ಕಾಡಿನ ಕತೆಗಳುಬಣ್ಣದ ಸ್ಟುಡಿಯೋವಿಂಗಡಿಸದವಿಸ್ಮಯ ವಿಶ್ವ

ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ

ವೈಲ್ಡ್ ಲೈಫ್ ಡೇ ವಿಶೇಷ ಲೇಖನ

ಟೆಕ್ಕಿಯಾಗಿದ್ದವರಿಗೆ ಫೋಟೋಗ್ರಫಿ ಸೆಳೆಯಿತು. ಕಾಡು ವೈಲ್ಡ್ ಲೈಫ್ ಫೋಟೋಗ್ರಾಫರನನ್ನಾಗಿ ಮಾಡಿತು. ಮೂಲತಃ ಚಿಕ್ಕಮಗಳೂರು ಮೂಡಿಗೆರೆ ಮಾಕೋನಹಳ್ಳಿಯವರಾದ ಸುನೀಲ್ ಅವರು ಪ್ಯಾಷನೇಟ್ ಫೋಟೋಗ್ರಾಫರ್. ಅದಕ್ಕೆ ನ್ಯಾಷನಲ್ ಜಿಯೋಗ್ರಾಫಿಕ್ ನಲ್ಲಿ ಪ್ರಕಟವಾದ ಅವರ ಫೋಟೋಗಳೇ ಸಾಕ್ಷಿ.

  • ಸಿಂಧೂ ಪ್ರದೀಪ್
Sunil Sachi

ಈ ದಟ್ಟವಾದ ಕಾಡು ಸರಿಸೃಪಗಳು, ವಿಚಿತ್ರವಾದ ಕಪ್ಪೆಗಳು ಎಂದರೆ ಯಾರಿಗೆತಾನೆ ಭಯವಿಲ್ಲ ಹೇಳಿ.. ಆದರೇ ಇಲ್ಲಿ ಟೆಕ್ಕಿ ಒಬ್ಬರು ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಹಾವು ಕಪ್ಪೆಗಳೊಂದಿಗೆ ಕಾಲ ಕಳೆಯುವುದೇ ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.. ಇವರು ತೆಗದೆ ಹಲವು ವೈಲ್ಡ್ ಲೈಫ್ ಫೋಟೋಗಳು ನ್ಯಾಷನಲ್ ಜಿಯೋಗ್ರಾಫಿಕ್(national geographic ) ಹಾಗೂ ಅನೇಕ ಅಂತಾರಾಷ್ಟ್ರೀಯ ಕ್ಯಾಲೆಂಡರ್ ಗಳಲ್ಲಿ ಪ್ರಕಟವಾಗಿದೆ.

Sunil Sachi

ಅವರೇ “ಸುನೀಲ್ ಸಚಿ”. (Sunil Sachi)

ಮೂಲತಃ ಚಿಕ್ಕಮಗಳೂರಿನವರು, ಮೂಡಿಗೆರೆಯ ಮಾಕೋನಹಳ್ಳಿ ಇವರ ಹುಟ್ಟೂರು. ಬೆಂಗಳೂರಿನಲ್ಲಿ ಟೆಕ್ಕಿ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಅನ್ವೇಷಿಸದ ಸ್ಥಳಗಳಿಗೆ ಟ್ರೆಕ್ಕಿಂಗ್ ಹೋಗುವುದು, ಸರಿಸೃಪಗಳ ಛಾಯಾಚಿತ್ರ ತೆಗೆಯುವುದು, ಅಪರೂಪದ ಪ್ರಭೇದದ ಕಪ್ಪೆಗಳ ಬಗ್ಗೆ ಸಂಶೋಧನೆ ಮಾಡುವುದು ಇವರ ಹವ್ಯಾಸ. 

ನೀವು ಇದನ್ನು ಇಷ್ಟಪಡಬಹುದು: ಹುಲಿಯಂತಿದ್ದ ಚಿರತೆ ಟೆಂಪಲ್ ಮೇಲ್: ಶ್ರೇಯಸ್ ದೇವನೂರ್ ಬರೆದ ಕಾಡಿನ ಕತೆ

