ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಆಫ್ರಿಕಾದ ಅತಿ ಎತ್ತರದ ಪರ್ವತ ಕಿಲಿಮಂಜಾರೋ ಏರಿ ದಾಖಲೆ ಬರೆದ 9 ವರ್ಷದ ಆಂಧ್ರ ಹುಡುಗಿ ರಿತ್ವಿಕಾಶ್ರೀ

ದಿನನಿತ್ಯದ ಜಂಜಾಟಗಳಲ್ಲಿ ಸಿಕ್ಕಿ ನಮ್ಮ ಕೈಯಲ್ಲಿ ಏನೂ ಆಗಲ್ಲ ಅಂತ ಎಷ್ಟೋ ಸಲ ಅಂದುಕೊಂಡಿರುತ್ತೇವೆ. ಅಂಥದ್ದರಲ್ಲಿ ಇಲ್ಲೊಬ್ಬಳು 9 ವರ್ಷದ, ಎರಡನೇ ಕ್ಲಾಸಿನ ಹುಡುಗಿ ಆಫ್ರಿಕಾದ ಅತ್ಯಂತ ಎತ್ತರದ ಕಿಲಿಮಂಜಾರೋ ಪರ್ವತ ಏರಿ ಬಂದಿದ್ದಾಳೆ. ಆಕೆಯ ಹೆಸರು ರಿತ್ವಿಕಾಶ್ರೀ. ಆಂಧ್ರಪ್ರದೇಶದ ಈ ಹುಡುಗಿ ಕಿಲಿಮಂಜಾರೋ ಹತ್ತಿದ ಜಗತ್ತಿನ ಎರಡನೇ ಅತಿ ಕಿರಿಯ ಹುಡುಗಿ, ಏಷ್ಯಾದ ಮೊದಲ ಅತಿ ಕಿರಿಯ ಹುಡುಗಿ ಎಂಬ ಕೀರ್ತಿ ಗಳಿಸಿದ್ದಾಳೆ. ಅವಳ ಸ್ಫೂರ್ತಿ ಕತೆ ಇಲ್ಲಿದೆ.

ಆಫ್ರಿಕಾದಲ್ಲಿರುವ(africa) ಅತಿ ಎತ್ತರದ ಬೆಟ್ಟದ ಹೆಸರು ಕಿಲಿಮಂಜಾರೋ.(Mount Kilimanjaro) ಈ ಪರ್ವತವನ್ನು ಹತ್ತಬೇಕು ಎಂಬ ಆಸೆ ಹೊತ್ತುಕೊಂಡು ಸಾವಿರಾರು ಮೌಂಟೇನಿಯರ್ ಗಳು ಹಗಲು ರಾತ್ರಿ ಕಷ್ಟಪಡುತ್ತಾರೆ. ಕೆಲವರು ಸೋಲುತ್ತಾರೆ. ಹಲವರು ಪರ್ವತದ ಮೇಲೆ ಹತ್ತಿ ಬಾವುಟ ನೆಟ್ಟು ವಿಜಯಪತಾಕೆ ಹಾರಿಸುತ್ತಾರೆ. ಪರ್ವತ ಏರುವವರಿಗೆ ವಯಸ್ಸಿನ ಹಂಗಿಲ್ಲ. ಅದನ್ನು ಮತ್ತೆ ನೆನಪಿಸುವ ಕತೆಯೊಂದು ಇಲ್ಲಿದೆ.

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

ಆಂಧ್ರಪ್ರದೇಶದ(andhra pradesh) ಅನಂತಪುರ ಜಿಲ್ಲೆಯ(Ananthpur District) ಕಡಪಾಲ ರಿತ್ವಿಕಾಶ್ರೀ ಎಂಬ ಒಂಭತ್ತು ವರ್ಷದ ಪುಟ್ಟ ಹುಡುಗಿ ಈ ಅಸಾಧ್ಯ ಬೆಟ್ಟವನ್ನು ಏರಿ ಸಾಧನೆ ಮಾಡಿದ್ದಾಳೆ. ಆಫ್ರಿಕಾದ ತಾಂಜಾನಿಯಾದಲ್ಲಿರುವ(Tanzania) ಕಿಲಿಮಂಜಾರೋ ಪರ್ವತ ಹತ್ತುವ ಮೂಲಕ ಈ ಬೆಟ್ಟವನ್ನು ಏರಿದೆ ಏಷ್ಯಾದ ಅತಿ ಕಿರಿಯ ಹುಡುಗಿ ಎಂಬ ಕೀರ್ತಿ ಗಳಿಸಿದ್ದಾಳೆ. ಇಡೀ ಜಗತ್ತಿನಲ್ಲಿ ಕಿಲಿಮಂಜಾರೋ ಬೆಟ್ಟ ಏರಿದ ಅತಿ ಕಿರಿಯ ಹುಡುಗಿಯರ ಪಟ್ಟಿಯಲ್ಲಿ ರಿತ್ವಿಕಾಶ್ರೀಯ ಹೆಸರು ಎರಡನೇ ಸ್ಥಾನದಲ್ಲಿದೆ. ಈ ಪುಟ್ಟ ಹುಡುಗಿಯ ಸಾಧನೆಗೆ ಜಗತ್ತು ಕೊಂಡಾಡುತ್ತಿದೆ.

