ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತದ 5 ಪ್ರಸಿದ್ಧ ತಾಣಗಳಿಗೆ ಪರ್ಯಾಯವಾಗಿ ನೀವು ಈ ಜಾಗಗಳನ್ನು ನೋಡಬಹುದು

ಭಾರತ ಹಲವು ಜನಪ್ರಿಯ ತಾಣಗಳಿಗೆ ಹೆಸರುವಾಸಿ . ಇಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಸದಾ ಪ್ರವಾಸಿಗರು ತುಂಬಿರುತ್ತಾರೆ. ಕೆಲವರಿಗೆ ಅತಿಯಾದ ಜನಸಂದಣಿ ಇಷ್ಟವಾಗುವುದಿಲ್ಲ. ಅಂತಹವರಿಗೆ ಜನಸಂದಣಿಯ ತಪ್ಪಿಸಲು ಜನಪ್ರಿಯ ತಾಣಗಳನ್ನು ಹೋಲುವ ಪರ್ಯಾಯ ತಾಣಗಳ ಮಾಹಿತಿ ಇಲ್ಲಿದೆ.

  • ನವ್ಯಶ್ರೀ ಶೆಟ್ಟಿ

ಪ್ರಸಿದ್ಧ ತಾಣಗಳಲ್ಲಿ ಸದಾ ಜನಸಂದಣಿ ಇರುತ್ತದೆ. ಅತಿಯಾದ ಜನಸಂಖ್ಯೆ ಕೆಲವರಿಗೆ ಕಿರಿ ಕಿರಿ. ಅಂತಹ ಜಾಗಗಳಿಗೆ ಹೋದಾಗ ಕೆಲವೊಮ್ಮೆ ಅಷ್ಟೊಂದು ಖುಷಿಪಡಲು ಅಸಾಧ್ಯ . ಆದರೆ ಭಾರತದ ಪ್ರಸಿದ್ಧ ತಾಣಗಳನ್ನು ಹೋಲುವಂತಹ ಕೆಲವು ತಾಣಗಳು ಭಾರತದಲ್ಲಿವೆ. ಆದರೆ ಆ ತಾಣಗಳು ಅತಿ ಹೆಚ್ಚು ಪ್ರಚಾರ ಪಡೆದಿಲ್ಲ. ಪ್ರಚಲಿತಕ್ಕೆ ಬಂದಿಲ್ಲ. ಅಂತಹ ಜಾಗಗಳ ಮಾಹಿತಿ ನಿಮಗಾಗಿ. ನೀವು ಕೂಡ ಒಮ್ಮೆ ಹೋಗಿಬನ್ನಿ.

ಮಸ್ಸೂರಿಯ ಬದಲಾಗಿ ವಯನಾಡಿಗೆ ಹೋಗಿಬನ್ನಿ.

ಮಸ್ಸೂರಿ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಒಂದು ಗಿರಿಧಾಮ . ಸದಾ ಜನಸಂದಣಿ ,ಪ್ರವಾಸಿಗರಿಂದ ತುಂಬಿರುವ ಸ್ಥಳವಿದು. ಈ ಜಾಗ ವಿರಳವಾಗಿ ಜನಸಂಖ್ಯೆಯನ್ನು ಹೊಂದಿರುವುದು ಅಪರೂಪ. ಆದರೆ ಅತಿಯಾದ ಜನಸಂಖ್ಯೆ ಪ್ರಕೃತಿಯ ನಡುವೆ ಏಕಾಂತ ಕಳೆಯಬೇಕು ಎನ್ನುವ ಆಸೆ ಇರುವವರಿಗೆ ಕೊಂಚ ಕಷ್ಟ ಆಗಬಹುದು.

vaynad

ಆದರೆ ಅವರು ಮಸ್ಸೂರಿ ಯಷ್ಟೇ ಖುಷಿ ನೀಡುವ ಇನ್ನೊಂದು ಜಾಗಕ್ಕೆ ಹೋಗಿ ಬರಬಹುದು. ಅದು ದೇವರ ಸ್ವಂತ ನಾಡು ಕೇರಳದ ವಯನಾಡು. ಹೆಚ್ಚೇನು ಪ್ರಸಿದ್ಧವಲ್ಲದ ಈ ಜಾಗಗಳು ತುಂಬಾ ಸುಂದರವಾಗಿದೆ. ನೀವು ವರ್ಷದ ಯಾವ ಸಮಯದಲ್ಲಿ ಹೊಂದರು ನಿಮಗೆ ಸೊಗಸಾಗಿ ಕಾಣುತ್ತದೆ. ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಿಂದ ಆವೃತವಾಗಿರುವ ಕೇರಳದ ವಯನಾಡು ಅರಣ್ಯ ಮೀಸಲು ಮತ್ತು ವನ್ಯಜೀವಿ ಧಾಮಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜನಸಂದಣಿಯ ಕಾರಣದಿಂದ ಮಸ್ಸೂರಿ ಹಿಡಿಸದೇ ಇದ್ದರೆ ನೀವು ಕೇರಳದ ವಯನಾಡು ಕಡೆಗೂ ಹೋಗಿ ಬರಬಹುದು.

