ನೀವು ವಿದೇಶಕ್ಕೆ ಹೋದಾಗ ಈ ಊರಿನ ಹೆಸರು ನೋಡಿ ಬೆರಗಾಗಬೇಡಿ: ನಮ್ಮ ದೇಶದ ಊರಿನ ಹೆಸರನ್ನೇ ಹೊಂದಿರುವ ವಿದೇಶದ 13 ಊರುಗಳು
ಒಂದೇ ಹೆಸರನ್ನು ಹಲವು ಮಂದಿಗೆ ಇಡಬಹುದು. ಕೆಲವು ಊರಿನ ದೇವರ ಹೆಸರನ್ನೇ ಮಕ್ಕಳಿಗೆ ಇಡುವುದರಿಂದ ಒಂದೇ ಊರಲ್ಲಿ ಒಂದೇ ಹೆಸರಿನ ಹತ್ತಾರು ಮಂದಿ ಇರುತ್ತಾರೆ. ಅದೇ ಥರ ಒಂದೇ ಹೆಸರಿನ ಊರುಗಳೂ ಇವೆ. ಇಂಟರೆಸ್ಟಿಂಗ್ ಅಂದ್ರೆ ನಮ್ಮ ದೇಶದಲ್ಲಿರುವ ಊರಿನ ಹೆಸರಿನ ಊರುಗಳು ಬೇರೆ ದೇಶದಲ್ಲೂ ಇವೆ. ಬೇರೆ ದೇಶಗಳಲ್ಲಿ ಆ ಹೆಸರುಗಳನ್ನು ನೋಡಿದಾಗ ಖುಷಿಯಾಗುತ್ತದೆ. ನೀವು ಪ್ರವಾಸ ಹೋದಾಗ ವಿದೇಶಗಳಲ್ಲಿ ನೋಡಬಹುದಾದ ನಮ್ಮ ದೇಶದ ಊರಿನ ಹೆಸರುಗಳ ಪಟ್ಟಿ ಇಲ್ಲಿದೆ.
- ನವ್ಯಶ್ರೀ ಶೆಟ್ಟಿ
1. ದೆಹಲಿ, ಭಾರತ/ ದೆಹಲಿ, ಅಮೆರಿಕಾ
ದೇಶದ ರಾಷ್ಟ್ರ ರಾಜಧಾನಿಯ ನಗರವು ಅಮೆರಿಕ. ಕೆನಡಾದ ಒಂಟಾರಿಯೊ (ontario)ನಲ್ಲಿ ದೆಹಲಿ(delhi) ನಗರವಿದೆ. ಇದನ್ನು ದೆಲ್-ಹೈ ಎಂದು ಉಚ್ಚರಿಸುತ್ತಾರೆ.
2. ಕೊಚ್ಚಿ, ಕೇರಳ/ ಕೊಚ್ಚಿ, ಜಪಾನ್
ಕೇರಳದ ಕೊಚ್ಚಿ ಭಾರತದ ಪ್ರಮುಖ ನಗರ. ಎರ್ನಾಕುಲಂನ ಆಕರ್ಷಕ ಪಟ್ಟಣ. ಆದರೆ ಇದೇ ಕೊಚ್ಚಿ ಹೆಸರಿನ ಇನ್ನೊಂದು ನಗರ ಜಪಾನ್ ದೇಶದಲ್ಲಿದೆ. ಜಪಾನ್ ದೇಶದ ಪ್ರವಾಸಿ ಸ್ಥಳ ಕೊಚ್ಚಿ ನಗರ. ಭಾರತದ ಕೊಚ್ಚಿ ಹಾಗೂ ಜಪಾನ್ ನಗರದ ಕೊಚ್ಚಿ ಕೆಲವು ಸಾಮ್ಯತೆಗಳಿವೆ. ಎರಡು ಸ್ಥಳಗಳ ಜನರು ಹೆಚ್ಚಾಗಿ ಸಮುದ್ರದ ಆಹಾರ (sea food) ಇಷ್ಟ ಪಡುತ್ತಾರೆ.
