ , ಸಿಹಿಗೆ ತಕ್ಕಷ್ಟು ಬೆಲ್ಲ , ಏಲಕ್ಕಿ ಬೇಕಾದರೆ ಮಾತ್ರ ಹಾಕಿಕೊಳ್ಳಬಹುದು. ನೀರನ್ನು ಸೇರಿಸದೆ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಬಳಿಕ ಕಾದ ಎಣ್ಣೆ ಬಾಣಲಿಯಲ್ಲಿ ಮಿಶ್ರಣವನ್ನು ಕರಿಯಿರಿ. ಹಲಸಿನ ಹಣ್ಣಿನ ಹಲ್ವಾ ಹಲ್ವಾ ಪ್ರಿಯರಿಗೆ ಹಲಸಿನ ಹಣ್ಣಿನ ಹಲವು ಇಷ್ಟವಾಗದಿರಲು ಸಾಧ್ಯವಿಲ್ಲ.

Jackfruit mulka

ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ ಬಹು ರುಚಿ. ಮೊದಲು ಬೀಜ ತೆಗೆದ ಹಲಸಿನ ಹಣ್ಣನ್ನು ನೀರು ಸೇರಿಸದೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಬಿಸಿ ಬಾಣಲೆಗೆ ಹಾಕಬೇಕು. ಹಣ್ಣಿನ ಪ್ರಮಾಣಕ್ಕೆ ಅಂದಾಜಿಗೆ ಸರಿದೂಗುವಂತೆ ಬೆಲ್ಲವನ್ನು ಹಾಕಬೇಕು. ಬಳಿಕ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡ ಮಿಶ್ರಣ ಹಾಗೂ ಬೆಲ್ಲ ನೀರಾಗಲು ಬಿಡಬೇಕು. ಆಮೇಲೆ ಸೋಸಿಕೊಳ್ಳಬೇಕು. ಬಳಿಕ ಸೋಸಿಕೊಂಡು ಮಿಶ್ರಣವನ್ನು ಕುದಿಸ್ಕೊಳ್ಳುತ್ತಾ ಪ್ರತಿ 10ನಿಮಿಷಕ್ಕೊಮ್ಮೆ ಕೈಯಾಡಿಸುತ್ತಿರಬೇಕು. ಬಣ್ಣ ಬದಲಾಗುತ್ತಾ ಬರುತ್ತದೆ . ಕಂದು ಬಣ್ಣ ,ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ.

Jackfruit Halwa

ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಬೇಕು. ಹದವನ್ನು ಸೌಟಿನಲ್ಲಿ ತಿರುಗಿಸುತ್ತಾ ಇರಬೇಕು. ಬಳಿಕ ಮಿಶ್ರಣವನ್ನು ಬಟ್ಟಲಿನಲ್ಲಿ ಹಾಕಿಕೊಳ್ಳಬೇಕು. ತುಪ್ಪದ ಜೊತೆಗೆ ಗೋಡಂಬಿಯನ್ನು ಕೂಡ ಹುರಿದು ಹಾಕಿಕೊಳ್ಳಬಹುದು. ಅದು ನಿಮ್ಮ ಆಯ್ಕೆ ಬಿಟ್ಟಿದ್ದು. ಒಮ್ಮೆಲೆ ತುಪ್ಪವನ್ನು ಜಾಸ್ತಿ ಸೇರಿಸಬಾರದು. ಸ್ವಲ್ಪ ಸ್ವಲ್ಪ ತುಪ್ಪವನ್ನು ಸೇರಿಸುತ್ತಾ ಇರಬೇಕು. ನೀವು ಮಿಶ್ರಣವನ್ನು ಬಟ್ಟಲಿಗೆ ಹಾಕಿ ತಣಿದ ಮೇಲೆ ತಿನ್ನಲು ರುಚಿಯಾದ ತುಪ್ಪ ತಯಾರಾಗುತ್ತದೆ. ತುಪ್ಪ ಮಾಡಲು ಕೊಂಚ ಸಮಯ ಹಿಡಿಯುವುದರಿಂದ ತಾಳ್ಮೆ ಅಗತ್ಯ.

ಹಲಸಿನ ಹಣ್ಣು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಸಿಗುತ್ತದೆ . ಮಳೆಗಾಲದ ಸಮಯದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಖಾದ್ಯಗಳನ್ನು ಸವಿಯಲು ಕೂಡ ಕೊಂಚ ರುಚಿ ಜಾಸ್ತಿ. ಜೊತೆಗೆ ಇದೊಂದು ಆರೋಗ್ಯ ಗುಣವುಳ್ಳ ಹೌದು. ಈ ಕಾರಣದಿಂದಾಗಿ ಹಲಸಿನ ಹಣ್ಣಿನಿಂದ ಮಾಡುವ ಖಾದ್ಯಗಳು ಕರಾವಳಿಯ ವಿಶೇಷ ಖಾದ್ಯಗಳಾಗಿ ಸ್ಥಾನ ಪಡೆಯಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button