ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಶಿಕ್ಷಕ ಮಿತ್ರರ ಜೊತೆ ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಪ್ರವಾಸ ಹೋಗಿದ್ದ ಶಿಕ್ಷಕಿ ಸುವರ್ಣಲಕ್ಷ್ಮಿ ಮಹಾಬಲಿಪುರಂನ ಚಂದವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ನಾವು ಚಿಕ್ಕವರಿರುವಾಗ ಮಹಾಬಲಿಪುರಂ ಮಹಾಬಲಿಪುರಂ(mahabalipuram) ಅಂತ ತೆಲುಗು ದೂರದರ್ಶನದಲ್ಲಿ ಒಂದು ಹಾಡು ಬರುತ್ತಿತ್ತು. ಅದನ್ನು ನೋಡಿದಾಗೆಲ್ಲಾ ಮಹಾಬಲಿಪುರಂ ನೋಡಬೇಕೆಂದು ಅನಿಸುತ್ತಿತ್ತು. ಆ ಅವಕಾಶ ಇತ್ತೀಚೆಗೆ ಒದಗಿ ಬಂತು. 

ಇತ್ತೀಚೆಗೆ ನಮ್ಮ ಶಿಕ್ಷಕ ಮಿತ್ರರು ಏರ್ಪಡಿಸಿದ್ದ ಪ್ರವಾಸದಲ್ಲಿ ಬೇರೆ ಬೇರೆ ಊರುಗಳನ್ನು ನೋಡಿಕೊಂಡು ರಾತ್ರಿ 9.30 ಆಗಿತ್ತು. ನಮ್ಮ ಬಸ್ ಮಹಾಬಲಿಪುರಂನ ಪ್ರಸಿದ್ಧ ಗಂಗಾವತರಣದ ಬಳಿ ನಿಂತಿತು. ನನಗೆ ಖುಷಿಯೋ ಖುಷಿ ಆ ಶಿಲ್ಪಕ್ಕೆ ಒಳ್ಳೆಯ ವಿದ್ಯುದ್ದೀಪಗಳನ್ನು ಅಳವಡಿಸಿದ್ದರಿಂದ ಬಹಳ ಆಕರ್ಷಣೀಯವಾಗಿತ್ತು. ಈಗಲೇ ಎಲ್ಲಾ ನೋಡಲಾಗುವುದಿಲ್ಲವಲ್ಲ ಅಂತ

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

ಬೇಸರವಾಗಿ ರೂಮ್ ಪಡೆದು ಮಲಗಿದರೂ ಬೆಳಗ್ಗೆ ಮಹಾಬಲಿಪುರಂ ನೋಡುತ್ತೀನಿ ಅನ್ನುವ ಕುತೂಹಲಕ್ಕೆ

ನಿದ್ದೆಯೇ ಬರದೆ ಒದ್ದಾಡಿದೆ.

ಬೆಳಗ್ಗೆ 5.30ಕ್ಕೆ ಎದ್ದು ಸಮುದ್ರತೀರದಲ್ಲಿ ಸೂರ್ಯೋದಯ ನೋಡೋಣ ಅಂತ ನನ್ನ ಯಜಮಾನರನ್ನು ಎಬ್ಬಿಸಿದರೆ ವಾರದ ಹಿಂದೆ ತಮ್ಮ ಸ್ನೇಹಿತರ ಜೊತೆ ಇದೇ ಪ್ರವಾಸ ಕೈಗೊಂಡಿದ್ದ ಅವರಿಗೆ ಬರಲು ಆಸಕ್ತಿ ಇರಲಿಲ್ಲ. ಹಾಗಾಗಿ ತಿಳಿಯದ ಊರಿನಲ್ಲಿ ಬರದ ತಮಿಳಿನಲ್ಲಿ ದಾರಿ ಕೇಳುತ್ತಾ ಸಮುದ್ರ ದಡಕ್ಕೆ ಹೊರಟೆ. ಅಲ್ಲಿ ನನಗಿಂತ ಮೊದಲೇ ನಮ್ಮ ಬಸ್ಸಿನ ಮಿತ್ರರು ಇದ್ದಿದ್ದರಿಂದ ಅವರ ಜೊತೆಯಲ್ಲಿ ಸೂರ್ಯೋದಯ ಸಮಯದಲ್ಲಿ ಕೆಂಪು ಕೆಂಪಾದ ಸಮುದ್ರದ ನೀರಿನ ಕಿರಿ ಹಿರಿ ಅಲೆಗಳೊಂದಿಗೆ ಮನಸೋ ಇಚ್ಛೆ ಆಟ ಆಡಿದೆವು.