ಇವರು ಭೇಟಿ ನೀಡಿದ ಕಾಡಿನ ಒಂದು ರೋಚಕ ಸಂಗತಿಯನ್ನು ಅವರು ಹಚ್ಚಿಕೊಂಡಿದ್ದು ಹೀಗೆ- 

ನಮ್ಮ ದೇಶದಲ್ಲಿ ನಾನಾ ರೀತಿಯ ದಟ್ಟ ಅರಣ್ಯ ಪ್ರದೇಶಗಳು ಇದೆ, ಅವುಗಳಲ್ಲಿ ಬಹಳ ಅಪರೂಪವಾದದ್ದು ನಮ್ಮ ಕರ್ನಾಟಕದಲ್ಲಿರುವ ಆಗುಂಬೆಯ ಮಳೆ ಕಾಡುಗಳು.. ಶಿವಮೊಗ್ಗ ಜಿಲ್ಲೆಯಲ್ಲಿರುವ, ದಕ್ಷಿಣದ ಚಿರಾಪುಂಜಿ ಆಗುಂಬೆಯ ಕಾಡುಗಳು ಯಾರಿಗೆ ತಾನೇ ಗೊತ್ತಿಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆಯಾಗುವ ಪ್ರದೇಶ. ಇದು ಜಗತ್ತಿನ 18 ಅಪರೂಪದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಇದೂ ಒಂದು. ದಟ್ಟವಾಗಿ ಬೆಳೆದು ನಿಂತ ಮರಗಳು, ಭಾರೀ ಅಪರೂಪದ ಜೀವ ಸಂಕುಲಗಳು, ನಾನಾ ರೀತಿಯ ಝರಿ ತೊರೆಗಳನ್ನು ಹೊಂದಿರುವ ಈ ಕಾಡಿನಲ್ಲಿ ಆತ್ಯಂತ ವಿಷಕಾರಿಯಾರಿಯಾದ ಕಾಳಿಂಗ ಸರ್ಪದ ಓಡಾಟ ಯತೇಚ್ಛವಾಗಿರುತ್ತದೆ. ಈ ಕಾಡು ಕಾಳಿಂಗನ ಅರಮನೆ ಎಂದು ಕೂಡ ಕರೆಯಲ್ಪಡುತ್ತದೆ.

ಸೂರ್ಯ ನೆತ್ತಿಯ ಮೇಲೆ ಬಂದರೂ ಕಿರಣಗಳ ಬೆಳಕು ನೆಲಕ್ಕೆ ತಾಕಲು ತಡಕಾಡುವ ಹಾಗೆ ಇರುವ ದಟ್ಟ ಕಾಡು ಅದು, ಇನ್ನೂ ರಾತ್ರಿ ವೇಳೆಯಲ್ಲಿ ಓಡಾಡುವುದೆಂದರೆ ಅಸಾದ್ಯವೇ ಸರಿ. ಸುನೀಲ್ ಅವರು ಆಯ್ಕೆ ಮಾಡಿಕೊಂಡ ಸಮಯವೇ ಅದು, ಕೆಲವು ಅಪರೂಪದ ಉರಗ ಹಾಗೂ ಕಪ್ಪೆಗಳ ಪ್ರಭೇದಗಳು ರಾತ್ರಿ ವೇಳೆಯಲ್ಲಿ ಕ್ರಿಯಾತ್ಮಕವಾಗಿರುತ್ತವೆ, ಅವುಗಳ ಬಗ್ಗೆ ತಿಳಿಯಲು ಒಂದು ರಾತ್ರಿ ಮಳೆಯನ್ನೂ ಲೆಕ್ಕಿಸದೇ ಸುನೀಲ್ ಸಚಿ ಹಾಗೂ ಒಬ್ಬ ಕೇರಳದ ಸಂಶೋಧನಾ ವಿದ್ಯಾರ್ಥಿ ಇಬ್ಬರೂ ಕಾಡಿನಲ್ಲಿ ಹುಡುಕಾಟ ನಡೆಸುತ್ತ ಸಾಗಿದರು..

ದಟ್ಟಾರಣ್ಯ ತಲುಪಿದಾಗ ರಾತ್ರಿ 10 ಗಂಟೆ ಸಮಯ. ಆ ಕತ್ತಲೆಯಲ್ಲಿ ಕೈಯಲ್ಲಿ ಕ್ಯಾಮೆರಾ ಹಿಡಿದು ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿದ್ದರು.. ತಕ್ಷಣ ದೂರದಿಂದ ಯಾರೋ ಇವರ ಬಳಿ ಟಾರ್ಚ್ ಬಿಟ್ಟ ಅನುಭವ. ಆ ಕತ್ತಲಲ್ಲಿ ಯಾರೂ ಕಾಣಿಸುತ್ತಿಲ್ಲ. ಟಾರ್ಚ್ ನ ಬೆಳಕಿನೊಂದಿಗೆ “ಯಾರದು ಅಲ್ಲಿ, ಯಾರು ನೀವು” ಎಂಬ ಗಾಢವಾದ ಧ್ವನಿ ಕೇಳಿಬಂತು. ಅಪರಿಚಿತರೆಂದು ತಿಳಿದು ಸುನೀಲ್ ಅವರು ತಿರುಗಿ ಉತ್ತರಿಸಲಿಲ್ಲ.