ರಿತ್ವಿಕಾಶ್ರೀ ಎರಡನೇ ಕ್ಲಾಸಿನ ಹುಡುಗಿ. ಕಿಲಿಮಂಜಾರೋದ ಗಿಲ್ಮನ್ ಪಾಯಿಂಟ್ ಹತ್ತಿ ಮೌಂಟೇನಿಯರ್ ಗಳಲ್ಲಿ ಸ್ಫೂರ್ತಿ ಹೆಚ್ಚಿಸಿದ್ದಾಗೆ. ಈ ಗಿಲ್ಮನ್ ಪಾಯಿಂಟ್(Gilman’s Point) ಇರುವುದು ಸಮುದ್ರ ಮಟ್ಟದಿಂದ 5,681 ಮೀಟರ್ ಎತ್ತರದಲ್ಲಿ ಅಂದ್ರೆ 19,341 ಅಡಿ ಎತ್ತರದಲ್ಲಿ. ಅಷ್ಟೆತ್ತರಕ್ಕೆ ಏರುವುದು ಸುಲಭವಂತೂ ಖಂಡಿತಾ ಅಲ್ಲ.

ಕಿಲಿಮಂಜಾರೋ ಬೆಟ್ಟ ಏರುವಾಗ ಆಕೆಯ ಜೊತೆ ಅವರ ತಂದೆ ಮತ್ತು ಗೈಡ್ ಇದ್ದರು. ಅವರ ಮಾರ್ಗದರ್ಶನದಿಂದ ಈ ಸಾಹಸ ಆಕೆಗೆ ಸಾಧ್ಯವಾಗಿದೆ. ರಿತ್ವಿಕಾಶ್ರೀ ತಂದೆ ಕಡಪಾ ಶಂಕರ್ ಕ್ರಿಕೆಟ್ ಕೋಚ್ ಆಗಿದ್ದಾರೆ. ಅಲ್ಲದೇ ವಿಶೇಷ ಒಲಿಂಪಿಕ್ಸ್ ಭಾರತ ವಿಭಾಗದ ಸಂಯೋಜಕರಾಗಿ ಕೆಲಸ ಮಾಡುತ್ತಾರೆ. ಅವರು ಕಳೆದ ವರ್ಷ ಕಿಲಿಮಂಜಾರೋ ಪರ್ವತ ಹತ್ತಿದ್ದು, ಈ ವರ್ಷ ಮಗಳನ್ನೂ ಕರೆದುಕೊಂಡು ಹೋಗಿದ್ದಾರೆ.

2021ರ ಫೆಬ್ರವರಿ 25ರಂದು ರಿತ್ವಿಕಾಶ್ರೀ ಕಿಲಿಮಂಜಾರೋ ಹತ್ತಿದ್ದಾರೆ. ಅದಕ್ಕೂ ಮೊದಲು ಆಕೆ ತೆಲಂಗಾಣದ(Telangana) ರಾಕ್ ಕ್ಲೈಂಬಿಂಗ್(rock climbing) ಶಾಲೆಯಲ್ಲಿ ಮೊದಲ ಹಂತದ ತರಬೇತಿ ಪಡೆದುಕೊಂಡಿದ್ದಾರೆ. ಲಡಾಕ್ ನಲ್ಲಿ(ladakh) ಎರಡನೇ ಹಂತದ ತರಬೇತಿಯನ್ನು ಪಡೆದುಕೊಂಡ ನಂತರ ಈ ಸಾಧನೆ ಮಾಡಿದ್ದಾರೆ.

ನಾವು ಅನೇಕ ಸಲ ನಮ್ಮ ಕೈಯಲ್ಲಿ ಏನೂ ಆಗಲ್ಲ ಎಂದುಕೊಂಡಿರುತ್ತೇವೆ. ನಾವು ಮಾಡಿದ್ದು ಯಾವುದೂ ಸರಿ ಹೋಗಲ್ಲ ಎಂದು ಬೇಜಾರಾಗುತ್ತಿರುತ್ತೇವೆ. ಆದರೆ ನಮಗಿಂತ ಕಿರಿಯರು ಏನೋ ಸಾಧನೆ ಮಾಡಿದಾಗ ನಮಗೆ ಆ ಸಾಧನೆ ಮತ್ತೇನೋ ಕೆಲಸ ಮಾಡಲು ಸ್ಫೂರ್ತಿಯಾಗುತ್ತದೆ. ಅಷ್ಟು ದೊಡ್ಡ ಪರ್ವತವನ್ನು ಏರುವುದು ಸುಲಭ ಸಾಧ್ಯ ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು. ದೈಹಿಕ ಮತ್ತು ಮಾನಸಿಕ ಸ್ಥಿತಿ ಚೆನ್ನಾಗಿರಬೇಕು. ಹಾಗಿದ್ದರೂ ಒಮ್ಮೊಮ್ಮೆ ಮೊದಲನೇ ಪ್ರಯತ್ನದಲ್ಲಿ ಹತ್ತುವುದು ಕಷ್ಟ. ಅಷ್ಟೆಲ್ಲಾ ಇದ್ದರೂ ಮೊದಲನೇ ಪ್ರಯತ್ನದಲ್ಲಿಯೇ ಒಂಭತ್ತು ವರ್ಷದ ಬಾಲಕಿ ರಿತ್ವಿಕಾಶ್ರೀ ಕಿಲಿಮಂಜಾರೋ ಹತ್ತಿದ್ದಾಳೆ. ಅವಳ ಈ ಸಾಧನೆ ಸ್ಫೂರ್ತಿದಾಯಕವೇ ಸರಿ. ಅವಳಿಂದಾಗಿ ಇನ್ನಷ್ಟು ಮೌಂಟೇನಿಯರ್ ಗಳು ಹುಟ್ಟಿಕೊಂಡರೆ ಸಾರ್ಥಕ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button