Mahabalipuram

ಆನಂತರ ರೂಂಗೆ ಹೋಗಿ ಫ್ರೆಷ್ ಆಗಿ ಶೋರ್ ಟೆಂಪಲ್(shore temple) ನೋಡಲು ಹೋದೆವು ಅಲ್ಲಿ ಟಿಕೆಟ್ ಪಡೆಯಲು ಹೋದಾಗ ಅಚ್ಚರಿ ಕಾದಿತ್ತು 25ರೂ ಮುಖ ಬೆಲೆಯ ಆ ಟಿಕೆಟ್ ಬಳಸಿ ಮಹಾಬಲಿಪುರಂನ ಎಲ್ಲಾ

ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಬಹುದಾದ್ದರಿಂದ ಟಿಕೆಟ್ ಜಾಗ್ರತೆಯಾಗಿ ಇಟ್ಟುಕೊಳ್ಳಬೇಕೆಂದು ಟಿಕೆಟ್ 

ಕೌಂಟರ್ ನಲ್ಲಿದ್ದವರು ಹೇಳಿದರು ಈ ರಿತೀಯ ಟಿಕೆಟ್ ವ್ಯವಸ್ಥೆ ಬೇರೆಲ್ಲೂ ನೋಡಿರಲಿಲ್ಲ.

ಶೋರ್ ಟೆಂಪಲ್ ಅಂದರೆ ಸಮುದ್ರ ತೀರದಲ್ಲಿರುವ ದೇವಾಲಯ ಎಂದು ಅರ್ಥ. ಈ ದೇವಾಲಯವನ್ನು

Mahabalipuram

ಪಲ್ಲವ ರಾಜರು(pallava dynasty) 8ನೇ ಶತಮಾನದಲ್ಲಿ ಗ್ರಾನೈಟ್ ಬ್ಲಾಕ್ ಗಳಿಂದ ನಿರ್ಮಿಸಲಾಗಿದ್ದು ಇದನ್ನು ದಕ್ಷಿಣಭಾರತದ ಅತ್ಯಂತ ಪ್ರಮುಖ ರಚನಾತ್ಮಕ ದೇವಾಲಯ ಎಂದು ಗುರುತಿಸಲಾಗಿದೆ. ಈ ದೇವಾಲಯದ ಶಿಲ್ಪಕಲೆಯನ್ನು ಕಣ್ತುಂಬಿಕೊಂಡ ನಂತರ ಕೃಷ್ಣನ ಬೆಣ್ಣೆ ಚೆಂಡು ಹೆಸರಿಸಲಾಗುವ ದೊಡ್ಡ ಕಲ್ಲನ್ನು ನೋಡಲು ಹೊರಟೆವು. ಕಿರಿದಾದ ಅಡಿ ಉಳ್ಳ ಈ ದೊಡ್ಡ ಕಲ್ಲೊಂದು ಮಹಾಬಲಿಪುರಂನ ಗಣೇಶನ ರಥದ ಬಳಿ ಇದೆ. ಇದನ್ನು ಅಲ್ಲಿಂದ ಸರಿಸಲು ಪಲ್ಲವ ರಾಜರೂ ಬ್ರಿಟಿಷ್ ರಾಜರೂ ಆನೆಗಳಿಂದ ಎಳೆಸಿ ಪ್ರಯತ್ನ ಪಟ್ಟರೂ ಅದನ್ನು ಇಂಚಷ್ಟೂ ಕದಲಿಸಲಾಗಿಲ್ಲ. ಇದೊಂದು ವಿಸ್ಮಯವೇ ಸರಿ.