ಹಂಪಿಯ ಬದಲು ತಂಜಾವೂರು

ಹಂಪಿ ಕರ್ನಾಟಕ ಪ್ರಸಿದ್ಧ ತಾಣಗಳಲ್ಲಿ ಒಂದು. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಂಪಿ ಸ್ಥಾನ ಪಡೆದುಕೊಂಡಿದೆ. ಪ್ರತಿನಿತ್ಯ ಹಂಪಿಯನ್ನು ನೋಡಲೆಂದೇ ಹಲವು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಂಪಿಗೆ ಪರ್ಯಾಯ ಎನ್ನುವಂತೆ ಇರುವ ಇನ್ನೊಂದು ಪಾರಂಪರಿಕ ತಾಣಗಕ್ಕೆ ಹೋಗಬಹುದು. ಅದುವೇ ತಂಜಾವೂರು.

tanjavuru

ತಂಜಾವೂರು ಭಾರತದ ಅತ್ಯಂತ ಪುರಾತನ ಸ್ಥಳಗಳಲ್ಲಿ ಒಂದು. ತಂಜಾವೂರಿನ ವಾಸ್ತುಶಿಲ್ಪಗಳು ಅದ್ಭುತಗಳು. 9ನೆಯ ಶತಮಾನದಷ್ಟು ಹಳೆಯದಿರುವ ಪುರಾತನ ದೇವಾಲಯ ಇಲ್ಲಿದೆ. ಪ್ರವಾಸಿಗರನ್ನು ಆಕರ್ಷಿಸಲು ಆರ್ಟ್ ಗ್ಯಾಲರಿ ಕೂಡ ಇದೆ.. ಈ ಜಾಗ ನೋಡುತ್ತಿದ್ದಂತೆ ನಿಮಗೆ ಇತಿಹಾಸದ ಚೆಂದದ ಚಿತ್ರಗಳು ಕಣ್ಮುಂದೆ ಬರಬಹುದು.

ಗೋವಾದ ಬದಲಿಗೆ ಕರ್ನಾಟಕದ ಗೋಕರ್ಣಕ್ಕೆ ಹೋಗಿ ಬನ್ನಿ

ಗೋವಾ ಪ್ರವಾಸಿಗರಿಗೆ ಮೋಜು ಮಸ್ತಿ ಮಾಡಲು ನೆಚ್ಚಿನ ತಾಣ . ಭಾರತದ ಮಾತ್ರವಲ್ಲದೇ ವಿದೇಶಿಗರು ಕೂಡ ಗೋವಾದ ಬೀಚ್ ಗಳಲ್ಲಿ ನೆರೆದಿರುತ್ತಾರೆ . ರಜಾ ಮಜಾ ಕಳೆಯಲು ಹಲವರು ಗೋವಾಕ್ಕೆ ಹೋಗ್ತಾರೆ .ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ ಗೋವಾ.

gokarna

ಆದರೆ ಗೋವಾ ಕೆಲವರಿಗೆ ದುಬಾರಿ ಕೂಡ ಹೌದು. ಖರ್ಚು ಹಾಗೂ ಜನಸಂದಣಿಯ ತಪ್ಪಿಸಲು ಗೋವಾದ ಕಡಲ ತೀರದಂತೆ ಇರುವ ಇನ್ನೊಂದು ಕಡಲ ತೀರಕ್ಕೆ ಹೋಗಬಹುದು . ಆ ಕಡಲತೀರ ಇರುವುದು ಕರ್ನಾಟಕದಲ್ಲಿ . ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣ ಬೀಚ್ ಗೋವಾದ ಕಡಲತೀರಗಳಿಗೆ ಪರ್ಯಾಯ ಸ್ಥಳ. ಗೋವಾಕ್ಕೆ ಹೋಲಿಸಿದರೆ ಜನಸಂಖ್ಯೆ ಕಡಿಮೆ. ಖರ್ಚು ಕೂಡ ಕಡಿಮೆ. ಗೋಕರ್ಣ ಬೀಚ್ ಇತ್ತೀಚಿನ ದಿನಗಳಲ್ಲಂತೂ ಹೆಚ್ಚಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ರಿಷಿಕೇಶ್ ಬದಲು ತೀರ್ಥನ್ ಕಣಿವೆ

ರಿಷಿಕೇಶ್ ಧಾರ್ಮಿಕವಾಗಿ ಪ್ರಸಿದ್ಧಿ ಹೊಂದಿರುವ ಜಾಗ. ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯ ಗಂಗಾ ನದಿಯ ತಟದಲ್ಲಿದೆ.ಧಾರ್ಮಿಕ ಸ್ಥಳಗಳ ಜೊತೆಗೆ ಇಲ್ಲಿ ರಿವರ್ ರಾಫ್ಟಿಂಗ್ ( river rafting )ಜನಪ್ರಿಯ. ಆದರೆ ಇಲ್ಲಿ ನೀವು river rafting ಹೋಗುವಾಗ ನೀವು ಕೆಲವೊಮ್ಮೆ ನಿಮ್ಮ ಸರದಿಗೆ ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಸಮಯದ ಉಳಿಸಬೇಕು ಅಂದ್ರೆ ಇದಕ್ಕೆ ಪರ್ಯಾಯ ಜಾಗವೊಂದಿದೆ ಅದು ಹಿಮಾಚಲ ಪ್ರದೇಶದಲ್ಲಿದೆ.