3. ಪಾಟ್ನಾ, ಬಿಹಾರ್/ ಪಾಟ್ನಾ, ಸ್ಕಾಟ್ ಲ್ಯಾಂಡ್
ಪಾಟ್ನಾ, ಬಿಹಾರ ರಾಜ್ಯದ ರಾಜಧಾನಿ. ಈ ಸ್ಥಳದ ಪ್ರಭಾವ ಸ್ಕಾಟ್ಲ್ಯಾಂಡ್ ನಗರದ ಮೇಲೆ ಕೂಡ ಬೀರಿದೆ. ವಿಲಿಯಂ ಫುಲರ್ಟನ್ (William Fullerton) ಸ್ಕಾಟ್ಲ್ಯಾಂಡ್ ನಲ್ಲಿ ಪಾಟ್ನಾ ನಗರವನ್ನು ಆವಿಷ್ಕರಿಸಿದನು. ಆತನ ತಂದೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಈ ಕಾರಣದಿಂದ ಅವರಿಗೆ ಪಾಟ್ನಾ ನಗರದ ಮೇಲೆ ಪ್ರೀತಿ ಸ್ವಲ್ಪ ಜಾಸ್ತಿ.
ನೀವು ಇದನ್ನು ಇಷ್ಟಪಡಬಹುದು: ಉತ್ತರ ಕನ್ನಡ ಕಡೆ ಹೊರಟವರು ಈ 13 ತಾಣಗಳನ್ನು ಮನಸ್ಸಲ್ಲಿಟ್ಟುಕೊಳ್ಳಿ
4. ಕಲ್ಕತ್ತಾ, ಪಶ್ಚಿಮ ಬಂಗಾಳ/ ಕಲ್ಕತ್ತಾ ಅಮೆರಿಕಾ
ಅಮೆರಿಕದಲ್ಲಿ 1870ರಲ್ಲಿ ಕಲ್ಕತ್ತಾವು ಪ್ರಮುಖ ನಗರವಾಗಿ ಉದಯವಾಯಿತು. ಇಂದಿಗೂ ಅಮೆರಿಕ ಕಲ್ಕತ್ತಾ ನಗರ ಜನರ ವಾಸಸ್ಥಳ. ಭಾರತದಲ್ಲಿ ಹಿಂದಿನ ಕಲ್ಕತ್ತಾ ನಗರವು ಇದೀಗ ಕೊಲ್ಕತ್ತಾ ನಗರವಾಗಿದೆ. ಭಾರತದ ಈ ನಗರ ಎಲ್ಲಾ ಪ್ರಕೃತಿ ಸೌಕರ್ಯಗಳ ಸಂಗಮ ತಾಣ. ಪ್ರವಾಸಿಗರಿಗೆ ಅನನ್ಯತೆ ಸೃಷ್ಟಿ ಮಾಡುವ ಊರು.
5. ಲಕ್ನೋ, ಉತ್ತರ ಪ್ರದೇಶ/ ಲಕ್ನೋ, ಅಮೆರಿಕಾ
ಲಕ್ನೋ ನಗರ ಅಮೆರಿಕಾದಲ್ಲಿ ಮೋಡಗಳ ಕೋಟೆಯಿದ್ದ ಹಾಗೆ. ಅಮೆರಿಕದಲ್ಲಿ 16 ಕೋಣೆಯುಳ್ಳ ಸುಮಾರು 5500 ಎಕರೆ ಗಳ ಪರ್ವತ ಶ್ರೇಣಿ, ಎಸ್ಟೇಟ್ ನ ಮಹಲ್. ಇದು ಭಾರತದ ಪುರಾತನ, ಅಂದಿನ ಶ್ರೀಮಂತ ರಾಜ ಸಂಸ್ಕೃತಿಯನ್ನು ನೆನಪಿಸುತ್ತದೆ.
6. ಹೈದರಾಬಾದ್, ಆಂಧ್ರಪ್ರದೇಶ/ ಹೈದರಾಬಾದ್, ಪಾಕಿಸ್ತಾನ
ಹೈದರಾಬಾದ್, ಆಂಧ್ರ ಪ್ರದೇಶದ ಪ್ರಮುಖ ನಗರ. ಪಾಕಿಸ್ತಾನದಲ್ಲಿ ಹೈದರಬಾದ್ ಹೆಸರಿನ ಒಂದು ನಗರವಿದೆ. ಪ್ರವಾದಿ ಮಹಮ್ಮದ್ ಸಹೋದರ ಸಂಬಂಧಿ ಹೈದರ್ ಅಲಿ ಪಾಕಿಸ್ತಾನದ ಹೈದರಬಾದ್ ಉದಯಕ್ಕೆ ಕಾರಣ. ಆಂಧ್ರ ಪ್ರದೇಶದ ಮತ್ತು ಪಾಕಿಸ್ತಾನದ ಹೈದರಬಾದ್ ನಗರ ರಾಜ ಮನೆತನದ ಶ್ರೀಮಂತ ಸಂಸ್ಕೃತಿ ಬಿಂಬಿಸುತ್ತದೆ.