ಮುಂದಿನ ಭೇಟಿ ಪಂಚರಥಗಳಿಗೆ ಇವು ಐದೂ ಏಕಶಿಲಾ ರಥಗಳಾಗಿದ್ದು ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇವು ದ್ರಾವಿಡ ಶೈಲಿಯಲ್ಲಿವೆ ಇವುಗಳ ಕಾಲ 6ರಿಂದ 7ನೇ ಶತಮಾನವಾಗಿದ್ದು ಪಲ್ಲವ ರಾಜರಾದ ಮಹೇಂದ್ರವರ್ಮ ಹಾಗೂ ನರಸಿಂಹವರ್ಮ ನಿರ್ಮಿಸಿದರೆಂದೂ ಇತಿಹಾಸ. ಇವುಗಳ ಸೊಬಗನ್ನು ನೋಡಿಯೇ ಅರಿಯ ಬೇಕು ವರ್ಣಿಸಲಾಗುವುದಿಲ್ಲ. 

Mahabalipuram

ಇದರ ನಂತರ ನಾವು ನೋಡ ಹೊರಟಿದ್ದು ಗಂಗಾವತರಣ ಶಿಲ್ಪವನ್ನು ಇದಂತೂ ನನಗೆ ತುಂಬಾ ಇಷ್ಟವಾಯಿತು. ಪಾಶುಪಾತಾಸ್ತ್ರವನ್ನು ಪಡೆಯಲು ಅರ್ಜುನ ತಪಸ್ಸು ಮಾಡಿದ ಗಂಗಾವತರಣದ ಚಿತ್ರ ಇಲ್ಲಿ ಪ್ರಧಾನವಾಗಿದ್ದು ಇದರ ಜೊತೆಗೆ ವಿವಿಧ ರೀತಿಯ, ವಿವಿಧ ಆಕಾರದ, ವಿವಿಧ ಕಥೆಗಳನ್ನು ಹೇಳುವ ಲೆಕ್ಕವಿಲ್ಲದಷ್ಟು ಕಣ್ಮನ ತಣಿಸುವಷ್ಟು ಶಿಲ್ಪಗಳು ಇವೆ. ಬಹುತೇಕ ಮಹಾಬಲಿಪುರಂ ಶಿಲ್ಪಗಳೆಲ್ಲಾ ರಥದ ಆಕಾರದಲ್ಲಿರುವುದು ವಿಶೇಷ. ಇದಲ್ಲದೆ ಗಣೇಶ ರಥ, ಲೈಟ್ ಹೌಸ್, ಸಿಂಹದ ಗುಹೆಗಳೂ ಇವೆ. 

Mahabalipuram

ಹೇಗೆ ಹೋಗಬಹುದು:

ಶಿಲ್ಪಕಲೆಗೆ ಹೆಸರಾದಂತಹ ಈ ಮಹಾಬಲಿಪುರಂ ಇರುವುದು ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 60 ಕಿಮೀ ದೂರದಲ್ಲಿ. ಚೆನ್ನೈನಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಇಲ್ಲಿ ಬೇಕಾದಷ್ಟು ವಸತಿ ಸೌಲಭ್ಯಗಳಿದ್ದು, ಇಲ್ಲಿಯೇ ಉಳಿದು ಕೊಳ್ಳಬಹುದು. 3 ಸ್ಟಾರ್, 4 ಸ್ಟಾರ್, ಹಾಗೂ ಬಜೆಟ್ ಹೋಟೆಲ್ ಗಳೂ ಲಭ್ಯ.

Mahabalipuram

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button