ನೀವು ಇದನ್ನು ಇಷ್ಟ ಪಡುಬಹುದು: ನೀವು ವಿದೇಶಕ್ಕೆ ಹೋದಾಗ ಈ ಊರಿನ ಹೆಸರು ನೋಡಿ ಬೆರಗಾಗಬೇಡಿ: ನಮ್ಮ ದೇಶದ ಊರಿನ ಹೆಸರನ್ನೇ ಹೊಂದಿರುವ ವಿದೇಶದ 13 ಊರುಗಳು

ರಿಷಿಕೇಶ್ ಬದಲು ನೀವು ಹಿಮಾಚಲ ಪ್ರದೇಶದ ಪ್ರದೇಶದ ತೀರ್ಥನ್ ಕಣಿವೆಗೆ ಹೋಗಬಹುದು. ಈ ಜಾಗ ಭಾರತದ ರಿವರ್ ರಾಫ್ಟಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ . ಚಾರಣಿಗರ ಸ್ವರ್ಗದಂತಿದೆ. ರಿವರ್ ರಾಫ್ಟಿಂಗ್ ಜೊತೆಗೆ ನೀವು ಪ್ರಕೃತಿಯ ಸೌಂದರ್ಯ ಅನುಭವಿಸಬಹುದು. ತೀರ್ಥನ್ ಕಣಿವೆ ರಿಷಿಕೇಶ್ ನ ಪ್ರತಿರೂಪದಂತೆ.

ನೈನಿತಾಲ್ ಬದಲು ತವಾಂಗ್

ನೈನಿತಾಲ್ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಒಂದು. ಉತ್ತರಾಖಂಡ್ ರಾಜ್ಯದಲ್ಲಿರುವ ಸುಂದರ ಸ್ಥಳ. ನೈನಿತಾಲ್ ಸೌಂದರ್ಯವನ್ನು ಬಣ್ಣಿಸಲು ಅಸಾಧ್ಯ. ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ನೈನಿತಾಲ್ ಹಲವು ಸುಂದರ ತಾಣಗಳನ್ನು ಹೊಂದಿದೆ. ನೈನಿತಾಲ್ ಸರೋವರದ ನೆಲೆ ಈ ಕಾರಣಕ್ಕಾಗಿ ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ನೈನಿತಲ್ ಬದಲಾಗಿ ಭಾರತದ ಇನ್ನೊಂದು ತಾಣಗಳಿಗೆ ಹೋಗಬಹುದು ನೈನಿತಾಲ್ ಭಾರತ ಮತ್ತು ಚೀನಾದ ನಡುವೆ ಗಡಿ ಹಂಚಿಕೊಂಡಿರುವ ಸ್ಥಳ ತವಾಂಗ್.

ನೈನಿತಾಲ್ ಗೆ ಪರ್ಯಾಯವಾಗಿ ನೀವು ತವಾಂಗ್ ಆಯ್ಕೆ ಮಾಡಿಕೊಳ್ಳಬಹುದು. ತವಾಂಗ್ ಎಂದಿಗೂ ನಿಮಗೆ ನಿರಾಸೆ ಮಾಡುವುದಿಲ್ಲ. ಸುತ್ತಲೂ ಹಸಿರು ಚೆಂದದ ಸರೋವರಗಳು ಜೊತೆಗೆ ರುಚಿಕರವಾದ ಆಹಾರ .ಎಲ್ಲಾ ರೀತಿಯಲ್ಲೂ ಪ್ರವಾಸಿಗರಿಗೆ ಉತ್ತಮ ಆಯ್ಕೆ. ಸುಂದರವಾಗಿ ನೆಲೆಗೊಂಡಿರುವ ಸೌಂದರ್ಯ ಹಾಗೂ ವರ್ಣರಂಜಿತ ನೈಸರ್ಗಿಕ ವಾತಾವರಣ ಗಳಿಂದ ನಿಮ್ಮನ್ನು ಸ್ವಾಗತಿಸುತ್ತದೆ ತವಾಂಗ್

ಭಾರತದ ಪ್ರಸಿದ್ಧ ತಾಣಗಳ ಪರ್ಯಾಯ ಜಾಗಗಳಿವು . ಈ ಜಾಗಗಳಿಗೆ ನೀವು ಒಮ್ಮೆ ಭೇಟಿ ನೀಡಿ. ನಿಮಗೆ ಪ್ರಸಿದ್ಧ ತಾಣಗಳಿಗೆ ಹೋದಷ್ಟೇ ಖುಷಿ ಹಾಗೂ ಆನಂದ ನೀಡುತ್ತದೆ ಈ ಜಾಗಗಳು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button