7. ಸೇಲಮ್, ತಮಿಳುನಾಡು/ ಸೇಲಮ್(salem) ಅಮೆರಿಕಾ
ಭಾರತದ ಅತಿ ಪುರಾತನ ನಗರ ಸೇಲಮ್. ಇದು ತಮಿಳುನಾಡು ರಾಜ್ಯದಲ್ಲಿದೆ. ಈ ನಗರದ ಹೆಸರಿನ ಅಮೆರಿಕಾದ ಸ್ಥಳವು ಮೊದಲ ಮತ್ತು ಎರಡನೆಯ ಶತಮಾನದಲ್ಲಿ ಉಲ್ಲೇಖವಾಗಿದೆ. ವಿಶ್ವ ಶಾಂತಿ ಸಾರಿದ ಸ್ಥಳ ಅಮೆರಿಕದ ನಗರ ಸೇಲಮ್.
8. ಬರೋಡ, ಗುಜರಾತ್/ ಬರೋಡ, ಅಮೆರಿಕಾ
ಗುಜರಾತ್ ನ ಬರೋಡ ತನ್ನ ವೈವಿಧ್ಯತೆಯಿಂದ ಹೆಸರು ಪಡೆದ ಸ್ಥಳ. ಪಾರಂಪರಿಕ ತಾಣ. ಖಾದ್ಯಗಳಿಗೆ ಹೆಸರುವಾಸಿ. ಅಮೆರಿಕಾ ದೇಶದಲ್ಲಿ ಬರೋಡ ಹೆಸರಿನ ಒಂದು ನಗರವಿದೆ. ಸುಮಾರು 1.7 ಚದರ ಕಿಮೀ ವಿಸ್ತೀರ್ಣ ಇರುವ ಸುಂದರ ಊರು. ಈ ಹಿಂದೆ ಈ ಊರು ಪೋಮೋನ(Pomona) ಹೆಸರಿನಲ್ಲಿತ್ತು. ಮೈಕಲ್ ಹೌಸರ್ (maichel houser) ಎನ್ನುವವರು ಹೆಸರಿಟ್ಟಿದ್ದರು. ಆದರೆ ಕೆಲ ಸಮಯದ ನಂತರ ಹೆಸರು ಬದಲಾಯಿತು. ತನ್ನ ತಂದೆಯ ಜನ್ಮ ಸ್ಥಳ ಭಾರತ ಆಗಿದ್ದ ಕಾರಣಕ್ಕೆ ಸಿ.ಹೆಚ್. ಪಿಂದರ್ ಎನ್ನುವವರು ಬರೋಡ ಹೆಸರನ್ನು ಸೂಚಿಸಿದರು. ಮುಂದೆ ಅಮೆರಿಕದ ಆ ಸುಂದರ ನಗರ ಬರೋಡ ಎಂದೇ ಕರೆಯಲ್ಪಟ್ಟಿತು.
9. ಥಾಣೆ, ಮಹಾರಾಷ್ಟ್ರ/ ಥಾಣೆ, ಆಸ್ಟ್ರೇಲಿಯಾ
ಭಾರತದ ಥಾಣೆ ಸುಂದರ ನಗರ. ಥಾಣೆ ಎಂದಾಗ ಸುಂದರ ಕಡಲ ನಗರವೇ ನಮ್ಮ ಕಣ್ಮುಂದೆ ಬರುತ್ತದೆ. ಆಸ್ಟ್ರೇಲಿಯಾದಲ್ಲಿ ಒಂದು ಥಾಣೆ ನಗರವಿದೆ. ಇದು ಆಸ್ಟ್ರೇಲಿಯಾದ ದೊಡ್ಡ ನಗರಗಳಿಗಿಂತ ಬಹು ದೂರದಲ್ಲಿರುವ ಪುಟ್ಟ ಊರು.