ನೋಡು ನೋಡುತ್ತಿದ್ದಂತೆ ಒಬ್ಬ ಓಡಿ ಬಂದು ಸುನೀಲ್ ಅವರ ತಲೆಗೆ ಏಕೆ 47 ಬಂದೂಕು ತೋರಿಸಿ ಗುರಿಯಿಟ್ಟು, ಅವರ ಜೊತೆ ಬಂದಿದ್ದ ಇನ್ನೊಂದಷ್ಟು ಜನರನ್ನು ಕರೆದರು. ಕೆಲವೇ ಸೆಕೆಂಡ್ ನಲ್ಲಿ 4 ರಿಂದ 5 ಬಂದೂಕುಧಾರಿಗಳು ಸುನೀಲ್ ಅವರನ್ನೇ ಗುರಿಮಾಡಿ ನಿಂತರು. ಇದನ್ನು ನೋಡಿ ಬೆಚ್ಚಿಬಿದ್ದ ಸುನೀಲ್, ಅವರು ನಕ್ಸಲರು ಎಂದು ಭಯಪಟ್ಟರು..

ಕೆಲವು ಸಮಯದ ನಂತರ ಅವರು ವಿವರಗಳನ್ನು ಕೇಳಲಾರಂಭಿಸಿದರು. ಆಗ ತಿಳಿದು ಬಂದ ವಿಷಯವೇನೆಂದರೆ ಅವರು ನಕ್ಸಲರಲ್ಲ, ಬದಲಿಗೆ ನಕ್ಸಲ್ ನಿಗ್ರಹ ಪಡೆ(ANF) ಎಂದು.

ಇದನ್ನು ಕೇಳಿ ಸುನೀಲ್ ಗೆ ಸ್ವಲ್ಪ ಸಮಾಧಾನವಾಯಿತು. ಮೊದಲು ಅವರು ಕೇಳಿದಾಗ ಉತ್ತರಿಸದೇ ಇದ್ದಿದ್ದಕ್ಕೆ ಅವರು ತಕ್ಷಣ ಗುಂಡು ಹಾರಿಸಬಹುದಿತ್ತು. ಆದರೆ ಆದೃಷ್ಟವೋ ಏನೋ ಅವರು ಹಾಗೆ ಮಾಡಲಿಲ್ಲ. ಎಲ್ಲಿಂದ ಬಂದಿದ್ದು? ಯಾಕೆ ಬಂದಿದ್ದು? ಅಂತೆಲ್ಲಾ ಪ್ರಶ್ನೆಗಳನ್ನು ಕೇಳತೊಡಗಿದರು, ಹೀಗೆ ಚರ್ಚೆ ನಡೆಯುತ್ತಿರಬೇಕಾದರೆ ಆ ಏಎನ್ಏಫ್ ಪಡೆಯಲ್ಲಿ ಇದ್ದ ಒಬ್ಬರು ಮುಡಿಗೆರೆಯವರೆಂದೂ ಸುನೀಲ್ ಅವರ ತಂದೆ ಯ ಪರಿಚಯವೂ ಇದೆ ಎಂದು ಗೊತ್ತಾಯಿತು.. ಇದರಿಂದ ಅಂದು ರಾತ್ರಿ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲವೂ ಒಳ್ಳೆಯ ರೀತಿಯಲ್ಲಿ ಮುಕ್ತಾಯವಾಯಿತು..

ಅಪಾಯದ ಸ್ಥಳಗಳಲ್ಲಿ ಇಂಥಾ ಘಟನೆಗಳು ನಡೆಯುವುದು ಸಹಜ ಅದಕ್ಕೆಲ್ಲಾ ಮಾನಸಿಕವಾಗಿ, ದೈಹಿಕವಾಗಿ ತಯಾರಾಗಿ, ನಿಪುಣ ಮಾರ್ಗದರ್ಶಕರೊಂದಿಗೆ ತೆರಳುವುದು ಉತ್ತಮ ಎಂದು ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಾರೆ ಸಚಿನ್. ಅವರು ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಇನ್ನಷ್ಟು ಫೋಟೋಗಳನ್ನು ತೆಗೆಯಲಿ ಆ ಫೋಟೋಗಳು ನಮ್ಮನ್ನು ಖುಷಿಪಡಿಸಲಿ ಎಂಬ ಆಶಯ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button