10. ಇಂದೋರ್, ಮಧ್ಯ ಪ್ರದೇಶ / ಇಂದೋರ್, ಅಮೆರಿಕಾ
ಮಧ್ಯ ಪ್ರದೇಶದ ಇಂದೋರ್ ನಗರ ಭವ್ಯ ಪರಂಪರೆ ಹೊಂದಿರುವ ನಗರ. ತನ್ನದೇ ಆದ ಸ್ಥಳೀಯ ಸೊಗಡನ್ನು ಹೊಂದಿರುವ ನಗರ. ಅಮೆರಿಕಾದಲ್ಲಿ ಇಂದೋರ್ ನಗರವಿದೆ. ಅಮೆರಿಕಾದ ಪಶ್ಚಿಮ ವರ್ಜಿನಿಯಾ(west virgina)ದಲ್ಲಿರುವ ಈ ನಗರವು ಇಂದೋರ್(Indore)ಎನ್ನುವ ವಸಾಹತು ಹೆಸರಿನಿಂದ ಪ್ರೇರಣೆ ಪಡೆದುಕೊಂಡಿದೆ.
11. ಢಾಕಾ, ಬಿಹಾರ/ ಢಾಕಾ, ಬಾಂಗ್ಲಾ ದೇಶ
ಬಾಂಗ್ಲಾ ದೇಶದ ರಾಜಧಾನಿ ಆಗಿರುವ ಢಾಕಾ ಸ್ಥಳವು ಈ ಹಿಂದೆ ಪೂರ್ವ ಪಾಕಿಸ್ತಾನದ ಒಂದು ನಗರವಾಗಿತ್ತು. ಈ ಹಿಂದೆ ಢಾಕಾ ಶ್ರೀಮಂತ ನಗರವಾಗಿತ್ತು. ಆದರೆ ಢಾಕಾದ ಪರಿಸ್ಥಿತಿ ಬದಲಾಗಿದೆ. ಢಾಕಾ ನಗರದ ನೋವಿನ ಕಥೆಗಳ ಬಗ್ಗೆ ಹಲವು ಲೇಖಕರು ತಮ್ಮ ಬರವಣಿಗೆಯಲ್ಲಿ ಉಲ್ಲೇಖಿಸಿದ್ದಾರೆ. ಬಿಹಾರ ರಾಜ್ಯದಲ್ಲಿ ಢಾಕಾ ನಗರ ಆ ರಾಜ್ಯದ ಪ್ರಮುಖ ವಿಧಾನ ಸಭಾ ಕ್ಷೇತ್ರ.
12. ಬಾಲಿ, ರಾಜಸ್ತಾನ್/ ಬಾಲಿ, ಇಂಡೋನೇಷ್ಯಾ
ರಾಜಸ್ತಾನದ ಪಲಿ ಜಿಲ್ಲೆಯಲ್ಲಿರುವ ಪುಟ್ಟ ಊರು ಬಾಲಿ. ಇಂಡೋನೇಷ್ಯಾದ ಬಾಲಿ ನಗರ ಒಂದು ಪ್ರವಾಸಿ ಸ್ಥಳ. ಕಡಲಿನ ಪ್ರಶಾಂತತೆ ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಜಾಗ.
13. ಫರೀದ್ ಕೋಟ್, ಪಂಜಾಬ್/ ಫರೀದ್ ಕೋಟ್, ಪಾಕಿಸ್ತಾನ
ಫರೀದ್ ಕೋಟ್ ಪಂಜಾಬಿನ ಒಂದು ಜಿಲ್ಲೆ. ಪಾಕಿಸ್ತಾನದ ಫರೀದ್ ಕೋಟ್, ಒಂದು ಪುಟ್ಟ ಹಳ್ಳಿ. ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನ ಹುಟ್ಟೂರು ಫರೀದ್ ಕೋಟ್.
ನಮ್ಮ ಜಿಲ್ಲೆಯ ಊರುಗಳು ನಮ್ಮ ರಾಜ್ಯದ ಬೇರೆ ಯಾವುದೋ ಜಿಲ್ಲೆಯಲ್ಲಿ ಇದ್ದಾಗ ನಮ್ಮ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಹಾಗೆ ನಮ್ಮ ದೇಶದ ಕೆಲವು ನಗರಗಳ ಹೆಸರು ವಿದೇಶದಲ್ಲಿ ಇರುವುದನ್ನು ಕೇಳಿದಾಗ ಅಚ್ಚರಿಯ ಜೊತೆಗೆ ಖುಷಿಯ ಸಂಗತಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.